ಇ-ಸ್ಟ್ಯಾಂಪ್ ಕಾಲ ಅಂತ್ಯವಾಗಿದ್ದು; ಇದೀಗ ಡಿಜಿಟಲ್ ಇ-ಸ್ಟ್ಯಾಂಪ್ (Digital E-Stamp Karnataka) ವ್ಯವಸ್ಥೆ ಶುರುವಾಗಿದೆ. ಹಾಗಾದರೆ ಆನ್‌ಲೈನ್ ಮೂಲಕ ಡಿಜಿಟಲ್ ಇ-ಸ್ಟ್ಯಾಂಪ್ ಖರೀದಿಸೋದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ಯಾವುದಾದರೂ ದಾಖಲೆ ಮಾಡಿಸಬೇಕೆಂದರೆ ಮೊದಲಿಗೆ ನೆನಪಾಗೋದೇ ಸ್ಟ್ಯಾಂಪ್ ಪೇಪರ್. ಇದಕ್ಕಾಗಿ ಹಿಂದೆಲ್ಲ ಲೈಸೆನ್ಸ್ ಪಡೆದ ಮಾರಾಟಗಾರರನ್ನು ಹುಡುಕುತ್ತಿದ್ದೆವು. ನಂತರ ಆನ್‌ಲೈನ್ ‘ಇ-ಸ್ಟ್ಯಾಂಪ್’ ಬಂತು, ಆದರೆ, ಅದರಲ್ಲೂ ನಕಲಿ, ವಂಚನೆ, ಡುಪ್ಲಿಕೇಟ್ ಪ್ರಮಾಣಪತ್ರಗಳು ಹರಿದಾಡಲು ಶುರು ಮಾಡಿದವು. ಈಗ ಆ ಎಲ್ಲ ತೊಂದರೆಗಳಿಗೆ ಸರ್ಕಾರ ಕೊನೆಗೂ ಫುಲ್‌ಸ್ಟಾಪ್ ಹಾಕಿದೆ.
ಹೌದು, ಕರ್ನಾಟಕ ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲ್ ಯುಗಕ್ಕೆ ಕಾಲಿಟ್ಟಿದ್ದು; ಡಿಜಿಟಲ್ ಇ-ಸ್ಟ್ಯಾಂಪ್ (DES) ವ್ಯವಸ್ಥೆಯನ್ನು ಹೊಸದಾಗಿ ಪರಿಚಯಿಸಿದೆ. ಇನ್ಮುಂದೆ ಮನೆಯಲ್ಲೇ ಕೂತು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್’ನಲ್ಲೇ ಡಿಜಿಟಲ್ ಇ-ಸ್ಟ್ಯಾಂಪ್ ಖರೀದಿಸಬಹುದು.
ಇದನ್ನೂ ಓದಿ: E-Svattu 2.0- ಇ-ಸ್ವತ್ತು ಅರ್ಜಿ ಸಲ್ಲಿಕೆ ಆರಂಭ | ಮನೆಯಲ್ಲಿ ಕೂತೆ ಅರ್ಜಿ ಸಲ್ಲಿಸಿ | ಅರ್ಜಿ ಲಿಂಕ್ ಇಲ್ಲಿದೆ…
ಏನಿದು ಡಿಜಿಟಲ್ ಇ-ಸ್ಟ್ಯಾಂಪ್?
ಹಳೆಯ ಇ-ಸ್ಟ್ಯಾಂಪ್‌ಗಳ ಬದಲು ಸಂಪೂರ್ಣ ಸುರಕ್ಷಿವಾದ ಹೊಸ ವ್ಯವಸ್ಥೆ ಇದು. ನಿಮ್ಮ ವಿವರಗಳು, ಕ್ಯೂಆರ್ ಕೋಡ್, ಕ್ರಿಪ್ಟೋ ವಾಟರ್‌ಮಾರ್ಕ್, ಡಿಜಿಟಲ್ ಸಹಿ ಇರುವ ಸಂಪೂರ್ಣ ಸುರಕ್ಷಿತವಾದ ಸ್ಟ್ಯಾಂಪ್ ಪೇಪರ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇದರ ದೊಡ್ಡ ಅನುಕೂಲವೆಂದರೆ ಇದನ್ನು ಪಡೆಯಲು ಎಲ್ಲಿಗೂ ಅಲೆಯಬೇಕಿಲ್ಲ. ಜಗತ್ತಿನ ಎಲ್ಲಿಯೇ ಇದ್ದರೂ ಕೂಡ ಅಲ್ಲಿಂದಲೇ ಡಿಜಿಟಲ್ ಇ-ಸ್ಟ್ಯಾಂಪ್ ಖರೀದಿಸಬಹುದಾಗಿದೆ.

