Gruhalakshmi 2 Months Pending Payment- ಗೃಹಲಕ್ಷ್ಮಿ ಯೋಜನೆ 2 ತಿಂಗಳ ಬಾಕಿ ಹಣ ಬಿಡುಗಡೆ | ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

Spread the love

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಬಾಕಿ ಹಣ ಬಿಡುಗಡೆಯ (Gruhalakshmi 2 Months Pending Payment) ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಮಾಹಿತಿ ನೀಡಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಬೆಂಬಲವಾಗಿ ನಿಂತಿದೆ. ಈ ಯೋಜನೆಯಡಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೇರ ನಗದು ವರ್ಗಾವಣೆ (DBT) ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಎರಡು ತಿಂಗಳ ಹಣ ಬಾಕಿ ಉಳಿದಿರುವುದು ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ವಿಷಯವು ಬೆಳಗಾವಿ ಅಧಿವೇಶನದಲ್ಲೂ ಪ್ರಮುಖವಾಗಿ ಪ್ರಸ್ತಾಪವಾಗಿದ್ದು, ಸರ್ಕಾರದ ಗಮನ ಸೆಳೆದಿದೆ.

ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಬಿಡುಗಡೆ ಕುರಿತು ಹೊಸ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Rashtriya Gokul Mission Scheme – ರಾಷ್ಟ್ರೀಯ ಗೋಕುಲ ಮಿಷನ್: ಹಸು ಸಾಕಾಣಿಕೆಗೆ ಸರ್ಕಾರದ ಭರ್ಜರಿ ಸಹಾಯಧನ | ವರ್ಷಕ್ಕೆ ಹೆಚ್ಚುವರಿ ₹21,500 ಆದಾಯ

Reason for Payment Delay – ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬವಾಗಲು ಕಾರಣವೇನು?

ಗೃಹಲಕ್ಷ್ಮಿ ಯೋಜನೆ ಆರಂಭವಾದ ಮೊದಲ ದಿನಗಳಿಂದಲೂ ಫಲಾನುಭವಿಗಳ ಖಾತೆಗೆ ಸಮಯಕ್ಕೆ ಸರಿಯಾಗಿ ಹಣ ಜಮಾ ಆಗುತ್ತಿತ್ತು. ಆದರೆ ಇತ್ತೀಚೆಗೆ ಕೆಲ ಫಲಾನುಭವಿಗಳ ರೇಷನ್ ಕಾರ್ಡ್ ರದ್ದಾಗಿರುವುದು, ಆಹಾರ ಇಲಾಖೆಯಿಂದ ಹೊಸ ದತ್ತಾಂಶ (Data) ಲಭ್ಯವಾಗದಿರುವುದು, ಅರ್ಹತೆ ಪರಿಶೀಲನೆ ಪ್ರಕ್ರಿಯೆ ವಿಳಂಬವಾಗುವಂತಹ ಕಾರಣಗಳಿಂದಾಗಿ ಕೆಲ ತಿಂಗಳ ಹಣ ಹೋಲ್ಡ್ ಆಗಿರುವುದು ಎಂದು ಸರ್ಕಾರ ತಿಳಿಸಿದೆ.

2 Months Pending Amount Update – ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಹಣ ಯಾವಾಗ ಜಮಾ ಆಗಲಿದೆ?

ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಶೀಘ್ರದಲ್ಲೇ ಎಲ್ಲಾ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಬಾಕಿ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ. ಹಣ ಬಿಡುಗಡೆಗೆ ಅನುಮೋದನೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅನುಮೋದನೆ ದೊರೆಯುತ್ತಿದ್ದಂತೆ ನೇರ ನಗದು ವರ್ಗಾವಣೆ (DBT) ಮೂಲಕ ಹಣ ಜಮಾ ಆಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Crop Loss and Crop Insurance Scheme- ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆಗೆ ಜಮಾ | ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

CM & Cabinet Discussion – ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಚರ್ಚೆ

ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಈ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದ್ದು, ಸದನದಲ್ಲಿಯೂ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.

ಅದರ ಜೊತೆಗೆ ಅನರ್ಹ ರೇಷನ್ ಕಾರ್ಡ್ ರದ್ದಾದ ಕಾರಣ ಹಣ ಸಿಗದವರಿಗೆ ಆಹಾರ ಇಲಾಖೆಯಿಂದ ಹೊಸ ಮಾಹಿತಿ ಬಂದ ತಕ್ಷಣ ಮಾರ್ಗಸೂಚಿ ಪ್ರಕಾರ ಅರ್ಹರಾಗಿರುವವರಿಗೆ ಸಹ ಬಾಕಿ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Morarji Desai Residential School Admission 2026-27- ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಆಹ್ವಾನ | ಸಂಪೂರ್ಣ ಉಚಿತ ಶಿಕ್ಷಣ

Payment for Cancelled Ration Cards? – ರೇಷನ್ ಕಾರ್ಡ್ ರದ್ದಾದವರಿಗೆ ಹಣ ಸಿಗುತ್ತದೆಯೇ?

ಈ ಕುರಿತು ಗೊಂದಲದಲ್ಲಿರುವ ಮಹಿಳೆಯರಿಗೆ ಲಕ್ಷ್ಮೀ ಹೆಬ್ಬಾಳಕರ್ ಅವರು ನೀಡಿರುವ ಸ್ಪಷ್ಟನೆ ನೀಡಿದ್ದು; ರೇಷನ್ ಕಾರ್ಡ್ ರದ್ದಾದರೂ ಅವರು ತೆರಿಗೆ ಪಾವತಿದಾರರಾಗಿರದಿದ್ದರೆ ಹಾಗೂ ಇತರೆ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಅಂತಹ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತೆ ಬಿಡುಗಡೆ ಆಗಲಿದೆ.

