ಕಡೆಗೂ ಸಿಬಿಎಸ್‌ಸಿ 10ನೇ ತರಗತಿ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಇಂದು ಪ್ರಕಟವಾಗಿದೆ. ರಿಸಲ್ಟ್ ವೀಕ್ಷಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮೇ 13ರ ಇಂದು ಮೊದಲಿಗೆ ಪಿಯುಸಿ ರಿಸಲ್ಟ್, ನಂತರ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳು ಹಂತ ಹಂತವಾಗಿ ಪ್ರಕಟಸಿದೆ.
ಇದೀಗ ವಿದ್ಯಾರ್ಥಿಗಳು 12ನೇ ಮತ್ತು 10ನೇ ತರಗತಿಯ ಫಲಿತಾಂಶಗಳನ್ನು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ cbse.gov.inನಲ್ಲಿ ಮುಕ್ತವಾಗಿ ಪರಿಶೀಲಿಸಬಹುದಾಗಿದೆ.
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದ ಪ್ರಮುಖ ಅಂಕಿ-ಅಂಶಗಳು
- ಒಟ್ಟು ಉತ್ತೀರ್ಣರಾದವರು: 93.60% (2024ರಿಗಿಂತ 0.06% ಹೆಚ್ಚಳ)
- ಹುಡುಗಿಯರ ಸಾಧನೆ: 95% ಶೇಕಡಾವಾರು ಉತ್ತೀರ್ಣತೆ; ಹುಡುಗರಿಗಿಂತ ಶೇಕಡಾ 2.37 ಹೆಚ್ಚು ಅಂಕ
- 90%ಕ್ಕಿಂತ ಹೆಚ್ಚು ಅಂಕ ಪಡೆದವರು: 1,99,944 ವಿದ್ಯಾರ್ಥಿಗಳು (8.43%)
- 95%ಕ್ಕಿಂತ ಹೆಚ್ಚು ಅಂಕ ಪಡೆದವರು: 45,516 ವಿದ್ಯಾರ್ಥಿಗಳು (1.92%)
- ಕಂಪಾರ್ಟ್ಮೆಂಟ್ ವಿದ್ಯಾರ್ಥಿಗಳು: 1,41,353 (5.96%)
ಪ್ರದೇಶವಾರು ಫಲಿತಾಂಶ ವಿವರ
- ಅಗ್ರ ಸ್ಥಾನ ಪಡೆದ ಪ್ರದೇಶಗಳು: ತಿರುವನಂತಪುರಂ ಮತ್ತು ವಿಜಯವಾಡ – 99.79% ಹಾಗೂ ಬೆಂಗಳೂರು 98.90%
- ಅತ್ಯುತ್ತಮ ರಾಜ್ಯಗಳು: ಕೇರಳ ಮತ್ತು ತಮಿಳುನಾಡು 99.86% ಹಾಗೂ ತೆಲಂಗಾಣ 99.83%
- ಅತ್ಯುತ್ತಮವಾಗಿ ಫಲಿತಾಂಶದ ಶಾಲಾ ವಿಭಾಗಗಳು: ಜೆಎನ್‌ವಿ (Jawahar Navodaya Vidyalayas) – 99.49% ಮತ್ತು ಕೆವಿಐ (Kendriya Vidyalayas) – 99.45%
- ಅತ್ಯುತ್ತಮ ಶಾಲೆಗಳ ಫಲಿತಾಂಶ: ಖಾಸಗಿ ಸ್ವತಂತ್ರ ಶಾಲೆಗಳು- 93.24% ಹಾಗೂ ಸಂಘಟಿತ ಖಾಸಗಿ ಶಾಲೆಗಳು- 91.20%

ಫಲಿತಾಂಶವನ್ನು ಚೆಕ್ ಮಾಡುವ ಸರಳ ವಿಧಾನ
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶವನ್ನು ನೋಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
- ವೆಬ್‌ಸೈಟ್ ಮೂಲಕ ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ https://cbse.gov.inಗೆ ಭೇಟಿ ನೀಡಿ. ಅಲ್ಲಿ ಮುಖಪುಟದಲ್ಲಿ Results (ಫಲಿತಾಂಶ) ವಿಭಾಗವನ್ನು ಆಯ್ಕೆಮಾಡಿ.
- CBSE Class 10 Results 2025 ಲಿಂಕ್ ಮೇಲೆ ಕ್ಲಿಕ್ ಮಾಡಿ. ಲಾಗಿನ್ ಪೇಜ್‌ನಲ್ಲಿ ನಿಮ್ಮ ರೋಲ್ ನಂಬರ್, ಆಡ್ಮಿಟ್ ಕಾರ್ಡ್ ಐಡಿ, ಜನ್ಮ ದಿನಾಂಕ ನಮೂದಿಸಿ.
- Submit/ಸಲ್ಲಿಸು ಕ್ಲಿಕ್ ಮಾಡಿದ ನಂತರ ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ನೋಡಬಹುದು. ಡೌನ್‌ಲೋಡ್ ಮಾಡಿಕೊಂಡು ಭವಿಷ್ಯಕ್ಕಾಗಿ ಪ್ರಿಂಟ್‌ಕಾಪಿ ಇಟ್ಟುಕೊಳ್ಳಿ.
ಎಸ್‌ಎಂಎಸ್ ಮೂಲಕ: ನಿಮ್ಮ ಮೊಬೈಲ್ ಸಂಖ್ಯೆಯಿAದ ರೋಲ್ ನಂಬರ್ ಕಳಿಸುವ ಮೂಲಕ ಎಸ್‌ಎಂಎಸ್ ಮೂಲಕ ಫಲಿತಾಂಶ ಪಡೆಯಬಹುದು. (ಉದಾಹರಣೆ: CBSE10 <Roll Number> to 7738299899)
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಮತ್ತು ಎಸ್‌ಎಂಎಸ್ ಅಲ್ಲದೇ, ತಮ್ಮ ಫಲಿತಾಂಶಗಳನ್ನು ಡಿಜಿಲಾಕರ್ digilocker ಹಾಗೂ ಉಮಾಂಗ್ ಆಪ್ (UMANG App) ಮೂಲಕವೂ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ.
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶವು ಈ ವರ್ಷವೂ ಉತ್ತಮ ಸಾಧನೆ ದಾಖಲಿಸಿರುವುದು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲದ ಫಲವಾಗಿದೆ. ಎಲ್ಲ ವಿದ್ಯಾರ್ಥಿಗಳಿಗೆ ಭವಿಷ್ಯದ ಶೈಕ್ಷಣಿಕ ಹಾದಿಯಲ್ಲಿ ಯಶಸ್ಸು ಪ್ರಾಪ್ತಿಯಾಗಲಿ ಎಂದು ಹಾರೈಸೋಣ…
CBSE 12th Result 2025- ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ | ರಿಸಲ್ಟ್ ಹೀಗೆ ಚೆಕ್ ಮಾಡಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.