Aadhaar Update Online Process : ಆಧಾರ್ ಕಾರ್ಡ್ ಕುರಿತ ವದಂತಿ ಸಖತ್ ಸದ್ದು ಮಾಡುತ್ತಿದೆ. ಕಳೆದ ಹತ್ತು ವರ್ಷಗಳಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್’ಗಳು ಇದೇ ಜೂನ್ 14ರ ನಂತರ ಹಠಾತ್ ನಿಷ್ಕ್ರಿಯಗೊಳ್ಳಲಿವೆ. ಅಷ್ಟರೊಳಗೆ ಆಧಾರ್ ಅಪ್ಡೇಟ್ ಮಾಡದಿದ್ದರೆ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂಬ ಹೊಸ ವದಂತಿ ಹರಿದಾಡುತ್ತಿದೆ.
ಹಾಗಿದ್ದರೆ ನಿಜಕ್ಕೂ ಅಪ್ಡೇಟ್ ಆಗದ ಆಧಾರ್ ಕಾರ್ಡ್’ಗಳು ನಿಷ್ಕ್ರಿಯವಾಗುತ್ತವಾ? ಅದರಾಚೆ ನಿಷ್ಕ್ರಿಯವಾದ ಆಧಾರ್ ಕಾರ್ಡ್ ಕಾರಣಕ್ಕೆ ಸರಕಾರಿ ಸೌಲಭ್ಯಗಳು ನಿಂತು ಹೋಗುತ್ತವಾ? ಅಪ್ಡೇಟ್ ಮಾಡುವುದು ಹೇಗೆ? ಯಾರೆಲ್ಲ ಆಧಾರ್ ಅಪ್ಡೇಟ್ ಮಾಡಬೇಕು? ಈಗ ಹರಿದಾಡುತ್ತಿರುವ ವದಂತಿ ಕುರಿತು ಯುಐಡಿಎಐ ಕೊಟ್ಟ ಸ್ಪಷ್ಟನೆ ಏನು? ಎಂಬುವುದನ್ನು ತಿಳಿಯೋಣ…
ನಿಖರತೆಗಾಗಿ ಆಧಾರ್ ಅಪ್ಡೇಟ್
ಅಸಲಿಗೆ ಆಧಾರ್ ಕಾರ್ಡ್ ಭಾರತೀಯ ಪ್ರತಿ ಪ್ರಜೆಯ ವಿಶಿಷ್ಟ ಗುರುತಿನ ಚೀಟಿಯಾಗಿದೆ. ಈ ಗುರುತು ನಿಖರವಾಗಿದ್ದರೆ ಮಾತ್ರ ಆಧಾರ್‌ಗೆ ಮಾನ್ಯತೆ ಇರುತ್ತದೆ. ವಿಳಾಸ, ಭಾವಚಿತ್ರ, ಮೊಬೈಲ್ ನಂಬರ್ ಇತ್ಯಾದಿಗಳೆಲ್ಲ ನಿಖರವಾಗಿದ್ದರಷ್ಟೇ ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ.
ಇದು ನಿಖರವಾಗಿರಬೇಕೆಂದರೆ ಆಗಾಗ ಆಧಾರ್ ಅಪ್ಡೇಟ್ ಮಾಡಿಕೊಳ್ಳಬೇಕು. ಅದೇ ಕಾರಣಕ್ಕೆ ಆಧಾರ್ ಅಪ್ಡೇಟ್ ಮಾಡಿಕೊಳ್ಳುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಆಧಾರ್ ವಂಚನೆಯನ್ನು ತಡೆಯುವ ಭಾಗವಾಗಿ ಕೇಂದ್ರವು ಈ ನಿಯಮವನ್ನು ಕಡ್ಡಾಯಗೊಳಿಸಿದೆ.
ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿಕೊಂಡವರು ಇದೀಗ ಜೂನ್ 14ಕ್ಕೂ ಮೊದಲು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು. ಇಂಥವರು ತಮ್ಮ ಮೊಬೈಲ್‌ನಲ್ಲಿಯೇ ಮೈ ಆಧಾರ್ ಪೋರ್ಟಲ್ ಮೂಲಕ ಅಪ್ಡೇಟ್ ಮಾಡಿಕೊಳ್ಳಬಹುದು ಅಥವಾ ಸಮೀಪದ ಆಧಾರ ಕೇಂದ್ರಕ್ಕೆ ಹೋಗಿ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬೇಕಿದೆ.

