Whatsapp Banking Services- ಈಗ ವಾಟ್ಸಾಪ್‌ನಲ್ಲೇ ಬ್ಯಾಂಕಿಂಗ್ ಸೇವೆ ಪಡೆಯಿರಿ | ವಿವಿಧ ಬ್ಯಾಂಕುಗಳ ವಾಟ್ಸಾಪ್ ನಂಬರ್ ಇಲ್ಲಿವೆ…

Spread the love

WhatsApp Group Join Now
Telegram Group Join Now

ಬಹುತೇಕ ಬ್ಯಾಂಕುಗಳು ವಾಟ್ಸಾಪ್ ಸೇವೆ ಆರಂಭಿಸಿವೆ. ಮನೆಯಲ್ಲಿಯೇ ಕೂತು ಬ್ಯಾಂಕಿಂಗ್ ವಹಿವಾಟು ನಡೆಸಬಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಮತ್ತು ವಾಟ್ಸಾಪ್ ನಂಬರುಗಳು ಇಲ್ಲಿವೆ…

ಇಂದಿನ ದಿನಗಳಲ್ಲಿ ಬ್ಯಾಂಕಿಂಗ್ ಎಂದರೆ ಬ್ಯಾಂಕ್ ಶಾಖೆಗೆ ಹೋಗಿ ಸಾಲಿನಲ್ಲಿ ನಿಲ್ಲುವ ತುರ್ತು ಕ್ರಮೇಣ ಕಡಿಮೆಯಾಗುತ್ತಿದೆ. ಡಿಜಿಟಲ್ ಕ್ರಾಂತಿಯ ಪರಿಣಾಮವಾಗಿ ಮೊಬೈಲ್ ಫೋನ್ ಇದ್ದರೆ ಸಾಕು; ಮನೆಯಲ್ಲೇ ಕುಳಿತು ಹೆಚ್ಚಿನ ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದು.

ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಆ್ಯಪ್‌ಗಳ ಜೊತೆಗೆ ಈಗ ವಾಟ್ಸಾಪ್ ಬ್ಯಾಂಕಿಂಗ್ ಕೂಡ ಗ್ರಾಹಕರಿಗೆ ದೊಡ್ಡ ಅನುಕೂಲವಾಗಿ ಪರಿಣಮಿಸಿದೆ. ಮನೆಯಲ್ಲಿ ಕೂತೇ ಮೊಬೈಲ್‌ನಲ್ಲಿ ಬಹುತೇಕ್ ಬ್ಯಾಂಕಿಂಗ್ ವಹಿವಾಟುಗಳನ್ನು ಪೂರೈಸಬಹುದಾಗಿದೆ.

ಇದನ್ನೂ ಓದಿ: Scholarship for studying abroad – ವಿದೇಶಿ ವ್ಯಾಸಂಗಕ್ಕೆ ವಿದ್ಯಾರ್ಥಿವೇತನ | ಊಟ, ವಸತಿಯೊಂದಿಗೆ ಪ್ರತೀ ತಿಂಗಳೂ 32,000 ರೂ. ನೆರವು

How WhatsApp Banking Works – ವಾಟ್ಸಾಪ್ ಮೂಲಕ ಬ್ಯಾಂಕಿಂಗ್ ಹೇಗೆ?

ಬಹುತೇಕ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗಾಗಿ ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನು ಪರಿಚಯಿಸಿವೆ. ಈ ಸಂಖ್ಯೆಗೆ ‘Hi’ ಅಥವಾ ‘Menu’ ಎಂದು ಸಂದೇಶ ಕಳುಹಿಸಿದರೆ, ಸ್ವಯಂಚಾಲಿತ ಉತ್ತರ (ಚಾಟ್‌ಬಾಟ್) ಮೂಲಕ ವಿವಿಧ ಆಯ್ಕೆಗಳು ನಿಮ್ಮ ಮುಂದೆ ಬರುತ್ತವೆ.

ಅಗತ್ಯವಿರುವ ಸೇವೆಯನ್ನು ಆಯ್ಕೆ ಮಾಡಿಕೊಂಡರೆ, ನಿಮಿಷಗಳಲ್ಲೇ ಮಾಹಿತಿ ನಿಮ್ಮ ವಾಟ್ಸಾಪ್‌ನಲ್ಲೇ ಲಭ್ಯವಾಗುತ್ತದೆ. ವಿಶೇಷವಾಗಿ ಸ್ಮಾರ್ಟ್ಫೋನ್ ಬಳಸಲು ತಿಳಿದಿರುವವರಿಗೆ ಮಾತ್ರವಲ್ಲ, ಸಾಮಾನ್ಯ ಮೊಬೈಲ್ ಬಳಕೆದಾರರಿಗೂ ಈ ಸೇವೆ ಅರ್ಥವಾಗುವಷ್ಟು ಸುಲಭವಾಗಿದೆ.

ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ

Services Offered via WhatsApp Banking – ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಯಾವ ಸೇವೆಗಳು ಲಭ್ಯ?

ಪ್ರತಿ ಬ್ಯಾಂಕಿನಲ್ಲಿ ಸೇವೆಗಳ ವ್ಯಾಪ್ತಿ ಸ್ವಲ್ಪ ಬದಲಾಗಬಹುದು. ಆದರೆ ಸಾಮಾನ್ಯವಾಗಿ ಕೆಳಗಿನ ಸೇವೆಗಳು ಬಹುತೇಕ ಎಲ್ಲ ಬ್ಯಾಂಕುಗಳಲ್ಲೂ ಸಿಗುತ್ತವೆ:

  • ಖಾತೆಯ ಬ್ಯಾಲೆನ್ಸ್ ವಿಚಾರಣೆ
  • ಇತ್ತೀಚಿನ ವ್ಯವಹಾರಗಳ ವಿವರ (ಮಿನಿ ಸ್ಟೇಟ್‌ಮೆಂಟ್)
  • ಸಂಪೂರ್ಣ ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯುವ ಮಾಹಿತಿ
  • ಡೆಬಿಟ್ ಕಾರ್ಡ್ ವಿವರಗಳು ಮತ್ತು ಕಾರ್ಡ್ ಸಂಬಂಧಿತ ಸಹಾಯ
  • ಸಾಲ (ಲೋನ್) ಹಾಗೂ ಡಿಪಾಸಿಟ್ ಯೋಜನೆಗಳ ಮಾಹಿತಿ
  • ಹತ್ತಿರದ ಬ್ಯಾಂಕ್ ಶಾಖೆ ಮತ್ತು ಎಟಿಎಂ ವಿವರ
  • ಗ್ರಾಹಕ ಸಹಾಯ ಕೇಂದ್ರ ಸಂಪರ್ಕ ಮಾಹಿತಿ

ಕೆಲವು ಬ್ಯಾಂಕ್‌ಗಳು FD, ರಿಕರಿಂಗ್ ಡಿಪಾಸಿಟ್, ಚೆಕ್ ಬುಕ್ ವಿನಂತಿ ಸೇರಿದಂತೆ ಹೆಚ್ಚುವರಿ ಸೇವೆಗಳನ್ನೂ ಒದಗಿಸುತ್ತಿವೆ.

ಇದನ್ನೂ ಓದಿ: January 2026 Bank Holidays – ಜನವರಿಯಲ್ಲಿ ಬರೋಬ್ಬರಿ ಅರ್ಧ ತಿಂಗಳು ಬ್ಯಾಂಕ್ ರಜೆ | ಯಾವೆಲ್ಲಾ ದಿನ ಬ್ಯಾಂಕುಗಳು ಬಂದ್ ಇರಲಿವೆ? ಸಂಪೂರ್ಣ ಪಟ್ಟಿ ಇಲ್ಲಿದೆ…

Is WhatsApp Banking Safe? – ವಾಟ್ಸಾಪ್ ಬ್ಯಾಂಕಿಂಗ್ ಬಳಸುವುದು ಸುರಕ್ಷಿತವೇ?

ಬ್ಯಾಂಕುಗಳು ನೀಡಿರುವ ಅಧಿಕೃತ ವಾಟ್ಸಾಪ್ ಸಂಖ್ಯೆಗಳ ಮೂಲಕ ಮಾತ್ರ ಈ ಸೇವೆ ಬಳಸಬೇಕು. ಬ್ಯಾಂಕ್ ಎಂದಿಗೂ ನಿಮ್ಮ ಎಟಿಎಂ ಪಿನ್, ಓಟಿಪಿ ಅಥವಾ ಪಾಸ್‌ವರ್ಡ್ ಅನ್ನು ವಾಟ್ಸಾಪ್‌ನಲ್ಲಿ ಕೇಳುವುದಿಲ್ಲ.

ಇಂತಹ ಮಾಹಿತಿಯನ್ನು ಯಾರಿಗೂ ಹಂಚಿಕೊಳ್ಳಬಾರದು. ಸರಿಯಾದ ಎಚ್ಚರಿಕೆ ವಹಿಸಿದರೆ ವಾಟ್ಸಾಪ್ ಬ್ಯಾಂಕಿಂಗ್ ಸಂಪೂರ್ಣವಾಗಿ ಸುರಕ್ಷಿತ ಮತ್ತು ಅನುಕೂಲಕರವಾಗಿದೆ.

