New Traffic Rules- ದಂಡ ಕಟ್ಟದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದು | ಟ್ರಾಫಿಕ್ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ

Spread the love

ಸಂಚಾರ ನಿಯಮ ಉಲ್ಲಂಘನೆಗೆ (Traffic Violation) ಗಂಭೀರ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನಿಯಮ ಉಲ್ಲಂಘನೆ ಮಾಡಿದವರಿಗೆ ವಿಧಿಸಲಾಗುವ ದಂಡವನ್ನು (E-challan) 90 ದಿನಗಳೊಳಗೆ ಪಾವತಿಸದೇ ಇದ್ದರೆ, ಅವರ ಚಾಲನಾ ಪರವಾನಗಿಯನ್ನು (Driving License -DL) ರದ್ದುಪಡಿಸಲು ಹೊಸ ನಿಯಮ ರೂಪಿಸಲಾಗುತ್ತಿದೆ.

WhatsApp Group Join Now
Telegram Group Join Now

ಭಾರತದಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸಂಚಾರ ನಿಯಮಗಳ ಪಾಲನೆಯಲ್ಲಿ ಆಗುತ್ತಿರುವ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಹೊಸ ನಿಯಮ ಅನುಷ್ಠಾನಗೊಂಡರೆ ಸಂಚಾರ ನಿಯಮ ಉಲ್ಲಂಘನೆ ಕಡಿಮೆಯಾಗಬಹುದು ಮತ್ತು ರಸ್ತೆ ಸುಧಾರಣೆ ಸಾಧ್ಯವಾಗಬಹುದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸುತ್ತಿದೆ.

ಜೊತೆಗೆ, ಸಂಚಾರ ನಿಯಮ ಉಲ್ಲಂಘನೆಯ ಕಾರಣದಿಂದಾಗಿ ಪ್ರತಿವರ್ಷ ಸಾವಿರಾರು ಜನರು ಅಪಾಘಾತಕ್ಕೆ ಒಳಗಾಗುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದವರು ಸಮಯಕ್ಕೆ ಸರಿಯಾಗಿ ದಂಡ ಪಾವತಿಸುವುದಿಲ್ಲ, ಇದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದ್ದು; ಈ ಕಾರಣಕ್ಕೂ ಕೂಡ ಸರ್ಕಾರ ದಂಡ ಪಾವತಿಗೆ ಕಠಿಣ ನಿಯಮ ಜಾರಿಗೊಳಿಸುತ್ತಿದೆ.

ಇದನ್ನೂ ಓದಿ: Karnataka SSLC Result 2025- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ: ಪ್ರಮುಖ ಮಾಹಿತಿ ಇಲ್ಲಿದೆ…

ಹೊಸ ನಿಯಮದ ಪ್ರಭಾವ

ಯಾವುದೇ ವ್ಯಕ್ತಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ಅವರಿಗೆ ನೀಡುವ ಇ-ಚಲನ್‌ಗಳನ್ನು ಸರಿಯಾಗಿ ಪಾವತಿಸಬೇಕು. ಪಾವತಿಸದಿದ್ದರೆ ಮೂರೇ ತಿಂಗಳಲ್ಲಿ ಅವರ ಚಾಲನಾ ಪರವಾನಗಿ ರದ್ದಾಗುತ್ತದೆ. ಅಪಾಯಕಾರಿ ಚಾಲನೆ ಅಥವಾ ರೆಡ್ ಸಿಗ್ನಲ್ ಜಂಪ್ ಮಾಡಿದವರನ್ನು ಸರ್ಕಾರ ಇನ್ನಷ್ಟು ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಡಿಸಲು ಯೋಚಿಸಿದೆ.

ಒಂದು ಹಣಕಾಸು ವರ್ಷದಲ್ಲಿ ಮೂರು ಚಲನ್ ಪಾವತಿಸದೇ ಇದ್ದರೆ, ಅಂತಹ ವಾಹನವನ್ನು ಕನಿಷ್ಠ ಮೂರು ತಿಂಗಳ ಕಾಲ ಮುಟ್ಟುಗೋಲು ಹಾಕಿಕೊಳ್ಳಬಹುದು. ಈ ನಿಯಮದ ಪರಿಣಾಮವಾಗಿ ವಿಮಾ ಪ್ರೀಮಿಯಂ ಮೊತ್ತ ಹೆಚ್ಚಾಗುವ ಸಾಧ್ಯತೆಯೂ ಇದೆ.