ಛಾಪಾ ಕಾಗದದಿಂದ ಡಿಜಿಟಲ್ ಯುಗದವರೆಗೆ
ಒಂದು ಕಾಲದಲ್ಲಿ ಛಾಪಾ ಕಾಗದಗಳೇ ನೋಂದಣಿಯ ಮೂಲವಾಗಿದ್ದವು. ಆದರೆ 2000ರ ದಶಕದಲ್ಲಿ ಭಾರತವನ್ನೇ ಬೆಚ್ಚಿ ಬೀಳಿಸಿದ ನಕಲಿ ಛಾಪಾ ಕಾಗದ ಹಗರಣ ಎಲ್ಲವನ್ನೂ ಬದಲಿಸಿತು. 32 ಸಾವಿರ ಕೋಟಿ ರೂಪಾಯಿ ಮೌಲ್ಯದ ಆ ಹಗರಣದ ನಂತರ ಸ್ಟ್ಯಾಂಪ್ ಪೇಪರ್ ವ್ಯವಸ್ಥೆ ಸಂಪೂರ್ಣ ಬದಲಾಯಿತು.
ಬಳಿಕ ಇ-ಸ್ಟ್ಯಾಂಪ್ ಬಂದಿತು. ಆ ಮೂಲಕ ಒಂದಷ್ಟು ಭದ್ರತೆ ಬಂದರೂ, ನಕಲಿ, ಡುಪ್ಲಿಕೇಟ್ ಹಾವಳಿ ಶುರುವಾಯಿತು. ಈ ಸಮಸ್ಯೆಗೆ ಕೊನೆಯ ಟಚ್ ಕೊಡಲು, ಡಿಜಿಟಲ್ ಇ-ಸ್ಟ್ಯಾಂಪ್ ಈಗ ಜಾರಿಗೆ ಬಂದಿದೆ.
ಇದನ್ನೂ ಓದಿ: Karnataka Labour Welfare Scholarship- ಕಾರ್ಮಿಕರ ಮಕ್ಕಳಿಗೆ 20,000 ರೂ. ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಡಿಜಿಟಲ್ ಇ-ಸ್ಟ್ಯಾಂಪ್ ಹೇಗೆ ಪಡೆಯೋದು?
ಹಂತ-1: ನೀವು ಡಿಜಿಟಲ್ ಇ-ಸ್ಟ್ಯಾಂಪ್ ಪಡೆಯಲು ಮೊದಲಿಗೆ ಅಧಿಕೃತ ಕಾವೇರಿ ಪೋರ್ಟಲ್ kaveri.karnataka.gov.inಗೆ ಭೇಟಿ ನೀಡಿ. ಅದರಲ್ಲಿ ಒಂದು ಬಾರಿಗೆ ನೋಂದಣಿ ಮಾಡಿಕೊಳ್ಳಿ. ಈಗಾಗಲೇ ನೋಂದಣಿಯಾಗಿದ್ದರೆ ನೇರ ಲಾಗಿನ್ ಮಾಡಿ.
ಹಂತ-2: Start New Application ಒತ್ತಿದರೆ, ಸಾಕಷ್ಟು ಸೇವೆಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅಲ್ಲಿ Digital E-Stamp ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ-3: ಈಗ ಯಾವ ದಾಖಲೆಗೆ ಸ್ಟ್ಯಾಂಪ್ ಬೇಕೋ ಅದನ್ನು ಆಯ್ಕೆ. ಬಾಡಿಗೆ ಒಪ್ಪಂದವೋ? ಅಫಿಡವಿಟೊ? ಮಾರಾಟ ಒಪ್ಪಂದವೋ? ಸುಮಾರು 60 ವಿಧಗಳ ಆಯ್ಕೆಗಳಿದ್ದು; ಅದರಲ್ಲಿ ನಿಮಗೆ ಅಗತ್ಯವಿರುವ ಆಯ್ಕೆಯನ್ನು ಗುರುತಿಸಿ.
ಹಂತ-4: ನಂತರ ಆಧಾರ್ ಆಧಾರಿತ OTP ಮೂಲಕ ಗುರುತು ದೃಢಪಡಿಸಬೇಕು. ಆಸ್ತಿ ದಾಖಲೆಗಳಿದ್ದರೆ ಚಿಂತೆಯಿಲ್ಲ, ಪೋರ್ಟಲ್ ಸ್ವತಃ ಸರ್ಕಾರದ ಡೇಟಾಬೇಸ್ ಜೊತೆ ಮಾಹಿತಿಯನ್ನು ಪರಿಶೀಲಿಸುತ್ತದೆ.
ಹಂತ-5: ಪೋರ್ಟಲ್ ಡಿಜಿಟಲ್ ಇ-ಸ್ಟ್ಯಾಂಪ್ ಶುಲ್ಕವನ್ನು ಲೆಕ್ಕ ಹಾಕಿ ತೋರಿಸುತ್ತದೆ. UPI / ನೆಟ್‌ಬ್ಯಾಂಕಿಂಗ್ / ಪೇಮೆಂಟ್ ಗೇಟ್‌ವೇ ಮೂಲಕ ಪಾವತಿ ಮಾಡಬಹುದು.
ಹಂತ-6: ಸಹಿ ಮಾಡುವವರಿಗೂ ಮೊಬೈಲ್‌ಗೆ ಲಿಂಕ್ ಬರುತ್ತದೆ. ಆಧಾರ್ ಇ-ಸಹಿ ಅಥವಾ DSC ಮೂಲಕ ಸಹಿ ಮಾಡಿದರೆ ಸಾಕು. ಅಲ್ಲಿಗೆ ಅಂತಿಮ ಡಿಜಿಟಲ್ ಇ-ಸ್ಟ್ಯಾಂಪ್ ರೆಡಿ. ಡೌನ್‌ಲೋಡ್ ಮಾಡಿ, ನೋಂದಣಿಗೆ ಬಳಸಿಕೊಳ್ಳಿ.
ಡಿಜಿಟಲ್ ಇ-ಸ್ಟ್ಯಾಂಪ್ ಪ್ರಯೋಜನಗಳು
- ಡಿಜಿಟಲ್ ಇ-ಸ್ಟ್ಯಾಂಪ್ ಖರೀದಿಗೆ ಮಧ್ಯವರ್ತಿಗಳು ಬೇಕಿಲ್ಲ
- ಹಗಲು-ರಾತ್ರಿ ಯಾವಾಗ ಬೇಕಾದರೂ ಸ್ಟ್ಯಾಂಪ್ ಪಡೆಯಬಹುದು
- ನಕಲು ಮಾಡಲು ಅಸಾಧ್ಯ; ಪ್ರತಿಯೊಂದು ಸ್ಟ್ಯಾಂಪ್‌ಗೆ ಯುನಿಕ್ ಐಡಿ ಮತ್ತು ಭದ್ರತಾ ಫೀಚರ್
- ನೇರವಾಗಿ ಸರ್ಕಾರದ ಖಜಾನೆಗೆ ಶುಲ್ಕ ಪಾವತಿಯಾಗುತ್ತದೆ
- ಆನ್‌ಲೈನ್ ಸಹಿಯ ಕಾರಣದಿಂದ ದಾಖಲೆ ಸುರಕ್ಷಿತ
- ಮುಖ್ಯವಾಗಿ ಕಾಗದ ರಹಿತ ನೋಂದಣಿಗೆ ಇದು ಮೊದಲ ಹೆಜ್ಜೆ!
- ಸಮಯ, ಹಣ ಉಳಿತಾಯದ ಜೊತೆಗೆ ಸುರಕ್ಷತೆಯ ನಿರಾಳತೆ
ಡಿಜಿಟಲ್ ಇ-ಸ್ಟ್ಯಾಂಪ್ ಭಾರತದ ನೋಂದಣಿ ವ್ಯವಸ್ಥೆಯನ್ನು ಹೊಸ ಹಂತಕ್ಕೆ ಕರೆತರುತ್ತಿದೆ. ಈಗ ಸ್ಟ್ಯಾಂಪ್ ಪಡೆಯೋದು ಕೇವಲ ಒಂದು ‘ಕ್ಲಿಕ್’ ಕೆಲಸ. ಭವಿಷ್ಯದಲ್ಲಿ ಎಲ್ಲವೂ ಕಾಗದ ರಹಿತವಾಗುವ ದಾರಿಗೆ ಇದು ಮೂಲವಾಗಲಿದೆ.
ಡಿಜಿಟಲ್ ಇ-ಸ್ಟ್ಯಾಂಪ್ ಲಿಂಕ್: kaveri.karnataka.gov.in