A Khata Distribution- ನಗರ, ಪಟ್ಟಣದ ಎಲ್ಲಾ ಆಸ್ತಿಗಳಿಗೂ ‘ಎ’ ಖಾತಾ ವಿತರಣೆ | ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ

ನಗರ-ಪಟ್ಟಣ ಪ್ರದೇಶದ ಎಲ್ಲಾ ಅನಧಿಕೃತ ಆಸ್ತಿಗಳಿಗೆ ರಾಜ್ಯ ಸರ್ಕಾರ ಕಾನೂನುಬದ್ಧ ದಾಖಲೆಯಾದ ‘ಎ’ ಖಾತಾ ವಿತರಿಸಲು (A Khata Distribution) ಮುಂದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯದ ಎಲ್ಲಾ ನಗರ ಮತ್ತು ಪಟ್ಟಣಗಳಲ್ಲಿರುವ ಅನಧಿಕೃತ ಆಸ್ತಿಗಳಾದ ಮನೆ, ನಿವೇಶನಗಳಿಗೆ ‘ಎ’ ಖಾತಾ (A Khata) ನೀಡಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಅನಧಿಕೃತ ಆಸ್ತಿ ಮಾಲೀಕರಿಂದ ನಿರ್ಧಿಷ್ಟ ಶುಲ್ಕ ಕಟ್ಟಿಸಿಕೊಂಡು ‘ಎ’ ಖಾತಾ ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಈಗಾಗಲೇ ನಗರ-ಪಟ್ಟಣ ಪ್ರದೇಶದ ಅನಧಿಕೃತ ಆಸ್ತಿಗಳಿಗೆ ಇ-ಖಾತಾ ಅಂದರೆ ಡಿಜಿಟಲ್ ದಾಖಲೆಗಳನ್ನು (Digital Records) ವಿತರಿಸಲಾಗಿದೆ. ಇದೀಗ ಸದರಿ ಇ-ಖಾತಾ ದಾಖಲೆಗಳನ್ನು ‘ಎ’ ಖಾತಾ ದಾಖಲೆಗಳಿಗೆ ಪರಿವರ್ತಿಸಲು ಮುಂದಾಗಿದೆ. ಬೆಂಗಳೂರಿನ ಮಾದರಿಯನ್ನೇ ರಾಜ್ಯದ ಎಲ್ಲ ನಗರ-ಪಟ್ಟಣಗಳಿಗೂ ವಿಸ್ತರಿಸಲು ತಯಾರಿ ನಡೆದಿದೆ.
Gruhalakshmi Payment Stopped- 2.13 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್ | ಮಹಿಳಾ ಸಚಿವರ ಮಹತ್ವದ ಮಾಹಿತಿ
ಕರಡು ಪ್ರಸ್ತಾವನೆ ಸಿದ್ಧ
ಈ ಕುರಿತು ಪೌರಾಡಳಿತ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆ ಕೂಲಂಕುಶವಾಗಿ ಚರ್ಚಿಸಿ, ಕರಡು ಪ್ರಸ್ತಾವನೆಯನ್ನು ಸಿದ್ದಪಡಿಸಿವೆ. ಸದರಿ ಪ್ರಸ್ತಾವನೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಪರಿಶೀಲಿಸುತ್ತಿದೆ. ಶೀಘ್ರದಲ್ಲಿಯೇ ಪ್ರಸ್ತಾವನೆಗೆ ಒಪ್ಪಿಗೆ ಸಿಗಲಿದೆ ಎನ್ನಲಾಗುತ್ತಿದೆ.
ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಶೇ.5.5ರಷ್ಟು ಶುಲ್ಕ ಪಾವತಿಸಿಕೊಂಡು ‘ಎ’ ಖಾತೆಯಾಗಿ ಪರಿವರ್ತಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದೇ ಮಾದರಿಯನ್ನು ಇತರ ನಗರ-ಪಟ್ಟಣಗಳಿಗೆ ವಿಸ್ತರಿಸಿದರೆ ಸ್ಥಳೀಯ ಸಂಸ್ಥೆಗಳಿಗೆ ಸಂಪನ್ಮೂಲ ಹೆಚ್ಚಲಿದೆ ಎನ್ನಲಾಗುತ್ತಿದೆ.