Whatsapp Banking Services
Whatsapp Banking Services

Official WhatsApp Numbers of Banks – ಪ್ರಮುಖ ಬ್ಯಾಂಕುಗಳ ಅಧಿಕೃತ ವಾಟ್ಸಾಪ್ ನಂಬರುಗಳು

ನೀವು ಬಳಸುವ ಬ್ಯಾಂಕಿನ ಸಂಖ್ಯೆಯನ್ನು ಮೊದಲು ನಿಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳಿ. ನಂತರ ವಾಟ್ಸಾಪ್ ತೆರಳಿ ‘ಒeಟಿu’ ಅಥವಾ ‘ಊi’ ಎಂದು ಮೆಸೇಜ್ ಕಳುಹಿಸಿದರೆ ಸೇವೆ ಆರಂಭವಾಗುತ್ತದೆ. ಕೆಲವು ಪ್ರಮುಖ ಬ್ಯಾಂಕುಗಳ ವಾಟ್ಸಾಪ್ ನಂಬರ್ ಹಿಗಿವೆ:

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): 9022690226
  • ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank): 7070022222
  • ಐಸಿಐಸಿಐ ಬ್ಯಾಂಕ್ (ICICI Bank): 8640086400
  • ಎಕ್ಸಿಸ್ ಬ್ಯಾಂಕ್ (Axis Bank): 7036165000
  • ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): 9264092640
  • ಬ್ಯಾಂಕ್ ಆಫ್ ಬರೋಡಾ (Bank of Baroda): 8433888777
  • ಕೆನರಾ ಬ್ಯಾಂಕ್ (Canara Bank): 9076030001
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank): 9666606060
  • ಯೆಸ್ ಬ್ಯಾಂಕ್ (Yes Bank): 8291201200

ಸೂಚನೆ: ಸೇವೆಗಳು ಮತ್ತು ಸಂಖ್ಯೆಗಳು ಕಾಲಾನುಕ್ರಮವಾಗಿ ಬದಲಾಗುವ ಸಾಧ್ಯತೆ ಇದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಅಥವಾ ಶಾಖೆಯಲ್ಲಿ ಒಮ್ಮೆ ಪರಿಶೀಲಿಸಿ.

WhatsApp Group Join Now
Telegram Group Join Now

ಇದನ್ನೂ ಓದಿ: Karnataka State Scholarship 2025-26- ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು | SSP ಮೂಲಕ ಈಗಲೇ ಅರ್ಜಿ ಹಾಕಿ…

Who Can Benefit from WhatsApp Banking? ಈ ಸೇವೆಯಿಂದ ಯಾರಿಗೆ ಹೆಚ್ಚು ಪ್ರಯೋಜನ?

ಹಿರಿಯ ನಾಗರಿಕರು ಬ್ಯಾಂಕ್‌ಗೆ ಮತ್ತೆ ಮತ್ತೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಉದ್ಯೋಗಸ್ಥರಿಗೆ ಸಮಯ ಉಳಿಯುತ್ತದೆ. ಗ್ರಾಮೀಣ ಪ್ರದೇಶದ ಗ್ರಾಹಕರು ಮೂಲಭೂತ ಮಾಹಿತಿಯನ್ನು ಮೊಬೈಲ್‌ನಲ್ಲಿಯೇ ಸುಲಭವಾಗಿ ಪಡೆಯಬಹುದಾಗಿದೆ.

ವಾಟ್ಸಾಪ್ ಬ್ಯಾಂಕಿಂಗ್ ಎಂದರೆ ಬ್ಯಾಂಕಿಂಗ್ ಅನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸುವ ಒಂದು ಮಹತ್ವದ ಹೆಜ್ಜೆಯಾಗಿದೆ. ಸರಿಯಾದ ಮಾಹಿತಿಯೊಂದಿಗೆ ಮತ್ತು ಎಚ್ಚರಿಕೆಯಿಂದ ಈ ಸೇವೆ ಬಳಸಿದರೆ, ಸಮಯವೂ ಉಳಿಯುತ್ತದೆ, ತೊಂದರೆಯೂ ಕಡಿಮೆಯಾಗುತ್ತದೆ.

ನೀವು ಇನ್ನೂ ಈ ಸೇವೆ ಬಳಸಿಲ್ಲ ಎಂದರೆ, ಕೂಡಲೇ ನಿಮ್ಮ ಬ್ಯಾಂಕ್‌ನ ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನು ಸೇವ್ ಮಾಡಿಕೊಂಡು ಡಿಜಿಟಲ್ ಬ್ಯಾಂಕಿಂಗ್‌ನ ಸುಲಭತೆಯನ್ನು ಅನುಭವಿಸಿ…


Spread the love
error: Content is protected !!