Karnataka Assembly Recruitment 2024 : ಕರ್ನಾಟಕ ವಿಧಾನಸಭೆಯಲ್ಲಿ (Vidhana Soudha) ಸಹಾಯಕರು, ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು; 7ನೇ ತರಗತಿ ಪಾಸಾದವರಿಂದ ಪದವೀಧರರ ವರೆಗೂ ಅರ್ಜಿ ಸಲ್ಲಸಲು ಅವಕಾಶ ನೀಡಲಾಗಿದೆ. ಹುದ್ದೆಗೆ ಅನುಗುಣವಾದ ವಿದ್ಯಾರ್ಹತೆ ಹೊಂದಿದವರು ಅಂಚೆ ಮೂಲಕ ಅರ್ಜಿ ಸಲ್ಲಿಸಲು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ.
ಹುದ್ದೆಗಳ ವಿವರ
ಕರ್ನಾಟಕ ವಿಧಾನಸಭೆಯಲ್ಲಿ ವಿವಿಧ ಪದನಾಮದ ಒಟ್ಟು 37 ಹುದ್ದೆಗಳು ಖಾಲಿ ಇದ್ದು; ಹುದ್ದೆಗಳ ವಿವರ ಈ ಕೆಳಗಿನಂತಿದೆ:
- ವರದಿಗಾರರು
- ಕ೦ಪ್ಯೂಟರ್ ಅಪರೇಟರ್
- ಜೂನಿಯರ್ ಪ್ರೋಗ್ರಾಮರ್
- ಕಿರಿಯ ಸಹಾಯಕರು
- ಕಿರಿಯ ಗ್ರಂಥಾಲಯ ಸಹಾಯಕರು
- ದಲಾಯತ್
- ಮಸಾಜರ್
- ಸ್ವೀಪರ್
- ಬಡಗಿ
ಅರ್ಜಿ ಸಲ್ಲಿಕೆ ಅರ್ಹತೆಗಳೇನು?
ಕನ್ನಡ ವರದಿಗಾರರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪದವೀಧರರಾಗಿದ್ದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಆಂಗ್ಲ ಶೀಘ್ರಲಿಪಿ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಹಿಂದಿ ಶೀಘ್ರಲಿಪಿ ಉತ್ತೀರ್ಣರಾದರೂ ಅವಕಾಶವಿದೆ.
ಕಂಪ್ಯೂಟರ್ ಅಪರೇಟರ್ ಮತ್ತು ಜೂನಿಯರ್ ಪ್ರೋಗ್ರಾಮರ್ ಹುದ್ದೆಗಳ ಆಕಾಂಕ್ಷಿಗಳು ಕಂಪ್ಯೂಟರ್ ಅಪ್ಲಿಕೇಶನ್ / ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಬಿಎಸ್ಪಿ ಪೂರ್ಣಗೊಳಿಸಿರಬೇಕು.
ಕಿರಿಯ ಸಹಾಯಕರ ಹುದ್ದೆಗೆ ಪದವಿ, ಕಿರಿಯ ಗ್ರಂಥಾಲಯ ಸಹಾಯಕರ ಹುದ್ದೆಗೆ ಲೈಬ್ರರಿ ಸೈನ್ಸ್ ವಿಷಯದಲ್ಲಿ ಪದವಿ ಅರ್ಹತೆ ನಿಗದಿಪಡಿಸಲಾಗಿದೆ.
ಇನ್ನು ದಲಾಯತ್, ಮಸಾಜರ್ ಹುದ್ದೆಗೆ 7ನೇ ತರಗತಿ ಹಾಗೂ ಸ್ವೀಪರ್ ಹುದ್ದೆಗೆ 4ನೇ ತರಗತಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಬಡಗಿ ಹುದ್ದೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಇದ್ದು, ಐಟಿಐ (ಬಡಗಿ) ಪ್ರಮಾಣಪತ್ರ ಹೊಂದಿರಬೇಕು.
ಮೇಲ್ಕಾಣಿಸಿದ ಯಾವುದೇ ಹುದ್ದೆಗೆ ಅರ್ಜಿ ಸಲ್ಲೊಸಬೇಕಾದರೂ ನಿಗದಿತ ವಿದ್ಯಾರ್ಹತೆಯ ಜೊತೆಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 15 ವರ್ಷ ವಯೋಮಿತಿಯಲ್ಲಿರಬೇಕು.
ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯತಿ ಹಗರಣಗಳಿಗೆ ಅಧ್ಯಕ್ಷ, ಸದಸ್ಯರಿಗೂ ಶಿಕ್ಷೆ | ಬಂತು ಹೊಸ ರೂಲ್ಸ್ Gram Panchayat Scam New Rules
ಅರ್ಜಿ ಶುಲ್ಕದ ವಿವರ
ವರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಉಳಿದ ವರ್ಗದ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸಬೇಕು. ಕ್ರಾಸ್ ಮಾಡಿದ ರೂ.500 ಇಂಡಿಯನ್ ಪೋಸ್ಟಲ್ ಆರ್ಡರ್ ಅನ್ನು ಅರ್ಜಿ ಸಲ್ಲಿಸುವ ಕೊನೆ ದಿನಾಂಕದೊಳಗೆ ಕಳುಹಿಸಿಕೊಡಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಕರ್ನಾಟಕ ವಿಧಾನಸಭೆಯ ವಿವಿಧ ಹುದ್ದೆಗಳಿಗೆ ಆಪ್‌ಲೈನ್’ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು; ಇದೇ ನವೆಂಬರ್ 25ರೊಳಗೆ ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಕಳಿಸಿಕೊಡಬೇಕು:
ವಿಳಾಸ : ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಮೊದಲನೇ ಮಹಡಿ, ವಿಧಾನಸೌಧ, ಬೆಂಗಳೂರು-01
ಅಧಿಸೂಚನೆ 1 : Download
ಅಧಿಸೂಚನೆ 2 : Download