A-Khata Distribution- ನಗರ ಪ್ರದೇಶದ ಎಲ್ಲಾ ಅನಧಿಕೃತ ಮನೆ, ಸೈಟುಗಳಿಗೆ ಎ-ಖಾತಾ ವಿತರಣೆಗೆ ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ…

Spread the love

WhatsApp Group Join Now
Telegram Group Join Now

ನಗರ ಪ್ರದೇಶದ ಅನಧಿಕೃತ ಮನೆ-ಸೈಟುಗಳಿಗೆ ‘ಎ-ಖಾತಾ’ ವಿತರಣೆಗೆ (A-Khata Distribution) ಸರ್ಕಾರ ಮುಂದಾಗಿದೆ. ಸರ್ಕಾರದ ಹೊಸ ನಿಯಮದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ಸರ್ಕಾರವು ರಾಜ್ಯದ ನಗರ ಪ್ರದೇಶಗಳಲ್ಲಿ ದೀರ್ಘಕಾಲದಿಂದ ಪರಿಹಾರವಿಲ್ಲದೆ ಉಳಿದಿದ್ದ ಬಿ-ಖಾತಾ ಆಸ್ತಿಗಳ ಕಾನೂನು ಸ್ಥಿತಿಗೆ ಶಾಶ್ವತ ಪರಿಹಾರ ನೀಡುವ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.

ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಾಗಿರುವ ವ್ಯವಸ್ಥೆಯನ್ನು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆ ಮೂಲಕ ಬಿ-ಖಾತಾ ಆಸ್ತಿಗಳಿಗೆ ಷರತ್ತುಬದ್ಧವಾಗಿ ‘ಎ-ಖಾತಾ’ ಪ್ರಮಾಣಪತ್ರ ನೀಡಲಾಗುತ್ತದೆ.

ಈ ಹೊಸ ತೀರ್ಮಾನದಿಂದ ಸಾವಿರಾರು ಮನೆಗಳು, ಅಪಾರ್ಟ್ಮೆಂಟ್‌ಗಳು, ಸೈಟುಗಳು ಮತ್ತು ಬಡಾವಣೆಗಳಿಗೆ ಅಧಿಕೃತ ದಾಖಲೆ ಸಿಗಲು ದಾರಿ ಸುಗಮವಾಗಲಿದೆ.

ಇದನ್ನೂ ಓದಿ: Karnataka Cold Wave Warning- ಕರ್ನಾಟಕದಲ್ಲಿ ಮತ್ತೆ ಹೆಚ್ಚಿದ ಚಳಿ | ಹಲವು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!

About the Schem – ಏನಿದು ಎ-ಖಾತಾ ವಿತರಣೆಯ ಯೋಜನೆ?

ರಾಜ್ಯದ ನಗರ ಪ್ರದೇಶಗಳಲ್ಲಿ ಅನಧಿಕೃತ ಬಡಾವಣೆಗಳು ಮತ್ತು ಅನುಮೋದನೆ ಪಡೆಯದೇ ರೂಪುಗೊಂಡಿರುವ ನಿವೇಶನಗಳ ಸಂಖ್ಯೆ ಗಣನೀಯವಾಗಿದೆ. ಇಂತಹ ನಿವೇಶನಗಳನ್ನು ಅನಧಿಕೃತ ಎಂದು ಪರಿಗಣಿಸಿದ್ದರಿಂದ ಆಸ್ತಿ ಮಾರಾಟಕ್ಕೆ ತೊಂದರೆ, ಬ್ಯಾಂಕ್ ಸಾಲ ದೊರೆಯದ ಸಮಸ್ಯೆ, ತೆರಿಗೆ ಪಾವತಿಯಲ್ಲಿ ಗೊಂದಲ ಹಾಗೂ ಕಾನೂನು ತಕರಾರುಗಳು ತೆದೋರುತ್ತಿವೆ.

ಈ ಎಲ್ಲಾ ಅಡಚಣೆಗಳನ್ನು ನಿವಾರಿಸಲು ಹಾಗೂ ನಗರ ಯೋಜನೆ ಮತ್ತು ತೆರಿಗೆ ಸಂಗ್ರಹವನ್ನು ಬಲಪಡಿಸಲು ಸರ್ಕಾರ ಈ ಹೊಸ ವ್ಯವಸ್ಥೆಯನ್ನು ತರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ಅನುಮೋದನೆ ನೀಡಲಾಗಿದೆ.

