Ration Shop New e-Voucher System: ರೇಷನ್ ಕಾರ್ಡ್‌ದಾರರಿಗೆ ಬಿಗ್ ಅಪ್ಡೇಟ್ | ಇನ್ಮುಂದೆ ಅಕ್ಕಿ ಬದಲು ಡಿಜಿಟಲ್ ವೋಚರ್ | ಕೇಂದ್ರ ಸರ್ಕಾರದ ಹೊಸ ಪ್ಲಾನ್

WhatsApp Group Join Now
Telegram Group Join Now

Ration Shop New e-Voucher System: ರೇಷನ್ ಅಂಗಡಿಗಳಲ್ಲಿ ಅಕ್ಕಿ ಬದಲು ಡಿಜಿಟಲ್ ವೋಚರ್ ಸಿಗಲಿದೆಯೇ? ಪಡಿತರ ವ್ಯವಸ್ಥೆ ಬದಲಾಯಿಸುವ ಕೇಂದ್ರ ಸರ್ಕಾರದ ಇ-ವೋಚರ್ (e-Voucher) ಪ್ಲಾನ್ ಮತ್ತು ನ್ಯಾಯಬೆಲೆ ಅಂಗಡಿಗಳ ವಿವಾದದ ಸಂಪೂರ್ಣ ಮಾಹಿತಿ ಇಲ್ಲಿದೆ…

ದೇಶಾದ್ಯಂತ ಈಗ ಒಂದು ದೊಡ್ಡ ಚರ್ಚೆ ನಡೆಯುತ್ತಿದೆ. ಇನ್ಮುಂದೆ ನ್ಯಾಯಬೆಲೆ ಅಂಗಡಿಗಳಲ್ಲಿ (Fair Price Shops) ಅಕ್ಕಿ, ಗೋಧಿ, ಸಕ್ಕರೆ ಸಿಗಲ್ವಾ? ಇದರ ಬದಲು ನೇರವಾಗಿ ಜನರ ಬ್ಯಾಂಕ್ ಖಾತೆಗೆ (Bank Account) ಸರ್ಕಾರ ಹಣ ಹಾಕುತ್ತಾ?

ಇದನ್ನೂ ಓದಿ: Karnataka Farmers Input Subsidy: ರೈತರಿಗೆ ₹5,000 ರಿಂದ ₹60,000 ವರೆಗೆ ಬೆಳೆ ಪರಿಹಾರ | ಯಾರಿಗೆ ಎಷ್ಟು ಹಣ ಸಿಗಲಿದೆ? ಸರ್ಕಾರದ ಮಹತ್ವದ ಘೋಷಣೆ

ಇಂತಹ ಹತ್ತಾರು ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿವೆ. ಇನ್ನೊಂದು ಕಡೆ, ರೇಷನ್ ಅಂಗಡಿ ಮಾಲೀಕರು (Ration Shop Owners) ಸರ್ಕಾರದ ಹೊಸ ನಿಯಮಗಳ ವಿರುದ್ಧ ದೇಶಾದ್ಯಂತ ಗಲಾಟೆ ಮಾಡುತ್ತಿದ್ದಾರೆ.

ಇದಕ್ಕೆಲ್ಲಾ ಮುಖ್ಯ ಕಾರಣ ಕೇಂದ್ರ ಸರ್ಕಾರ (Central Government) ಇತ್ತೀಚೆಗೆ ಬಿಡುಗಡೆ ಮಾಡಿರುವ ಒಂದು ‘ಕಾನ್ಸೆಪ್ಟ್ ನೋಟ್’ (Concept Note). ಬನ್ನಿ, 80 ಕೋಟಿ ಜನರ ರೇಷನ್ ವ್ಯವಸ್ಥೆಯನ್ನು ಬದಲಾಯಿಸುವ ಈ ಹೊಸ ಪ್ಲಾನ್ ಏನು ಎಂಬುದನ್ನು ಅತ್ಯಂತ ಸರಳವಾಗಿ ಅರ್ಥ ಮಾಡಿಕೊಳ್ಳೋಣ.

ಇದನ್ನೂ ಓದಿ: Lowest Personal Loan: ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಬೇಕೇ? ಇಲ್ಲಿದೆ ಬ್ಯಾಂಕ್‌ಗಳ ಪೂರ್ಣ ಮಾಹಿತಿ…

ಏನಿದು ಪ್ರಸ್ತುತ ಪಡಿತರ ವ್ಯವಸ್ಥೆ?

