ಈ ವಾರದ ಗ್ರಹಗತಿಗಳು ಎಲ್ಲ ರಾಶಿಗಳ ಮೇಲೂ ವಿಭಿನ್ನ ರೀತಿಯಲ್ಲಿ ಪ್ರಭಾವ ಬೀರುತ್ತಿವೆ. ಕೆಲವರಿಗೆ ಆದಾಯದ ಲಾಭ, ಕೆಲವರಿಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ನಿಮ್ಮ ರಾಶಿಗೆ ಈ ವಾರ (Weekly Horoscope) ಹೇಗಿದೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ…
Aries Horoscope – ಮೇಷ ರಾಶಿ

ಈ ವಾರ ನಿರ್ಧಾರಗಳ ವಿಚಾರದಲ್ಲಿ ದ್ವಂದ್ವ ಹೆಚ್ಚಾಗಿರುತ್ತದೆ. ಆದಾಯ ಕಡಿಮೆಯಾಗಿ ಖರ್ಚು ಹೆಚ್ಚುವ ಸಾಧ್ಯತೆ ಇದೆ. ಆದರೆ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಹಣದ ಮೂಲ ಗೋಚರಿಸುವುದು ಧೈರ್ಯ ನೀಡುತ್ತದೆ.
ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶಕ್ಕಾಗಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಕೆಲವರಿಗೆ ಮೂತ್ರ ಸಂಬAಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸೇನಾ ಸೇವೆಯಲ್ಲಿರುವವರು ವಿಶೇಷ ಎಚ್ಚರ ವಹಿಸುವುದು ಉತ್ತಮ.
ಇದನ್ನೂ ಓದಿ: KCET 2026 Exam Timetable- 2026ನೇ ಸಾಲಿನ ಸಿಇಟಿ ಪರೀಕ್ಷೆ ದಿನಾಂಕ ನಿಗದಿ | ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…
Taurus Horoscope – ವೃಷಭ ರಾಶಿ

ನಿರೀಕ್ಷೆಯ ಮಟ್ಟಿಗೆ ಆದಾಯ ಲಭಿಸುವ ವಾರ ಇದು. ಕೃಷಿಯಿಂದ ಉತ್ತಮ ಲಾಭದ ಸೂಚನೆಗಳಿವೆ. ಅಧ್ಯಾಪಕರು ಮತ್ತು ಶಿಕ್ಷಣ ಕ್ಷೇತ್ರದವರಿಗೆ ಬೇಡಿಕೆ ಹೆಚ್ಚಾಗಲಿದೆ.
ಭೂಮಿ ವ್ಯವಹಾರಗಳಲ್ಲಿ ಸ್ವಲ್ಪ ಮಟ್ಟಿನ ಆದಾಯ ಏರಿಕೆ ಕಂಡುಬರುತ್ತದೆ. ಸರ್ಕಾರಿ ಸೌಲಭ್ಯಗಳು ದೊರೆಯಲು ಸ್ವಲ್ಪ ವಿಳಂಬವಾಗಬಹುದು. ಹಣಕಾಸು ವ್ಯವಹಾರ ಮಾಡುವವರಿಗೆ ಲಾಭದ ವಾರ.
Gemini Horoscope – ಮಿಥುನ ರಾಶಿ

ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಆದಾಯ ಉತ್ತಮವಾಗಿರುವುದರಿಂದ ಮನಸ್ಸು ಹಗುರವಾಗಿರುತ್ತದೆ. ಕೃಷಿ ಭೂಮಿ ಖರೀದಿ ಸಾಧ್ಯತೆ ಇದೆ.
ಸಂಗಾತಿಯಿಂದ ವ್ಯವಹಾರಗಳಿಗೆ ಬಂಡವಾಳ ದೊರೆಯುವ ಲಕ್ಷಣಗಳಿವೆ. ಆರೋಗ್ಯದ ಕಡೆಗೆ ನಿರ್ಲಕ್ಷ್ಯ ಬೇಡ. ದೂರ ಪ್ರಯಾಣಗಳು ಈ ವಾರ ಅಷ್ಟಾಗಿ ಒಳಿತಲ್ಲ. ಕೃಷಿಗೆ ಹೆಚ್ಚಿನ ವೆಚ್ಚ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: 2026 Varshika Bhavishya- 2026ರ ವಾರ್ಷಿಕ ಭವಿಷ್ಯ | ಈ ವರ್ಷ ಯಾರಿಗೆ ಶುಭ? ಯಾರಿಗೆ ಸವಾಲು?
Cancer Horoscope – ಕರ್ಕಾಟಕ

