ಆಗಸ್ಟ್ 31ರೊಳಗೆ ಇ-ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ರದ್ದು | ಆಹಾರ ಇಲಾಖೆ ಖಡಕ್ ಸೂಚನೆ Ration Card eKYC Last Date

Spread the love

Ration Card eKYC Last Date : ಅಕ್ರಮ, ಅನಧಿಕೃತ ರೇಷನ್ ಕಾರ್ಡ್ (Unauthorized Ration Card) ಪತ್ತೆ ಕಾರ್ಯವನ್ನು ಆಹಾರ ಇಲಾಖೆ ಮತ್ತಷ್ಟು ತೀವ್ರ ಮಾಡಿದೆ. ಸರ್ಕಾರಿ ನೌಕರರು ( Government employees), ಅನುಕೂಲಸ್ತರು ಸುಳ್ಳು ದಾಖಲೆ ನೀಡಿ ರೇಷನ್ ಕಾರ್ಡ್ ಪಡೆದಿದ್ದರೆ ಅಂಥವರಿಗೆ ಪಡಿತರ ಚೀಟಿಯನ್ನು ಕೂಡಲೇ ವಾಪಾಸು ಮಾಡುವಂತೆ ಎಚ್ಚರಿಸಲಾಗಿದೆ.

WhatsApp Group Join Now
Telegram Group Join Now

ಈಗಾಗಲೇ ಲಕ್ಷಾಂತರ ಅನಧಿಕೃತ ಬಿಪಿಎಲ್ ಕಾರ್ಡುಗಳನ್ನು (BPL Ration Card) ರದ್ದುಪಡಿಸಲಾಗಿದೆ. ಕೆಲವು ಬಿಪಿಎಲ್ ಕಾರ್ಡ್’ಗಳನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲಾಗಿದೆ. ಇಷ್ಟಾಗಿಯೂ ಹಲವಾರು ಅನರ್ಹರರ ಬಳಿ ಅನಧಿಕೃತ ರೇಷನ್ ಕಾರ್ಡ್’ಗಳಿವೆ. ಅವುಗಳನ್ನು ಪತ್ತೆಹಚ್ಚಲು ಇಲಾಖೆ ಚುರುಕಿನ ಕಾರ್ಯಾಚರಣೆ ನಡೆಸುತ್ತಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಎಲ್‌ಜಿ, ಯುಕೆಜಿ ಆರಂಭ : 5,000 ಶಿಕ್ಷಕರ ನೇಮಕಾತಿ | ಹೇಗೆ ನಡೆಯಲಿದೆ ನೇಮಕಾತಿ? Govt School LKG UKG Teacher Recruitment 2024

ಎರಡೆರಡು ರೇಷನ್ ಕಾರ್ಡುಗಳಿಗೆ ಕಡಿವಾಣ

ಈ ನಡುವೆ ಒಂದೇ ಕುಟುಂಬದಲ್ಲಿ ಹಲವು ರೇಷನ್ ಕಾರ್ಡ್ ಇರುವುದು ಕೂಡ ಪತ್ತೆಯಾಗುತ್ತಿದ್ದು; ಇಂತಹ ಕಾರ್ಡುಗಳನ್ನು ಮುಲಾಜಿಲ್ಲದೇ ರದ್ದುಪಡಿಸಲಾಗುತ್ತಿದೆ. ಈ ರೀತಿಯ ಕಾರ್ಡುಗಳನ್ನು ಪತ್ತೆ ಮಾಡುವ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಮಾರ್ಗಸೂಚಿ ಪ್ರಕಟಿಸಿದೆ.

ಸದರಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ (ಆಧಾರ್ ಆಧರಿತ ಹೆಬ್ಬೆಟ್ಟಿನ ದೃಢೀಕರಣ) ಮಾಡಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಬೋಗಸ್ ರೇಷನ್ ಕಾರ್ಡ್ ಆಗಸ್ಟ್ 31ರೊಳಗೆ ವಾಪಾಸು ಮಾಡುವಂತೆ ಆಹಾರ ಇಲಾಖೆ ಖಡಕ್ ವಾರ್ನಿಂಗ್ Ineligible Ration Card Return Deadline

Ration Card eKYC Last Date
ರೇಷನ್ ಕಾರ್ಡ್ ಇ-ಕೆವೈಸಿಗೆ ಆಗಸ್ಟ್ 31ರ ಗಡುವು

ಹಲವು ವರ್ಷಗಳಿಂದ ಬಿಪಿಎಲ್ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿದೇ ಇರುವವರು ಇದೇ ಆಗಸ್ಟ್ ತಿಂಗಳ 31ರೊಳಗೆ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಇ-ಕೆವೈಸಿ (ಆಧಾರ್ ಆಧರಿತ ಹೆಬ್ಬೆಟ್ಟಿನ ದೃಢೀಕರಣ) ಮಾಡಿಸಲು ತಿಳಿಸಲಾಗಿದೆ.