Gruhalakshmi 2 Months Pending Payment
Gruhalakshmi 2 Months Pending Payment

Loan Facility via Gruha Lakshmi Society – ಗೃಹಲಕ್ಷ್ಮಿ ಸಹಕಾರ ಸಂಘದಿಂದ ಸಾಲ ಸೌಲಭ್ಯ

ಗೃಹಲಕ್ಷ್ಮಿ ಯೋಜನೆಯ ಜೊತೆಗೆ ಸರ್ಕಾರವು ಮಹಿಳೆಯರಿಗಾಗಿ ಗೃಹಲಕ್ಷ್ಮಿ ಸಹಕಾರ ಸಂಘವನ್ನು ಕೂಡ ಆರಂಭಿಸಿದೆ. ಇದು ಮಹಿಳೆಯರ ಉಳಿತಾಯ ಮತ್ತು ಸ್ವಾವಲಂಬನೆಗೆ ಮಹತ್ವದ ಹೆಜ್ಜೆಯಾಗಿದೆ.

WhatsApp Group Join Now
Telegram Group Join Now

ಸಂಘದ ಸದಸ್ಯರು ಪ್ರತಿ ತಿಂಗಳು ₹200 ಉಳಿತಾಯ ಮಾಡಬೇಕು. ಸತತ 6 ತಿಂಗಳು ಉಳಿತಾಯ ಮಾಡಿದ ನಂತರ ಸದಸ್ಯರು ಸಾಲ ಪಡೆಯಲು ಅರ್ಹರಾಗುತ್ತಾರೆ ಸಾಲಕ್ಕೆ ಜಾಮೀನು ಅಥವಾ ಶೂರಿಟಿ ಅಗತ್ಯವಿಲ್ಲ ಎಂಬುದು ಈ ಸಂಘದ ವಿಶೇಷತೆ.

ಇದನ್ನೂ ಓದಿ: 1.5 Lakh Kotak Kanya Scholarship- 1.5 ಲಕ್ಷ ರೂ. ಕೋಟಕ್ ಕನ್ಯಾ ವಿದ್ಯಾರ್ಥಿವೇತನ | ಈಗಲೇ ಅರ್ಜಿ ಹಾಕಿ…

How to Get Society Membership – ಗೃಹಲಕ್ಷ್ಮಿ ಸೊಸೈಟಿ ಸದಸ್ಯತ್ವ ಹೇಗೆ ಪಡೆಯಬೇಕು?

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾದ ಮಹಿಳೆಯರು ತಮ್ಮ ಹಳ್ಳಿಯ ಅಂಗನವಾಡಿ ಕೇಂದ್ರ ಅಥವಾ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ₹1,000 ಷೇರು ಹಣ ಪಾವತಿಸಿ ಸದಸ್ಯತ್ವ ಪಡೆಯಬಹುದು.

Key Benefits of Gruha Lakshmi Society – ಗೃಹಲಕ್ಷ್ಮಿ ಸೊಸೈಟಿಯಿಂದ ಸಿಗುವ ಪ್ರಮುಖ ಪ್ರಯೋಜನಗಳು

  • ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೇ ಸದಸ್ಯರಾಗಬಹುದು
  • ಒಮ್ಮೆ ₹1,000 ಷೇರು ಹಣ ಪಾವತಿ
  • ಪ್ರತಿ ತಿಂಗಳು ಕನಿಷ್ಠ ₹200 ಉಳಿತಾಯ
  • 6 ತಿಂಗಳ ಬಳಿಕ ₹30,000 ರಿಂದ ₹3 ಲಕ್ಷದ ವರೆಗೆ ಸಾಲ
  • ಸಂಪೂರ್ಣ ಕ್ಯಾಶ್‌ಲೆಸ್ ವ್ಯವಹಾರ
  • ಯಾವುದೇ ಜಾಮೀನು ಅಗತ್ಯವಿಲ್ಲ
  • ಮುಂದಿನ ದಿನಗಳಲ್ಲಿ ಆರೋಗ್ಯ ವಿಮೆ ನೀಡುವ ಯೋಜನೆ

ಒಟ್ಟಾರೆ, ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಹಣ ಬಿಡುಗಡೆಗೆ ಸರ್ಕಾರ ಗಂಭೀರ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ಎಲ್ಲಾ ಅರ್ಹ ಮಹಿಳೆಯರ ಖಾತೆಗೆ ಹಣ ಜಮಾ ಆಗುವ ನಿರೀಕ್ಷೆಯಿದೆ. ಜೊತೆಗೆ ಗೃಹಲಕ್ಷ್ಮಿ ಸಹಕಾರ ಸಂಘದ ಮೂಲಕ ಮಹಿಳೆಯರಿಗೆ ಉಳಿತಾಯ, ಸಾಲ ಮತ್ತು ಭವಿಷ್ಯದ ಭದ್ರತೆ ಎಂಬ ಮೂರು ಪ್ರಮುಖ ಲಾಭಗಳು ದೊರೆಯಲಿವೆ.

Personal Loan Tips- ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕಾ? ಈ ಐದು ಟಿಪ್ಸ್ ಪಾಲಿಸಿ


Spread the love
error: Content is protected !!