NWKRTC Officer Recruitment 2025- ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿ ಹುದ್ದೆಗಳ ನೇಮಕಾತಿ | 33 ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (NWKRTC Officer Recruitment 2025) ವಿವಿಧ ಅಧಿಕಾರಿ ಹುದ್ದೆಗಳ ಭರ್ತಿ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು; ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ವೃಂದದ ದರ್ಜೆ-2 ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಆಂತರಿಕ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ವಿವರ

27 ನೇರ ನೇಮಕಾರಿ ಹುದ್ದೆಗಳು ನೇರ ನೇಮಕಾತಿ ಹಾಗೂ 06 ಹುದ್ದೆಗಳು ಆಂತರಿಕ ನೇಮಕಾತಿ ನಡೆಯಲಿದ್ದು; ನೇರ ನೇಮಕಾರಿ ಹುದ್ದೆಗಳ ವಿವರ ಹೀಗಿದೆ:

  • ಸಹಾಯಕ ಆಡಳಿತಾಧಿಕಾರಿ: 02
  • ಸಹಾಯಕ ಲೆಕ್ಕಾಧಿಕಾರಿ: 02
  • ಸಹಾಯಕ ಕಾನೂನು ಅಧಿಕಾರಿ: 05
  • ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ: 04
  • ಸಹಾಯಕ ತಾಂತ್ರಿಕ ಶಿಲ್ಪಿ: 06
  • ಸಹಾಯಕ ಸಂಚಾರ ವ್ಯವಸ್ಥಾಪಕ: 08

ಇದನ್ನೂ ಓದಿ: RDCC Bank Recruitment 2025- ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ, ಪದವೀಧರರಿಗೆ ಅವಕಾಶ

ವಿದ್ಯಾರ್ಹತೆ ವಿವರ
  • ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ಸೋಷಿಯಲ್ ವರ್ಕ್, ಬಿಜಿನೆಸ್ ಅಡ್ಮಿನಿಸ್ಟ್ರೇಷನ್, ಪರ್ಸನಲ್ ಮ್ಯಾನೇಜ್ ಮೆಂಟ್, ಎಚ್‌ಆರ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
  • ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಎಂ.ಕಾಂ ಅಥವಾ ಬಿಕಾಂ ಜತೆಗೆ ