ಸರ್ಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಗಿಫ್ಟ್? | ಯಾರಿಗೆ ಎಷ್ಟು ಸಿಗಲಿದೆ ಡಿಎ? DA Gift for Govt Employees

Spread the love

DA Gift for Govt Employees : 8ನೇ ವೇತನ ಆಯೋಗ (8th Pay Commission) ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ (Central Government) ಶುಭಸುದ್ದಿ ನೀಡಿದೆ. ಇಷ್ಟರಲ್ಲೇ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು ಏರಿಕೆಯಾಲಿದ್ದು; ಸೆಪ್ಟೆಂಬರ್‌ನಲ್ಲಿ ಇದರ ಲಾಭ ಎಲ್ಲ ನೌಕರರಿಗೂ ಸಿಗಲಿದೆ.

WhatsApp Group Join Now
Telegram Group Join Now

ಕಳೆದ ಜುಲೈ 1, 2024ರಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಶೇಕಡಾ 3ರಿಂದ 4ರಷ್ಟು ತುಟ್ಟಿಭತ್ಯೆ (Dearness Allowance) ಹೆಚ್ಚಳ ಆದೇಶ ಹೊರಡಿಸಲಿದ್ದು, ಈಗಾಗಲೇ ಶೇ. 3ರಷ್ಟು ಏರಿಕೆ ನಿಶ್ಚಯಿಸಲ್ಪಟ್ಟಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ನೌಕರರಿಂದ ಸರ್ಕಾರಕ್ಕೆ 3 ಬೇಡಿಕೆ ಈಡೇರಿಕೆಗೆ ಮನವಿ ಸಮರ್ಪಣೆ | ಏನೀ ಹೊಸ ಬೇಡಿಕೆಗಳು? ಸಂಪೂರ್ಣ ಮಾಹಿತಿ ಇಲ್ಲಿದೆ… Karnataka Govt employees New demands

8ನೇ ವೇತನ ಆಯೋಗ ರಚನೆ ಯಾವಾಗ?

8ನೇ ವೇತನ ಆಯೋಗ ಜಾರಿಗೊಳಿಸಲು ಎರಡು ಪ್ರಸ್ತಾವನೆಗಳು ಬಂದಿದ್ದು, ಅವುಗಳನ್ನು ಪರಿಗಣಿಸಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಈಚೆಗೆ ಸಂಸತ್‌ನಲ್ಲಿ ಪ್ರತಿಪಕ್ಷಗಳ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.

ನಿಯಮದಂತೆ ಸರ್ಕಾರಿ ನೌಕರರ ಸಂಭಾವನೆಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುತ್ತದೆ. 7ನೇ ವೇತನ ಆಯೋಗವನ್ನು ಫೆಬ್ರವರಿ 2014ರಲ್ಲಿ ರಚಿಸಲಾಗಿದ್ದು; ಅದರ ಶಿಫಾರಸುಗಳನ್ನು ಜನವರಿ 1, 2016ರಿಂದ ಜಾರಿಗೆ ತರಲಾಗಿದೆ.

ಇನ್ನು 8ನೇ ವೇತನ ಆಯೋಗವು ಜನವರಿ 1, 2026ರಂದು ಜಾರಿಗೆ ಬರಲಿದೆ. ಆದರೆ ಅವಧಿಗೂ ಮುನ್ನವೇ 8ನೇ ವೇತನ ಆಯೋಗ ಜಾರಿಗೊಳಿಸಲು ಎರಡು ಪ್ರಸ್ತಾವನೆಗಳು ಬಂದಿದ್ದು, ಅವುಗಳನ್ನು ಸರ್ಕಾರ ಪರಿಗಣಿಸಿಲ್ಲ ಎಂದು ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಪರಿಷ್ಕೃತ ಪಿಂಚಣಿ ಹಣವೆಷ್ಟು? ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ…. 7th pay pension calculator

DA gift for Govt Employees
ವರ್ಷದ 2ನೇ ತುಟ್ಟಿಭತ್ಯೆ ಗಿಫ್ಟ್

ನೌಕರರಿಗೆ ಬೆಲೆ ಏರಿಕೆಯ ದರವನ್ನು ಆಧರಿಸಿ ಪ್ರತಿ ಆರು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರ ತುಟ್ಟಿಭತ್ಯೆ (ಡಿಎ) ದರವನ್ನು ನಿಯತಕಾಲಿಕವಾಗಿ ಪರಿಷ್ಕರಿಸುತ್ತದೆ. 7ನೇ ವೇತನ ಆಯೋಗ ಅಡಿಯಲ್ಲಿಯೇ ಈ ವರ್ಷದ ಎರಡನೇ ತುಟ್ಟಿಭತ್ಯೆ ಏರಿಕೆ ಆಗುವ ಸಾಧ್ಯತೆ ಇದೆ. ಜುಲೈ 1, 2024ರಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್‌ನಲ್ಲಿ ಶೇಕಡಾ 3ರಿಂದ 4ರಷ್ಟು ಡಿಎ ಹೆಚ್ಚಳ ಆದೇಶ ಹೊರಡುವ ಸಂಭವವಿದೆ.

