ಎಸ್ಸೆಸ್ಸೆಲ್ಸಿ, ಪಿಯುಸಿ, ಪದವೀಧರರಿಂದ ಪಶುಪಾಲನಾ ನಿಗಮದ 2,250 ಹುದ್ದೆಗಳಿಗೆ ಅರ್ಜಿ ಆಹ್ವಾನ Bharatiya Pashupalan Nigam Recruitment 2024

Spread the love

Bharatiya Pashupalan Nigam Recruitment 2024 : ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ (BPNL Recruitment 2024) ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬರೋಬ್ಬರಿ 2,250 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

WhatsApp Group Join Now
Telegram Group Join Now

ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (Bhartiya Pashupalan Nigam Ltd -BPNL) 2009ರಲ್ಲಿ ಸ್ಥಾಪನೆಗೊಂಡಿದ್ದು, ಇದು ಒಂದು ಸರ್ಕಾರೇತರ ಪ್ರತಿಷ್ಠಿತ ಸಂಸ್ಥೆಯಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪಶುಪಾಲಕ ಜ್ಞಾನ ಕೇಂದ್ರಗಳನ್ನು ಸ್ಥಾಪನೆ ಮಾಡಿ ಜನರಲ್ಲಿ ಪಶುಪಾಲನೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಮೂಲಕ ದೇಶದಲ್ಲಿ ಕ್ಷೀರ ಕ್ರಾಂತಿಯನ್ನು ತರುವುದು BPNLನ ಮುಖ್ಯ ಉದ್ದೇಶವಾಗಿದೆ.

ಇದೀಗ ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆಗಳೇನು? ಮಾಸಿಕ ಸಂಬಳವೆಷ್ಟು? ಅರ್ಜಿ ಶುಲ್ಕ, ವಯೋಮಿತಿ ವಿವರ ಹಾಗೂ ಅರ್ಜಿ ಸಲ್ಲಿಕೆ ಲಿಂಕ್ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ | ಯಾರಿಗೆಲ್ಲ ಸಿಗಲಿದೆ ಉಚಿತ ಚಿಕಿತ್ಸೆ? Karnataka Arogya Sanjeevini Scheme

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಬರೋಬ್ಬರಿ 2,250 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದ್ದು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

  • ಗೋ ಪ್ರಚಾರ ವಿಸ್ತರಣಾಧಿಕಾರಿ (Cow Promotion Extender) : ಒಟ್ಟು 225 ಹುದ್ದೆಗಳು ಖಾಲಿ ಇದ್ದು; ಈ ಹುದ್ದೆಗಳಿಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಹಸು ಪ್ರಚಾರ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
  • ಗೋ ಬ್ರಿಡಿಂಗ್ ಸಹಾಯಕ (Cow Breeding Assistant) : 675 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು; ಈ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.
  • ಗೋ ಸೇವಕ (Cow Servant) : ಒಟ್ಟು 1,350 ಹುದ್ದೆಗಳು ಖಾಲಿ ಇದ್ದು; ಈ ಹುದ್ದೆಗಳಿಗೆ ಕೇವಲ 10ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಕೃಷಿ ಇಲಾಖೆಯ 1,138 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ | ಪಿಯುಸಿ ಪಾಸಾದವರಿಗೂ ಅವಕಾಶ Karnataka Agri Officers Recruitment 2024

ವಯೋಮಿತಿ ವಿವರ

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್’ನ ಮೇಲ್ಕಾಣಿಸಿದ ಎಲ್ಲ ಹುದ್ದೆಗಳಿಗೂ ಕನಿಷ್ಟ 18 ಮತ್ತು ಗರಿಷ್ಟ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಈ ಎಲ್ಲ ಹುದ್ದೆಗಳಿಗೆ 18-45 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ.

Bharatiya Pashupalan Nigam Recruitment 2024
ಅರ್ಜಿ ಶುಲ್ಕದ ವಿವರ

ಒಂದೊ೦ದು ಹುದ್ದೆಗೆ ಒಂದೊ೦ದು ರೀತಿಯ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು; ಎಲ್ಲ ವರ್ಗದ ಅಭ್ಯರ್ಥಿಗಳಿಗೂ ಒಂದೇ ರೀತಿಯ ನಿರ್ಧಿಷ್ಟ ಮೊತ್ತದ ಶುಲ್ಕವನ್ನು ಪಾವತಿಸಬೇಕು. ಈ ಪೈಕಿ ಗೋ ಪ್ರಚಾರ ವಿಸ್ತರಣಾಧಿಕಾರಿ ಹುದ್ದೆಗಳಿಗೆ 944 ರೂಪಾಯಿ, ಗೋ ಬ್ರಿಡಿಂಗ್ ಸಹಾಯಕ ಹುದ್ದೆಗಳಿಗೆ 826 ರೂಪಾಯಿ ಹಾಗೂ ಗೋ ಸೇವಕ ಹುದ್ದೆಗಳಿಗೆ 708 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಎಷ್ಟೆಷ್ಟು ಸಂಬಳ ಏರಿಕೆ? ಮೊಬೈಲ್’ನಲ್ಲೇ ಚೆಕ್ ಮಾಡಿ… 7th Pay Commission Calculation

ಸಂಬಳ ಹಾಗೂ ನೇಮಕಾತಿ ವಿಧಾನ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ಸಂಬಳ ನಿಗದಿಪಡಿಸಲಾಗಿದ್ದು; ಈ ಪೈಕಿ ಗೋ ಪ್ರಚಾರ ವಿಸ್ತರಣಾಧಿಕಾರಿ ಹುದ್ದೆಗಳಿಗೆ 26,000 ರೂಪಾಯಿ, ಗೋ ಬ್ರಿಡಿಂಗ್ ಸಹಾಯಕ ಹುದ್ದೆಗಳಿಗೆ 23,000 ರೂಪಾಯಿ ಹಾಗೂ ಗೋ ಸೇವಕ ಹುದ್ದೆಗಳಿಗೆ 18,000 ರೂಪಾಯಿ ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಇನ್ನು ಆಯ್ಕೆ ವಿಧಾನದ ಬಗ್ಗೆ ನೋಡುವುದಾದರೆ, ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.

ಇದನ್ನೂ ಓದಿ: ಅಂಗನವಾಡಿ LKG-UKG ಟೀಚರ್ ನೇಮಕಾತಿ: ಹೇಗೆ ನಡೆಯಲಿದೆ ನೇಮಕ ಪ್ರಕ್ರಿಯೆ? ಸಚಿವರ ಮಹತ್ವದ ಮಾಹಿತಿ… Anganwadi LKG UKG Teacher Recruitment 2024

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
    26-07-2024
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ:
    05-08-2024

ಅಧಿಸೂಚನೆ : Download
ಅರ್ಜಿ ಸಲ್ಲಿಕೆ ಲಿಂಕ್ : Apply Now

ಇದನ್ನೂ ಓದಿ: SSLC ಪಾಸಾದವರಿಗೆ ಕರ್ನಾಟಕದಲ್ಲಿ 1,940 ಪೋಸ್ಟ್ ಮ್ಯಾನ್ ಹುದ್ದೆಗಳು | ಯಾವ ಜಿಲ್ಲೆಗೆ ಎಷ್ಟು ಹುದ್ದೆ? ಇಲ್ಲಿದೆ ಮಾಹಿತಿ… Karnataka Post Master Recruitment 2024


Spread the love
WhatsApp Group Join Now
Telegram Group Join Now
error: Content is protected !!