SIR Status Check By SMS: ಎಸ್‌ಐಆರ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಜಸ್ಟ್ ಒಂದು ಎಸ್‌ಎಂಎಸ್ ಮೂಲಕ ಚೆಕ್ ಮಾಡಿ!

Spread the love

WhatsApp Group Join Now
Telegram Group Join Now

SIR Status Check By SMS: ಎಸ್‌ಐಆರ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಎಸ್ಸೆಮ್ಮೆಸ್ ಮೂಲಕ ನಿಮ್ಮ ಎಸ್‌ಐಆರ್ ನೋಂದಣಿ ಸ್ಥಿತಿಯನ್ನು ಕ್ಷಣಾರ್ಧದಲ್ಲಿ ಪರಿಶೀಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಸದ್ಯ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳನ್ನು ಮಾಡಿಸುತ್ತಿದ್ದಾರೆ. ಆದರೆ, ನಿಮ್ಮ ಎಸ್‌ಐಆರ್ (SIR) ನೋಂದಣಿ ಯಶಸ್ವಿಯಾಗಿದೆಯೇ? ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ? ಎಂಬ ಪ್ರಶ್ನೆ ಹಲವರಲ್ಲಿ ಇದೆ.

ಇದಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾದ ಅಗತ್ಯವಿಲ್ಲ. ಇಂಟರ್ನೆಟ್ (Internet) ಇಲ್ಲದಿದ್ದರೂ ಸಹ, ಕೇವಲ ಒಂದು ಎಸ್‌ಎಂಎಸ್ (SMS) ಕಳುಹಿಸುವ ಮೂಲಕ ನಿಮ್ಮ ನೋಂದಣಿಯ ಸ್ಥಿತಿಯನ್ನು (Status) ಕೆಲವೇ ಕ್ಷಣಗಳಲ್ಲಿ ತಿಳಿದುಕೊಳ್ಳಬಹುದು. ಜೊತೆಗೆ, ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ (Website) ಮೂಲಕವೂ ಪರಿಶೀಲಿಸುವ ಅವಕಾಶವಿದೆ.

ಇದನ್ನೂ ಓದಿ: Intense Pushya rain: ಕರ್ನಾಟಕದಲ್ಲಿ ಪುಷ್ಯ ಮಳೆ ಅಬ್ಬರ: ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ

SMS ಮೂಲಕ SIR ಸ್ಥಿತಿ ಪರಿಶೀಲಿಸುವುದು ಹೇಗೆ?

ನಿಮ್ಮ ಮೊಬೈಲ್‌ನಲ್ಲಿ Messages ತೆರೆಯಿರಿ ಮತ್ತು 1950 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಿ. ಮೆಸೇಜ್‌ನಲ್ಲಿ ಈ ರೀತಿಯಾಗಿ ಟೈಪ್ ಮಾಡಿ:

EPIC <space> ನಿಮ್ಮ EPIC ಸಂಖ್ಯೆ

ಉದಾಹರಣೆ: EPIC ABC1234567

ಎಸ್‌ಎಂಎಸ್ ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ಚುನಾವಣಾ ಆಯೋಗದಿಂದ ಉತ್ತರ ಸಂದೇಶ ಬರುತ್ತದೆ.

ಇದನ್ನೂ ಓದಿ: Karnataka Drought Declaration: ರಾಜ್ಯದಲ್ಲಿ ಬರ ಘೋಷಣೆ ಫಿಕ್ಸ್! ಯಾವ ರೈತರಿಗೆ ಎಷ್ಟು ಪರಿಹಾರ ಸಿಗಲಿದೆ? ಸರ್ಕಾರದ ಕ್ರಮಗಳ ಸಂಪೂರ್ಣ ಮಾಹಿತಿ

ಯಾವ ರೀತಿಯ ಸಂದೇಶ ಬಂದರೆ ಏನು ಅರ್ಥ?

