Bagar Hukum- 42 ಸಾವಿರ ಬಗರ್‌ಹುಕುಂ ಅರ್ಜಿ ತಿರಸ್ಕಾರ | ಯಾರೆಲ್ಲ ಅನರ್ಹರು? ಇಲ್ಲಿದೆ ಮಾಹಿತಿ…

ರಾಜ್ಯ ಸರ್ಕಾರ ಬರೋಬ್ಬರಿ 42 ಸಾವಿರ ಬಗರ್‌ಹುಕುಂ (Bagar Hukum) ಅರ್ಜಿ ತಿರಸ್ಕಾರ ಮಾಡಿದ್ದು; ಅನರ್ಹ ಅರ್ಜಿಗಳ ಅಂಕಿ-ಅಂಶವನ್ನು ಬಿಡುಗಡೆ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರವು ಬಗರ್‌ಹುಕುಂ ಯೋಜನೆ ಅಡಿಯಲ್ಲಿ ಸಲ್ಲಿಕೆಯಾಗಿದ್ದ ಸಾವಿರಾರು ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ದೊಡ್ಡ ಮಟ್ಟದ ಅನರ್ಹರನ್ನು ಪತ್ತೆ ಹಚ್ಚಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ವಿಧಾನಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಒಟ್ಟಾರೆ 42,289 ಅರ್ಜಿಗಳು ಅನರ್ಹವೆಂದು ತಿರಸ್ಕರಿಸಲ್ಪಟ್ಟಿವೆ.
ಈ ಮಾಹಿತಿಯು ಅನೇಕ ಜನರಿಗೆ ಅಚ್ಚರಿ ಮೂಡಿಸಿದೆ. ಏಕೆಂದರೆ, ತಿರಸ್ಕೃತ ಅರ್ಜಿದಾರರಲ್ಲಿ ಕೆಲವರು 2005ರಲ್ಲಿ ಕಾಯ್ದೆ ಜಾರಿಯಾದಾಗ ಹುಟ್ಟೇ ಇರಲಿಲ್ಲ ಅಥವಾ ಆ ಕಾಲದಲ್ಲಿ ಕೇವಲ 2-3 ವರ್ಷದ ಮಕ್ಕಳಾಗಿದ್ದರು. ಹೀಗಾಗಿ, ಅವರು ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇವೆ ಎಂದು ಹೇಳುವುದು ನಿಜಕ್ಕೂ ಹಾಸ್ಯಾಸ್ಪದ.
Magha Rain Karnataka- ಮಘೆ ಮಳೆ ಅಬ್ಬರ | ಎಲ್ಲೆಡೆ ಇನ್ನೂ ಐದು ದಿನ ಭಾರೀ ಮಳೆ
ಬಗರ್‌ಹುಕುಂ ಕಾಯ್ದೆಯ ಉದ್ದೇಶ
2005ರಲ್ಲಿ ಜಾರಿಗೆ ಬಂದ ಬಗರ್‌ಹುಕುಂ ಕಾಯ್ದೆಯ ಮುಖ್ಯ ಉದ್ದೇಶ ಸರ್ಕಾರಿ ಜಮೀನಿನಲ್ಲಿ ವರ್ಷಗಳಿಂದ ಜೀವನ ನಡೆಸುತ್ತಿದ್ದ ನೈಜ ರೈತರಿಗೆ ಕಾನೂನು ಬದ್ಧ ಹಕ್ಕು ನೀಡುವುದಾಗಿದೆ.
ಕಾಯ್ದೆಯ ಪ್ರಕಾರ 2005ರ ವೇಳೆಗೆ 18 ವರ್ಷ ಪೂರೈಸಿ ನಿಜವಾಗಿ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದವರಿಗೆ ಮಾತ್ರ ಹಕ್ಕುಪತ್ರ ಸಿಗಬೇಕು. ಸ್ವಂತವಾಗಿ ದೊಡ್ಡ ಜಮೀನು ಹೊಂದಿದವರಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ.
ಕೆರೆ, ಅರಣ್ಯ ಪ್ರದೇಶ, ಗೋಮಾಳ ಅಥವಾ ಬಫರ್ ಝೋನ್ ಪ್ರದೇಶಗಳನ್ನು ಹಕ್ಕುಪತ್ರಕ್ಕೆ ಪರಿಗಣಿಸಲಾಗುವುದಿಲ್ಲ. ಆದರೆ, ಈ ನಿಯಮಗಳನ್ನು ನಿರ್ಲಕ್ಷಿಸಿ ಅನೇಕರು ಅರ್ಜಿ ಸಲ್ಲಿಸಿರುವುದು ಈಗ ಬಹಿರಂಗವಾಗಿದೆ.
