ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಯೋಜನೆಗಳ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ (Women Free Sewing Machine) ವಿತರಣೆ ಮಾಡುತ್ತವೆ. ಮಹಿಳೆಯರಿಗೆ ಇದು ಸುವರ್ಣಾವಕಾಶವಾಗಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಮಹಿಳೆಯರು ಮನೆಯಲ್ಲಿಯೇ ಕುಳಿತು ಸ್ವಂತ ಆದಾಯ ಗಳಿಸಬೇಕು, ಆರ್ಥಿಕವಾಗಿ ಬಲವಾಗಬೇಕು ಎಂಬುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಮುಖ ಗುರಿಗಳಲ್ಲೊಂದು. ಈ ನಿಟ್ಟಿನಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಿ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಡುವ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
ಕೆಳಗಿನ ಯೋಜನೆಗಳ ಮೂಲಕ ಸರ್ಕಾರವು ಉಚಿತ ಅಥವಾ ಸಬ್ಸಿಡಿಯಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸುತ್ತಿದ್ದು, ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಅಗತ್ಯ ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ.
ಇದನ್ನೂ ಓದಿ: Anganwadi Recruitment 2025- ಮಹಿಳೆಯರಿಗೆ ಅಂಗನವಾಡಿ ಹುದ್ದೆಗಳು | 571 ಹುದ್ದೆಗಳಿಗೆ ಅರ್ಜಿ ಆಹ್ವಾನ
ಯಾವೆಲ್ಲ ಯೋಜನೆಗಳಡಿ ಉಚಿತ ಹೊಲಿಗೆ ಯಂತ್ರ ಸಿಗುತ್ತದೆ?
ಮಹಿಳೆಯರು ಕೇವಲ ಒಂದು ಹೊಲಿಗೆ ಯಂತ್ರದ ಮೂಲಕ ಆರ್ಥಿಕ ಸ್ವಾಲಂಬನೆ ಸಾಧಿಸಬಹುದಾಗಿದ್ದು; ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡುವ ಪ್ರಮುಖ ಯೋಜನೆಗಳು ಹೀಗಿವೆ:
1) ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆ
ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಡಿಯಲ್ಲಿ ಗ್ರಾಮೀಣ ಮತ್ತು ನಗರ ಭಾಗದ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ಕೌಶಲ್ಯ ಪ್ರಮಾಣ ಪತ್ರದೊಂದಿಗೆ ಉಚಿತ ಹೊಲಿಗೆ ಯಂತ್ರ ನೀಡಲಾಗುತ್ತಿದೆ.
ಈ ಯೋಜನೆಯ ವಿಶೇಷತೆ ಎಂದರೆ ಅರ್ಹ ಮಹಿಳೆಯರಿಗೆ ಉಚಿತ ತರಬೇತಿ, ಸ್ಟೈಪೆಂಡ್ ಸೌಲಭ್ಯ, ತರಬೇತಿ ನೀಡಿ, ನಂತರ ಉದ್ಯೋಗ ಆರಂಭಿಸಲಿ ಮಾರ್ಗದರ್ಶನದ ಸಹಿತ ಉಚಿತವಾಗಿ ಹೊಲಿಯಂತ್ರವನ್ನು ವಿತರಿಸಲಾಗುತ್ತದೆ.
ಇದನ್ನೂ ಓದಿ: Karnataka New BPL Card List- 2.93 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ | ಈ ಹೊಸ ಪಟ್ಟಿಯಲ್ಲಿ ನೀವಿದ್ದೀರಾ?
2) ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ (PMEGP)
ಹೊಲಿಗೆ ಅಥವಾ ಸ್ವಂತ ಸಣ್ಣ ಉದ್ದಿಮೆ ಆರಂಭಿಸಲು ಬಯಸುವ ಮಹಿಳೆಯರು ಈ ಯೋಜನೆಯಡಿ ಅತ್ಯಧಿಕ ಶೇ.35ರಷ್ಟು ಸಬ್ಸಿಡಿ ಪಡೆದುಕೊಂಡು ಹೊಲಿಗೆ ಯಂತ್ರ ಖರೀದಿ ಮಾಡಬಹುದು.
ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಬೇರೆ ಬೇರೆ ರೀತಿಯ ಶೇಕಡಾವಾರು ಸಬ್ಸಿಡಿ ಲಭ್ಯವಿರುತ್ತದೆ. ಬ್ಯಾಂಕ್ ಸಾಲ, ಸರ್ಕಾರದ ಸಬ್ಸಿಡಿ ಜೊತೆಗೆ ಹೊಲಿಗೆ ಯಂತ್ರ ಸಹಿತ ವಿವಿಧ ಉದ್ದಮ ಸ್ಥಾಪನೆಗೆ ಅನುವು ಮಾಡಿ ಕೊಡಲಾಗುತ್ತದೆ.

3) ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳು
ಕರ್ನಾಟಕ ಸರ್ಕಾರದ ಒಕ್ಕಲಿಗ, ಲಿಂಗಾಯತ, ದೇವರಾಜ ಅರಸು, SC/ST, ಅಲ್ಪಸಂಖ್ಯಾತ, ಮರಾಠ, ವಿಶ್ವಕರ್ಮ ಹಾಗೂ ಹಲವು ನಿಗಮಗಳಿಂದ ಸಮಯಾನುಸಾರ ಉಚಿತ ಹೊಲಿಗೆ ಯಂತ್ರ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗುತ್ತವೆ. ಪ್ರಸ್ತುತ ಮರಾಠ ಅಭಿವೃದ್ಧಿ ನಿಗಮದಿಂದ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
4) ಜಿಲ್ಲಾ ಕೈಗಾರಿಕಾ ಕೇಂದ್ರ ಯೋಜನೆ
ಗ್ರಾಮೀಣ ಮಹಿಳಾ ಕುಶಲಕರ್ಮಿಗಳಿಗಾಗಿ 2025-26ನೇ ಸಾಲಿನಲ್ಲಿ ಜಿಲ್ಲಾ ವಲಯ ಯೋಜನೆಯಡಿ ‘ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆ’ ಮೂಲಕ ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನಿಸುತ್ತಿವೆ.
ಈ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದ್ದು; ಬಹಳಷ್ಟು ಜಿಲ್ಲೆಗಳ ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯವಾಗಿದೆ. ಪ್ರಸ್ತುತ ಕೋಲಾರ ಜಿಲ್ಲೆಯಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಉಚಿತ ಅಥವಾ ಸಬ್ಸಿಡಿ ಹೊಲಿಗೆ ಯಂತ್ರ ಪಡೆಯಲು ಮಹಿಳೆಯರು ಈ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ:
- ಮಹಿಳೆಯ ವಯಸ್ಸು 18 ರಿಂದ 45 ವರ್ಷದೊಳಗೆ ಇರಬೇಕು.
- ಅರ್ಜಿದಾರ ಮಹಿಳೆ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಈಗಾಗಲೇ ಬೇರೆ ಸರ್ಕಾರದ ಯೋಜನೆಯಡಿ ಇದೇ ಪ್ರಯೋಜನ ಪಡೆದಿರಬಾರದು.
- ಉಚಿತ ಹೊಲಿಗೆ ಯಂತ್ರ ಪಡೆಯಲು ಸರ್ಕಾರಿ ನೌಕರರ ಕುಟುಂಬದವರು ಅರ್ಹರಾಗಿರುವುದಿಲ್ಲ.
- ಹೊಲಿಗೆ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ.
ಇದನ್ನೂ ಓದಿ: E-Svattu 2.0- ಇ-ಸ್ವತ್ತು ಅರ್ಜಿ ಸಲ್ಲಿಕೆ ಆರಂಭ | ಮನೆಯಲ್ಲಿ ಕೂತೆ ಅರ್ಜಿ ಸಲ್ಲಿಸಿ | ಅರ್ಜಿ ಲಿಂಕ್ ಇಲ್ಲಿದೆ…
ಅರ್ಜಿ ಸಲ್ಲಿಸುವ ವಿಧಾನ
ವಿಶ್ವಕರ್ಮ, PMEGP ಮತ್ತು ನಿಗಮಗಳಿಂದ ಬರುವ ಅನೇಕ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳನ್ನು ಭೇಟಿ ಮಾಡಿ ಮಾಹಿತಿ ಪಡೆದು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಇನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಯೋಜನೆಗಾಗಿ ಮಹಿಳೆಯರು ಆಯಾ ಜಿಲ್ಲೆಯ ಜಿಲ್ಲಾ ಪಂಚಾಯತಿಯ ‘ಗ್ರಾಮೀಣ ಕೈಗಾರಿಕೆ ವಿಭಾಗ’ದ ಉಪ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿಗೆ ಬೇಕಾಗುವ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್ ಪ್ರತಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್‌ಪೋರ್ಟ್ ಸೈಸ್ ಫೋಟೋ
- ಹೊಲಿಗೆ ತರಬೇತಿ ಪ್ರಮಾಣ ಪತ್ರ (ಇದ್ದರೆ ಲಾಭ)
- ಪಡಿತರ ಚೀಟಿ/ ಮತದಾರರ ಚೀಟಿ
ಒಟ್ಟಿನಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆಗಳು ಕೇವಲ ಸಾಧನ ವಿತರಣೆಯಲ್ಲ; ಇದು ಮಹಿಳೆಯರು ಸ್ವಂತ ವ್ಯವಹಾರ ಆರಂಭಿಸಲು ನೀಡುವ ಪ್ರಬಲ ಪೂರಕ ಶಕ್ತಿ. ವಿಶೇಷವಾಗಿ ಮನೆಯಿಂದ ಹೊರಗೆ ಹೋಗಲು ಸಾಧ್ಯವಿಲ್ಲದ ಮಹಿಳೆಯರು ಮನೆಯಲ್ಲಿ ಕುಳಿತೇ ಆದಾಯ ಗಳಿಸಬಹುದಾಗಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.