ಭಾರತದ ಪಡಿತರ ವಿತರಣಾ ವ್ಯವಸ್ಥೆ (PDS – Public Distribution System) ಪ್ರಪಂಚದಲ್ಲೇ ಅತಿ ದೊಡ್ಡ ಸರ್ಕಾರಿ ಆಹಾರ ವಿತರಣಾ ಜಾಲವಾಗಿದೆ. ನಮ್ಮ ದೇಶದಲ್ಲಿ ಸರಿಸುಮಾರು 80 ಕೋಟಿಗೂ ಹೆಚ್ಚು ಜನರು ಈ ವ್ಯವಸ್ಥೆಯ ಮೂಲಕ ಪ್ರತಿ ತಿಂಗಳು ರೇಷನ್ ಪಡೆಯುತ್ತಿದ್ದಾರೆ.

ಇದಕ್ಕಾಗಿ ಕೇಂದ್ರ ಸರ್ಕಾರ ಪ್ರತಿ ವರ್ಷ ಬರೋಬ್ಬರಿ 2,27,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ದೇಶಾದ್ಯಂತ ಇರುವ ಸುಮಾರು 4.78 ಲಕ್ಷ ನ್ಯಾಯಬೆಲೆ ಅಂಗಡಿಗಳು (Ration Shops) ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸುವ ಕೆಲಸ ಮಾಡುತ್ತಿವೆ. ಆದರೆ, ಈ ವ್ಯವಸ್ಥೆಯಲ್ಲಿ ಸೋರಿಕೆ ಮತ್ತು ಭ್ರಷ್ಟಾಚಾರ ಮಿತಿಮೀರಿದೆ.

ಇದನ್ನೂ ಓದಿ: District Court Jobs: 10ನೇ ತರಗತಿ ಪಾಸಾದವರಿಗೆ ನ್ಯಾಯಾಲಯದಲ್ಲಿ ಸರ್ಕಾರಿ ಉದ್ಯೋಗ | ಅರ್ಜಿ ಆಹ್ವಾನ

ಸರ್ಕಾರದ ಹೊಸ ಪ್ಲಾನ್ ಏನು? (e-Voucher System)

ಈ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕಲು ಕೇಂದ್ರ ಆಹಾರ ಸಚಿವಾಲಯ ಒಂದು ಹೊಸ ಐಡಿಯಾ ಮಾಡಿದೆ. ಜನವರಿಯಲ್ಲಿ ಬಿಡುಗಡೆಯಾದ ಕಾನ್ಸೆಪ್ಟ್ ನೋಟ್ ಪ್ರಕಾರ, ಪಡಿತರ ವ್ಯವಸ್ಥೆಯನ್ನು ಡಿಜಿಟಲೀಕರಣ (Digitalization) ಮಾಡಲು ನಿರ್ಧರಿಸಲಾಗಿದೆ.

ಇದಕ್ಕಾಗಿ ಎನ್‌ಪಿಸಿಐ (NPCI) ಅಭಿವೃದ್ಧಿಪಡಿಸಿರುವ ಇ-ವೋಚರ್ (e-Voucher) ವ್ಯವಸ್ಥೆಯನ್ನು ತರಲು ಮುಂದಾಗಿದೆ. ಅಂದರೆ, ಜನರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ನೇರವಾಗಿ ಅಕ್ಕಿ, ಗೋಧಿ ಕೊಡುವ ಮುನ್ನ ಅವರಿಗೆ ಡಿಜಿಟಲ್ ರೂಪದ ವೋಚರ್ (Digital Voucher) ನೀಡಲಾಗುತ್ತದೆ. ಇದನ್ನು ಇ-ರೂಪಿ (e-RUPI) ಅಂತಲೂ ಕರೆಯುತ್ತಾರೆ.

ಇದನ್ನೂ ಓದಿ: Udyogini Scheme Karnataka 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ, ಜೊತೆಗೆ ₹1.5 ಲಕ್ಷ ಸಹಾಯಧನ | ಉದ್ಯೋಗಿನಿ ಯೋಜನೆಗೆ ಈಗಲೇ ಅರ್ಜಿ ಹಾಕಿ

ಈ ಡಿಜಿಟಲ್ ವೋಚರ್ ಕೆಲಸ ಮಾಡುವುದು ಹೇಗೆ?

ಈ ಹೊಸ ವ್ಯವಸ್ಥೆಯಲ್ಲಿ, ಸರ್ಕಾರ ಮೊದಲು ನಿಮ್ಮ ತಿಂಗಳ ರೇಷನ್ ಕೋಟಾ (Ration Quota) ಎಷ್ಟು ಎಂದು ಲೆಕ್ಕ ಹಾಕುತ್ತದೆ. ಉದಾಹರಣೆಗೆ, ನಿಮ್ಮ ಕಾರ್ಡ್‌ಗೆ 10 ಕೆಜಿ ಅಕ್ಕಿ ಅಥವಾ 5 ಕೆಜಿ ಗೋಧಿ ಬರಬೇಕು ಎಂದು ಕ್ಯಾಲ್ಕುಲೇಟ್ ಮಾಡುತ್ತದೆ.

ನಂತರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮೂಲಕ ಒಂದು ಕರಾರುವಕ್ಕಾದ ಡಿಜಿಟಲ್ ವೋಚರ್ ಜನರೇಟ್ ಆಗುತ್ತದೆ. ಈ ವೋಚರ್ ನೇರವಾಗಿ ನಿಮ್ಮ ಆಧಾರ್ ಕಾರ್ಡ್‌ಗೆ (Aadhaar Card) ಲಿಂಕ್ ಆಗಿರುತ್ತದೆ.

WhatsApp Group Join Now
Telegram Group Join Now

ಇದನ್ನೂ ಓದಿ: Digital Personal Loan- ನಿಮಿಷಗಳಲ್ಲಿ ಸಾಲ ಬೇಕೆ? ಆಪ್‌ಗಳಲ್ಲಿ ಅಪ್ಲೈ ಮಾಡುವ ಮುನ್ನ RBI ನಿಯಮ ತಿಳಿಯಿರಿ

ನಿಮ್ಮ ಮೊಬೈಲ್‌ಗೆ ಒಂದು ಎಸ್‌ಎಂಎಸ್ (SMS) ಅಥವಾ ಕ್ಯೂಆರ್ ಕೋಡ್ (QR Code) ರೂಪದಲ್ಲಿ ಈ ವೋಚರ್ ಬರುತ್ತದೆ. ಮೇರಾ ರೇಷನ್ ಆ್ಯಪ್‌ನಲ್ಲೂ (Mera Ration App) ಈ ಕೋಡ್ ಲಭ್ಯವಿರುತ್ತದೆ. ನೀವು ಎಂದಿನಂತೆ ರೇಷನ್ ಅಂಗಡಿಗೆ ಹೋಗಿ, ಈ ಕ್ಯೂಆರ್ ಕೋಡ್ ತೋರಿಸಬೇಕು.

ಡೀಲರ್ ತಮ್ಮ ಯಂತ್ರದಲ್ಲಿ ಅದನ್ನು ಸ್ಕ್ಯಾನ್ (Scan) ಮಾಡುತ್ತಾರೆ. ಓಟಿಪಿ (OTP) ಅಥವಾ ಬಯೋಮೆಟ್ರಿಕ್ (Biometric) ಮೂಲಕ ನೀವು ಫಲಾನುಭವಿ ಹೌದೋ ಅಲ್ಲವೋ ಎಂದು ಪರಿಶೀಲನೆ (Verification) ಆದ ತಕ್ಷಣ ನಿಮಗೆ ರೇಷನ್ ನೀಡಲಾಗುತ್ತದೆ.

ಇದನ್ನೂ ಓದಿ: Gruha Lakshmi Scheme 6000 Rupees Released: ಗೃಹಲಕ್ಷ್ಮಿ ಯೋಜನೆಯ 6000 ರೂಪಾಯಿ ಹಣ ಜಮಾ | ಮೊಬೈಲ್‌ನಲ್ಲೇ ಸ್ಟೇಟಸ್ ಚೆಕ್ ಮಾಡಿ

Ration Shop New e-Voucher System
Ration Shop New e-Voucher System

ಹಣದ ಬದಲು ವೋಚರ್ ಯಾಕೆ?

ಇಲ್ಲಿ ಗಮನಿಸಬೇಕಾದ ಅತಿ ಮುಖ್ಯ ವಿಚಾರ ಎಂದರೆ, ಈ ವೋಚರ್‌ನಲ್ಲಿ ದುಡ್ಡಿನ ಮೌಲ್ಯ (Money Value) ಅಚ್ಚಾಗಿರುವುದಿಲ್ಲ. ಬದಲಾಗಿ, ’10 ಕೆಜಿ ಅಕ್ಕಿ’ ಅಥವಾ ‘5 ಕೆಜಿ ಗೋಧಿ’ ಎಂದು ಮಾತ್ರ ಬರೆದಿರುತ್ತದೆ. ಹೀಗಾಗಿ, ಈ ವೋಚರ್ ಕೊಟ್ಟು ಕೇವಲ ರೇಷನ್ ಮಾತ್ರ ಪಡೆಯಲು ಸಾಧ್ಯ.