ನಿಯಮ ಉಲ್ಲಂಘನೆ ಮಾಡಿದವರಿಗೆ ವಿಧಿಸಲಾಗುವ ದಂಡವನ್ನು 90 ದಿನಗಳೊಳಗೆ ಪಾವತಿಸದೇ ಇದ್ದರೆ, ಅವರ DL ರದ್ದುಪಡಿಸಲು ಹೊಸ ನಿಯಮ ರೂಪಿಸಲಾಗುತ್ತಿದೆ...
New Traffic Rules

ಇದನ್ನೂ ಓದಿ: KASS Free Health Care- ಇನ್ಮುಂದೆ ಸರ್ಕಾರಿ ನೌಕರರಿಗೆ ಉಚಿತ ಚಿಕಿತ್ಸೆ | ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಸಂಪುಟ ಸಭೆ ನಿರ್ಣಯ

ಭಾರತದಲ್ಲಿ ದಂಡ ಸಂಗ್ರಹ ಪ್ರಮಾಣ

ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕದಲ್ಲಿ ಶೇಕಡಾ 21ರಷ್ಟು ಇ-ಚಲನ್ ಸಂಗ್ರಹವಾಗಿದೆ. ಉಳಿದ ರಾಜ್ಯಗಳ ವಿವರ ಈ ಕೆಳಗಿನಂತಿದೆ:

  • ತಮಿಳುನಾಡು – ಶೇಕಡಾ 27
  • ಉತ್ತರ ಪ್ರದೇಶ – ಶೇಕಡಾ 27
  • ಒಡಿಶಾ – ಶೇಕಡಾ 29
  • ದೆಹಲಿ – ಅತ್ಯಂತ ಕಡಿಮೆ ದಂಡ ಸಂಗ್ರಹ
ಹೊಸ ನಿಯಮದಿಂದ ಆಗುವ ಲಾಭಗಳು

ಈ ಹೊಸ ನಿಯಮ ಜಾರಿಗೆ ಬಂದರೆ ಕೆಲವೊಂದು ಪ್ರಮುಖ ಲಾಭಗಳು ಸಿಗಲಿದ್ದು; ಈ ಪೈಕಿ ಪ್ರಮುಖವಾಗಿ ಸಂಚಾರ ನಿಯಮ ಉಲ್ಲಂಘನೆಯ ಪ್ರಮಾಣ ಕಡಿಮೆಯಾಗುತ್ತದೆ. ಅಪಘಾತಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಾಣಬಹುದು. ಸರ್ಕಾರಕ್ಕೆ ದಂಡ ಸಂಗ್ರಹ ಸುಗಮಗೊಳ್ಳುವುದು. ವಿಮಾನ ವಿಮಾ ಪ್ರೀಮಿಯಂ ಹೆಚ್ಚುವುದರಿಂದ ವಾಹನ ಚಾಲಕರು ಇನ್ನಷ್ಟು ಜಾಗರೂಕರಾಗುತ್ತಾರೆ.

ಈ ಹೊಸ ನಿಯಮಗಳ ಜಾರಿಗೆ ತರುವುದರಿಂದ ಭಾರತದಲ್ಲಿ ರಸ್ತೆ ಸುರಕ್ಷತೆ ಹೆಚ್ಚಾಗುವ ನಿರೀಕ್ಷೆಯಿದೆ. ವಾಹನ ಸವಾರರು ಇನ್ನು ಮುಂದೆ ಸಂಚಾರ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ದಂಡ ಪಾವತಿಸದೆ ತಪ್ಪಿಸಿಕೊಳ್ಳುವ ಪ್ರವೃತ್ತಿಯನ್ನು ತಡೆಯಲು, ಚಾಲನಾ ಪರವಾನಗಿ ರದ್ದು ಮಾಡುವ ಮತ್ತು ವಾಹನ ಮುಟ್ಟುಗೋಲು ಹಾಕುವ ಕ್ರಮವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು.

East Monsoon Rain- ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಂದು ವಾರ ಮಳೆ | ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ


Spread the love
WhatsApp Group Join Now
Telegram Group Join Now
error: Content is protected !!