ಪ್ರತಿಷ್ಟಿತ ಟಾಟಾ ಸ್ಕಾಲರ್‌ಶಿಪ್’ಗೆ (TaTa Capital Pankh Scholarship 2025) ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ₹18,000 ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು; ಅರ್ಜಿ ಸಲ್ಲಿಕೆಯ ಪೂರ್ಣ ಮಾಹಿತಿ ಇಲ್ಲಿದೆ…
ಪ್ರತಿಷ್ಠಿತ ಟಾಟಾ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಯು ‘ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ ಕಾರ್ಯಕ್ರಮ 2025-26’ ಅಡಿಯಲ್ಲಿ 11 ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸುತ್ತಿದೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬಲ ತುಂಬುವ ಉದ್ದೇಶದಿಂದ ಕಳೆದ ಹಲವಾರು ವರ್ಷಗಳಿಂದ ಟಾಟಾ ಗ್ರೂಪ್ ಈ ಯೋಜನೆಯಡಿ ಆರ್ಥಿಕ ನೆರವು ನೀಡುತ್ತಿದೆ. ಈ ಬಾರಿ ಸಹ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಈ ವಿದ್ಯಾರ್ಥಿವೇತನವನ್ನು ಪಡೆಯಲು ಕೆಲವೊಂದು ಸರಳ ಅರ್ಹತಾ ಷರತ್ತುಗಳನ್ನು ಪೂರೈಸಬೇಕು. ಆ ಪೈಕಿ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ 11 ಅಥವಾ 12ನೇ ತರಗತಿಗೆ ಪ್ರವೇಶ ಪಡೆದಿರಬೇಕು.
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು. ಇವು ಅತ್ಯಂತ ಸಾಮಾನ್ಯ ಷರತ್ತುಗಳು ಆಗಿರುವುದರಿಂದ, ಹೆಚ್ಚಿನ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಎಷ್ಟು ಆರ್ಥಿಕ ನೆರವು ಸಿಗುತ್ತದೆ?
ಟಾಟಾ ಕ್ಯಾಪಿಟಲ್ ಸಂಸ್ಥೆಯು ವಿದ್ಯಾರ್ಥಿಯ ಅಂಕಗಳ ಆಧಾರದ ಮೇಲೆ ಈ ಕೆಳಗಿನ ಮೂರು ಹಂತದಲ್ಲಿ ವಿದ್ಯಾರ್ಥಿವೇತನವನ್ನು ನೀಡುತ್ತಿದೆ:
- ಶೇ.60 ರಿಂದ ಶೇ.80ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ₹12,000
- ಶೇ.81 ರಿಂದ ಶೇ.90ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ₹15,000
- ಶೇ.91ರಷ್ಟು ಮತ್ತು ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ₹18,000
ಇದು ಪಿಯುಸಿ ವಿದ್ಯಾರ್ಥಿಗಳಿಗೆ ದೊಡ್ಡ ನೆರವಾಗುವಂತಹ ಮೊತ್ತವಾಗಿದ್ದು; ಶಾಲಾ/ಕಾಲೇಜು ಶುಲ್ಕ, ಪುಸ್ತಕಗಳು, ಯುನಿಫಾರ್ಮ್ ಅಥವಾ ಪ್ರಯಾಣ ವೆಚ್ಚಗಳಿಗೆ ಇದು ನೆರವಾಗುತ್ತದೆ.