ಮನಸ್ಸಿನಲ್ಲಿ ಉತ್ಸಾಹ ಇದ್ದರೂ ಕಾರ್ಯರೂಪಕ್ಕೆ ತರುವ ಧೈರ್ಯ ಕೊರತೆಯಾಗಬಹುದು. ಆದಾಯ ಸಾಮಾನ್ಯ ಮಟ್ಟದಲ್ಲೇ ಇರುತ್ತದೆ. ಆಸ್ತಿ ವಿಚಾರಗಳಲ್ಲಿ ಹೆಚ್ಚಿನ ಹಣ ಖರ್ಚಾಗುವ ಸಾಧ್ಯತೆ ಇದೆ.
ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲು ಸಮಯ ಬೇಕಾಗುತ್ತದೆ. ಸಂಗಾತಿಯ ಕೋಪಕ್ಕೆ ಕಾರಣವಾಗದಂತೆ ಎಚ್ಚರ ವಹಿಸಿ. ಕೃಷಿ ಉಪಬೆಳೆಗಳಿಂದ ಲಾಭ ಸಾಧ್ಯ.
Leo Horoscope – ಸಿಂಹ ರಾಶಿ

ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆದಾಯ ಸಾಮಾನ್ಯಗತಿಯಲ್ಲಿದ್ದರೂ, ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಮೇಲುಗೈ ಸಾಧಿಸುವಿರಿ. ಬಂಧುಗಳ ಜೊತೆಗಿನ ಸಂಬAಧಗಳನ್ನು ಸುಧಾರಿಸಿಕೊಳ್ಳಲು ಇದು ಉತ್ತಮ ಸಮಯ.
ವಿದ್ಯಾರ್ಥಿಗಳಿಗೆ ಸ್ವಲ್ಪ ಉತ್ತಮ ಫಲಿತಾಂಶದ ಸೂಚನೆಗಳಿವೆ. ಮೂಳೆ ಸಂಬಂಧಿತ ನೋವುಗಳು ಕಾಡಬಹುದು. ಕ್ರೀಡಾಪಟುಗಳಿಗೆ ಉದ್ಯೋಗ ಅವಕಾಶ ದೊರೆಯಬಹುದು.
Virgo Horoscope – ಕನ್ಯಾ ರಾಶಿ

ನಿಮ್ಮ ಬುದ್ಧಿವಂತಿಕೆಯಿಂದ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತೀರಿ. ಆದಾಯ ಸಾಮಾನ್ಯವಾಗಿದ್ದರೂ ಬಂಧುಗಳಿಂದ ಸ್ವಲ್ಪ ಮಟ್ಟಿನ ಸಹಕಾರ ದೊರೆಯುತ್ತದೆ.
ಸಂಸಾರದಲ್ಲಿ ಸ್ವಲ್ಪ ಕಸಿವಿಸಿ ಇದ್ದರೂ ಸಂಬಂಧಗಳು ಮುಂದುವರೆಯುತ್ತವೆ. ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮ ಅಗತ್ಯವಿರುವ ವಾರ.
ಇದನ್ನೂ ಓದಿ: Karnataka Grama Panchayat Election 2026- ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ | ಮಹತ್ವದ ಮಾಹಿತಿ ಇಲ್ಲಿದೆ…
Libra Horoscope – ತುಲಾ ರಾಶಿ

ದೊಡ್ಡವರಂತೆ ತೋರಿಸಿಕೊಳ್ಳುವ ಮನೋಭಾವ ಹೆಚ್ಚಾಗುತ್ತದೆ. ಆದಾಯ ತಕ್ಕಮಟ್ಟಿಗೆ ಇರುತ್ತದೆ. ಕೃಷಿ ಭೂಮಿ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣಬಹುದು.
ವಿದೇಶ ಪ್ರಯಾಣ ಆಸೆ ಹೊಂದಿರುವವರಿಗೆ ಅವಕಾಶಗಳು ಲಭಿಸುತ್ತವೆ. ವಿದೇಶಿ ಭಾಷಾ ಕಲಿಕೆಯಲ್ಲಿ ಪ್ರಗತಿ ಇರುತ್ತದೆ. ಆದರೆ ಹಣದ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ.
Scorpio Horoscope – ವೃಶ್ಚಿಕ ರಾಶಿ

ವಾರದ ಆರಂಭದಲ್ಲಿ ದ್ವಂದ್ವ ಇದ್ದರೂ, ನಂತರ ನಿರ್ಧಾರಗಳು ಸರಿಯಾಗುತ್ತವೆ. ಆದಾಯ ಮಧ್ಯಮ ಮಟ್ಟದಲ್ಲಿರುತ್ತದೆ. ವಿದೇಶದಲ್ಲಿ ಆಸ್ತಿ ಮಾಡುವವರಿಗೆ ಅನುಕೂಲಕರ ಸಮಯ.
ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಸಿಗದಿರಬಹುದು. ಶೀತ ಮತ್ತು ಜ್ವರದ ತೊಂದರೆ ಇರುವವರು ಎಚ್ಚರ ವಹಿಸಬೇಕು. ಲೋಹದ ವ್ಯಾಪಾರಿಗಳಿಗೆ ಲಾಭದ ವಾರ.
Sagittarius Horoscope – ಧನಸ್ಸು ರಾಶಿ

