Gruha Lakshmi New Guidelines: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮರುಪರಿಶೀಲನೆಗೆ ಹೊಸ ಮಾರ್ಗಸೂಚಿ ಸಿದ್ಧ. ಪತಿ ಆಧಾರ್, ಬ್ಯಾಂಕ್ ಖಾತೆ, ರೇಷನ್ ಕಾರ್ಡ್, ಫೇಶಿಯಲ್ ದೃಢೀಕರಣ ಸೇರಿದಂತೆ 17 ಅಂಶಗಳ ಪರಿಶೀಲನೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಫಲಾನುಭವಿಗಳ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಲು ಸರ್ಕಾರ ಮುಂದಾಗಿದೆ. ನೈಜ ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಸೌಲಭ್ಯ ಮುಂದುವರಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ.
ಈ ಹೊಸ ಪರಿಶೀಲನಾ ಪ್ರಕ್ರಿಯೆಯಲ್ಲಿ ಮನೆಯ ಯಜಮಾನಿಯ ಆಧಾರ್ ಮಾತ್ರವಲ್ಲದೆ, ಪತಿಯ ಆಧಾರ್ ವಿವರವನ್ನು ಕೂಡ ಪರಿಶೀಲಿಸಲಾಗುತ್ತದೆ. ಜೊತೆಗೆ ಫಲಾನುಭವಿಯ ಹೆಸರು ಮತ್ತು ವಿಳಾಸ ಆಧಾರ್ ದಾಖಲೆಯಲ್ಲಿರುವ ಮಾಹಿತಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತದೆ. ಬ್ಯಾಂಕ್ ಖಾತೆಯ ವಿವರಗಳಿಗೂ ಹೆಚ್ಚಿನ ಮಹತ್ವ ನೀಡಲಾಗಿದೆ.
ಇದನ್ನೂ ಓದಿ: Udyogini Scheme 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ | ₹2 ಲಕ್ಷ ಸಾಲ ಮನ್ನಾ | ಅಕ್ಟೋಬರ್ 31 ಕೊನೆಯ ದಿನ
ಮನೆಮನೆಗೆ ಬರಲಿದ್ದಾರೆ ಗಣತಿದಾರರು
ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆ (Re-verification) ಕೇವಲ ಕಚೇರಿಗೆ ಹೋಗಿ ದಾಖಲೆ ಸಲ್ಲಿಸುವ ರೀತಿಯಲ್ಲಿ ಇರುವುದಿಲ್ಲ. ಗಣತಿದಾರರು ಮನೆಮನೆಗೆ ಭೇಟಿ ನೀಡಿ ಫಲಾನುಭವಿಗಳ ಮಾಹಿತಿ ಸಂಗ್ರಹಿಸಲಿದ್ದಾರೆ.
ಈ ವೇಳೆ ಆಧಾರ್, ಪಡಿತರ ಚೀಟಿ (Ration Card), ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ. ಫಲಾನುಭವಿಯ ಬಯೋಮೆಟ್ರಿಕ್ ಅಥವಾ ಫೇಶಿಯಲ್ ದೃಢೀಕರಣ (Facial Authentication) ಕೂಡ ಪ್ರಕ್ರಿಯೆಯ ಪ್ರಮುಖ ಭಾಗವಾಗಲಿದೆ.
ಇದನ್ನೂ ಓದಿ: Free Sewing Machine: ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ಸೆಪ್ಟೆಂಬರ್ 30 ಕೊನೆಯ ದಿನ
17 ಪ್ರಶ್ನೆಗಳ ಹೊಸ ಅರ್ಜಿ
ಮರುಪರಿಶೀಲನೆಗಾಗಿ 17 ಪ್ರಶ್ನೆಗಳನ್ನು ಒಳಗೊಂಡ ಹೊಸ ಅರ್ಜಿ ಸಿದ್ಧಪಡಿಸಲಾಗಿದೆ ಎಂದು ವರದಿಯಾಗಿದೆ. ಇದರಲ್ಲಿ ಫಲಾನುಭವಿಯ ಆಧಾರ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳನ್ನು ಕೇಳಲಾಗುತ್ತದೆ.
ಅಷ್ಟೇ ಅಲ್ಲದೆ ಫಲಾನುಭವಿಯ ಉದ್ಯೋಗ, ಪತಿಯ ಹೆಸರು ಮತ್ತು ಆಧಾರ್ ಸಂಖ್ಯೆ, ಆದಾಯ ತೆರಿಗೆ ಪಾವತಿ ಮಾಡುತ್ತಾರೆಯೇ, ಸರ್ಕಾರಿ ಉದ್ಯೋಗದಲ್ಲಿದ್ದಾರೆಯೇ ಅಥವಾ ಸರ್ಕಾರಿ ಪಿಂಚಣಿ ಪಡೆಯುತ್ತಾರೆಯೇ ಎಂಬ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ.
ಇದನ್ನೂ ಓದಿ: Karnataka Rain Yellow Alert: ವಾಯುಭಾರ ಕುಸಿತ: 16 ಜಿಲ್ಲೆಗಳಲ್ಲಿ ಭರ್ಜರಿ ಮಳೆ | ಯೆಲ್ಲೊ ಅಲರ್ಟ್

ಬ್ಯಾಂಕ್ ಖಾತೆಯ ವಿಚಾರದಲ್ಲೂ ಪರಿಶೀಲನೆ
ಹೊಸ ಮಾರ್ಗಸೂಚಿಯಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆಯ ಮಾಹಿತಿಗೂ ಒತ್ತು ನೀಡಲಾಗಿದೆ. ಖಾತೆ ಆಧಾರ್‌ಗೆ ಲಿಂಕ್ ಆಗಿದೆಯೇ, ಖಾತೆಯ ವಿವರ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.