ಇದನ್ನೂ ಓದಿ: Women Free Sewing Machine- ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆ | ಮಹಿಳೆಯರಿಗೆ ಸುವರ್ಣಾವಕಾಶ
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕಾಗುತ್ತದೆ:
- ಆಧಾರ್ ಕಾರ್ಡ್
- ಶಾಲೆ/ಕಾಲೇಜಿನ ಪ್ರವೇಶ ಪತ್ರ
- ಪ್ರಸ್ತುತ ಸಾಲಿನ ಶುಲ್ಕ ರಶೀದಿ
- ಹಿಂದಿನ ತರಗತಿ ಅಂಕಪಟ್ಟಿ
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ವಿದ್ಯಾರ್ಥಿಯ ಪಾಸ್‌ಪೋರ್ಟ್ ಸೈಜ್ ಫೋಟೋ
ಇದನ್ನೂ ಓದಿ: Anganwadi Recruitment 2025- ಮಹಿಳೆಯರಿಗೆ ಅಂಗನವಾಡಿ ಹುದ್ದೆಗಳು | 571 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ವಿಧಾನ (Online Process)
ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಆಗಿದ್ದು, ಹಂತ ಹಂತದ ವಿವರ ಇಲ್ಲಿದೆ:
ಹಂತ 1: ಮೊದಲು ಅಧಿಕೃತ ಸ್ಕಾಲರ್‌ಶಿಪ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅದರ ಲಿಂಕ್ ಲೇಖನದ ಕೊನೆಯಲ್ಲಿ ನೀಡಿದೆ ಗಮನಿಸಿ.
ಹಂತ 2: ಮುಖಪುಟದಲ್ಲಿ ಕಾಣಿಸುವ Apply Now ಅಥವಾ Register ಬಟನ್ ಮೇಲೆ ಕ್ಲಿಕ್ ಮಾಡಿ. ಹೊಸ ಬಳಕೆದಾರರಾದ ವಿದ್ಯಾರ್ಥಿಗಳು ತಮ್ಮ User ID ಮತ್ತು Password ರಚಿಸಿಕೊಂಡು ಹೊಸ ಖಾತೆಯನ್ನು ಸೃಷ್ಟಿಸಬೇಕು. ನಂತರ Login ಮಾಡಿ ಒಳಗೆ ಪ್ರವೇಶಿಸಬೇಕು.
ಹಂತ 3: ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆಯುತ್ತದೆ. ಅಲ್ಲಿ ಕೇಳಲಾಗಿರುವ ವೈಯಕ್ತಿಕ ಮಾಹಿತಿ, ವಿಳಾಸ, ಅಂಕಗಳು, ಬ್ಯಾಂಕ್ ವಿವರಗಳು ಮುಂತಾದ ಮಾಹಿತಿಗಳನ್ನು ಸರಿಯಾಗಿ ತುಂಬಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಕೊನೆಯಲ್ಲಿ Submit ಬಟನ್ ಒತ್ತಬೇಕು.
ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಮೊಬೈಲ್/ಇಮೇಲ್‌ಗೆ ತಪಾಸಣಾ ಸಂದೇಶ ಬರುತ್ತದೆ. ನಂತರ ಸಂಸ್ಥೆ ಪರಿಶೀಲನೆ ನಡೆಸಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ.
ತಕ್ಷಣ ಅರ್ಜಿ ಸಲ್ಲಿಸಿ
ಶೈಕ್ಷಣಿಕ ತೊಂದರೆಗಳಿಂದ ಹಲವಾರು ಪ್ರತಿಭೆಗಳು ಬೆಳಕಿಗೆ ಬರದೇ ಮಸುಕಾಗುತ್ತಿದ್ದು; ಇಂತಹ ವಿದ್ಯಾರ್ಥಿಗಳಿಗೆ ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನವು ಸಹಾಯ ಮಾಡುತ್ತದೆ.
ಪಿಯುಸಿ ವ್ಯಾಸಂಗ ಮಾಡುತ್ತಿರುವ ಮತ್ತು ಆರ್ಥಿಕ ನೆರವಿಗೆ ಕಾಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಯೋಜನೆ ದೊಡ್ಡ ಅವಕಾಶವಾಗಿದೆ. ನೀವು ಅಥವಾ ನಿಮ್ಮ ಪರಿಚಯದ ವಿದ್ಯಾರ್ಥಿಗಳು ಅರ್ಹರಾಗಿದ್ದರೆ, ಅವಕಾಶವನ್ನು ತಪ್ಪಿಸಿಕೊಳ್ಳದೆ ತಕ್ಷಣವೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅರ್ಜಿ ಲಿಂಕ್: Apply Now

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.