ಜುಲೈ ತಿಂಗಳಲ್ಲಿ ಭರ್ಜರಿ ಮಳೆ | ಹವಾಮಾನ ಇಲಾಖೆ ವರದಿ ಬಿಡುಗಡೆ Heavy rain in the month of July 2024

Spread the love

Heavy rain in the month of July 2024 : ಈ ವ಼ರ್ಷದ ಮುಂಗಾರು ಮಳೆ ಕಳೆದ ವರ್ಷದ ‘ಬರಗಾಲ’ದ ಸಂಕಷ್ಟವನ್ನು ಮರೆಸಿ ಭರ್ಜರಿಯಾಗಿ ಸುರಿಯಲಿದೆ ಎಂಬ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ (Indian Meteorological Department) ಈ ಹಿಂದೆಯೇ ಹೇಳಿತ್ತು. ಆದರೆ ಮುಂಗಾರು ಆರಂಭದ ಮೊದಲು ತಿಂಗಳು ಜೂನ್’ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೇ ರೈತರಲ್ಲಿ ಆತಂಕ ಉಂಟು ಮಾಡಿದೆ.

WhatsApp Group Join Now
Telegram Group Join Now

ಜೂನ್’ನಲ್ಲಿ ವಾಡಿಕೆಯಂತೆ 165.3 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 147.2 ಮಿ.ಮೀ. ಮಾತ್ರ ಮಳೆಯಾಗಿದೆ. ಅಂದರೆ ವಾಡಕೆಗಿಂತ ಶೇ.11ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಮಳೆ ನೆಚ್ಚಿಕೊಂಡು ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಇದೀಗ ಜುಲೈ ತಿಂಗಳ ಮಳೆ ಮಾಹಿತಿಯನ್ನು ಹವಾಮಾನ ಇಲಾಖೆ ಬಿಡುಗಡೆ ಮಾಡಿದ್ದು; ಈ ತಿಂಗಳು ಮಳೆ ಹೇಗಿದೆ ಎಂಬುವುದನ್ನು ಇಲ್ಲಿ ನೋಡೋಣ…

7ನೇ ವೇತನ ಆಯೋಗ ಜಾರಿ | ಜುಲೈ 4ಕ್ಕೆ ಸರಕಾರಿ ನೌಕರರಿಗೆ ಸಿಹಿಸುದ್ದಿ karnataka 7th Vetana Ayoga

ಜುಲೈ ತಿಂಗಳಲ್ಲಿ ಭಾರೀ ಮಳೆ

ಕಳೆದ ಜುಲೈ 1ರಂದು ಭಾರತೀಯ ಹವಾಮಾನ ಇಲಾಖೆ ವರ್ಚುವಲ್ ಸುದ್ದಿಗೋಷ್ಠಿ ನಡೆಸಿ, ಜುಲೈ ತಿಂಗಳಲ್ಲಿ ದೇಶದ್ಯಂತ ಸುರಿಯಲಿರುವ ಮಳೆ ಪ್ರಮಾಣದ ಅಂದಾಜು ಮಾಹಿತಿ ಬಿಡುಗಡೆ ಮಾಡಿದೆ. ಜುಲೈ’ನಲ್ಲಿ ಭಾರತದ ಈಶಾನ್ಯ ರಾಜ್ಯಗಳು ಹಾಗೂ ಪೂರ್ವ ಭಾರತದ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್’ನ ಕೆಲವು ಭಾಗಗಳನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲೂ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯಲಿದೆ ಎಂಬ ಮಾಹಿತಿ ನೀಡಿದೆ.

ಜುಲೈನಲ್ಲಿ ಮಳೆಯ ದೀರ್ಘಾವಧಿ ಸರಾಸರಿ 28.04 ಸೆಂ.ಮೀ. ಇದ್ದು; ದೇಶದಲ್ಲಿನ ಸರಾಸರಿ ಮಳೆ ಸಾಮಾನ್ಯಕ್ಕಿಂತ ಶೇ.106 ರಷ್ಟು ಹೆಚ್ಚಾಗಲಿದೆ ಎಂದು ಐಎಂಡಿ ಮುಖ್ಯಸ್ಥ ಮೃತ್ಯುಂಜಯ್ ಮಹಾಪಾತ್ರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೂನ್‌ನಲ್ಲಿ ಮಳೆ ಕೊರತೆಯಾಗಿದ್ದರೆ, ಜುಲೈಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

Heavy rain in the month of July 2024

PUC, 7th ಪಾಸಾದವರಿಗೆ ಗ್ರಾಮ ಪಂಚಾಯತಿ ಹುದ್ದೆಗಳ ನೇಮಕ | ನಿಮ್ಮೂರ ಪಂಚಾಯ್ತಿಯಲ್ಲೇ ಕೆಲಸ | ಖಾಲಿ ಹುದ್ದೆಗಳ ವಿವರ ಇಲ್ಲಿದೆ… Gram Panchayat Recruitment 2024

ಕರ್ನಾಟಕದಲ್ಲೂ ಭರ್ಜರಿ ಮಳೆ

ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಮಳೆ ಕೊರತೆಯಿಂದ ಆತಂಕಕ್ಕೆ ಒಳಗಾಗಿರುವ ರೈತರ ಮುಖದಲ್ಲಿ ಮಂದಾಹಾಸ ಮೂಡುವಂತೆ ಜುಲೈ ತಿಂಗಳು ಸಮೃದ್ಧ ಮಳೆಯಾಗಲಿದೆ. ಈ ತಿಂಗಳಲ್ಲಿ ಕರ್ನಾಟಕ, ಒಡಿಶಾ, ಹರಿಯಾಣ, ಉತ್ತರ ಪ್ರದೇಶ, ಛತ್ತೀಸ್‌ಗಢ ಮತ್ತು ಜಾರ್ಖಂಡ್’ನ ಕೆಲವು ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ಹೆಚ್ಚಳಕ್ಕೆ ಕಾರಣವಾಗುವ ‘ಲಾ ನಿನಾ’ (La Nina) ಚಂಡಮಾರುತ ಪರಿಸ್ಥಿತಿ ವೃದ್ಧಿ ಸಾಧ್ಯತೆ ಇದೆ. ಜೊತೆಗೆ ಸಮಭಾಜಕ ಪೆಸಿಫಿಕ್ ಮೇಲೆ ‘ಎಲ್ ನಿನೋ’ (El Nino) ತಟಸ್ಥ ಪರಿಸ್ಥಿತಿ ಇದೆ. ಇದರಿಂದಾಗಿ ಮುಂಗಾರು ಅವಧಿಯ ದ್ವಿತೀಯಾರ್ಧ ಅಂದರೆ, ಆಗಸ್ಟ್-ಸೆಪ್ಟೆಂಬರ್ ಎರಡು ತಿಂಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

PUC, SSLC ಪಾಸಾದವರಿಗೆ ಸರ್ಕಾರಿ LKG-UKG ಶಾಲೆ ಶಿಕ್ಷಕರು ಮತ್ತು ಆಯಾ ಹುದ್ದೆಗಳ ನೇಮಕಾತಿ | ಖಾಲಿ ಹುದ್ದೆಗಳ ಜಿಲ್ಲಾವಾರು ಪಟ್ಟಿ ಇಲ್ಲಿದೆ… Govt LKG UKG Teachers Recruitment 2024


Spread the love
WhatsApp Group Join Now
Telegram Group Join Now

Leave a Comment

error: Content is protected !!