ಸಚಿವರು, ಶಾಸಕರ ಒತ್ತಡ
ಆಸ್ತಿ ದಾಖಲೆಗಳನ್ನು ತಿದ್ದುವುದು, ನಕಲಿ ದಾಖಲೆ ಸೃಷ್ಟಿಸಿ ವಂಚಿಸುವ ಕುಕೃತ್ಯಗಳಿಗೆ ಕಡಿವಾಣ ಹಾಕುವ ದಿಸೆಯಲ್ಲಿ ರಾಜ್ಯ ಸರ್ಕಾರ ಇ-ಖಾತಾ ಕಡ್ಡಾಯ ಮಾಡಿದೆ. ಸದರಿ ಇ-ಖಾತಾ ಅನ್ನು ಡಿಜಿಟಲ್ ರೂಪದಲ್ಲಿ ನೀಡಲಾಗುತ್ತಿದೆ.
ಡಿಜಿಟಲ್ ರೂಪದ ಇ-ಖಾತಾ (B Khata) ಅನ್ನು ‘ಎ’ ಖಾತಾ ಆಗಿ ಪರಿವರ್ತಿಸಿ, ರಾಜ್ಯದ ವಿವಿಧ ನಗರ-ಪಟ್ಟಣ ಪ್ರದೇಶಗಳ ಅನಧಿಕೃತ ಆಸ್ತಿಗಳಿಗೆ ‘ಎ’ ಖಾತಾ ವಿಸ್ತರಿಸುವ ಕುರಿತು ಸಚಿವರು, ಶಾಸಕರು ಒತ್ತಡ ಹೇರುತ್ತಿದ್ದಾರೆ.
‘ಬಿ’ ಮತ್ತು ‘ಎ’ ಖಾತಾ ವ್ಯತ್ಯಾಸಗಳೇನು?
ಹೆಸರೇ ಹೇಳುವಂತೆ ‘ಬಿ’ ಖಾತಾ ಅನಧಿಕೃತ ಆಸ್ತಿ ಮಾಲೀಕರಿಗೆ ತಾತ್ಕಾಲಿಕ ವ್ಯವಸ್ಥೆಯಷ್ಟೆ. ಇದು ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ಆದಾಯ ಕ್ರೂಢೀಕರಣಕ್ಕೆ ಜಾರಿಗೆ ತಂದಿರುವ ವ್ಯವಸ್ಥೆಯಾಗಿದೆ.
‘ಬಿ’ ಖಾತಾ ಮಾಲೀಕರು ಆಸ್ತಿ ತೆರಿಗೆ ಪಾವತಿಸಲು ಅರ್ಹರಿರುತ್ತಾರೆ ಅಷ್ಟೆ. ಆದರೆ, ‘ಬಿ’ ಖಾತಾ ಆಧಾರವಾಗಿಟ್ಟುಕೊಂಡು ಮನೆ ನಿರ್ಮಾಣಕ್ಕೆ ಬ್ಯಾಂಕುಗಳಿAದ ಸಾಲ ಪಡೆಯಲು, ಆಸ್ತಿ ಮಾರಾಟ ಹಾಗೂ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಕಟ್ಟಡ ನಿರ್ಮಾಣ ಪರವಾನಗಿ ಕೂಡ ಕಷ್ಟವೇ!
ಇನ್ನು ‘ಎ’ ಖಾತಾ ಎಂದರೆ, ಇದು ಅಪ್ಟ ಕಾನೂನುಬದ್ಧ ದಾಖಲೆ. ಮನೆ ಕಟ್ಟಲು ಪರವಾನಗಿ, ಬ್ಯಾಂಕ್ ಸಾಲ ಸೌಲಭ್ಯ, ಆಸ್ತಿ ಮಾರಾಟ ಮತ್ತು ವರ್ಗಾವಣೆಯನ್ನು ಸುಲಭವಾಗಿ ಮಾಡಬಹುದು. ಇದೀಗ ನಗರ-ಪಟ್ಟಣದ ಅನಧಿಕೃತ ಆಸ್ತಿ ಮಾಲೀಕರು ಶುಲ್ಕ ಪಾವತಿಸಲು ಸಿದ್ಧರಿರುವುದನ್ನು ಅರಿತಿರುವ ಸರ್ಕಾರ ‘ಬಿ’ ಖಾತಾವನ್ನು ‘ಎ’ ಖಾತಾವಾಗಿ ಪರಿವರ್ತಿಸಲು ಮುಂದಾಗಿದೆ.