Pashu Kisan Credit Card Loan : ದೇಶಾದ್ಯಂತ ಹೈನುಗಾರರನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಸಾಲ ಮತ್ತು ಸಬ್ಸಿಡಿ ಸೇರಿದಂತೆ ಜಾನುವಾರು ಸಾಕಾಣಿಕೆಗೆ ವಿವಿಧ ರೀತಿ ಸೌಲಭ್ಯಗಳಿದ್ದು; ಹೈನು ರೈತರು ಈ ಯೋಜಬೆಗಳ ಪ್ರಯೋಜನ ಪಡೆಯಬಹುದಾಗಿದೆ.
ಇಂತಹ ವಿಶೇಷ ಯೋಜನೆಗಳಲ್ಲಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯ ಕೂಡ ಒಂದಾಗಿದೆ. ಪಶುಪಾಲನೆಯನ್ನು ಕೃಷಿಗೆ ಪೂರಕ ಕ್ಷೇತ್ರಗಳೆಂದು ಘೋಷಿಸಿ, ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card-KCC) ಸೌಲಭ್ಯವನ್ನು ವಿಸ್ತರಿಸಲಾಗಿದೆ. 2019-20ನೇ ಸಾಲಿನಿಂದ ಪಶುಪಾಲನೆಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ಏನಿದು ಪಶು ಕಿಸಾನ್ ಯೋಜನೆ?
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Pashu Kisan Credit Card Yojana-PKCC) ಯೋಜನೆಯಡಿ ಹಸು ಮತ್ತು ಎಮ್ಮೆ ಸಾಕಾಣಿಕೆಗಾಗಿ ಸಾಲ ಸೌಲಭ್ಯ ನೀಡಲಾಗುತ್ತದೆ. ನಿಗದಿತ ಬ್ಯಾಂಕುಗಳಿಗೆ ಅರ್ಜಿ ಸಲ್ಲಿಸಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಂಡರೆ, ಸದರಿ ಕ್ರೆಡಿಟ್ ಕಾರ್ಡ್ ಮೇಲೆ ಯಾವುದೇ ಗ್ಯಾರಂಟಿ ಇಲ್ಲದೇ ಹಸು, ಎಮ್ಮೆ ಸಾಕಾಣಿಕೆಗೆ ಸಾಲ ಪಡೆಯಬುದಾಗಿದೆ.
ಈಗಾಗಲೇ ಕರ್ನಾಟಕವೂ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲೂ ‘ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ’ ಅಸ್ಥಿತ್ವದಲ್ಲಿದೆ. ಸಹಸ್ರಾರು ಹೈನುಗಾರರು, ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಕೃಷಿಗೆ ಪೂರಕವಾದ ಉಪ ಕಸುಬುಗಳಿಗೆ ಗರಿಷ್ಠ 2ರಿಂದ 3 ಲಕ್ಷ ರೂಪಾಯಿ ವರೆಗೂ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.
ಯಾವುದಕ್ಕೆ ಎಷ್ಟು ಸಾಲ ಸಿಗಲಿದೆ?
‘ಪಶು ಕಿಸಾನ್ ಕ್ರೆಡಿಟ್ ಕಾರ್ಡ್’ ಯೋಜನೆಯಲ್ಲಿ ಹಸು ಮತ್ತು ಎಮ್ಮೆ ಸಾಕಾಣಿಕೆ ಸಾಲ ಲಭ್ಯವಿದೆ. ತಲಾ ಒಂದು ಎಮ್ಮೆಗೆ 60,249 ರೂಪಾಯಿ, ತಲಾ ಒಂದು ಆಕಳಿಗೆ 40,783 ರೂಪಾಯಿ ವರೆಗೂ ಸಾಲ ನಿಗದಿಪಡಿಸಲಾಗಿದೆ. ಎಷ್ಟು ಎಮ್ಮೆ-ಹಸುಗಳಿಗೆ ಬೇಕಾದರೂ ಸಾಲ ಪಡೆಯಬಹುದು. ಆದರೆ 1.6 ಲಕ್ಷ ರೂಪಾಯಿ ವರೆಗಿನ ಸಾಲಗಳಿಗೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲ.
ಸಾಮಾನ್ಯವಾಗಿ ವಿವಿಧ ಹಣಕಾಸು ಸಂಸ್ಥೆಗಳು, ಬ್ಯಾಂಕ್ಗಳು 7% ಬಡ್ಡಿದರದಲ್ಲಿ ಸಾಲವನ್ನು ನೀಡಿದರೆ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಜಾನುವಾರು ಮಾಲೀಕರು ಕೇವಲ ಶೇಕಡಾ 4ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ.
ಯಾವೆಲ್ಲ ಬ್ಯಾಂಕುಗಳು ಸಾಲ ನೀಡುತ್ತವೆ?
ಸಾಮಾನ್ಯವಾಗಿ ಬಹುತೇಕ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳು ಹೈನುಗಾರಿಕೆಗೆ ಸಾಲ ನೀಡುತ್ತವೆ. ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಹತ್ತಿರದ ಬ್ಯಾಂಕುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್’ನ೦ತಹ ಮುಂತಾದ ಉನ್ನತ ಬ್ಯಾಂಕ್ಗಳು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ನೀಡುತ್ತವೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು, ಮೊದಲು ಬ್ಯಾಂಕ್ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆಯಬೇಕು. ಅರ್ಜಿ ನಮೂನೆಯನ್ನು ಕೆಲವು KYC ದಾಖಲೆಗಳೊಂದಿಗೆ ಸಲ್ಲಿಸಬೇಕು. ನೀವು ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ತಿಳಿಸುತ್ತಾರೆ. ಯೋಜನೆ ಅಥವಾ ಕೆಲಸದ ಆರ್ಥಿಕ ಪ್ರಮಾಣದ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.
ಸಣ್ಣ ವ್ಯಾಪಾರಕ್ಕೆ ₹10 ಲಕ್ಷ ಮೇಲಾಧಾರ ರಹಿತ ಮುದ್ರಾ ಸಾಲ | ಇಲ್ಲಿ ಅರ್ಜಿ ಸಲ್ಲಿಸಿ… PM Mudra Loan
ಬೇಕಾಗುವ ಪ್ರಮುಖ ದಾಖಲೆಗಳೇನು?
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ಸಲ್ಲಿಸಲು ಈ ಕೆಳಕಂಡ ದಾಖಲೆಗಳು ಬೇಕಾಗುತ್ತದೆ.
- ಭೂ ದಾಖಲೆಗಳು
- ಪ್ರಾಣಿಗಳ ಆರೋಗ್ಯ ಪ್ರಮಾಣಪತ್ರ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಬ್ಯಾಂಕ್ ಖಾತೆ ವಿವರ
ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಬ್ಯಾಂಕ್ಗೆ ಭೇಡಿ ನೀಡಿ, ಅಗತ್ಯವಾಗಿರುವ ದಾಖಲಾತಿಗಳನ್ನು ಸಲ್ಲಿಸಿ, ದುಡಿಮೆ ಬಂಡವಾಳಕ್ಕೆ ಆರ್ಥಿಕ ನೆರವು ಪಡೆಯಬಹುದಾಗಿದೆ.