Atal Pension Yojana- ಈ ಯೋಜನೆಗೆ ಸೇರಿದರೆ ಪ್ರತೀ ತಿಂಗಳೂ ₹5000 ಪಿಂಚಣಿ | ಅಟಲ್ ಪಿಂಚಣಿ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

ಈ ಯೋಜನೆಗೆ ಸೇರಿದರೆ ಪ್ರತೀ ತಿಂಗಳೂ 5,000 ರೂ. ಪಿಂಚಣಿ (Pension) ಪಡೆಯಬಹುದಾಗಿದೆ. ಏನಿದು ಯೋಜನೆ? ಯೋಜನೆಗೆ ಸೇರುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಬದುಕಿನ ಇಳಿಗಾಲದಲ್ಲಿ ಆರ್ಥಿಕ ಭದ್ರತೆ ಇದ್ದರೆ ಮಾತ್ರ ಜೀವನ ಆನಂದವಾಗಿರುತ್ತದೆ. ಅಟಲ್ ಪಿಂಚಣಿ ಯೋಜನೆಯು (Atal Pension Yojana-APY) ವೃದ್ಧಾಪ್ಯದಲ್ಲಿ ಆನಂದಮಯ ಜೀವನಕ್ಕೆ ನೆರವಾಗುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ನಿಗದಿತ ಪ್ರಮಾಣದ ಮೊತ್ತವನ್ನು ಹೂಡಿಕೆ ಮಾಡಿದರೆ ನಿವೃತ್ತಿಯ ಬಳಿಕ ಪ್ರತಿ ತಿಂಗಳು ₹1,000ರಿಂದ ₹5,000 ವರೆಗೆ ಪಿಂಚಣಿ ಪಡೆಯಬಹುದು.

ಏನಿದು ಅಟಲ್ ಪಿಂಚಣಿ ಯೋಜನೆ?

ಅಟಲ್ ಪಿಂಚಣಿ ಯೋಜನೆಯನ್ನು 2015ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಚಯಿಸಿದೆ. ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (Pಈಖಆಂ) ನಿರ್ಯಹಿಸುತ್ತಿದ್ದು; ಯಾರೂ ವೃದ್ಧಾಪ್ಯದಲ್ಲಿ ಆರ್ಥಿಕ ಸಂಕಟ ಅನುಭವಿಸಬಾರದು ಎಂಬುವುದು ಈ ಯೋಜನೆಯ ಉದ್ದೇಶವಾಗಿದೆ.

18ರಿಂದ 40 ವರ್ಷದೊಳಗಿನ ನಾಗರಿಕರು ಈ ಯೋಜನೆಗೆ ಅರ್ಹರಾಗಿದ್ದಾರೆ. ಆದಾಯ ತೆರಿಗೆ ಪಾವತಿಸದವರು, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಉಳಿತಾಯ ಖಾತೆ ಹೊಂದಿರುವವರು, ಏಙಅ ದಾಖಲೆಗಳು ಸಲ್ಲಿಸಿದವರು (ಆಧಾರ್, ಪ್ಯಾನ್, ಆದಾಯ ಪ್ರಮಾಣ ಪತ್ರ ಇತ್ಯಾದಿ) ಅಟಲ್ ಪಿಂಚಣಿ ಯೋಜನೆಗೆ ಮುಕ್ತವಾಗಿ ಸೇರಬಹುದಾಗಿದೆ.

SSLC Result 2025- ಎಸ್ಸೆಸ್ಸೆಲ್ಸಿ ಫಲಿತಾಂಶ | ಶಿಕ್ಷಣ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…

ಎಷ್ಟು ಹೂಡಿಕೆಗೆ ಎಷ್ಟೆಷ್ಟು ಪಿಂಚಣಿ ಸಿಗುತ್ತದೆ?