ಇದರ ಜೊತೆಗೆ ಸಾಲವಿಲ್ಲದ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ಅಂಶವೂ ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ. ಫಲಾನುಭವಿಯ ಹೆಸರು ಮತ್ತು ವಿಳಾಸ ಆಧಾರ್ ಕಾರ್ಡ್’ನಲ್ಲಿರುವ ಮಾಹಿತಿಗೆ ಹೊಂದಿಕೆಯಾಗುವಂತಿರಬೇಕು.
ಪತಿಯ ಆಧಾರ್ ಏಕೆ ಬೇಕು?
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಕುಟುಂಬದ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸುವ ಉದ್ದೇಶದಿಂದ ಪತಿಯ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ. ಪತಿಯ ಆದಾಯ ತೆರಿಗೆ ಪಾವತಿ, ಸರ್ಕಾರಿ ಉದ್ಯೋಗ ಅಥವಾ ಪಿಂಚಣಿ ಸೇರಿದಂತೆ ಕೆಲವು ಅರ್ಹತಾ ಅಂಶಗಳನ್ನು ಕೂಡ ಪರಿಶೀಲನಾ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಪ್ರಕ್ರಿಯೆಯಲ್ಲೂ ಪತಿಯ ಆಧಾರ್ ವಿವರವನ್ನು ಕೇಳಲಾಗುತ್ತಿತ್ತು.
ಎಸ್‌ಐಆರ್ ಬಳಿಕ ಮರುಪರಿಶೀಲನೆ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR – Special Intensive Revision) ಪ್ರಕ್ರಿಯೆ ಪೂರ್ಣಗೊಂಡು ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆಗೆ ಚಾಲನೆ ನೀಡುವ ಉದ್ದೇಶವಿದೆ ಎಂದು ವರದಿಯಾಗಿದೆ. ಆದರೆ ಅಂತಿಮವಾಗಿ ಪ್ರಕ್ರಿಯೆ ಯಾವ ದಿನದಿಂದ ಆರಂಭವಾಗಲಿದೆ ಎಂಬುದು ಸರ್ಕಾರದ ಅನುಮೋದನೆ ಮತ್ತು ಅಧಿಕೃತ ಸೂಚನೆಗೆ ಒಳಪಟ್ಟಿರುತ್ತದೆ.
ಈ ಪರಿಶೀಲನೆಯ ಮುಖ್ಯ ಉದ್ದೇಶ ಯೋಜನೆಯಲ್ಲಿರುವ ಮೃತರು, ಸ್ಥಳಾಂತರಗೊಂಡವರು, ನಕಲಿ ಅಥವಾ ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಅರ್ಹ ಮಹಿಳೆಯರಿಗೆ ಮಾತ್ರ ಪ್ರತಿ ತಿಂಗಳ ಆರ್ಥಿಕ ನೆರವು ತಲುಪುವಂತೆ ಮಾಡುವುದು ಎಂದು ಸರ್ಕಾರದ ಕ್ರಮಕ್ಕೆ ಸಂಬAಧಿಸಿದ ವರದಿಗಳು ತಿಳಿಸಿವೆ.
ಇದನ್ನೂ ಓದಿ: PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…
ಈ ದಾಖಲೆಗಳನ್ನು ರೆಡಿ ಮಾಡಿಟ್ಟುಕೊಳ್ಳಿ
ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಮ್ಮ ಆಧಾರ್, ಪತಿಯ ಆಧಾರ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಮೊಬೈಲ್ ಸಂಖ್ಯೆ ಮತ್ತು ಇತರ ಅಗತ್ಯ ದಾಖಲೆಗಳಲ್ಲಿನ ಮಾಹಿತಿಯನ್ನು ಮುಂಚಿತವಾಗಿಯೇ ಪರಿಶೀಲಿಸಿಕೊಂಡಿರುವುದು ಒಳಿತು. ಹೆಸರು ಅಥವಾ ವಿಳಾಸದಲ್ಲಿ ವ್ಯತ್ಯಾಸವಿದ್ದರೆ, ಮರುಪರಿಶೀಲನೆ ಸಂದರ್ಭದಲ್ಲಿ ಸಮಸ್ಯೆಯಾಗದಂತೆ ಸಂಬಂಧಪಟ್ಟ ದಾಖಲೆಗಳನ್ನು ಸರಿಪಡಿಸಿಕೊಳ್ಳುವುದು ಸಹಾಯಕವಾಗಬಹುದು.
ಸೂಚನೆ: ಪತಿ ಆಧಾರ್ ಲಿಂಕ್ ಸೇರಿದಂತೆ ಮೇಲಿನ ಅಂಶಗಳು ಹೊಸ ಮರುಪರಿಶೀಲನಾ ಮಾರ್ಗಸೂಚಿಗಳ ಕುರಿತು ಪ್ರಕಟವಾಗಿರುವ ವರದಿಗಳ ಆಧಾರಿತವಾಗಿವೆ; ಫಲಾನುಭವಿಗಳ ಮೇಲೆ ಅಂತಿಮವಾಗಿ ಅನ್ವಯಿಸುವ ನಿಯಮಗಳು ಸರ್ಕಾರದ ಅಧಿಕೃತ ಆದೇಶ/ಅನುಮೋದನೆಯ ಪ್ರಕಾರ ಬದಲಾಗಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.