ಈಗಾಗಲೇ ಹಲವು ಜಿಲ್ಲೆಗಳಲ್ಲಿ ಆಧಾರ್ ಆಧರಿತ ಹೆಬ್ಬೆಟ್ಟಿನ ದೃಢೀಕರಣ ಆಗದೇ ಇರುವ ಬಿಪಿಎಲ್ ಪಡಿತರ ಚೀಟಿದಾರರ ಹೆಸರುಗಳನ್ನು ಅವರ ವ್ಯಾಪ್ತಿಯ ನ್ಯಾಯಬೇಲೆ ಅಂಗಡಿಗಳಲ್ಲಿ ಪ್ರದರ್ಶಿಸಲಾಗಿದೆ. ಅಂಥವರು ನಿಗದಿತ ದಿನಾಂಕದೊಳಗೆ ಇ-ಕೆವೈಸಿ ಮಾಡಿಸದಿದ್ದಲ್ಲಿ ರೇಷನ್ ರದ್ದಾಗಲಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನ್ವಯ ಮನೆ ಬಾಡಿಗೆ ಭತ್ಯೆ ಎಷ್ಟು ಸಿಗಲಿದೆ? | ಜಿಲ್ಲಾವಾರು ಹೊಸ ಎಚ್‌ಆರ್‌ಎ ದರ ಇಲ್ಲಿದೆ… Govt Employees House Rent Allowance

ಸರ್ಕಾರದ ಎಲ್ಲ ಸೌಲಭ್ಯಗಳೂ ಬಂದ್!

ರೇಷನ್ ಕಾರ್ಡ್ ರದ್ದಾದರೆ, ಕೇವಲ ಪಡಿತರ ಧಾನ್ಯ ಮಾತ್ರ ನಿಲ್ಲುವುದಿಲ್ಲ. ಅದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2000 ರೂಪಾಯಿ ಪ್ರೋತ್ಸಾಹಧನವೂ ಸೇರಿದಂತೆ ಬಿಪಿಎಲ್ ಕಾರ್ಡ್ ಅನ್ವಯವಾಗಿರುವ ಎಲ್ಲ ರೀತಿಯ ಸರ್ಕಾರಿ ಸೌಲಭ್ಯಗಳೂ ಬಂದ್ ಆಗಲಿವೆ.

ಹೀಗಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪಡಿತರದಾರರು ಕೂಡಲೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ತಮ್ಮದು ಇ-ಕೆವೈಸಿ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಒಂದುವೇಳೆ ಆಗಿರದಿದ್ದರೆ ಕೂಡಲೇ ಕುಟುಂಬ ಎಲ್ಲಾ ಸದಸ್ಯರ ಆಧಾರ್ ಆಧರಿತ ಹೆಬ್ಬೆಟ್ಟಿನ ದೃಢೀಕರಣ ಮಾಡಿಸಿ…

ಇದನ್ನೂ ಓದಿ: 18 ವಯಸ್ಸಿನ ಒಳಗಿನ ಮಕ್ಕಳಿಗೂ ಇನ್ಮುಂದೆ ಪ್ಯಾನ್ ಕಾರ್ಡ್ ಕಡ್ಡಾಯ | ಇದರ ಪ್ರಯೋಜನವೇನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ Pan Card for a Minor


Spread the love
WhatsApp Group Join Now
Telegram Group Join Now

1 thought on “ಆಗಸ್ಟ್ 31ರೊಳಗೆ ಇ-ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ರದ್ದು | ಆಹಾರ ಇಲಾಖೆ ಖಡಕ್ ಸೂಚನೆ Ration Card eKYC Last Date”

Leave a Comment

error: Content is protected !!