ಅಟಲ್ ಪಿಂಚಣಿ ಯೋಜನೆಯು ನಿಮಗೆ ₹1000, ₹2000, ₹3000, ₹4000, ₹5000 ಐದು ವಿಭಿನ್ನ ಮಾಸಿಕ ಪಿಂಚಣಿ ಆಯ್ಕೆಗಳನ್ನು ನೀಡುತ್ತದೆ. ಹೂಡಿಕೆಯ ಮೊತ್ತವು ನಿಮ್ಮ ವಯಸ್ಸಿನ ಆಧಾರದ ಮೇಲೆ ಈ ಕೆಳಗಿನಂತೆ ಭಿನ್ನವಾಗಿರುತ್ತದೆ:

ನೀವು 18ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಬಯಸಿದ್ದರೆ ಮಾಸಿಕ 1,000 ರೂ. ಪಿಂಚಣಿ ಪಡೆಯಲು ಪ್ರತೀ ತಿಂಗಳು 42 ರೂ. ಪಾವತಿಸಬೇಕು. 2,000 ರೂ. ಪಡೆಯಲು 84 ರೂ, 3,000ಕ್ಕೆ 125 ರೂ, 4,000 ರೂ. ಪಿಂಚಣಿಗೆ 168 ರೂ. ಹಾಗೂ 5,000 ರೂ. ಮಾಸಿಕ ಪಿಂಚಣಿ ಪಡೆಯಲು ಮಾಸಿಕ 210 ರೂ. ಪಾವತಿಸಬೇಕಾಗುತ್ತದೆ.

ಇನ್ನು ನೀವು 40ನೇ ವಯಸ್ಸಿನಲ್ಲಿ ಯೋಜನೆಗೆ ಸೇರಬಯಸಿದ್ದರೆ ಹೂಡಿಕೆ ಮೊತ್ತ ಹೆಚ್ಚಳವಾಗಲಿದ್ದು; ಈ ಕೆಳಗಿನಂತಿರುತ್ತದೆ:

  • 1,000 ರೂ. ಪಿಂಚಣಿಗೆ: 291 ರೂ.
  • 2,000 ರೂ. ಪಿಂಚಖಿಗೆ: 582 ರೂ.
  • 3,000 ರೂ. ಪಿಂಚಣಿಗೆ: 873 ರೂ.
  • 4,000 ರೂ. ಪಿಂಚಣಿಗೆ: 1,164 ರೂ.
  • 5,000 ರೂ. ಪಿಂಚಣಿಗೆ: 1,454 ರೂ.
ಈ ಯೋಜನೆಗೆ ಸೇರಿದರೆ ಪ್ರತೀ ತಿಂಗಳೂ 5,000 ರೂ. ಪಿಂಚಣಿ ಪಡೆಯಬಹುದಾಗಿದೆ. ಏನಿದು ಯೋಜನೆ? ಯೋಜನೆಗೆ ಸೇರುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ...
Atal Pension Yojana

RTE Free Education Admission- ಆರ್‌ಟಿಇ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭ | ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಪಡೆಯುವ ಸದಾವಕಾಶ

ಹೂಡಿಕೆ ಮೊತ್ತ ಪಾವತಿಸುವ ವಿಧಾನಗಳು

ಹೂಡಿಕೆ ಮೊತ್ತವನ್ನು ಪಾವತಿಸಲು ಮಾಸಿಕ (ಪ್ರತಿ ತಿಂಗಳು), ತ್ರೈಮಾಸಿಕ (ಪ್ರತಿ ಮೂರು ತಿಂಗಳು) ಹಾಗೂ ಅರ್ಧವಾರ್ಷಿಕದಂತೆ (ಪ್ರತಿ ಆರು ತಿಂಗಳು) ಮೂರು ವಿಧಾನಗಳಿದ್ದು; ನಿಮ್ಮ ಅನುಕೂಲಕ್ಕೆ ತಕ್ಕ ವಿದಾನವನ್ನು ಆಯ್ಕೆ ಮಾಡಿಕೊಳ್ಳಬಹುದು.

ಪಾವತಿ ನೇರವಾಗಿ ನಿಮ್ಮ ಬ್ಯಾಂಕ್ ಅಥವಾ ಅಂಚೆ ಖಾತೆಯಿಂದ ಕಡಿತಗೊಳ್ಳುತ್ತದೆ. ಆದರೆ, ನೀವು ಯಾವ ದಿನ ಹಣ ಪಾವತಿ ಮಾಡಬೇಕು ಎಂಬ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬೇಕು.