A-Khata Distribution
A-Khata Distribution

ಇದನ್ನೂ ಓದಿ: 1.5 Lakh Kotak Kanya Scholarship- 1.5 ಲಕ್ಷ ರೂ. ಕೋಟಕ್ ಕನ್ಯಾ ವಿದ್ಯಾರ್ಥಿವೇತನ | ಈಗಲೇ ಅರ್ಜಿ ಹಾಕಿ…

Eligible Properties – ಯಾವ ಆಸ್ತಿಗಳಿಗೆ ಎ-ಖಾತಾ ಪಡೆಯಲು ಅವಕಾಶ?

ಎ-ಖಾತಾ ಪಡೆಯಲು ಮುಖ್ಯವಾಗಿ ತಳಹದಿ ಈ ಕೆಳಗಿನಂತಿವೆ:

  • ಸಕ್ಷಮ ಯೋಜನಾ ಪ್ರಾಧಿಕಾರಗಳಿಂದ ಮುಂಚಿತ ಅನುಮೋದನೆ ಪಡೆಯದೇ ಇರುವ ಆಸ್ತಿಗಳು
  • ಬಿ-ಖಾತಾ ನಿವೇಶನ / ಮನೆ / ಅಪಾರ್ಟ್ಮೆಂಟ್’ಗಳು
  • ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ಆಸ್ತಿಗಳು
  • ನಿಗದಿತ ಷರತ್ತುಗಳು ಮತ್ತು ದಾಖಲೆಗಳನ್ನು ಪೂರೈಸಿರುವ ಆಸ್ತಿಗಳು

ಮೇಲ್ಲಾಣಿಸಿದ ಮನೆ, ಅಪಾರ್ಟ್ಮೆಂಟ್, ನಿವೇಶನಗಳ ಬಳಿಕ ಮಾತ್ರ ಎ-ಖಾತಾ ದಾಖಲೆಯನ್ನು ಮಂಜೂರು ಮಾಡಲಾಗುತ್ತದೆ.

ಇದನ್ನೂ ಓದಿ: Crop Loss and Crop Insurance Scheme- ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆಗೆ ಜಮಾ | ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Key Benefits – ಇದರಿಂದ ಸಿಗುವ ಪ್ರಮುಖ ಪ್ರಯೋಜನಗಳು

ಈ ನಿರ್ಧಾರದಿಂದ ಆಸ್ತಿ ಮಾಲೀಕರು ಹಲವು ರೀತಿಯಲ್ಲಿ ಲಾಭ ಹೊಂದುತ್ತಾರೆ:

  • ಮೊದಲನೆಯದಾಗಿ ಎ-ಖಾತಾ ಹೊಂದಿದ ಆಸ್ತಿಯ ಬೆಲೆ ಮಾರುಕಟ್ಟೆಯಲ್ಲಿ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ.
  • ಎ-ಖಾತಾ ಇರುವ ಆಸ್ತಿಯನ್ನು ಕಾನೂನಿನ ತೊಡಕುಗಳಿಲ್ಲದೆ ಸುಲಭವಾಗಿ ಮಾರಾಟ ಮಾಡಬಹುದು.
  • ಬಿ-ಖಾತಾ ಆಸ್ತಿಗೆ ಸಾಮಾನ್ಯವಾಗಿ ಸಾಲ ಸಿಗುವುದಿಲ್ಲ. ಆದರೆ ಎ-ಖಾತಾ ಪಡೆದ ನಂತರ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅವಕಾಶ ಸಿಗುತ್ತದೆ.
  • ನಗರಸಭೆ/ಪುರಸಭೆ/ಪಾಲಿಕೆಯ ತೆರಿಗೆ ಸಂಗ್ರಹ ಪ್ರಕ್ರಿಯೆ ವ್ಯವಸ್ಥಿತವಾಗುತ್ತದೆ.
  • ಭವಿಷ್ಯದಲ್ಲಿ ಕಾನೂನು ವಿವಾದಗಳು ಮತ್ತು ದಾಖಲೆ ಗೊಂದಲಗಳು ಗಣನೀಯವಾಗಿ ಕಡಿಮೆಯಾಗಲಿವೆ.