  • ನಿಮ್ಮ ಹೆಸರು, ಕ್ಷೇತ್ರದ ಹೆಸರು ಹಾಗೂ ಸೀರಿಯಲ್ ಸಂಖ್ಯೆ ಬಂದರೆ ನಿಮ್ಮ ಎಸ್‌ಐಆರ್ (SIR) ನೋಂದಣಿ ಯಶಸ್ವಿಯಾಗಿದೆ ಎಂದು ಅರ್ಥ.
  • “In Process” ಎಂಬ ಸಂದೇಶ ಬಂದರೆ, ನಿಮ್ಮ ಅರ್ಜಿ ಸಲ್ಲಿಕೆಯಾಗಿದ್ದು ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಅರ್ಥ.

ಇದನ್ನೂ ಓದಿ: e-Swathu New Committee: ಇ-ಸ್ವತ್ತು ಪಡೆಯುವುದು ಇನ್ನು ಸುಲಭ! ಸರ್ಕಾರದಿಂದ ಮಹತ್ವದ ನಿರ್ಧಾರ

SIR Status Check By SMS
SIR Status Check By SMS

ಎಸ್‌ಎಂಎಸ್ ಬರದಿದ್ದರೆ ಏನು ಮಾಡಬೇಕು?

ಎಸ್‌ಎಂಎಸ್ ತಕ್ಷಣ ಬರಲಿಲ್ಲ ಎಂದರೆ ನೋಂದಣಿ ಆಗಿಲ್ಲ ಎಂದು ಆತಂಕಪಡುವ ಅಗತ್ಯವಿಲ್ಲ. ಈ ವಿಷಯಗಳನ್ನು ಒಮ್ಮೆ ಪರಿಶೀಲಿಸಿ:

  • EPIC ಸಂಖ್ಯೆಯನ್ನು ಸರಿಯಾಗಿ ನಮೂದಿಸಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಮೊಬೈಲ್ ನೆಟ್‌ವರ್ಕ್ (Network) ಸಮಸ್ಯೆಯಿಂದ ಸಂದೇಶ ತಡವಾಗಿರಬಹುದು.
  • ಇನ್ನೂ ಮಾಹಿತಿ ಸಿಗದಿದ್ದರೆ ನಿಮ್ಮ ವ್ಯಾಪ್ತಿಯ ಬಿಎಲ್‌ಒ (BLO) ಅಥವಾ ಚುನಾವಣಾಧಿಕಾರಿಯನ್ನು ಸಂಪರ್ಕಿಸಿ.

ಇದನ್ನೂ ಓದಿ: HRA Hike: ಸರ್ಕಾರಿ ನೌಕರರಿಗೆ ಶುಭಸುದ್ದಿ: ಸಂಬಳದ ಜೊತೆಗೆ ಮನೆ ಬಾಡಿಗೆ ಭತ್ಯೆ ಭಾರೀ ಏರಿಕೆ | ಇಲ್ಲಿದೆ ಸಂಪೂರ್ಣ ಮಾಹಿತಿ…

ವೆಬ್‌ಸೈಟ್  ಮೂಲಕ ಎಸ್‌ಐಆರ್ (SIR) ಸ್ಥಿತಿ ಪರಿಶೀಲಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಪರಿಶೀಲಿಸಲು ಈ ಸರಳ ಹಂತಗಳನ್ನು ಅನುಸರಿಸಿ.

ಹಂತ 1: ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ voters.eci.gov.in ಗೆ  ಭೇಟಿ ನೀಡಿ. ಮುಖಪುಟದಲ್ಲಿರುವ Fill Enumeration Form ಆಯ್ಕೆಯನ್ನು ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ಇದನ್ನೂ ಓದಿ: Voter ID SIR Status: ಮತದಾರರೇ ಗಮನಿಸಿ | ನಿಮ್ಮ SIR ಯಶಸ್ವಿಯಾಗಿದೆಯೇ? ಮೊಬೈಲ್‌ನಲ್ಲಿಯೇ ನಿಮ್ಮ SIR ಸ್ಟೇಟಸ್ ಚೆಕ್ ಮಾಡಿ..

ಹಂತ 2: ಹೊಸ ಬಳಕೆದಾರರಾಗಿದ್ದರೆ Sign Up ಮೂಲಕ ಮೊಬೈಲ್ ಸಂಖ್ಯೆ, ಇಮೇಲ್ ಹಾಗೂ ಕ್ಯಾಪ್‌ಚಾ (Captcha) ನಮೂದಿಸಿ ಖಾತೆ ತೆರÉಯಿರಿ.