ಒಂದುವೇಳೆ ಚಂದಾದಾರರು ನಿಧನವಾದಲ್ಲಿ ಅವರ ಸಂಗಾತಿಗೆ ಪಿಂಚಣಿ ಮುಂದುವರಿಯುತ್ತದೆ. ಸಂಗಾತಿಯೂ ನಿಧನರಾದರೆ, ಸಂಪೂರ್ಣ ಪಿಂಚಣಿ ನಿಧಿಯನ್ನು ನಾಮಿನಿಗೆ ವರ್ಗಾಯಿಸಲಾಗುತ್ತದೆ.

Govt Loan Schemes- ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು

ಅಟಲ್ ಪಿಂಚಣಿ ಯೋಜನೆಗೆ ಸೇರುವುದು ಹೇಗೆ?

ಅಟಲ್ ಪಿಂಚಣಿ ಯೋಜನೆಗೆ ಸೇರಬಯಸುವ ಅರ್ಹರು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ ಅಟಲ್ ಪಿಂಚಣಿ ಯೋಜನೆ ಫಾರ್ಮ್ ಪಡೆದು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಉಳಿತಾಯ ಖಾತೆ ವಿವರಗಳು, ಆದಾಯ ಪ್ರಮಾಣಪತ್ರದೊಂದಿಗೆ ನಿಮ್ಮ ಆಯ್ಕೆಯ ಪಿಂಚಣಿ ಮೊತ್ತವನ್ನು ಸೂಚಿಸಿ. ಮಾಸಿಕ ಪಾವತಿ ವಿಧಾನವನ್ನು ಆಯ್ಕೆಮಾಡಿಕೊಳ್ಳಬೇಕು.

ಈಗಲೇ ಈ ಯೋಜನೆಗೆ ಸೇರಿ…

ಈ ಯೋಜನೆಗೆ ಒಮ್ಮೆ ಸೇರಿದರೆ ಕನಿಷ್ಠ 20 ವರ್ಷಗಳ ಕಾಲ ನಿಗದಿತ ಮೊತ್ತವನ್ನು ಪಾವತಿಸಬೇಕು. 60ನೇ ವಯಸ್ಸಿಗೆ ನಿಗದಿತ ಪಿಂಚಣಿ ಪ್ರಾರಂಭವಾಗುತ್ತದೆ. ಮಧ್ಯದಲ್ಲಿ ಯೋಜನೆ ತ್ಯಜಿಸಿದರೆ, ನೀವು ಪಾವತಿಸಿದ ಮೊತ್ತವನ್ನು ಮಾತ್ರ ಬಡ್ಡಿ ಸಮೇತವಾಗಿ ಪಡೆಯಲಾಗುತ್ತದೆ. ನಿಧನವಾದರೆ ಪಿಂಚಣಿ ಪರಿವಾರ ಸಂಗಾತಿ ಅಥವಾ ನಾಮಿನಿಗೆ ವರ್ಗಾವಣೆಯಾಗುತ್ತದೆ.

ಅಟಲ್ ಪಿಂಚಣಿ ಯೋಜನೆಯು ಕಡಿಮೆ ಹಣ ಹೂಡಿಕೆಯಿಂದ ನಿವೃತ್ತಿ ಜೀವನಕ್ಕೆ ಭದ್ರತೆ ನೀಡುವ ಮಹತ್ವದ ಯೋಜನೆಯಾಗಿದೆ. ಈಗಲೇ ಈ ಯೋಜನೆಗೆ ಸೇರಿ, ನಿಮ್ಮ ಹಾಗೂ ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸಿ. ನಿಮ್ಮ ಇಂದಿನ ಸಣ್ಣ ಹೂಡಿಕೆ ನಾಳೆಯ ಆರ್ಥಿಕ ಭದ್ರತೆಗೆ ಭದ್ರ ಬುನಾದಿಯಾಗಲಿದೆ…

ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ…

Free Electric Scooter- ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ | ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ…


Spread the love
WhatsApp Group Join Now
Telegram Group Join Now
error: Content is protected !!