ಅನರ್ಹ ಅರ್ಜಿಗಳ ವಿವರ
ಸಚಿವ ಕೃಷ್ಣ ಭೈರೇಗೌಡ ಅವರು ನಿನ್ನೆ (ಆಗಸ್ಟ್ 18) ವಿಧಾನಸಭೆಯಲ್ಲಿ ಮಂಡಿಸಿದ ಅನರ್ಹ ಅರ್ಜಿಗಳ ಅಂಕಿ-ಅಂಶಗಳು ಹೀಗಿವೆ:
- ಸ್ವಂತದ 5 ಎಕರೆಗಿಂತ ಹೆಚ್ಚು ಜಮೀನು ಹೊಂದಿದವರು: 7,564 ಅರ್ಜಿಗಳು
- ಗುಂಡುತೋಪು ಮಂಜೂರಿಗೆ: 33,632 ಅರ್ಜಿಗಳು
- ಅರಣ್ಯ ಭೂಮಿಗೆ: 1.65 ಲಕ್ಷ ಅರ್ಜಿಗಳು
- ಬಫರ್ ಝೋನ್ ಪ್ರದೇಶಗಳಿಗೆ: 69,850 ಅರ್ಜಿಗಳು
- ತಾಲ್ಲೂಕಿನಲ್ಲಿ ವಾಸವಿಲ್ಲದವರು: 1,620 ಅರ್ಜಿಗಳು
- ಕೃಷಿಕರೇ ಅಲ್ಲದವರು: 12,601 ಅರ್ಜಿಗಳು
- ಕೆರೆಯ ಜಾಗಕ್ಕೆ: 3,040 ಅರ್ಜಿಗಳು
- ಗೋಮಾಳ ಮಂಜೂರಿಗೆ: 13,488 ಅರ್ಜಿಗಳು
- ಸ್ವಾಧೀನದಲ್ಲೇ ಇಲ್ಲದವರು: 44,517 ಅರ್ಜಿಗಳು
ನಿಜವಾದ ರೈತರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಅನರ್ಹರು ಅರ್ಜಿ ಸಲ್ಲಿಸಿ ಯೋಜನೆಯ ದುರುಪಯೋಗಕ್ಕೆ ಮುಂದಾಗಿದ್ದಾರೆಂದು ಈ ಅಂಕಿ-ಅಂಶಗಳೇ ತೋರಿಸುತ್ತವೆ!
Gruhalakshmi money released- ಗಣೇಶ ಚತುರ್ಥಿಗೆ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಬಿಡುಗಡೆ | ಜುಲೈ ತಿಂಗಳ ಹಣ ಜಮಾ
ಕಂದಾಯ ಸಚಿವರ ಎಚ್ಚರಿಕೆ
ಬಗರ್‌ಹುಕುಂ ಕಾಯ್ದೆ ನಿಜವಾದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಜಾರಿಗೆ ತಂದದ್ದು. ಆದರೆ ಅರ್ಹತೆಯಿಲ್ಲದೆ ಅರ್ಜಿ ಸಲ್ಲಿಸುವವರನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ತಿರಸ್ಕೃತ ಅರ್ಜಿದಾರರಿಗೆ ಹಕ್ಕುಪತ್ರ ನೀಡಲಾಗುವುದಿಲ್ಲ ಎಂದು ಕೃಷ್ಣ ಭೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ಒಂದೆಡೆ ಸರ್ಕಾರ ನೈಜ ರೈತರ ಬದುಕು ಸುಧಾರಿಸಲು ಬಗರ್ ಹುಕುಂ ಕಾಯ್ದೆ ಜಾರಿಗೆ ತಂದರೆ, ಇನ್ನೊಂದು ಕಡೆ ಅನರ್ಹ ಅರ್ಜಿದಾರರು ವ್ಯವಸ್ಥೆಯನ್ನು ದುರುಪಯೋಗ ಮಾಡಿಸಿಕೊಳ್ಳಲು ಮುಂದಾಗಿರುವುದು ಚಿಂತಾಜನಕ. ಹೀಗಾಗಿ, ಕಟ್ಟುನಿಟ್ಟಿನ ಪರಿಶೀಲನೆ ಮತ್ತು ಪಾರದರ್ಶಕತೆ ಅಗತ್ಯವಾಗಿದೆ.