Revised Salary of Govt Employees : ಕೊನೆಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ (Karnataka Government Employees) ಬಹುದೊಡ್ಡ ಬೇಡಿಕೆಯಾಗಿದ್ದ 7ನೇ ವೇತನ ಆಯೋಗ (7th Pay Commission) ವರದಿಯ ಶಿಫಾರಸುಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಇದೇ ಆಗಸ್ಟ್ 1ರಿಂದಲೇ ಸರಕಾರಿ ನೌಕರರಿಗೆ ಪರಿಷ್ಕೃತ ವೇತನ ಜಾರಿಗೆ ಬರಲಿವೆ.
ಗಮನಾರ್ಹವೆಂದರೆ 7ನೇ ವೇತನ ಆಯೋಗದ ವರದಿಯಲ್ಲಿ ಏಪ್ರಿಲ್ 1, 2024ರಿಂದ ಪೂರ್ವಾನ್ವಯವಾಗಿ ಹಣಕಾಸು ಸೌಲಭ್ಯಗಳನ್ನು ನೀಡಬೇಕೆಂದು ಶಿಫಾರಸು ಮಾಡಲಾಗಿತ್ತು. ಆದರೆ, ಇದೀಗ ಬರಲಿರುವ ಆಗಸ್ಟ್ 1 ರಿಂದ ಹೊಸ ವೇತನ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಯಾವ್ಯಾವ ಸರ್ಕಾರಿ ನೌಕರರ ಸಂಬಳ ಎಷ್ಟೆಷ್ಟು ಹೆಚ್ಚಾಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…
ಸಂಬಳ ಎಷ್ಟು ಏರಿಕೆಯಾಗಲಿದೆ?
ಕೆ. ಸುಧಾಕರ ರಾವ್ ನೇತೃತ್ವದ ಏಳನೇ ವೇತನ ಆಯೋಗವು ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿ ಕಳೆದ ಮಾರ್ಚ್ 16ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ತನ್ನ ವರದಿ ಸಲ್ಲಿಸಿತ್ತು.
ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನೌಕರರ ಸಂಬಳವನ್ನು ಶೇ.17ರಷ್ಟು ಹೆಚ್ಚಳ ಮಾಡಿತ್ತು. ಈಗ 7ನೇ ವೇತನ ಆಯೋಗದ ಶಿಫಾರಸಿನಂತೆ ಶೇ.10.5ರಷ್ಟು ಸೇರಿಸಿ ಒಟ್ಟು ಶೇ.27.5ರಷ್ಟು ಆಗುವಂತೆ ವೇತನವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
‘ಸಿ’ ಮತ್ತು ‘ಡಿ’ ದರ್ಜೆ ನೌಕರರ ವೇತನ ವಿವರ
‘ಎ’ ವಲಯದ ‘ಸಿ’ ಮತ್ತು ‘ಡಿ’ ದರ್ಜೆ ನೌಕರರಿಗೆ 2022ರ ಜುಲೈ 1ರಂದು ಮೂಲ ವೇತನ 17,000 ರೂ. ಇದ್ದರೆ, ತುಟ್ಟಿಭತ್ಯೆ ಶೇ.31 (5,270 ರೂ.) ಹಾಗೂ ಶೇ.27.50 (4,675 ರೂ.) ಫಿಟ್ಮೆಂಟ್ ಸೇರಿ ಒಟ್ಟು 26,945 ಸಿಗುತ್ತಿತ್ತು.
ಇದೀಗ 2024ರ ನೂತನ ವೇತನ ಶ್ರೇಣಿಯಲ್ಲಿ 27,000 ರೂಪಾಯಿ ಮೂಲ ವೇತನವಿದ್ದರೆ, ಅಂದಾಜು ತುಟ್ಟಿ ಭತ್ಯೆ ಶೇ.8.5 (2295 ರೂ.), ಮನೆ ಬಾಡಿಗೆ ಭತ್ಯೆ ಶೇ.20 (5,400 ರೂ.), ವೈದ್ಯಕೀಯ 500, ನಗರ ಪರಿಹಾರ ಭತ್ಯೆ (ಸಿಸಿಎ) 750 ರೂ. ಸೇರಿ ಒಟ್ಟು 35,945 ರೂಪಾಯಿ (01-01-2024ಕ್ಕೆ) ಸಿಗಲಿದೆ.
ಈ ಹಿಂದಿನ 6ನೇ ವೇತನ ಆಯೋಗದಲ್ಲಿ ಒಟ್ಟು 29,005 ರೂಪಾಯಿ ಸಿಗುತ್ತಿತ್ತು. ಇದೀಗ 7ನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕೃತ ವೇತನದಲ್ಲಿ 6940 ರೂಪಾಯಿ ಹೆಚ್ಚಳವಾಗಲಿದೆ.