ಇದನ್ನು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿ ನಗದು (Cash withdraw) ಮಾಡಲು ಖಂಡಿತಾ ಬರುವುದಿಲ್ಲ. ಜೊತೆಗೆ, ಇದು ಆ ನಿರ್ದಿಷ್ಟ ತಿಂಗಳಿಗೆ ಮಾತ್ರ ಸೀಮಿತವಾಗಿರುತ್ತದೆ (Validity). ನೀವು ಆ ತಿಂಗಳು ವೋಚರ್ ಬಳಸದಿದ್ದರೆ, ಅದು ತಾನಾಗಿಯೇ ಡಿ-ಆಕ್ಟಿವೇಟ್ (Deactivate) ಆಗುತ್ತದೆ. ಮುಂದಿನ ತಿಂಗಳು ಮತ್ತೆ ಹೊಸ ವೋಚರ್ ಬರುತ್ತದೆ.

ಇದನ್ನೂ ಓದಿ: KFD Recruitment 2026- ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಕರ್ನಾಟಕ ಅರಣ್ಯ ಇಲಾಖೆ ಉದ್ಯೋಗ | 750 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ ದುಡ್ಡು (Direct Cash Transfer) ಹಾಕಬಹುದಲ್ಲವೇ ಎಂಬ ಪ್ರಶ್ನೆ ಅನೇಕರಿಗೆ ಬರಬಹುದು. ಆದರೆ, ನಗದು ಹಣ ಕೊಟ್ಟರೆ ಮನೆಯಲ್ಲಿರುವ ದುಶ್ಚಟ ಇರುವವರು ಅದನ್ನು ದುರ್ಬಳಕೆ (Misuse) ಮಾಡಿಕೊಳ್ಳುವ ಅಪಾಯವಿರುತ್ತದೆ.

ಆ ಹಣದಿಂದ ಆಹಾರದ ಬದಲು ಮದ್ಯಪಾನ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ಬಡ ಕುಟುಂಬದ ಮಕ್ಕಳಿಗೆ ಊಟ ಸಿಗದೆ ಹೋಗಬಹುದು. ಆದ್ದರಿಂದಲೇ ಕೇವಲ ಆಹಾರ ಧಾನ್ಯಗಳಿಗೆ ಮಾತ್ರ ಬಳಸಬಹುದಾದ ಈ ವೋಚರ್ (e-Voucher) ತರಲಾಗುತ್ತಿದೆ.

ಇದನ್ನೂ ಓದಿ: KEA Women Supervisor Recruitment 2026: ಮಹಿಳೆಯರಿಗೆ ಸರ್ಕಾರಿ ಉದ್ಯೋಗ | ₹83,700 ಸಂಬಳ | ಮಹಿಳಾ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭ್ರಷ್ಟಾಚಾರಕ್ಕೆ ಬೀಳಲಿದೆ ಬ್ರೇಕ್ (Stopping Black Market)

ರೇಷನ್ ಅಂಗಡಿಗಳಲ್ಲಿ ನಡೆಯುವ ಕಳ್ಳಾಟವನ್ನು (Black Market) ಸಂಪೂರ್ಣವಾಗಿ ತಪ್ಪಿಸುವುದು ಸರ್ಕಾರದ ಮುಖ್ಯ ಉದ್ದೇಶ. ಕೆಲವರು ಗ್ರಾಹಕರಿಗೆ ಸೇರಬೇಕಾದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿದ್ದರು. 2022-23ರ ವರದಿ ಪ್ರಕಾರವೇ ಶೇಕಡಾ 28ರಷ್ಟು ರೇಷನ್ ವ್ಯವಸ್ಥೆಯಲ್ಲಿ ಸೋರಿಕೆಯಾಗಿ (Leakage) ಪೋಲಾಗುತ್ತಿದೆ. ಗ್ರಾಹಕರಿಗೆ ತಲುಪುತ್ತಿಲ್ಲ.

ಆದರೆ, ಈ ಡಿಜಿಟಲ್ ವೋಚರ್ ಬಂದರೆ ಪ್ರತಿಯೊಂದು ವಹಿವಾಟು ಲೈವ್ ಟ್ರ್ಯಾಕ್ (Live Tracking) ಆಗುತ್ತದೆ. ಡಿಜಿಟಲ್ ಡ್ಯಾಶ್‌ಬೋರ್ಡ್‌ನಲ್ಲಿ (Digital Dashboard) ಎಲ್ಲವೂ ದಾಖಲಾಗುತ್ತದೆ.