ನಿಮ್ಮ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡವರು ಈಗ ಸತ್ಯವನ್ನು ಅರಿಯುತ್ತಾರೆ. ಆದಾಯ ಸಾಮಾನ್ಯವಾಗಿರುತ್ತದೆ. ಸ್ಥಿರಾಸ್ತಿ ವಿಚಾರದಲ್ಲಿ ಆತುರ ಬೇಡ.
ಸಂಗಾತಿಯ ಆದಾಯ ಏರಿಕೆಯಾಗುವ ಸಾಧ್ಯತೆ ಇದೆ. ತಾಂತ್ರಿಕ ಕ್ಷೇತ್ರದವರಿಗೆ ಉತ್ತಮ ಅವಕಾಶಗಳು ಲಭಿಸುತ್ತವೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಬಹುದು.
Capricorn Horoscope – ಮಕರ ರಾಶಿ

ಸತ್ಯವನ್ನು ನೇರವಾಗಿ ಹೇಳುವುದು ಈ ವಾರ ನಿಮಗೆ ಲಾಭ ತರುತ್ತದೆ. ವಿದೇಶದಲ್ಲಿ ಕೆಲಸ ಮಾಡುವವರ ಆದಾಯ ಹೆಚ್ಚಾಗುತ್ತದೆ. ಶತ್ರುಗಳ ಕಾಟ ಕಡಿಮೆಯಾಗುತ್ತದೆ.
ಕೃಷಿಯಿಂದ ನಿರೀಕ್ಷಿತ ಲಾಭ ಸಿಗದಿರಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ. ವೈವಾಹಿಕ ಜೀವನದಲ್ಲಿ ಸ್ವಲ್ಪ ಒತ್ತಡದ ವಾತಾವರಣ ಕಂಡುಬರುತ್ತದೆ.
Aquarius Horoscope – ಕುಂಭ ರಾಶಿ

ಯುವಕರಲ್ಲಿ ಆಕ್ರೋಶ ಹೆಚ್ಚಾಗುವ ಸೂಚನೆ ಇದೆ. ಆದಾಯ ಕಡಿಮೆ ಇರುವುದರಿಂದ ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ನಾಟಿ ವೈದ್ಯರಿಗೆ ಬೇಡಿಕೆ ಹೆಚ್ಚಾಗುತ್ತದೆ.
ಆಸ್ತಿ ವಿಚಾರದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ಕಣ್ಣು ಮತ್ತು ಉಸಿರಾಟದ ಸಮಸ್ಯೆಯವರು ಹೆಚ್ಚು ಜಾಗರೂಕರಾಗಿರಬೇಕು. ವ್ಯಾಪಾರದಲ್ಲಿ ನಿಮ್ಮ ಪಾತ್ರ ಹೆಚ್ಚಾಗುತ್ತದೆ.
Pisces Horoscope – ಮೀನ ರಾಶಿ

ಈ ವಾರ ಆದಾಯ ತಕ್ಕಮಟ್ಟಿಗೆ ಇರುತ್ತದೆ. ವಾರದ ಆರಂಭದಲ್ಲಿ ಅಸಹನೆ ಹೆಚ್ಚಿರಬಹುದು. ಬಂಧುಗಳ ವಿರೋಧವನ್ನು ನೀವೇ ಕಟ್ಟಿಕೊಳ್ಳುವ ಸಾಧ್ಯತೆ ಇದೆ.
ವಿದೇಶದಲ್ಲಿ ಹೋಟೆಲ್ ಉದ್ಯಮ ನಡೆಸುವವರಿಗೆ ಲಾಭ ಹೆಚ್ಚಾಗುತ್ತದೆ. ಸಂಗಾತಿಯ ವ್ಯವಹಾರದಲ್ಲಿ ಲಾಭದ ಸೂಚನೆ ಇದೆ. ದೈವಭಯ ಅಥವಾ ಆತಂಕ ಮನಸ್ಸನ್ನು ಕಾಡಬಹುದು.
ಹಕ್ಕುತ್ಯಾಗ (Disclaimer): ಮೇಲೆ ನೀಡಿರುವ ಮಾಹಿತಿಯು ವಿವಿಧ ಜ್ಯೋತಿಷ್ಯ ಮೂಲಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳ ಆಧಾರಿತವಾಗಿದೆ. mahitimane.com ಈ ಮಾಹಿತಿಯ ಖಚಿತತೆಯನ್ನು ಅನುಮೋದಿಸುವುದಿಲ್ಲ. ವೈಯಕ್ತಿಕ ನಿರ್ಧಾರಗಳಿಗೆ ಇದನ್ನೇ ಆಧಾರವಾಗಿಸಿಕೊಳ್ಳದೆ, ವಿವೇಕ ಬಳಸುವುದು ಉತ್ತಮ.