CRISP Scholarship 2024 : ಸರ್ಕಾರಿ ಕಾಲೇಜುಗಳಲ್ಲಿ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 17,000 ರೂಪಾಯಿ ವರಿಗೆ ಶಿಷ್ಯವೇತನವನ್ನು ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ವಿದ್ಯಾರ್ಥಿಗಳ ಪರ ಜಾರಿಗೆ ತಂದಿರುವ ಈ ಹೊಸ ಯೋಜನೆಯಡಿ ಯಾವ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಿಗಲಿದೆ ಹಾಗೂ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ಯಾವುದು ಈ ಹೊಸ ಯೋಜನೆ?
ವಿದ್ಯಾರ್ಥಿಗಳು ಸಾಮಾನ್ಯ ವಿಷಯಗಳ ಶಿಕ್ಷಣದೊಂದಿಗೆ ಕೌಶಲ ಆಧಾರಿತ ವಿಷಯಗಳನ್ನು ಕಾಲೇಜುಗಳಲ್ಲಿ ಕಲಿಯಲು ಪ್ರೋತ್ಸಾಹಿಸುವುದಕ್ಕಾಗಿ ಒಟ್ಟು ಹತ್ತು ನಿವೃತ್ತ ಐಎಎಸ್ ಅಧಿಕಾರಿಗಳು ಸ್ಥಾಪಿಸಿರುವಂತಹ ‘Centre for Research In Schemes and Policies- CRISP’ ಯೋಜನೆಯ ಒಪ್ಪಂದಕ್ಕೆ ಕರ್ನಾಟಕ ಸರ್ಕಾರವು ಸಹಿ ನೀಡಿದೆ.
ಮೊದಲನೇ ವರ್ಷದಲ್ಲಿ ರಾಜ್ಯಾದ್ಯಂತ ಒಟ್ಟು 60 ಕಾಲೇಜುಗಳ 3,600 ವಿದ್ಯಾರ್ಥಿಗಳಿಗೆ ಈ ಯೋಜನೆಯ ಅಡಿಯಲ್ಲಿ ಪ್ರವೇಶ ನೀಡಲಾಗುತ್ತಿದ್ದು ಮುಂಬರುವ ಮೂರು ವರ್ಷಗಳಲ್ಲಿ ಇದನ್ನು 239 ಕಾಲೇಜುಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ಮುಂಬರುವ 2026-27ನೇ ಸಾಲಿಗೆ 14,340 ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಪ್ರಯೋಜನ ಸಿಗಲಿದೆ.

ಸರಕಾರಿ ನೌಕರರ ಸಂಬಳ ಹೆಚ್ಚಳಕ್ಕೆ ಡೇಟ್ ಫಿಕ್ಸ್ | ನೌಕರರ ನಿಯೋಗಕ್ಕೆ ಸಿಎಂ ಭರವಸೆ Karnataka 7th Pay Commission
ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಯಾವಾಗ ದೊರೆಯಲಿದೆ?
ಈ ವರ್ಷ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮೊದಲನೆಯ ವರ್ಷಕ್ಕೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಕೊನೆಯ ಸೆಮಿಸ್ಟರ್’ನಲ್ಲಿ ಅಂದರೆ ಐದು ಮತ್ತು ಆರನೇ ಸೆಮಿಸ್ಟರ್’ನಲ್ಲಿ ಓದುತ್ತಿರುವಾಗ ₹17,000 ವಿದ್ಯಾರ್ಥಿ ವೇತನ ದೊರೆಯಲಿದೆ.
ಅಖISP Sಛಿheme 2024 ಮೊದಲ ಹಂತದಲ್ಲಿ ಬಿ.ಕಾಂ, ಬಿ.ಸಿ.ಎ, ಬಿ.ಬಿ.ಎಂ ಹಾಗೂ ಬಿ.ಎಸ್.ಸಿ ಪದವಿ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಔಷಧಿ ತಯಾರಿ ಮತ್ತು ಗುಣಮಟ್ಟ, ಬ್ಯಾಂಕಿAಗ್, ಹಣಕಾಸು ಸೇವೆ ಮತ್ತು ಜೀವ ವಿಮೆ, ಮಾಹಿತಿ ತಂತ್ರಜ್ಞಾನ, ಫ್ಯಾಶನ್ ಡಿಸೈನ ಹಾಗೂ ಸಿನಿಮಾ ನಿರ್ಮಾಣ ಸೇರಿದಂತೆ ವಿವಿಧ ಹಲವು ಕೌಶಲ ಕೋರ್ಸ್’ಗಳನ್ನು ಪರಿಚಯಿಸಲಾಗಿದ್ದು ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗಲು ಪ್ರಯೋಜನಕಾರಿಯಾಗಲಿದೆ.

ಅರ್ಜಿ ಸಲ್ಲಿಕೆ ಯಾವಾಗ ಆರಂಭವಾಗಲಿದೆ?
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಾಮಾನ್ಯ ಶಿಕ್ಷಣದ ಜೊತೆಗೆ ಕೌಶಲ ವಿಷಯಗಳನ್ನು ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಇದೇ ಜೂನ್ 30ನೇ ತಾರೀಕಿನಿಂದ ಅರ್ಜಿ ಸಲ್ಲಿಸಲು ಆರಂಭವಾಗಲಿದ್ದು, ಆಗಸ್ಟ್ ತಿಂಗಳಿನಿ೦ದ ಪ್ರವೇಶಾತಿ ಪ್ರಕ್ರಿಯೆಗಳು ಆರಂಭವಾಗಲಿವೆ. ಈ ಕುರಿತ ಹೆಚ್ಚಿನ ಅಪ್ಡೇಟ್‌ಗಳಿಗಾಗಿ mahitimane.com ಫಾಲೋ ಮಾಡಿ.