2026ರ ಜನವರಿ 1ರಿಂದ ಬ್ಯಾಂಕುಗಳಿಗೆ ಹಲವು ಹೊಸ ನಿಯಮಗಳನ್ನು (Banking New Rules 2026) ಆರ್‌ಬಿಐ ಜಾರಿಗೊಳಿಸುತ್ತಿದೆ. ಏನೆಲ್ಲ ಹೊಸ ನಿಯಮಗಳು ಜಾರಿಯಾಗಿವೆ? ಸಂಪೂರ್ಣ ಮಾಹಿತಿ ಇಲ್ಲಿದೆ…
2026ರ ಜನವರಿ 1ರಿಂದ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (Telecom Regulatory Authority of India- TRAI) ಒಟ್ಟಾಗಿ ಜಾರಿಗೆ ತರುತ್ತಿರುವ ಈ ಹೊಸ ನಿಯಮಗಳು, ಸಾಮಾನ್ಯ ಬ್ಯಾಂಕ್ ಗ್ರಾಹಕರಿಗೆ ನೇರವಾಗಿ ಉಪಯೋಗವಾಗುವಂತಿವೆ.
ಡಿಜಿಟಲ್ ಹಣಕಾಸು ಸೇವೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಆನ್‌ಲೈನ್ ವಂಚನೆ ತಡೆಯುವುದು ಹಾಗೂ ಸಾಲಗಾರರ ಮೇಲಿನ ಅನಗತ್ಯ ಹಣಕಾಸು ಭಾರ ಕಡಿಮೆ ಮಾಡುವುದು ಈ ನಿಯಮಗಳ ಮುಖ್ಯ ಉದ್ದೇಶವಾಗಿದೆ. ಹಾಗಾದರೆ ಜನವರಿ 1ರಿಂದ ಏನು ಬದಲಾಗಲಿದೆ? ಬ್ಯಾಂಕ್ ಗ್ರಾಹಕರಿಗೆ ಏನು ಲಾಭ? ವಿವರವಾಗಿ ನೋಡೋಣ.
ಇದನ್ನೂ ಓದಿ:KHB Site Allotment- ಸರ್ಕಾರದಿಂದ ಅರ್ಧ ಬೆಲೆಗೆ ಕೆಎಚ್‌ಬಿ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ
Zero Prepayment Charges – ಸಾಲವನ್ನು ಮುಂಚಿತವಾಗಿ ತೀರಿಸಿದರೆ ಯಾವುದೇ ಶುಲ್ಕವಿಲ್ಲ
ಇಲ್ಲಿಯವರೆಗೆ ಅನೇಕ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs), ಸಾಲದ ಅವಧಿ ಮುಗಿಯುವ ಮೊದಲು ಸಾಲವನ್ನು ತೀರಿಸಿದರೆ ಪ್ರೀ-ಪೇಮೆಂಟ್ ಚಾರ್ಜ್ ಅಥವಾ ದಂಡ ಶುಲ್ಕವನ್ನು ವಿಧಿಸುತ್ತಿದ್ದವು. ಇದರಿಂದಾಗಿ ಸಾಲಗಾರರು ಹೆಚ್ಚುವರಿ ಹಣ ಪಾವತಿಸಬೇಕಾದ ಅನಿವಾರ್ಯತೆ ಇತ್ತು.
ಆದರೆ ಈಗ ಆರ್‌ಬಿಐ ಈ ಪದ್ಧತಿಗೆ ಸ್ಪಷ್ಟವಾದ ಬ್ರೇಕ್ ಹಾಕಿದೆ. ಉದ್ಯಮ ಉದ್ದೇಶವಲ್ಲದ ಸಾಲಗಳು (ವೈಯಕ್ತಿಕ ಸಾಲ, ಗೃಹ ಸಾಲ ಮುಂತಾದವು) ಹಾಗೂ ಫ್ಲೋಟಿಂಗ್ ಬಡ್ಡಿದರದ ಮೇಲೆ ಪಡೆದ ಸಾಲಗಳನ್ನು ಅವಧಿಗೂ ಮುನ್ನ ತೀರಿಸಿದರೆ ಯಾವುದೇ ದಂಡ ಅಥವಾ ಶುಲ್ಕ ವಿಧಿಸುವಂತಿಲ್ಲ ಎಂದು ಆರ್‌ಬಿಐ ಸೂಚಿಸಿದೆ.
ಇದರೊಂದಿಗೆ ಇನ್ನೊಂದು ದೊಡ್ಡ ಲಾಭ ಏನೆಂದರೆ ಸಾಲಗಾರರು ಯಾವಾಗ ಬೇಕಾದರೂ ಸಾಲವನ್ನು ಮರುಪಾವತಿ ಮಾಡಬಹುದು, ಇದಕ್ಕೆ ಲಾಕ್-ಇನ್ ಅವಧಿ ಇರುವುದಿಲ್ಲ. ಅಂದರೆ, ನಿಮ್ಮ ಕೈಗೆ ಹಣ ಬಂದ ತಕ್ಷಣ ಸಾಲ ತೀರಿಸಿ ಬಡ್ಡಿ ಹೊರೆ ಕಡಿಮೆ ಮಾಡಿಕೊಳ್ಳಬಹುದು.

Personal Data Protection – ವೈಯಕ್ತಿಕ ಮಾಹಿತಿಗೆ ಅಕ್ರಮವಾಗಿ ಪ್ರವೇಶಿಸುವಂತಿಲ್ಲ
ಡಿಜಿಟಲ್ ಸಾಲಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರ ವೈಯಕ್ತಿಕ ಮಾಹಿತಿಯ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ತನ್ನ ‘ಡಿಜಿಟಲ್ ಲೆಂಡಿಂಗ್ ಡೈರೆಕ್ಷನ್ಸ್ 2025’ ನಿಯಮಗಳಲ್ಲಿ ಮಹತ್ವದ ತಿದ್ದುಪಡಿಗಳನ್ನು ತಂದಿದೆ.