ಇದನ್ನೂ ಓದಿ: Karnataka Govt Employees DA Hike- ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ | ತುಟ್ಟಿಭತ್ಯೆ (DA) ಹೆಚ್ಚಳ | ಸಂಬಳ ಭರ್ಜರಿ ಏರಿಕೆ!

ಗ್ರಾಹಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಕ್ಕಿ ಪಡೆದಾಗ ಮಾತ್ರ ಡೀಲರ್‌ಗೆ ಅವರ ಕಮಿಷನ್ ಹಣ ಸೇರುತ್ತದೆ. ಇದರಿಂದ ಪಡಿತರವನ್ನು ಬೇರೆಯವರಿಗೆ ಮಾರ್ಕೆಟ್‌ನಲ್ಲಿ ಮಾರಲು ಸಾಧ್ಯವೇ ಆಗುವುದಿಲ್ಲ.

ಈಗಾಗಲೇ ಗುಜರಾತ್‌ನ ಆನಂದ್, ದಹೋಡ್ ಹಾಗೂ ಚಂಡೀಗಢದಲ್ಲಿ (Chandigarh) ಈ ವ್ಯವಸ್ಥೆಯ ಯಶಸ್ವಿ ಟೆಸ್ಟಿಂಗ್ ನಡೆದಿದೆ. ಇತ್ತೀಚೆಗೆ ಸಿಬಿಡಿಸಿ ಡಿಜಿಟಲ್ ರೂಪಿ (CBDC Digital Rupee) ಮೂಲಕವೂ ಪಡಿತರ ನೀಡುವ ಪ್ರಯೋಗ ಮಾಡಲಾಗಿದೆ.

ಇದನ್ನೂ ಓದಿ: SBI Digital Personal Loan- ಎಸ್‌ಬಿಐ ಡಿಜಿಟಲ್ ಪರ್ಸನಲ್ ಲೋನ್ | ₹35 ಲಕ್ಷದ ವರೆಗೆ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…

ರೇಷನ್ ಡೀಲರ್ಸ್ ಪ್ರತಿಭಟನೆ ಯಾಕೆ?

ನ್ಯಾಯಬೆಲೆ ಅಂಗಡಿಗಳ ಮಾಲೀಕರು (Ration Dealers) ಈ ಹೊಸ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಸರ್ಕಾರ ರೇಷನ್ ಅಂಗಡಿಗಳನ್ನು ಮುಚ್ಚಿಸುತ್ತಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ

ಆದರೆ, ಸರ್ಕಾರ ಎಲ್ಲಿಯೂ ಅಂಗಡಿಗಳನ್ನು ಮುಚ್ಚುವ ಬಗ್ಗೆ ಹೇಳಿಲ್ಲ. ಈ ವೋಚರ್ ತಂದರೆ ಕಾಳಸಂತೆಯಲ್ಲಿ ಅಕ್ಕಿ ಮಾರುವ ದಂಧೆ ನಿಂತು ಹೋಗುತ್ತದೆ ಎಂಬ ಭಯ ಕೆಲವರಿಗಿದೆ.

ಸಾವಿರಾರು ಟನ್ ಅಕ್ಕಿ ಬೇರೆ ರಾಜ್ಯಗಳಿಗೆ, ದೇಶಗಳಿಗೆ ಕಳ್ಳಸಾಗಣೆ (Smuggling) ಆಗುವುದನ್ನು ನಾವು ದಿನನಿತ್ಯ ಸುದ್ದಿಯಲ್ಲಿ ನೋಡುತ್ತೇವೆ. ತೆರಿಗೆದಾರರ (Taxpayers) ಕಷ್ಟದ ಹಣ ಹೀಗೆ ಪೋಲಾಗುವುದನ್ನು ತಪ್ಪಿಸಲು ಮತ್ತು ಬಡವರಿಗೆ ಸರಿಯಾಗಿ ಅನ್ನ ತಲುಪಲು ಈ ಡಿಜಿಟಲ್ ವ್ಯವಸ್ಥೆ (Digital System) ಆದಷ್ಟು ಬೇಗ ದೇಶಾದ್ಯಂತ ಜಾರಿಗೆ ಬರುವುದು ಅತ್ಯಗತ್ಯವಾಗಿದೆ.

Karnataka Farmers Input Subsidy: ರೈತರಿಗೆ ₹5,000 ರಿಂದ ₹60,000 ವರೆಗೆ ಬೆಳೆ ಪರಿಹಾರ | ಯಾರಿಗೆ ಎಷ್ಟು ಹಣ ಸಿಗಲಿದೆ? ಸರ್ಕಾರದ ಮಹತ್ವದ ಘೋಷಣೆ

Share0Shares
error: Content is protected !!