Anganwadi Recruitment District wise list : ರಾಜ್ಯದಲ್ಲಿ ಖಾಲಿ ಇರುವ ಅಂಗನವಾಡಿ ಶಿಕ್ಷಕಿಯರು (Anganwadi teachers), ಸಹಾಯಕಿಯರ (Anganwadi assistant) ನೇಮಕಾತಿಗೆ ರಾಜ್ಯ ಸರಕಾರ ಸಕಲ ಸಿದ್ಧತೆ ನಡೆಸಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ರಾಜ್ಯದಲ್ಲಿ ಖಾಲಿ ಇರುವ 13,593 ಅಂಗನವಾಡಿ ಹುದ್ದೆಗಳ ನೇಮಕ (Recruitment of Anganwadi Posts) ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಕೂಡ ರಾಜ್ಯಾದ್ಯಂತ ಅಂಗನವಾಡಿ ಶಿಕ್ಷಕಿಯರ ನೇಮಕಾತಿ ನಡೆಯಲಿದೆ. ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಕರೆದಿದ್ದು, ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯಿತಿ ಸಿಇಒಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಸಮಿತಿಯಲ್ಲಿ ನೇಮಕಾತಿ ನಡೆಯಲಿದೆ ಎಂದು ಹೇಳಿದ್ದಾರೆ.
ಖಾಲಿ ಹುದ್ದೆಗಳೆಷ್ಟು?
- ಅಂಗನವಾಡಿ ಕಾರ್ಯಕರ್ತೆಯರು : 4,180
- ಅಂಗನವಾಡಿ ಸಹಾಯಕಿಯರು : 9,411
- ಒಟ್ಟು ಖಾಲಿ ಹುದ್ದೆಗಳು : 13,593
ಈಗಾಗಲೇ ಅರ್ಜಿ ಆಹ್ವಾನಿಸಿರುವ ಜಿಲ್ಲೆಗಳ ಪಟ್ಟಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 13,593 ಅಂಗನವಾಡಿ ಹುದ್ದೆಗಳ ಪೈಕಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ಜಿಲ್ಲೆಗಳ ಪಟ್ಟಿ ಮತ್ತು ಖಾಲಿ ಹುದ್ದೆಗಳ ವಿವರ ಈ ಕೆಳಗಿನಂತಿದೆ:
ಉತ್ತರ ಕನ್ನಡ ಜಿಲ್ಲೆ
ಒಟ್ಟು ಖಾಲಿ ಹುದ್ದೆಗಳು : 344
ಬೆಳಗಾವಿ ಜಿಲ್ಲೆ
ಒಟ್ಟು ಖಾಲಿ ಹುದ್ದೆಗಳು : 313
ಕಲಬುರಗಿ ಜಿಲ್ಲೆ
ಒಟ್ಟು ಖಾಲಿ ಹುದ್ದೆಗಳು : 299
ಹಾವೇರಿ ಜಿಲ್ಲೆ
ಒಟ್ಟು ಖಾಲಿ ಹುದ್ದೆಗಳು : 152

ಯಾರೆಲ್ಲ ಅರ್ಜಿ ಸಲ್ಲಿಸಬಹುದು?
19 ರಿಂದ 35 ವರ್ಷ ವಯೋಮಿತಿ ಒಳಗಿರುವ ಮಹಿಳೆಯರು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.
ದೈಹಿಕ ಅಂಗವಿಕಲತೆ ಪ್ರಮಾಣ ಶೇ.40ಕ್ಕಿಂತ ಕಡಿಮೆ ಇರುವ ಅಂಗವಿಕಲ ಅಭ್ಯರ್ಥಿಗಳು ಕೂಡ ಅಂಗನವಾಡಿ ಕಾರ್ಯಕರ್ತೆಯರು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು; ಇವರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.
ವಿದ್ಯಾರ್ಹತೆ ಏನಿರಬೇಕು?
10ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿದ ಅರ್ಹ ಮಹಿಳೆಯರು ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಎರಡೂ ಹುದ್ದೆಗಳ ವಿದ್ಯಾರ್ಹತೆ ಈ ಕೆಳಗಿನಂತಿದೆ:
- ಅಂಗನವಾಡಿ ಕಾರ್ಯಕರ್ತೆ : 12ನೇ ತರಗತಿ ಪಾಸ್
- ಅಂಗನವಾಡಿ ಸಹಾಯಕಿ : 10ನೇ ತರಗತಿ ಪಾಸ್
ಸಂಬಳ, ಸೌಲತ್ತುಗಳೇನು?
ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 12,000 ರೂಪಾಯಿ ಹಾಗೂ ಸಹಾಯಕಿಯರಿಗೆ 8,000 ರೂಪಾಯಿ ಸಂಬಳ ನೀಡಲಾಗುತ್ತಿದೆ. ವೇತನ ಹೆಚ್ಚಿಸುವಂತೆ ಅಂಗನವಾಡಿ ಸಿಬ್ಬಂದಿ ನಿರಂತರ ಧರಣಿ, ಹಕ್ಕೊತ್ತಾಯ ಮಾಡುತ್ತಿದ್ದು; ಸದ್ಯದಲ್ಲಿಯೇ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ.
