ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನ (Azim Premji Scholarship) ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ 30,000 ರೂ. ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಕೆಯ ಪೂರ್ಣ ಮಾಹಿತಿ ಇಲ್ಲಿದೆ…
ಶಿಕ್ಷಣವೆಂಬುದು ಬಡತನದ ಬೇಲಿಯನ್ನು ದಾಟಿಸುವ ಅತ್ಯಂತ ಶಕ್ತಿಯುತ ಆಯುಧ. ಆದರೆ ಆರ್ಥಿಕ ಸಂಕಷ್ಟದ ಕಾರಣದಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳು ಮಧ್ಯದಲ್ಲೇ ಮುರಿದು ಬೀಳುತ್ತವೆ. ಇಂತಹ ವಿದ್ಯಾರ್ಥಿಗಳಿಗೆ ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನ (Azim Premji Scholarship) ಯೋಜನೆಯು ಆಸರೆಯಾಗಿದೆ.
2025-2026ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ₹30,000 ಪ್ರೋತ್ಸಾಹಧನ (Scholarship) ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ.
ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದ ಅಜೀಂ ಪ್ರೇಮ್‌ಜಿ, ತಮ್ಮ ಸಂಪತ್ತಿನ ಬಹುಭಾಗವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಶಿಕ್ಷಣವನ್ನು ಬಲಪಡಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
Main Objective of Azim Premji Scholarship – ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನದ ಮುಖ್ಯ ಉದ್ದೇಶವೇನು?
ಈ ವಿದ್ಯಾರ್ಥಿವೇತನ ಯೋಜನೆಯು ಕೇವಲ ಹಣಕಾಸಿನ ನೆರವು ಅಷ್ಟೇ ಅಲ್ಲ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ವದ ಗುರಿಗಳನ್ನು ಹೊಂದಿದೆ.
- ಪ್ರತಿಭಾವಂತ ಆದರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಹಾಯ
- ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಯುವಕರನ್ನು ಪ್ರೋತ್ಸಾಹಿಸುವುದು
- ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಶಿಕ್ಷಣ ಮಟ್ಟವನ್ನು ಸುಧಾರಿಸುವುದು
- ಮೌಲ್ಯಾಧಾರಿತ ಶಿಕ್ಷಣ ಹಾಗೂ ಸಮಾಜಮುಖಿ ಚಿಂತನೆ ಬೆಳೆಸುವುದು
Scholarship Amount – ವಿದ್ಯಾರ್ಥಿವೇತನದ ಮೊತ್ತ
ಪ್ರತಿ ಅರ್ಹ ವಿದ್ಯಾರ್ಥಿಗೆ ₹30,000 ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಮೊತ್ತವನ್ನು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: KSCCF Recruitment 2026- ಪಿಯುಸಿ, ಪದವಿಧರರಿಗೆ ಸಹಕಾರ ಮಹಾ ಮಂಡಳಿಯಲ್ಲಿ ಉದ್ಯೋಗಾವಕಾಶ | ಅರ್ಜಿ ಆಹ್ವಾನ
Who Are Eligible to Apply? – ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು:
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
- ವಿದ್ಯಾರ್ಥಿಯು 10 ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
- 2025-26ನೇ ಶೈಕ್ಷಣಿಕ ವರ್ಷದಲ್ಲಿ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರಬೇಕು
- ಪದವಿಪೂರ್ವ ಪದವಿ (UG) ಅಥವಾ ಡಿಪ್ಲೊಮಾ ಕೋರ್ಸ್ಗಳಿಗೆ ಪ್ರವೇಶ ಪಡೆದಿರಬೇಕು
Important Instructions – ಪ್ರಮುಖ ಸೂಚನೆಗಳು
- ಪದವಿ ಅಥವಾ ಡಿಪ್ಲೊಮಾ ಕೋರ್ಸ್ಗಳ ಅವಧಿ 2 ರಿಂದ 5 ವರ್ಷಗಳವರೆಗೆ ಇರಬೇಕು
- 2025-26 ಅಥವಾ ಅದಕ್ಕೂ ಮೊದಲು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅರ್ಹರಲ್ಲ
- ಈಗಾಗಲೇ ವಿಪ್ರೋ (Wipro) ವಿದ್ಯಾರ್ಥಿವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ
ಇದನ್ನೂ ಓದಿ: February New Ration Card Application- ಫೆಬ್ರವರಿಯಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ | ಆಹಾರ ಸಚಿವರ ಮಹತ್ವದ ಮಾಹಿತಿ

Documents Required for Application – ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
ಅರ್ಜಿ ಸಲ್ಲಿಸುವ ವೇಳೆ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು:
- ಆಧಾರ್ ಕಾರ್ಡ್
- 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿ
- ಕಾಲೇಜು / ವಿಶ್ವವಿದ್ಯಾಲಯದ ಪ್ರವೇಶ ಪತ್ರ
- ಅರ್ಜಿದಾರರ ಸಹಿ (ಕಾಗದದ ಮೇಲೆ ಮಾಡಿಕೊಂಡು ಸ್ಕ್ಯಾನ್ ಮಾಡಬೇಕು)
- ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟ
- ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ
How to Apply Online – ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಅರ್ಹ ವಿದ್ಯಾರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಸುಲಭವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:
ಹಂತ-1: ನಾವು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಬಳಸಿಕೊಂಡು ನೇರವಾಗಿ ಆನ್‌ಲೈನ್ ಅರ್ಜಿ ಸಲ್ಲಸಬಹುದಾಗಿದೆ. Apply Here ಅರ್ಜಿ ಲಿಂಕ್ ಕ್ಲಿಕ್ ಮಾಡಿದರೆ ಮೊದಲು ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನದ ಅಧಿಕೃತ ವೆಬ್‌ಸೈಟ್ ತೆರೆದುಕೊಳ್ಳುತ್ತದೆ.
ಹಂತ-2: ವೆಬ್‌ಸೈಟ್ ತೆರೆಯುತ್ತಿದ್ದಂತೆ Register Now / Apply Online ಬಟನ್ ಮೇಲೆ ಕ್ಲಿಕ್ ಮಾಡಿ. ಹೊಸ ಬಳಕೆದಾರರಾಗಿದ್ದರೆ ಹೊಸ ಖಾತೆ (New Registration) ರಚಿಸಬೇಕು.
ಹಂತ-3: ನಂತರ ನಿಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ. ಲಾಗಿನ್ ಆದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
ಹಂತ-4: ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ Submit ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31 ಜನವರಿ 2026
ಕೊನೆಯ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಸಮಯದೊಳಗೆ ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯ.
A Ray of Hope for Students – ವಿದ್ಯಾರ್ಥಿಗಳ ಬದುಕಿಗೆ ಬೆಳಕು
ಆರ್ಥಿಕ ಸಂಕಷ್ಟವೇ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಧ್ಯೇಯದಿಂದ ಆರಂಭವಾದ ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನ ಯೋಜನೆ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗುತ್ತಿದೆ. ನೀವು ಅರ್ಹರಾಗಿದ್ದರೆ ಈ ಅವಕಾಶವನ್ನು ಕೈಮೀಸಿಕೊಳ್ಳದೇ, 31 ಜನವರಿ 2026ರೊಳಗೆ ಅರ್ಜಿ ಸಲ್ಲಿಸಿ.
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದರೆ, ನಿಮ್ಮ ಸ್ನೇಹಿತರು ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ. ಇನ್ನಷ್ಟು ಸರ್ಕಾರಿ/ಖಾಸಗಿ ಯೋಜನೆಗಳ ಮಾಹಿತಿಗಾಗಿ ನಮ್ಮನ್ನು ಫಾಲೋ ಮಾಡಿ.
ಅರ್ಜಿ ಲಿಂಕ್: Apply Here
1.5 Lakh Kotak Kanya Scholarship- 1.5 ಲಕ್ಷ ರೂ. ಕೋಟಕ್ ಕನ್ಯಾ ವಿದ್ಯಾರ್ಥಿವೇತನ | ಈಗಲೇ ಅರ್ಜಿ ಹಾಕಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.