ಆಧಾರ್ ಅಪ್ಡೇಟ್ ಏಕೆ ಮಾಡಬೇಕು?
ಜನ ಕೆಲಸ, ವೃತ್ತಿ ಜೀವನ ಇನ್ನಿತರ ಕಾರಣಕ್ಕೆ ಬೇರೆ ಬೇರೆ ಸ್ಥಳಗಳಿಗೆ ವಲಸೆ ಹೋಗಿ ನೆಲೆಸಿರುತ್ತಾರೆ. ವಯಸ್ಸಾಗುತ್ತ ಆಗುತ್ತ ವ್ಯಕ್ತಿಯ ಫೋಟೊ ಚಹರೆ ಕೂಡ ಬದಲಾಗುತ್ತಿರುತ್ತದೆ. ಆಧಾರ್ ಕಾರ್ಡ್’ನಲ್ಲಿರುವ 10 ವರ್ಷಗಳ ಹಿಂದಿನ ಮುಖ ಚಹರೆಯ ಫೋಟೋ ಮೂಲಕ ವ್ಯಕ್ತಿಯ ಗುರುತು ಪತ್ತೆ ಮಾಡುವುದೂ ಕಷ್ಟಕರ. ಆಧಾರ್ ನವೀಕರಿಸಿದರೆ ಈ ಸಮಸ್ಯೆ ಇರುವುದಿಲ್ಲ.
ನಿಖರತೆಗಾಗಿ ಆಧಾರ್ ಕಾರ್ಡ್’ನಲ್ಲಿ ವಿಳಾಸ, ಭಾವಚಿತ್ರ ಇತ್ಯಾದಿ ಅಂಶಗಳನ್ನು ಸಮರ್ಪಕವಾಗಿ ಅಪ್ಡೇಟ್ ಆಗಿರಬೇಕಾಗುತ್ತದೆ. ಹೀಗಾಗಿ 10 ವರ್ಷಗಳಿಗೊಮ್ಮೆ ಆಧಾರ್ ನವೀಕರಣ ಅಗತ್ಯವಾಗಿದೆ. ಪ್ರತಿ ಆಧಾರ್ ಕಾರ್ಡ್’ನಲ್ಲಿ ಅದನ್ನು ನೀಡಿರುವ ದಿನಾಂಕ ನಮೂದಾಗಿರುತ್ತದೆ. ಆದರನ್ವಯ 10 ವರ್ಷ ಆಗಿದ್ದರೆ, ದಾಖಲೆಗಳನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು.
ಆಧಾರ್ ಅಪ್ಡೇಟ್ ಮಾಡದಿದ್ದರೆ ಏನಾಗುತ್ತದೆ?
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (Unique Identification Authority of India – UIDAI) ವಿತರಿಸುವ ಆಧಾರ್ ಕಾರ್ಡ್ ಇಲ್ಲದೆ ಇವತ್ತು ಭಾರತದಲ್ಲಿ ಯಾವುದೇ ಸರಕಾರಿ ಮತ್ತು ಸರ್ಕಾರೇತರ ಕೆಲಸ ನಡೆಯುವುದಿಲ್ಲ. ಹೀಗಾಗಿ ಆಧಾರ್ ಕಾರ್ಡ್ ಅನ್ನು ಆರಂಭಿಕ ದಾಖಲಾತಿ ದಿನಾಂಕದಿAದ ಹತ್ತು ವರ್ಷಗಳ ನಂತರ ಮರೆಯದೇ ನವೀಕರಿಸುವುದು ಅನಿವಾರ್ಯವಾಗಿದೆ. ಸದ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾವಿರಾರು ಯೋಜನೆಗಳಿಗೆ ಆಧಾರ್ ದೃಢೀಕರಣ ಅಗತ್ಯವಾಗಿದೆ.
ಆಧಾರ್ ಸಂಖ್ಯೆಯ ಜೋಡಣೆಯ ಮೂಲಕವೇ ಸರಕಾರದ ಯೋಜನೆಗಳಾದ ಪಡಿತರ, ನೇರ ನಗದು ವರ್ಗಾವಣೆ, ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಗಳು ನೆರವು ಪಡೆಯುತ್ತಿದ್ದಾರೆ. ಪ್ರತಿ 10 ವರ್ಷಗಳು ಪೂರ್ಣಗೊಂಡ ನಂತರ ಗುರುತಿನ ಪುರಾವೆ (POI) ಮತ್ತು ವಿಳಾಸದ ಪುರಾವೆಯನ್ನು ನವೀಕರಿಸದಿದ್ದರೆ ಈ ಯೋಜನೆಗಳ ಪ್ರಯೋಜನ ಪಡೆಯುವುದು ಕಷ್ಟವಾಗಬಹುದು.