ಇದಕ್ಕೆ ಪೂರಕವೆಂಬ೦ತೆ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒ ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆಯ ಗೌರವಧನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಅಂಗನವಾಡಿ ಸಿಬ್ಬಂದಿ ಮಾಸಿಕ ವೇತನ ಇನ್ನಷ್ಟು ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ.
ಅರ್ಜಿ ಸಲ್ಲಿಕೆ ಹೇಗೆ?
ಇಲ್ಲಿಯ ವರೆಗೂ ಅಂಗನವಾಡಿ ಹುದ್ದೆಗಳ ನೇಮಕಾತಿಗೆ ಆಫ್‌ಲೈನ್’ನಲ್ಲಿ ಅರ್ಜಿ ಆಹ್ವಾನಿಸಲಾಗುತ್ತಿತ್ತು. ಈ ವರ್ಷದ ಆರಂಭದಲ್ಲಿ ಕೆಲ ಜಿಲ್ಲೆಯಲ್ಲಿ ಆನ್‌ಲೈನ್ ನೇಮಕಾತಿಯನ್ನು ಪ್ರಾಯೋಗಿಕವಾಗಿ ನಡೆಸಿದ್ದು; ಇದೀಗ ಇಡೀ ರಾಜ್ಯಕ್ಕೆ ಆನ್‌ಲೈನ್ ನೇಮಕಾತಿಯನ್ನು ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸಲು https://karnemakaone.kar.nic.in/abcd/ ಭೇಟಿ ನೀಡಬೇಕು. ಉದ್ಯೋಗ ಬಯಸುವ ಜಿಲ್ಲೆ ಶಿಶು ಅಭಿವೃದ್ಧಿ ಕೇಂದ್ರ, ಅಧಿಸೂಚನೆ ಸಂಖ್ಯೆ ಅಂದರೆ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿಗೆ ಹೊರಡಿಸುವ ಪ್ರಕಟಣೆ ಸಂಖ್ಯೆ ಹಾಕಬೇಕು.
ನಂತರ ನೀವು ಅರ್ಜಿ ಸಲ್ಲಿಸುತ್ತಿರುವುದು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಾ? ಅಥವಾ ಅಂಗನವಾಡಿ ಸಹಾಯಕಿ ಹುದ್ದೆಗಾ? ಎಂಬುವುದನ್ನು ಆಯ್ಕೆ ಮಾಡಿ, ಮೀಸಲಾತಿ ಆಯ್ಕೆ ಮಾಡಿದ ನಂತರ ಅರ್ಜಿ ತೆರೆಯುತ್ತದೆ. ನಂತರ ಅಗತ್ಯ ಮಾಹಿತಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ ಬೇಕಾಗುವ ದಾಖಲಾತಿಗಳು
- ವಿದ್ಯಾರ್ಹತೆ ಪ್ರಮಾಣ ಪತ್ರ
- ವಾಸಸ್ಥಳ ದೃಢೀಕರಣ ಪತ್ರ
- ಜನನ ಪ್ರಮಾಣ ಪತ್ರ ಅಥವಾ ವಯಸ್ಸಿನ ದೃಢೀಕರಣಕ್ಕಾಗಿ ಎಸ್‌ಎಲ್‌ಸಿ/ಪಿಯುಸಿ ಅಂಕಪಟ್ಟಿ
- ಮೀಸಲಾತಿಗಾಗಿ ಜಾತಿ ಪ್ರಮಾಣ ಪತ್ರ
- ಆತ್ಮಹತ್ಯೆ ಮಾಡಿಕೊಂಡ ರೈತರ ಹೆಂಡತಿ ಆಗಿದ್ದಲ್ಲಿ ಸ್ಥಳೀಯ ಎಸಿ ಅವರಿಂದ ಪಡೆದ ಪ್ರಮಾಣ ಪತ್ರ
- ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ
- ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ
ಈ ಎಲ್ಲ ಅಗತ್ಯ ದಾಖಲೆ ಪತ್ರಗಳನ್ನು ಹೊಂದಿರುವ ಅಭ್ಯರ್ಥಿಗಳು ಅವುಗಳನ್ನು ಸ್ಕ್ಯಾನ್ ಮಾಡಿದ ಸಾಫ್ಟ್ ಕಾಫಿ ರೆಡಿ ಮಾಡಿಟ್ಟುಕೊಂಡರೆ ಆಗ ಆರ್ಜಿ ಸಲ್ಲಿಕೆ ಸುಲಭವಾಗುತ್ತದೆ.
ಅರ್ಜಿ ಸಲ್ಲಿಕೆ ಡೈರೆಕ್ಟ್ ಲಿಂಕ್ : Apply ಮಾಡಿ
ರಾಜ್ಯದ ಇನ್ನುಳಿದ ಜಿಲ್ಲೆಗಳ ನೇಮಕಾತಿ ಕುರಿತ ನಿರಂತರ ಅಪ್ಡೇಟ್’ಗಾಗಿ https://mahitimane.com/ ಫಾಲೋ ಮಾಡಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.