CBSE 10th ಮತ್ತು 12th ಫಲಿತಾಂಶ (CBSE 10th & 12th Result 2025) ಪ್ರಕಟಣೆ ಕುರಿತು ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಸಿಬಿಎಸ್‌ಇ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ…
2025ನೇ ಸಾಲಿನ ಸಿಬಿಎಸ್‌ಇ 10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ನಕಲಿ ಅಧಿಸೂಚನೆಗಳು ಮತ್ತು ದಾರಿತಪ್ಪಿಸುವ ಊಹಾಪೋಹಗಳು ತುಂಬಿ ತುಳುಕುತ್ತಿದ್ದು, ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿರುವ ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡುತ್ತಿವೆ.
ಕಳೆದ ಮೇ 2, 2025ರಂದು ಪ್ರಕಟವಾಗಿದೆ ಎಂದು ಹೇಳಲಾದ ನಕಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಸಿಬಿಎಸ್‌ಇ ಮಂಡಳಿ ಸ್ಪಷ್ಟೀಕರಣ ನೀಡಿದ್ದು; ಈ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಕಾತುರ
ಈ ವರ್ಷ 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಬೋರ್ಡ್ ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 10ನೇ ತರಗತಿಗೆ ಸುಮಾರು 24.12 ಲಕ್ಷ ಹಾಗೂ 12ನೇ ತರಗತಿಗೆ 17.88 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
2025ನೇ ಸಾಲಿನಲ್ಲಿ ಪರೀಕ್ಷೆಗಳು ಕಳೆದ ಫೆಬ್ರವರಿ 15 ರಿಂದ ಮಾರ್ಚ್ 1ರ ವರೆಗೆ 10ನೇ ತರಗತಿ ಪರೀಕ್ಷೆಗಳು ನಡೆದಿದ್ದವು. ಅದೇ ರೀತಿ 12ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15ರಿಂದ ಏಪ್ರಿಲ್ 4ರ ವರೆಗೆ ನಡೆದಿದ್ದವು. ಇದೀಗ ಎರಡೂ ತರಗತಿಯ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.

ನಕಲಿ ಪತ್ರದಲ್ಲಿ ಏನಿದೆ ಮಾಹಿತಿ?
ಮೇ2, 2025ರಂದು ಪ್ರಕಟವಾಗಿದೆ ಎನ್ನಲಾದ ನಕಲಿ ಪತ್ರದಲ್ಲಿ ಅಃSಇ 10ನೇ ತರಗತಿಯ ಫಲಿತಾಂಶವು ಇದೇ ಮೇ 6, 2025 ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಅಧಿಕೃತ ಸುತ್ತೋಲೆಯಂತೆ ಕಾಣುವಂತೆ ಸೃಷ್ಟಿಸಲಾದ ಈ ನಕಲಿ ದಾಖಲೆಯು ಆನ್‌ಲೈನ್‌ನಲ್ಲಿ ಸಾಕಷ್ಟು ಹರಿದಾಡುತ್ತಿದ್ದು; ಈಗಾಗಲೇ ಉದ್ವಿಗ್ನವಾಗಿರುವ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಗೊಂದಲವನ್ನು ಹೆಚ್ಚಿಸಿದೆ.
ಸಿಬಿಎಸ್‌ಇ ಹೇಳಿದ್ದೇನು?
ಇದಕ್ಕೆ ಪ್ರತಿಯಾಗಿ ಮಂಡಳಿಯು X (ಹಳೇ Twitter) ಸಾಮಾಜಿಕ ಜಾಲತಾಣದ ಅಧಿಕೃತ ಪೋಸ್ಟ್ನಲ್ಲಿ 2025ರ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಯ ಫಲಿತಾಂಶಗಳ ಘೋಷಣೆಯ ಕುರಿತು ಇನ್ನೂ ಯಾವುದೇ ಘೋಷಣೆ ಮಾಡಲಾಗಿಲ್ಲ ಎಂದು CBSE ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರು ನಕಲಿ ಸುದ್ದಿಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಬೇಕು ಮತ್ತು ಅಧಿಕೃತ ಅಪ್ಡೇಟ್ಸ್’ಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಬೇಕೆAದು ನಾವು ಒತ್ತಾಯಿಸುತ್ತೇವೆ. ನಿಖರ ಮತ್ತು ಸಕಾಲಿಕ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ cbse.gov.inಗೆ ಭೇಟಿ ನೀಡುವಂತೆ ಮಂಡಳಿ ಸಲಹೆ ನೀಡಿದೆ.
2025ನೇ ಸಾಲಿನ 10 ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಸಿಬಿಎಸ್‌ಇ ಮೇ ತಿಂಗಳಲ್ಲಿಯೇ ಪ್ರಕಟಿಸುವ ನಿರೀಕ್ಷೆ ಇದೆ. ಆದರೆ, ಬಿಡುಗಡೆ ದಿನಾಂಕ ಅಥವಾ ಸಮಯದ ಬಗ್ಗೆ ಯಾವುದೇ ನಿಖರ ಮಾಹಿತಿಯನ್ನು ಇನ್ನೂ ನೀಡಿಲ್ಲ. ಯಾವುದೇ ನವೀಕರಣಗಳನ್ನು ವಿಶ್ವಾಸಾರ್ಹ ಮತ್ತು ಅಧಿಕೃತ ಮಾರ್ಗಗಳ ಮೂಲಕ ಮಾತ್ರ ತಿಳಿಸಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಫಲಿತಾಂಶಗಳು ಬಿಡುಗಡೆಯಾದಾಗ, ಈ ಕೆಳಗಿನ ಅಧಿಕೃತ ಜಾಲತಾಣಗಳಲ್ಲಿ ಮಾತ್ರ ವಿದ್ಯಾರ್ಥಿಗಳು ವೀಕ್ಷಿಸಬಹುದಾಗಿದೆ:
CBSE 10th 12th Result 2025- ಸಿಬಿಎಸ್‌ಇ SSLC-PUC ಫಲಿತಾಂಶ ಈ ದಿನ ಪ್ರಕಟ | ಮಹತ್ವದ ಮಾಹಿತಿ ಇಲ್ಲಿದೆ…