ಹಂತ 3: ಈಗಾಗಲೇ ಖಾತೆ ಇದ್ದರೆ ಮೊಬೈಲ್ ಸಂಖ್ಯೆ, ಪಾಸ್‌ವರ್ಡ್ ಅಥವಾ OTP ಬಳಸಿ ಲಾಗಿನ್ ಮಾಡಿ. ಮತ್ತೆ Fill Enumeration Form ಆಯ್ಕೆಗೆ  ಹೋಗಿ.

ಹಂತ 4: ನಿಮ್ಮ EPIC (Voter ID) ಸಂಖ್ಯೆಯನ್ನು ನಮೂದಿಸಿ Search ಮಾಡಿದರೆ, ನಿಮ್ಮ ಎಸ್‌ಐಆರ್ ಅರ್ಜಿಯ ಸಂಪೂರ್ಣ ಸ್ಟೇಟಸ್ ಪರದೆಯ ಮೇಲೆ ಕಾಣಿಸುತ್ತದೆ.

ಇದನ್ನೂ ಓದಿ: SIR Form Fill Online: ಮೊಬೈಲ್‌ನಲ್ಲೇ SIR ಫಾರ್ಮ್ ಭರ್ತಿ ಮಾಡುವುದು ಹೇಗೆ? ಹಂತ ಹಂತವಾಗಿ ಸಂಪೂರ್ಣ ಮಾಹಿತಿ

ನಿಮ್ಮ ಬಿಎಲ್‌ಒ ಮಾಹಿತಿ ತಿಳಿಯುವುದು ಹೇಗೆ?

ಯಾವುದೇ ಅನುಮಾನಗಳಿದ್ದರೆ ಅಥವಾ ಅರ್ಜಿಯ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ನಿಮ್ಮ ಪ್ರದೇಶದ ಬಿಎಲ್‌ಒ (Booth Level Officer – BLO) ಅವರನ್ನು ನೇರವಾಗಿ ಸಂಪರ್ಕಿಸಬಹುದು.

ಅದಕ್ಕಾಗಿ: ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ Know Your BLO ಆಯ್ಕೆಯನ್ನು ತೆರೆಯಿರಿ. ನಿಮ್ಮ EPIC ಸಂಖ್ಯೆ ಮತ್ತು Captcha ನಮೂದಿಸಿ.

ಇದನ್ನೂ ಓದಿ: Crop Insurance Compensation: ರೈತರಿಗೆ ಸಿಹಿ ಸುದ್ದಿ: 55,326 ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ | ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿ…

ನಂತರ ನಿಮ್ಮ ವ್ಯಾಪ್ತಿಯ ಬಿಎಲ್‌ಒ ಹೆಸರು ಹಾಗೂ ಮೊಬೈಲ್ ಸಂಖ್ಯೆ ಪರದೆಯ ಮೇಲೆ ಕಾಣಿಸುತ್ತದೆ. ಅವರಿಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದು.

ಒಟ್ಟಾರೆ, ಎಸ್‌ಐಆರ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ತಿಳಿದುಕೊಳ್ಳುವುದು ಈಗ ತುಂಬಾ ಸುಲಭವಾಗಿದೆ. ಕೇವಲ ಒಂದು ಎಸ್‌ಎಂಎಸ್ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಕೆಲವೇ ನಿಮಿಷಗಳಲ್ಲಿ ನಿಮ್ಮ ನೋಂದಣಿಯ ಸ್ಥಿತಿಯನ್ನು ಪರಿಶೀಲಿಸಿ, ಯಾವುದೇ ಸಮಸ್ಯೆಯಿದ್ದರೆ ತಕ್ಷಣವೇ ಸರಿಪಡಿಸಿಕೊಳ್ಳಬಹುದು.

Gruhalakshmi Biometric: ಗೃಹಲಕ್ಷ್ಮಿ ಹಣ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ | ಸಚಿವ ಸಂಪುಟದ ಮಹತ್ವದ ನಿರ್ಧಾರ


Spread the love
error: Content is protected !!