ಡೆಡ್ಲೈನ್ ಸುದ್ದಿ ಹಿಂದಿನ ಮರ್ಮವೇನು?
ಈ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ನಾನಾ ನಮೂನೆ ವದಂತಿಗಳು ಕೇಳಿ ಬರುತ್ತಿವೆ. ಈಗಾಗಲೇ ಆಧಾರ್ ಉಚಿತ ಅಪ್ಡೇಟ್ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಇದಕ್ಕೆ ಗಡುವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಹೊಸ ಗಡುವು ಇರುವುದು 2024ರ ಜೂನ್ 14ಕ್ಕೆ. ಅಲ್ಲಿಯ ವರೆಗೆ ಆನ್‌ಲೈನ್‌ನಲ್ಲಿ ಶುಲ್ಕ ಇಲ್ಲದೇ ಉಚಿತವಾಗಿ ಆಧಾರ್ ವಿವರವನ್ನು ಅಪ್ಡೇಟ್ ಮಾಡಬಹುದು.
ಕೆಲವರು ಇದನ್ನೇ ತಿರುಚಿ, ಹತ್ತು ವರ್ಷದಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ ಜೂನ್ 14ರ ಬಳಿಕ ನಿಷ್ಕ್ರಿಯಗೊಳ್ಳುತ್ತದೆ ಎನ್ನುವಂತಹ ವದಂತಿ ಹಬ್ಬಿಸಲಾಗುತ್ತಿದೆ. 10 ವರ್ಷದಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಆಧಾರ್ ಪ್ರಾಧಿಕಾರ ಯುಐಡಿಎಐ ಹೇಳಿದೆ. ಹತ್ತು ವರ್ಷವಾದರೂ ಅಪ್ಡೇಟ್ ಆಗದ ಆಧಾರ್ ಕಾರ್ಡ್ಗೆ ಏನೂ ಆಗುವುದಿಲ್ಲ. ಅದು ಚಾಲನೆಯಲ್ಲಿ ಇರುತ್ತದೆ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
ಆಧಾರ್ ಅಪ್ಡೇಟ್ ಹೇಗೆ?
ಆನ್‌ಲೈನ್‌ನಲ್ಲಿ ಮೈ ಆಧಾರ್ ಪೋರ್ಟಲ್ ಅಥವಾ ಮೈ ಆಧಾರ್ ಆ್ಯಪ್‌ನಲ್ಲಿ ‘ಅಪ್‌ಡೇಟ್ ಡಾಕ್ಯುಮೆಂಟ್’ ಎಂಬ ಹೊಸ ಫೀಚರ್ ಬಳಸಿಕೊಂಡು ಸರಳವಾಗಿ ಅಪ್ಡೇಟ್ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಸಹಿತ ಅಗತ್ಯ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ಕೆಲಸವನ್ನು ಸುಲಭವಾಗಿ ಮಾಡÀಬಹುದು.
ಆಧಾರ್ ಕೇಂದ್ರಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಅಗತ್ಯವಿದೆಯೇ? ಯಾವೆಲ್ಲ ಅಂಶಗಳು ನವೀಕರಣ ಆಗಬೇಕಿದೆ? ಎಂಬುವುದನ್ನು ನೋಡಲಾಗುತ್ತದೆ. ಬದಲಾವಣೆಗಳಿದ್ದಲ್ಲಿ ತಿಳಿಸಿದರೆ ಅಲ್ಪ ಪ್ರಮಾಣದ ಮೊತ್ತ ಪಡೆದು ಆಧಾರ್ ಅಪ್ಡೇಟ್ ಮಾಡಲಾಗುತ್ತದೆ. ಯಾವುದೇ ರೀತಿಯ ವದಂತಿಗಳಿಗೆ ಕಿವಿ ಕೊಡದೇ ನಿಮ್ಮ ಆಧಾರ್ ಕಾರ್ಡ್ 10 ವರ್ಷ ಪೂರೈಸಿದ್ದರೆ ನೇರವಾಗಿ ಆಧಾರ್ ಕೇಂದ್ರಗಳಲ್ಲಿ ಅಪ್ಡೇಟ್ ಮಾಡಿಸಿ….
ಆಧಾರ್ ಅಪ್ಡೇಟ್ ಡೈರೆಕ್ಟ್ ಲಿಂಕ್: Click here