‘ಎ’ ಮತ್ತು ‘ಬಿ’ ದರ್ಜೆ ನೌಕರರ ವೇತನ ವಿವರ
‘ಎ’ ವಲಯದ ‘ಎ’ ಮತ್ತು ‘ಬಿ’ ದರ್ಜೆಯ ನೌಕರರಿಗೆ 2022ರ ಜುಲೈ 1ರಂದು 17,000 ರೂಪಾಯಿ ವೇತನ ಇದ್ದರೆ, ಶೇ.31 ತುಟ್ಟಿ ಭತ್ಯೆ (5270 ರೂ.), ಫಿಟ್ಮೆಂಟ್ ಶೇ.27.50 (4675 ರೂ.) ಸೇರಿ ಒಟ್ಟು 26945 ರೂ ವೇತನ ಸಿಗುತ್ತಿತ್ತು.
ಇದೀಗ 2024ರ ನೂತನ ವೇತನ ಶ್ರೇಣಿಯಲ್ಲಿ 27,000 ರೂಪಾಯಿ ಮೂಲ ವೇತನವಿದ್ದರೆ, ತುಟ್ಟಿ ಭತ್ಯೆ ಶೇ.8.5 (2298 ರೂ.), ಮನೆ ಬಾಡಿಗೆ ಭತ್ಯೆ ಶೇ.20 (5400 ರೂ.), ನಗರ ಪರಿಹಾರ ಭತ್ಯೆ (ಸಿಸಿಎ) 900 ಸೇರಿ ಒಟ್ಟು 35,595 ವೇತನ ಸಿಗಲಿದೆ.
ಈ ದರ್ಜೆಯ ನೌಕರರಿಗೆ 6ನೇ ವೇತನ ಆಯೋಗದ ಅವಧಿಯಲ್ಲಿ 27,545 ರೂಪಾಯಿ ವೇತನ ಸಿಗುತ್ತಿತ್ತು. 7ನೇ ವೇತನ ಆಯೋಗದ ಶಿಫಾರಸಿನಂತೆ ಇದೀಗ ನೂತನ ವೇತನದಲ್ಲಿ 8,050 ರೂಪಾಯಿ ಹೆಚ್ಚಳವಾಗಲಿದೆ.
ಎಷ್ಟು ಜನರಿಗೆ ಅನುಕೂಲವಾಗಲಿದೆ?
ಸಂಪುಟ ಸಭೆಯ ತೀರ್ಮಾದಂತೆ 7ನೇ ವೇತನ ಆಯೋಗದ ಅಂತಿಮ ಶಿಫಾರಸ್ಸುಗಳು ಜಾರಿಯಾದರೆ ರಾಜ್ಯದ ಸುಮಾರು 5.20 ಲಕ್ಷ ಸರಕಾರಿ ನೌಕರರು, ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಲ್ಲಿ 2.50 ಲಕ್ಷ ನೌಕರರು ಹಾಗೂ 4.50 ಲಕ್ಷ ನಿವೃತ್ತ ನೌಕರರು ಸೇರಿ ಒಟ್ಟು 12.20 ಲಕ್ಷನೌಕರರ ಕುಟುಂಬಗಳಿಗೆ ಅನುಕೂಲವಾಗಲಿದೆ.
7ನೇ ವೇತನ ಆಯೋಗ ವರದಿ ಶಿಫಾರಸಿನ ಬಳಿಕ ಯಾವ್ಯಾವ ದರ್ಜೆ ನೌಕರರಿಗೆ ಎಷ್ಟೆಷ್ಟು ಮೂಲ ವೇತನ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಹಾಗೂ ನಗರ ಪರಿಹಾರ ಭತ್ಯೆ (ಸಿಸಿಎ) ಸೇರಿ ಏರಿಕೆಯಾದ ಒಟ್ಟು ಮೊತ್ತದ ವಿವರಗಳ ಪಟ್ಟಿ ನೋಡಲು ಕೆಳಗಿನ ಪಿಡಿಎಫ್ ಫೈಲ್ ಡೌನ್‌ಲೋಡ್ ಮಾಡಿಕೊಳ್ಳಿ….
ಆಗಸ್ಟ್ ತಿಂಗಳಲ್ಲಿ ವೇತನ ಹೆಚ್ಚಳ ಆಗುತ್ತೆ ಸರಿ, ಆದರೆ ಆರ್ಥಿಕ ಸೌಲಭ್ಯ 2022 ರಿಂದ ಸಿಗುತ್ತೇನು?
ದೊಡ್ಡದಾಗಿ ಲೇಖನ ಬರೆಯುವ ಮಹಾಶಯರೇ, ಪ್ರತೀ ಬಾರಿ ಸರ್ಕಾರಿ ನೌಕರರಿಗೆ ಆಗುವ ಅನ್ಯಾಯವನ್ನೂ ಸಹ ಸರಿಯಾಗಿ ತಿಳಿದುಕೊಂಡು ಬರೆಯಿರಿ. ಆ ಕೆಲಸವನ್ನು ನೀವು ಮಾಡುವುದಿಲ್ಲ, ಕಾರಣ ನಿಮಗೆ ತಾಕತ್ತು ಇಲ್ಲ.