KSFES Recruitment 2026: ಕರ್ನಾಟಕ ಅಗ್ನಿಶಾಮಕ ಇಲಾಖೆ 472 ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC, PUC ಪಾದಾದವರಿಗೆ ಭರ್ಜರಿ ಅವಕಾಶ

WhatsApp Group Join Now
Telegram Group Join Now

KSFES Recruitment 2026: ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 472 ಅಗ್ನಿಶಾಮಕ ಸಿಬ್ಬಂದಿ ಮತ್ತು ಠಾಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ ವಿದ್ಯಾರ್ಹತೆ, ವಯೋಮಿತಿ, ಸಂಬಳ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ (KSFES Recruitment 2026) ಹೊಸ ನೇಮಕಾತಿಗೆ ಚಾಲನೆ ನೀಡಿದೆ. ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 472 ಹುದ್ದೆಗಳನ್ನು ತುಂಬಲು ಈಗ ಕರಡು ಅಧಿಸೂಚನೆ (Draft Notification) ಪ್ರಕಟವಾಗಿದೆ.

ಇದನ್ನೂ ಓದಿ: Free Dairy Sheep Goat Farming Training: ಉಚಿತ ಕುರಿ-ಆಡು ಸಾಕಾಣಿಕೆ ಹಾಗೂ ಹೈನುಗಾರಿಕೆ ತರಬೇತಿ | ಇಂದೇ ಅರ್ಜಿ ಸಲ್ಲಿಸಿ

ಈ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 22, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಈ ಹುದ್ದೆಗಳಿಗೆ ಯಾರೆಲ್ಲಾ ಅರ್ಜಿ ಹಾಕಬಹುದು? ಸಂಬಳ ಎಷ್ಟು ಸಿಗುತ್ತದೆ? ದೈಹಿಕ ಪರೀಕ್ಷೆ ಹೇಗಿರುತ್ತದೆ? ಈ ಎಲ್ಲಾ ವಿಚಾರಗಳನ್ನು ಇಲ್ಲಿ ಸರಳವಾಗಿ ತಿಳಿಯೋಣ.

ಇದನ್ನೂ ಓದಿ: Karnataka Drought Relief: ಡಿಸೆಂಬರ್ 1ರೊಳಗೆ ರೈತರ ಖಾತೆಗೆ ₹5,000 ಬರ ಪರಿಹಾರ ಜಮೆ | ಡಿಸಿಎಂ ಘೋಷಣೆ | ಸಂಪೂರ್ಣ ಮಾಹಿತಿ ಇಲ್ಲಿದೆ

ಯಾವೆಲ್ಲಾ ಹುದ್ದೆಗಳು ಖಾಲಿ ಇವೆ? (Vacancy Details)

ಈ ಬಾರಿ ಇಲಾಖೆಯಲ್ಲಿ ಒಟ್ಟು 472 ಹುದ್ದೆಗಳು ಖಾಲಿ ಇವೆ. ಅವುಗಳನ್ನು ಎರಡು ವಿಭಾಗಗಳಲ್ಲಿ ಹಂಚಿಕೆ ಮಾಡಲಾಗಿದೆ.

ಮೊದಲನೆಯದಾಗಿ ಅಗ್ನಿಶಾಮಕ ಸಿಬ್ಬಂದಿ (Fireman) ಹುದ್ದೆಗಳು. ಈ ವಿಭಾಗದಲ್ಲಿ ಬರೋಬ್ಬರಿ 460 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಎರಡನೆಯದಾಗಿ ಅಗ್ನಿಶಾಮಕ ಠಾಣೆ ಅಧಿಕಾರಿ (Fire Station Officer – FSO) ಹುದ್ದೆಗಳು. ಇದರಲ್ಲಿ 16 ಹುದ್ದೆಗಳು ಖಾಲಿ ಇವೆ.