ಇದೀಗ ಹೊಸ ನಿಯಮದ ಪ್ರಕಾರ ಡಿಜಿಟಲ್ ವೇದಿಕೆ ಅಥವಾ ಆ್ಯಪ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಕಡ್ಡಾಯವಾಗಿ ಸ್ಪಷ್ಟ ಅನುಮತಿ ಪಡೆಯಬೇಕು.
ಮೊಬೈಲ್‌ನ ಕಾಂಟ್ಯಾಕ್ಟ್ಸ್, ಲೊಕೇಷನ್, ಕ್ಯಾಮೆರಾ, ಫೋಟೋಗಳು ಮುಂತಾದ ಮಾಹಿತಿಗೆ ಗ್ರಾಹಕರ ಅನುಮತಿ ಇಲ್ಲದೆ ಪ್ರವೇಶಿಸಬಾರದು. ಅಗತ್ಯವಿಲ್ಲದ ಅಥವಾ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಗ್ರಾಹಕರು ಇಂತಹ ಅನುಮತಿಯನ್ನು ತಿರಸ್ಕರಿಸುವ ಹಕ್ಕು ಹೊಂದಿರುತ್ತಾರೆ.ಇದರಿಂದಾಗಿ ಡಿಜಿಟಲ್ ಸಾಲದ ಹೆಸರಿನಲ್ಲಿ ನಡೆಯುತ್ತಿದ್ದ ದೌರ್ಜನ್ಯ, ಬೆದರಿಕೆ ಕರೆಗಳು ಮತ್ತು ಡೇಟಾ ದುರುಪಯೋಗಕ್ಕೆ ಕಡಿವಾಣ ಬೀಳಲಿದೆ.
ಇದನ್ನೂ ಓದಿ: Personal Loan Tips- ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕಾ? ಈ ಐದು ಟಿಪ್ಸ್ ಪಾಲಿಸಿ
Mandatory 1600 Series Calls – ಬ್ಯಾಂಕ್ ಕರೆಗಳಿಗೆ ‘1600’ ನಂಬರ್ ಸೀರೀಸ್ ಕಡ್ಡಾಯ
ಇತ್ತೀಚಿನ ದಿನಗಳಲ್ಲಿ ನಕಲಿ ಬ್ಯಾಂಕ್ ಕರೆಗಳು, ಫ್ರಾಡ್ ಕಾಲ್‌ಗಳು ಹೆಚ್ಚಾಗಿದ್ದು, ಅನೇಕ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಟ್ರಾಯ್ ಮಹತ್ವದ ನಿರ್ಧಾರ ಕೈಗೊಂಡಿದೆ.
ಜನವರಿ 1ರಿಂದ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಹಾಗೂ ವಿಮಾ ಕಂಪನಿಗಳು ಗ್ರಾಹಕರಿಗೆ ಕರೆ ಮಾಡುವಾಗ ‘1600’ ಸೀರೀಸ್‌ನ ಸಂಖ್ಯೆಯನ್ನೇ ಬಳಸಬೇಕು.
ಇದರಿಂದ ಗ್ರಾಹಕರು ‘1600’ ನಂಬರ್‌ನಿಂದ ಕರೆ ಬಂದರೆ ಮಾತ್ರ ಇದು ಅಧಿಕೃತ ಬ್ಯಾಂಕ್ ಅಥವಾ ಹಣಕಾಉ ಸಂಸ್ಥೆಯ ಕರೆ ಎಂದು ಗುರುತಿಸಲು ಸಾಧ್ಯವಾಗುತ್ತದೆ. ಬೇರೆ ನಂಬರುಗಳಿಂದ ಬಂದ ಕರೆಗಳನ್ನು ನಿರಾಕರಿಸಬಹುದು.
ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ
Key Benefits for Customers – ಒಟ್ಟಾರೆ ಗ್ರಾಹಕರಿಗೆ ಏನು ಲಾಭ?
ಈ ಹೊಸ ನಿಯಮಗಳ ಮೂಲಕ ಸಾಲಗಾರರ ಮೇಲೆ ಇರುವ ಅನಗತ್ಯ ಶುಲ್ಕದ ಹೊರೆ ಕಡಿಮೆಯಾಗಲಿದೆ.ಡಿಜಿಟಲ್ ಹಣಕಾಸು ಸೇವೆಗಳಲ್ಲಿ ಪಾರದರ್ಶಕತೆ ಹೆಚ್ಚಲಿದೆ. ವೈಯಕ್ತಿಕ ಮಾಹಿತಿಯ ದುರುಪಯೋಗಕ್ಕೆ ಬ್ರೇಕ್ ಬೀಳಲಿದೆ.
ಆನ್‌ಲೈನ್ ಹಾಗೂ ಫೋನ್ ಮೂಲಕ ನಡೆಯುವ ವಂಚನೆ ತಡೆಯಲು ಸಹಾಯವಾಗಲಿದೆ ಒಟ್ಟಿನಲ್ಲಿ, 2026ರ ಜನವರಿ 1ರಿಂದ ಜಾರಿಗೆ ಬರಲಿರುವ ಈ ನಿಯಮಗಳು ಬ್ಯಾಂಕ್ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ದಿಕ್ಕಿನಲ್ಲಿ ದೊಡ್ಡ ಹೆಜ್ಜೆ ಎಂದೇ ಹೇಳಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.