ಸದ್ಯಕ್ಕೆ ತುಟ್ಟಿ ಭತ್ಯೆಯು ನೌಕರರ ಮೂಲ ವೇತನದ ಶೇಕಡಾ 50ರಷ್ಟಿದ್ದು, 7ನೇ ವೇತನ ಆಯೋಗದ ಪ್ರಕಾರ ಮೂಲವೇತನದೊಂದಿಗೆ ಡಿಎ ವಿಲೀನಗೊಳ್ಳಲಿದೆ ಎನ್ನಲಾಗುತ್ತಿದೆ. ಹಾಗಾದರೆ ನೌಕರರಿಗೆ ಮೂಲವೇತನಕ್ಕೆ ಅನುಗುಣವಾಗಿ ಸಿಗುವ ತುಟ್ಟಿಭತ್ಯೆ ಪರಿಹಾರ ಲೆಕ್ಕಾಚಾರ ಈ ಕೆಳಗಿನಂತಿದೆ:

  • ವಿಲೀನಕ್ಕಿಂತ ಮೊದಲು ಮೂಲ ವೇತನ 18,000 ರೂಪಾಯಿ ಇದ್ದು, ಇದಕ್ಕೆ ಶೇ.50ರಷ್ಟು ಡಿಎ (9,000) ಸೇರಿ ಒಟ್ಟು ಸಂಬಳ 27,000 ರೂಪಾಯಿ ಸಿಗಲಿದೆ.
  • ಈಗ ವಿಲೀನದ ನಂತರ ಒಟ್ಟು 27,000 ರೂಪಾಯಿ ಹೊಸ ಮೂಲ ವೇತನಕ್ಕೆ ಶೇ.4ರಷ್ಟು ಡಿಎ (1,080) ಸೇರಿ ಒಟ್ಟು 28,080 ರೂಪಾಯಿ ಸಿಗಲಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಎಷ್ಟೆಷ್ಟು ಸಂಬಳ ಏರಿಕೆ ಆಗಲಿದೆ? ನಿಮ್ಮ ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ… 7th Pay Commission Calculation

ಏನಿದು ತುಟ್ಟಿಭತ್ಯೆ?

‘ತುಟ್ಟಿಭತ್ಯೆ’ ಎಂದರೆ ಕೇಂದ್ರ, ರಾಜ್ಯ ಸರಕಾರಿ ನೌಕರರು ಹಾಗೂ ನಿವೃತ್ತ ನೌಕರರು ಅಗತ್ಯ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ತತ್ತರಿಸದೇ ಸಾರ್ವಜನಿಕರ ಕೆಲಸಗಳನ್ನು ಖುಷಿಯಿಂದ ಮಾಡಲಿ ಎನ್ನುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಒದಗಿಸುವ ಆರ್ಥಿಕ ಸೌಲಭ್ಯ.

ಹಾಲಿ ಸೇವೆಯಲ್ಲಿ ಇರುವ ನೌಕರರಿಗೆ ಪ್ರಕಟಿಸುವ ತುಟ್ಟಿ ಭತ್ಯೆಯನ್ನು ಡಿಎ (Dearness Allowance -DA) ಅಂತಲೂ, ಸೇವೆಯಿಂದ ನಿವೃತ್ತಿ ಹೊಂದಿದವರಿಗೆ ಪ್ರಕಟಿಸುವ ತುಟ್ಟಿ ಭತ್ಯೆಯನ್ನು ಡಿಆರ್ (Dearness Relief -DR) ಅಂತಲೂ ಕರೆಯಲಾಗುತ್ತದೆ.

ವರ್ಷದಲ್ಲಿ ತಲಾ ಎರಡು ಬಾರಿ ಜನವರಿ ಹಾಗೂ ಜುಲೈ ತಿಂಗಳುಗಳಲ್ಲಿ ತುಟ್ಟಿಭತ್ಯೆ ಪ್ರಕಟಿಸಲಾಗುತ್ತದೆ. ಒಂದುವೇಳೆ ಬೇರೆ ತಿಂಗಳುಗಳಲ್ಲಿ ಪ್ರಕಟಿಸಿದರೂ, ಜನವರಿ ಅಥವಾ ಜುಲೈ ತಿಂಗಳುಗಳಿ೦ದಲೇ ಅನ್ವಯವಾಗುವಂತೆ ಲೆಕ್ಕಾಚಾರ ಮಾಡಲಾಗುತ್ತದೆ. ಸದ್ಯದಲ್ಲಿಯೇ ಕೇಂದ್ರ ಸರ್ಕಾರಿ ನೌಕರರಿಗೆ ವರ್ಷದ 2ನೇ ತುಟ್ಟಿಭತ್ಯೆ ಗಿಫ್ಟ್ ಸಿಗಲಿದ್ದು; ಶೀಘ್ರದಲ್ಲಿಯೇ ಈ ಕುರಿತ ಅಧಿಕೃತ ಮಾಹಿತಿ ಹೊರಬೀಳಲಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ | ಯಾರಿಗೆಲ್ಲ ಸಿಗಲಿದೆ ಉಚಿತ ಚಿಕಿತ್ಸೆ? Karnataka Arogya Sanjeevini Scheme


Spread the love
WhatsApp Group Join Now
Telegram Group Join Now

1 thought on “ಸರ್ಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಗಿಫ್ಟ್? | ಯಾರಿಗೆ ಎಷ್ಟು ಸಿಗಲಿದೆ ಡಿಎ? DA Gift for Govt Employees”

Leave a Comment

error: Content is protected !!