ಇದನ್ನೂ ಓದಿ: Karnataka Free Site Scheme: BPL ಕಾರ್ಡ್ ಕುಟುಂಬಗಳಿಗೆ ಉಚಿತ ಸೈಟ್ ಹಾಗೂ ಮನೆ ವಿತರಣೆ | ಸರ್ಕಾರದ ಹೊಸ ಯೋಜನೆಯ ಸಂಪೂರ್ಣ ಮಾಹಿತಿ

ಕೆಲಸ ಎಲ್ಲಿ ಸಿಗುತ್ತದೆ? ಸಂಬಳ ಎಷ್ಟು? (Salary & Job Location)

ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೆಲಸ ನೀಡಲಾಗುತ್ತದೆ (Job Location). ನಿಮ್ಮ ಊರಿನ ಅಥವಾ ರಾಜ್ಯದ ಬೇರೆ ಬೇರೆ ಅಗ್ನಿಶಾಮಕ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

ಇನ್ನು ಸಂಬಳದ ವಿಚಾರಕ್ಕೆ ಬರುವುದಾದರೆ, ಸರ್ಕಾರದ ನಿಯಮದಂತೆ ಉತ್ತಮ ವೇತನ ಸಿಗಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 37,500 ರೂಪಾಯಿಯಿಂದ 76,100 ರೂಪಾಯಿವರೆಗೆ ವೇತನ (Salary Package) ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Free Laptop Scheme: ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ | ಉಚಿತ ಲ್ಯಾಪ್‌ಟಾಪ್ ಭಾಗ್ಯ | ಅರ್ಜಿ ಸಲ್ಲಿಸಲು ಯಾರು ಅರ್ಹರು? ಇಲ್ಲಿದೆ ಮಾಹಿತಿ

ವಿದ್ಯಾರ್ಹತೆ ಏನಾಗಿರಬೇಕು? (Educational Qualification)

ನೀವು ಅರ್ಜಿ ಸಲ್ಲಿಸುವ ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯ.

WhatsApp Group Join Now
Telegram Group Join Now

ನೀವು ಅಗ್ನಿಶಾಮಕ ಸಿಬ್ಬಂದಿ (Fireman) ಹುದ್ದೆಗೆ ಅರ್ಜಿ ಹಾಕುವುದಾದರೆ, ಕನಿಷ್ಠ 10ನೇ ತರಗತಿ (SSLC) ಪಾಸಾಗಿರಬೇಕು. ಪಿಯುಸಿ (PUC) ಮುಗಿಸಿದವರೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಒಂದು ವೇಳೆ ನೀವು ಅಗ್ನಿಶಾಮಕ ಠಾಣಾಧಿಕಾರಿ (FSO) ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ಪದವಿ ಓದಿರಬೇಕು. ರಸಾಯನಶಾಸ್ತ್ರ ವಿಷಯದೊಂದಿಗೆ ವಿಜ್ಞಾನ ಪದವಿಯನ್ನು (B.Sc in Chemistry) ಪೂರ್ಣಗೊಳಿಸಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Karnataka E-Swathu: ಕೃಷಿ ಜಮೀನಿನ ಮನೆಗಳಿಗೂ ಸಿಗಲಿದೆ ಇ-ಸ್ವತ್ತು: ಕೇವಲ ₹50 ಶುಲ್ಕದಲ್ಲಿ ಆಸ್ತಿ ದಾಖಲೆ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ವಯೋಮಿತಿ ಮತ್ತು ಸಡಿಲಿಕೆ ನಿಯಮಗಳು (Age Limit & Relaxation)

ಹೊಸ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೆಯೇ ಗರಿಷ್ಠ ವಯಸ್ಸು 31 ವರ್ಷ ಮೀರಿರಬಾರದು.

ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ವಿಶೇಷ ವಿನಾಯಿತಿ ಸಿಗಲಿದೆ. ಹಿಂದುಳಿದ ವರ್ಗಗಳಾದ 2A, 2B, 3A ಮತ್ತು 3B (OBC) ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ಸಿಗುತ್ತದೆ. ಅಂಗವಿಕಲ (PWD) ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಇದನ್ನೂ ಓದಿ: Karnataka Anganwadi Recruitment 2026: ಅಂಗನವಾಡಿ ಕೆಲಸಕ್ಕೆ ಅರ್ಜಿ ಆಹ್ವಾನ | ಜಿಲ್ಲಾವಾರು ಹುದ್ದೆಗಳು, ಅರ್ಜಿ ದಿನಾಂಕ ಇಲ್ಲಿದೆ…

KSFES Recruitment 2026
KSFES Recruitment 2026

ದೈಹಿಕ ಅರ್ಹತೆಗಳು ಹೇಗಿರಬೇಕು? (Physical Standard Test – PST)

ಅಗ್ನಿಶಾಮಕ ದಳವು ಒಂದು ಸಾಹಸಮಯ ಮತ್ತು ತುರ್ತು ಸೇವೆಯಾಗಿದೆ. ಬೆಂಕಿ ಅವಘಡ ಸಂಭವಿಸಿದಾಗ ತಕ್ಷಣ ಸ್ಪಂದಿಸಬೇಕಾಗುತ್ತದೆ. ಹಾಗಾಗಿ ಅಭ್ಯರ್ಥಿಗಳು ದೈಹಿಕವಾಗಿ ಗಟ್ಟಿಮುಟ್ಟಾಗಿ ಇರಲೇಬೇಕು. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ (Physical Test) ಈ ಕೆಳಗಿನ ಅಳತೆಗಳು ಕಡ್ಡಾಯವಾಗಿ ಇರಬೇಕು.

  • ಎತ್ತರ (Height): ಅಭ್ಯರ್ಥಿಯು ಕನಿಷ್ಠ 168 ಸೆಂಟಿಮೀಟರ್ ಎತ್ತರ ಇರಬೇಕು.
  • ಎದೆಯ ಸುತ್ತಳತೆ (Chest): ಸಾಮಾನ್ಯ ಸ್ಥಿತಿಯಲ್ಲಿ ಎದೆ 81 ಸೆಂಟಿಮೀಟರ್ ಇರಬೇಕು. ಉಸಿರು ಎಳೆದುಕೊಂಡು ಹಿಗ್ಗಿಸಿದಾಗ (Expansion) ಅದು ಕನಿಷ್ಠ 86 ಸೆಂಟಿಮೀಟರ್ ಆಗಬೇಕು.
  • ತೂಕ (Weight): ಅಭ್ಯರ್ಥಿಯ ದೇಹದ ತೂಕ ಕನಿಷ್ಠ 50 ಕೆ.ಜಿ. ಇರಲೇಬೇಕು.

ಇದನ್ನೂ ಓದಿ: Parivartan ECSS Scholarship 2026: ಬಡ ವಿದ್ಯಾರ್ಥಿಗಳಿಗೆ ₹75,000 ಸ್ಕಾಲರ್‌ಶಿಪ್ | 1ರಿಂದ ಪಿಜಿ ವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ (Application Fee & Selection Process)

ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನಿಗದಿತ ಶುಲ್ಕ ಪಾವತಿಸಬೇಕು. ಸಾಮಾನ್ಯ ವರ್ಗ (General) ಹಾಗೂ 2A, 2B, 3A, 3B ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ 300 ರೂಪಾಯಿ ಶುಲ್ಕವಿದೆ.

ಅಭ್ಯರ್ಥಿಗಳನ್ನು ಮೂರು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ (Selection Process). ಮೊದಲಿಗೆ ಲಿಖಿತ ಪರೀಕ್ಷೆ (Written Exam) ನಡೆಯಲಿದೆ.

ಇದರಲ್ಲಿ ಪಾಸಾದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ (PST) ನಡೆಸಲಾಗುತ್ತದೆ. ಕೊನೆಯ ಹಂತದಲ್ಲಿ ಸಂದರ್ಶನ (Interview) ನಡೆಸಿ ಅರ್ಹ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ.

ಇದನ್ನೂ ಓದಿ: Sujnananidhi Scholarship 2026-27: ಸುಜ್ಞಾನನಿಧಿ ಶಿಷ್ಯವೇತನ 2026-27: ಬಡ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸಿಗಲಿದೆ ₹1,000 ಸ್ಕಾಲರ್‌ಶಿಪ್ | ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? (How to Apply Online)

ಅರ್ಜಿ ಸಲ್ಲಿಸುವ ವಿಧಾನ ತುಂಬಾ ಸುಲಭವಾಗಿದೆ. ಈ ಹಂತಗಳನ್ನು ಅನುಸರಿಸಿ ನೀವೇ ಅರ್ಜಿ ಸಲ್ಲಿಸಬಹುದು.

  • ಮೊದಲಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ (ksfes.karnataka.gov.in) ಅಥವಾ ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ.

  • ಅಲ್ಲಿರುವ ಅಧಿಸೂಚನೆಯನ್ನು (Official Notification) ಡೌನ್‌ಲೋಡ್ ಮಾಡಿ ಒಮ್ಮೆ ಪೂರ್ತಿಯಾಗಿ ಓದಿಕೊಳ್ಳಿ.

  • ಅರ್ಜಿ ತುಂಬಲು ಕೂರುವ ಮುನ್ನ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು (Email ID) ಸಿದ್ಧಪಡಿಸಿಕೊಳ್ಳಿ.

ಇದನ್ನೂ ಓದಿ: Aditya Birla Scholarship 2026: ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್‌ಶಿಪ್ 2026-27: ಹೆಣ್ಣುಮಕ್ಕಳ ಶಿಕ್ಷಣಕ್ಕೆ ₹60,000 ವರೆಗೂ ಆರ್ಥಿಕ ನೆರವು

  • ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಫೋಟೋ, ಸಹಿ, ಆಧಾರ್ ಕಾರ್ಡ್ (ID Proof), ಅಂಕಪಟ್ಟಿಗಳು ಮತ್ತು ಜಾತಿ ಪ್ರಮಾಣ ಪತ್ರದ ಸ್ಕ್ಯಾನ್ ಪ್ರತಿಗಳನ್ನು ರೆಡಿ ಇಟ್ಟುಕೊಳ್ಳಿ.

  • ಆನ್‌ಲೈನ್ ಅರ್ಜಿ ನಮೂನೆಯಲ್ಲಿ (Online Application Form) ಕೇಳಲಾದ ಎಲ್ಲಾ ವಿವರಗಳನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ.

  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ನಿಮ್ಮ ವರ್ಗಕ್ಕೆ ತಕ್ಕಂತೆ ಅರ್ಜಿ ಶುಲ್ಕ ಪಾವತಿಸಿ.

  • ಎಲ್ಲವನ್ನೂ ಒಮ್ಮೆ ಪರಿಶೀಲಿಸಿ, ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ (Submit). ಮುಂದಿನ ಬಳಕೆಗಾಗಿ ಅರ್ಜಿ ಸಂಖ್ಯೆ (Application Number) ಅಥವಾ ಸ್ವೀಕೃತಿ ಪತ್ರವನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಇದನ್ನೂ ಓದಿ: Parivartan ECSS Scholarship 2026: ಬಡ ವಿದ್ಯಾರ್ಥಿಗಳಿಗೆ ₹75,000 ಸ್ಕಾಲರ್‌ಶಿಪ್ | 1ರಿಂದ ಪಿಜಿ ವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಪ್ರಮುಖ ದಿನಾಂಕಗಳು (Important Dates)

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23 ನವೆಂಬರ್ 2026
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22 ಡಿಸೆಂಬರ್ 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 23 ಡಿಸೆಂಬರ್ 2026

ಇದನ್ನೂ ಓದಿ: Lowest Personal Loan: ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಬೇಕೇ? ಇಲ್ಲಿದೆ ಬ್ಯಾಂಕ್‌ಗಳ ಪೂರ್ಣ ಮಾಹಿತಿ…

ಪ್ರಮುಖ ಲಿಂಕುಗಳು

Free Laptop Scheme: ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ | ಉಚಿತ ಲ್ಯಾಪ್‌ಟಾಪ್ ಭಾಗ್ಯ | ಅರ್ಜಿ ಸಲ್ಲಿಸಲು ಯಾರು ಅರ್ಹರು? ಇಲ್ಲಿದೆ ಮಾಹಿತಿ

Share1Shares
error: Content is protected !!