SSLC ಅಭ್ಯರ್ಥಿಗಳಿಂದ ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ | 215 ಹುದ್ದೆಗಳು Bagalkot Cooperative Bank Recruitment 2024

Spread the love

Bagalkot Cooperative Bank Recruitment 2024 : ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದಲ್ಲಿ 200ಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕಿರಿಯ ಸಹಾಯಕರು ಹಾಗೂ ಜವಾನ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದ್ದು ಅಭ್ಯರ್ಥಿಗಳು ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು, ವಯೋಮಿತಿ ಅರ್ಹತೆಗಳು, ಆಯ್ಕೆಯಾಗುವವರಿಗೆ ಸಿಗುವ ಸಂಬಳ ಹಾಗೂ ಇತರೆ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಸರಕಾರಿ ನೌಕರರ ಸಂಬಳ ಏರಿಕೆ ಸದ್ಯಕ್ಕೆ ಅಸಾಧ್ಯ | ಆರ್ಥಿಕ ಇಲಾಖೆ ಸ್ಪಷ್ಟನೆ Govt employees Salary hike impossible for now

ನೇಮಕಾತಿ ಸಂಕ್ಷಿಪ್ತ ವಿವರ
  • ನೇಮಕಾತಿ ಇಲಾಖೆ : ಬಾಪೂಜಿ ಪತ್ತಿನ ಸವಾರ್ಥ ಸಹಕಾರಿ ಸಂಘ ನಿಯಮಿತ ಬಾಗಲಕೋಟೆ
  • ಹುದ್ದೆಗಳ ಸಂಖ್ಯೆ : 215 ಹುದ್ದೆಗಳು
  • ಉದ್ಯೋಗ ಸ್ಥಳ : ಬಾಗಲಕೋಟೆ
  • ಅರ್ಜಿ ಸಲ್ಲಿಕೆ : ಆಫ್‌ಲೈನ್ ಮುಖಾಂತರ
ಸಹಕಾರಿ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳ ವಿವರ

ಒಟ್ಟು 215 ಹುದ್ದೆಗಳಿಗೆ ಈ ಒಂದು ನೇಮಕಾತಿ ನಡೆಯುತ್ತಿದ್ದು ಹುದ್ದೆಗಳ ವಿಂಗಡಣೆಯು ಈ ಕೆಳಗಿನಂತಿದೆ:

  • ಕಿರಿಯ ಸಹಾಯಕರು ಹುದ್ದೆಗಳು : 150
  • ಸಿಪಾಯಿ ಹುದ್ದೆಗಳು : 65
Bagalkot Cooperative Bank Recruitment 2024

10,000 ಸರಕಾರಿ ಶಾಲೆ ಶಿಕ್ಷಕರ ನೇಮಕಾತಿ | ಶೀಘ್ರದಲ್ಲಿಯೇ ಅರ್ಜಿ ಆಹ್ವಾನ Karnataka Govt School Teacher Recruitment 2024

ಹುದ್ದೆಗಳಿಗೆ ಅನುಗುಣವಾಗಿ ನಿಗದಿಪಡಿಸಿದ ವಿದ್ಯಾರ್ಹತೆ

ಕಿರಿಯ ಸಹಾಯಕರು (Junior Assistant) : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಮುಗಿಸಿರಬೇಕು. ಪದವಿ ಶಿಕ್ಷಣದೊಂದಿಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ಸಿಪಾಯಿ (Peon) : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿ೦ದ 10ನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು.

SSLC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಜವಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Haveri District Court Recruitment 2024

ವಯೋಮಿತಿ ಅರ್ಹತೆಗಳು

ಸಹಕಾರಿ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇಮಕಾತಿ ನಿಗಮವು ನಿಗದಿಪಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷದ ಮಿತಿಯಲ್ಲಿರಬೇಕು. ಮೀಸಲಾತಿ ವರ್ಗಗಳ ಅಡಿಯಲ್ಲಿ ಬರುವವರಿಗೆ ನೇಮಕಾತಿ ನಿಯಮಗಳಿಗೆ ಅನುಗುಣವಾಗಿ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

  • ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ವರ್ಗದ ಅಭ್ಯರ್ಥಿಗಳಿಗೆ 5 ವರ್ಷಾಗಳ ವಯೋಮಿತಿ ಸಡಿಲಿಕೆ ಇರಲಿದೆ.

PUC, 7th ಪಾಸಾದವರಿಗೆ ಗ್ರಾಮ ಪಂಚಾಯತಿ ಹುದ್ದೆಗಳ ನೇಮಕ | ನಿಮ್ಮೂರ ಪಂಚಾಯ್ತಿಯಲ್ಲೇ ಕೆಲಸ | ಖಾಲಿ ಹುದ್ದೆಗಳ ವಿವರ ಇಲ್ಲಿದೆ… Gram Panchayat Recruitment 2024

ನೇಮಕವಾಗುವ ಅಭ್ಯರ್ಥಿಗಳಿಗೆ ಸಿಗುವ ವೇತನ ಶ್ರೇಣಿ
  • ಕಿರಿಯ ಸಹಾಯಕ ಹುದ್ದೆಗಳಿಗೆ ಆಯ್ಕೆಯಾಗುವವರಿಗೆ ಮಾಸಿಕ 25,248 ರೂಪಾಯಿ ಸಿಗಲಿದೆ.
  • ಸಿಪಾಯಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 18,060 ರೂಪಾಯಿ ಸಿಗಲಿದೆ.
Bagalkot Cooperative Bank Recruitment 2024
ಅರ್ಜಿ ಸಲ್ಲಿಸುವ ವಿಧಾನ

ಮೇಲ್ಕಾಣಿಸಿದ ಸಂಪೂರ್ಣ ಅರ್ಹತೆಗಳನ್ನು ಒಳಗೊಂಡ ಅಭ್ಯರ್ಥಿಗಳು ಕೆಳಗಿನ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದುಕೊಂಡು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡುವುದರ ಮುಖಾಂತರ ಅರ್ಜಿ ಸಲ್ಲಿಸಬಹುದು.

ವಿಳಾಸ : ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ
ಸೆಕ್ಟರ್ ನಂ – 25, ಪ್ಲೇಟ್ ನಂ 52-55
10ನೇ ಮುಖ್ಯ ರಸ್ತೆ, ನವನಗರ, ಬಾಗಲಕೋಟ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ :
    03-07-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
    03-08-2024

PUC, SSLC ಪಾಸಾದವರಿಗೆ ಸರ್ಕಾರಿ LKG-UKG ಶಾಲೆ ಶಿಕ್ಷಕರು ಮತ್ತು ಆಯಾ ಹುದ್ದೆಗಳ ನೇಮಕಾತಿ | ಖಾಲಿ ಹುದ್ದೆಗಳ ಜಿಲ್ಲಾವಾರು ಪಟ್ಟಿ ಇಲ್ಲಿದೆ… Govt LKG UKG Teachers Recruitment 2024


Spread the love
WhatsApp Group Join Now
Telegram Group Join Now

Leave a Comment

error: Content is protected !!