BCWD Hostel Recruitment 2024 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹೊಸದಾಗಿ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ಇಲಾಖೆಯಲ್ಲಿ ಒಟ್ಟು 975 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 825 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಗೆ ಸರ್ಕಾರದಿಂದ ಅನುಮತಿ ದೊರೆತಿದೆ. ಈ ನೇಮಕಾತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ….
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 100 ವಿದ್ಯಾರ್ಥಿಗಳ ಸಾಮರ್ಥ್ಯ ಇರುವ 150 ಹೊಸ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸಲು ಸರ್ಕಾರವು ಅನುಮತಿ ನೀಡಿದೆ. ಇದರಲ್ಲಿ 75 ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳು ಮತ್ತು 75 ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳನ್ನು ಆರಂಭಿಸಲಾಗುತ್ತಿದೆ.
ಈ ಹೊಸ ವಸತಿ ನಿಲಯಗಳಿಗೆ ಅವಶ್ಯಕವಿರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಒಟ್ಟು 825 ವಿವಿಧ ಹುದ್ದೆಗಳನ್ನು ಸೃಜಿಸಲಾಗಿದ್ದು, ಇದಕ್ಕೆ ಸರ್ಕಾರವು 18 ಜೂನ್ 2024ರಂದು ಅನುಮತಿ ನೀಡಿದೆ. ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
BCWD Hostel Recruitment 2024 ಖಾಲಿ ಇರುವ 825 ಹುದ್ದೆಗಳ ವಿಂಗಡಣೆ
- ನಿಲಯ ಪಾಲಕರು (ಊosಣeಟ Wಚಿಡಿಜeಟಿ) : 150 ಹುದ್ದೆಗಳು
- ಅಡುಗೆಯವರು : 300 ಹುದ್ದೆಗಳು
- ಅಡುಗೆ ಸಹಾಯಕರು : 300 ಹುದ್ದೆಗಳು
- ರಾತ್ರಿ ಕಾವಲುಗಾರರು : 75 ಹುದ್ದೆಗಳು
ಒಟ್ಟು 825 ಹುದ್ದೆಗಳಲ್ಲಿ 150 ನಿಲಯ ಪಾಲಕರು ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಶೀಘ್ರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಉಳಿದ 675 ಅಡುಗೆಯವರು, ಅಡುಗೆ ಸಹಾಯಕರು ಹಾಗೂ ರಾತ್ರಿ ಕಾವಲುಗಾರರು ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಶೀಘ್ರದಲ್ಲಿಯೇ ಆರಂಭವಾಗುವ 150 ನಿಲಯ ಪಾಲಕರು ಹುದ್ದೆಗಳ ನೇಮಕಾತಿಯ ಜಿಲ್ಲಾವಾರು ಖಾಲಿ ಹುದ್ದೆಗಳ ಪಟ್ಟಿಯನ್ನು ಲೇಖನದ ಕೊನೆಯ ಭಾಗದಲ್ಲಿ PDF ನೀಡಲಾಗಿದೆ. ಡೌನ್‌ಲೋಡ್ ಮಾಡಿಕೊಂಡ ಸಂಪೂರ್ಣ ಓದಿ ಅರ್ಹ ಅಭ್ಯರ್ಥಿಗಳು ತಯಾರಿ ನಡೆಸಬಹುದಾಗಿದೆ.
ನಿಲಯ ಪಾಲಕರು ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ನಿಲಯ ಪಾಲಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣದ ಜೊತೆಗೆ ಬಿ. ಎಡ್ ಶಿಕ್ಷಣವನ್ನು ಮುಗಿಸಿರಬೇಕು.
ಈ ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಈಗಾಗಲೇ ಅನುಮತಿ ದೊರೆತಿದ್ದು ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಶೀಘ್ರದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗುವುದು.
ಜಿಲ್ಲಾವಾರು ಖಾಲಿ ಹುದ್ದೆಗಳ ಪಟ್ಟಿ (ಪರಿಶೀಲಿಸಿ)
1 thought on “ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 825 ಹಾಸ್ಟೆಲ್ ಹುದ್ದೆಗಳ ನೇಮಕಾತಿ | SSLC ಪಾಸಾದವರಿಗೂ ಅವಕಾಶ BCWD Hostel Recruitment 2024”