 

A-Khata Distribution
A-Khata Distribution

ಇದನ್ನೂ ಓದಿ: Morarji Desai Residential School Admission 2026-27- ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಆಹ್ವಾನ | ಸಂಪೂರ್ಣ ಉಚಿತ ಶಿಕ್ಷಣ

Govt Objective – ಸರ್ಕಾರದ ಉದ್ದೇಶವೇನು?

WhatsApp Group Join Now
Telegram Group Join Now

ಈ ನೀತಿ ಜಾರಿಗೊಳಿಸುವ ಮೂಲಕ ಸರ್ಕಾರವು ಅನಧಿಕೃತ ಬಡಾವಣೆಗಳ ನಿಯಂತ್ರಣ ಮಾಡುವ ಹಾಗೂ ನಗರಾಭಿವೃದ್ಧಿ ಯೋಜನೆಗೆ ಅನುಗುಣವಾಗಿರುವ ಸ್ಥಿರ ದಾಖಲೆ ನಿರ್ಮಾಣ ಮಾಡುವ ಪ್ರಮುಖ ಗುರಿ ಹೊಂದಿದೆ.

ಜೊತೆಗೆ ತೆರಿಗೆ ಸಂಗ್ರಹವನ್ನು ಹೆಚ್ಚಿಸುವುದು, ಸಾರ್ವಜನಿಕರಿಗೆ ಆಸ್ತಿ ಸಂಬಂಧಿತ ಸೇವೆಗಳನ್ನು ಸುಗಮಗೊಳಿಸುವುದು ಹಾಗೂ ‘ಎ-ಖಾತಾ’ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

How to Apply – ಎ-ಖಾತಾ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ

ಆಸ್ತಿಯ ಮಾಲೀಕರು ತಮ್ಮ ಬಿ-ಖಾತಾ ಆಸ್ತಿಯ ವಿವರಗಳೊಂದಿಗೆ ಸಂಬಂಧಿತ ನಗರದ ಮಹಾನಗರ ಪಾಲಿಕೆ, ನಗರಸಭೆ / ಪುರಸಭೆ, ನಗರ ಸ್ಥಳೀಯ ಸಂಸ್ಥೆ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Whatsapp Banking Services- ಈಗ ವಾಟ್ಸಾಪ್‌ನಲ್ಲೇ ಬ್ಯಾಂಕಿಂಗ್ ಸೇವೆ ಪಡೆಯಿರಿ | ವಿವಿಧ ಬ್ಯಾಂಕುಗಳ ವಾಟ್ಸಾಪ್ ನಂಬರ್ ಇಲ್ಲಿವೆ…

Required Documents – ಅರ್ಜಿಗೆ ಅಗತ್ಯ ದಾಖಲೆಗಳ ಪಟ್ಟಿ

  • ಆಸ್ತಿಗೆ ಸಂಬಂಧಿಸಿದ ಮೂಲ ದಾಖಲೆಗಳು
  • ಮಾಲೀಕರ ಆಧಾರ್ ಕಾರ್ಡ್
  • ಗುರುತಿನ ಚೀಟಿ (PAN/EPIC ಇತ್ಯಾದಿ)
  • ವಿದ್ಯುತ್ ಬಿಲ್ ಅಥವಾ ಇತರ ನಿವಾಸದ ದಾಖಲೆ
  • ಸಂಪರ್ಕಕ್ಕಾಗಿ ಮೊಬೈಲ್ ನಂಬರ್

ರಾಜ್ಯದಲ್ಲಿ ಮೊದಲ ಬಾರಿಗೆ ನಗರ ಪ್ರದೇಶದ ಅನಧಿಕೃತ ನಿವೇಶನಗಳಿಗೆ ನಿಯಂತ್ರಣ ಮತ್ತು ಕಾನೂನುಬದ್ಧ ದಾಖಲೆ ಸಿಗುವ ದಾರಿಯು ತೆರೆಯಲಾಗಿದೆ. ಸರ್ಕಾರದ ಈ ನಿರ್ಧಾರವು ಆಸ್ತಿ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬದಲಾವಣೆ, ನಗರ ಯೋಜನೆಗೆ ಪಾರದರ್ಶಕತೆ ಹಾಗೂ ನಾಗರಿಕರಿಗೆ ದೀರ್ಘಕಾಲದ ಲಾಭ ನೀಡಲಿದೆ.

More Info – ಹೆಚ್ಚಿನ ಮಾಹಿತಿಗಾಗಿ

Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ


Spread the love
error: Content is protected !!