ಇದೇ ಏಪ್ರಿಲ್ 30ಕ್ಕೆ ಅಕ್ಷಯ ತೃತೀಯ (Akshaya Tritiya 2025). ಭಾರತೀಯರು ಚಿನ್ನ ಖರೀದಿಗೆ ಅತ್ಯಂತ ಶುಭ ದಿನ ಎಂದು ನಂಬಿದ ಸುದಿನ. ಸರಿಯಾಗಿ ಅಕ್ಷಯ ತೃತೀಯ ಸಮೀಪಿಸಿದ ಹೊತ್ತಲ್ಲೇ ಬಂಗಾರದ ಬೆಲೆ ಗಣನೀಯ ಪ್ರಮಾಣದಲ್ಲಿ (Gold prices drop) ಇಳಿಕೆಯಾಗುತ್ತಿರುವುದು ಚಿನ್ನಪ್ರಿಯರ ಉತ್ಸಾಹ ಹೆಚ್ಚಿಸಿದೆ.
ಒಂದು ಲಕ್ಷ ರೂಪಾಯಿ ಗಡಿ ಸಮೀಪಿಸಿದ್ದ ಚಿನ್ನದ ಬೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಮತ್ತು ಷೇರುಪೇಟೆ ಕುಸಿತದಿಂದ (Stock market crash) ದಿನೇ ದಿನೇ ಕುಸಿಯುತ್ತಿದೆ. ಕಳೆದ ಆರೇಳು ದಿನಗಳಿಂದ ಚಿನ್ನದ ಬೆಲೆ ಹಂತ ಹಂತವಾಗಿ ಇಳಿಕೆಯಾಗಿದೆ.
MUDRA Loan- ಶ್ಯೂರಿಟಿ ಇಲ್ಲದೇ ₹20 ಲಕ್ಷ ಸಾಲ | 33 ಲಕ್ಷ ಕೋಟಿ ರೂ. ಸಾಲ ವಿತರಣೆ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಸತತ ಇಳಿಮುಖದ ಹಾದಿ ಹಿಡಿದಿರುವ ಬಂಗಾರ ಭಾರತದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಕಳೆದ ಏಳು ದಿನಗಳಲ್ಲಿ 3,450 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ:
- ಬೆಂಗಳೂರು: ₹82,240
- ಚೆನ್ನೈ: ₹82,240
- ಮುಂಬೈ: ₹82,240
- ದೆಹಲಿ: ₹82,390
- ಕೋಲ್ಕತ್ತಾ: ₹82,240
- ಹೈದರಾಬಾದ್: ₹82,240
- ಪುಣೆ: ₹82,240
ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರ ಕೂಡ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.

ಚಿನ್ನದ ಬೆಲೆ ಪಾತಾಳ ಕಾಣುತ್ತಾ?
ಇಷ್ಟು ದಿನ ಏರುಮುಖಿಯಾಗಿದ್ದ ಬಂಗಾರದ ಧಾರಣೆ ಇದೀಗ ಇಳಿಮುಖದತ್ತ ಸಾಗಿದೆ. ಈ ಇಳಿಮುಖದ ಪ್ರಮಾಣ ಇನ್ನು ಹೆಚ್ಚಲಿದ್ದು, ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಸಾಕಷ್ಟು ಇಳಿಕೆಯಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ.
24 ಕ್ಯಾರೆಟ್ ಚಿನ್ನದ ಬೆಲೆ ಭಾರತೀಯ ಮಾರುಕಟ್ಟೆಗಳಲ್ಲಿ 10 ಗ್ರಾಂಗೆ 93,000 ರೂ.ಗಳ ಸಮೀಪದಲ್ಲಿದೆ. ಆದರೆ ಮುಂದಿನ ದಿನಗಳಲ್ಲಿ 10 ಗ್ರಾಂಗೆ ಸುಮಾರು 55,000 ರೂ.ಗಳಿಗೆ ಇಳಿಯಬಹುದು ಎಂದು ಅಮೆರಿಕ ಮೂಲದ ಹಣಕಾಸು ಸೇವಾ ಸಂಸ್ಥೆ ಮಾರ್ನಿಂಗ್ಸ್ಟಾರ್ನ ಮಾರುಕಟ್ಟೆ ತಂತ್ರಜ್ಞ ಜಾನ್ ಮಿಲ್ಸ್ ವಿಶ್ಲೇಷಿಸಿದ್ದಾರೆ.
ಸೆಕೆಂಡ್ ಹ್ಯಾಂಡ್ ಆಗದ ಸಂಪತ್ತು
ಚಿನ್ನದ ಬೆಲೆಯ ಏರಿಳಿತ ಸಾಮಾನ್ಯ. ಯಾವತ್ತಿಗೂ ಚಿನ್ನ ಚಿನ್ನವೇ. ಎಂದಿಗೂ ಸೆಕೆಂಡ್ ಹ್ಯಾಂಡ್ ಆಗದ ಈ ಬಂಗಾರದ ಹೂಡಿಕೆ ಎಂದೆAದಿಗೂ ಸುರಕ್ಷಿತ. ಆಭರಣದ ಬದಲು ಚಿನ್ನದ ಬಿಸ್ಕೆಟ್, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆ.
ಚಿನ್ನದ ಮೇಲೆ ಹಣ ಹಾಕಿದರೆ ನಷ್ಟವೆಂಬುವುದು ಇಲ್ಲ. ಆ ದಿನದ ದರ ಹೇಗಿದೆ ಎಂಬುದರ ಮೇಲೆ ಬಹು ವರ್ಷಗಳ ನಂತರವೂ ಉತ್ತಮ ದರವನ್ನು ಪಡೆಯಬಹುದು. ಹೀಗಾಗಿಯೇ ಚಿನ್ನ ಹೂಡಿಕೆದಾರರ ಅಚ್ಚುಮೆಚ್ಚಿನ ಹೂಡಿಕೆಯ ವಿಷಯವಾಗಿದೆ.
Gold Silver Price- ಚಿನ್ನದ ಬೆಲೆ ಭಾರೀ ಇಳಿಕೆ | 10 ಗ್ರಾಂಗೆ ಕೇವಲ ₹55,000 ಇಳಿಯಲಿದೆಯೇ?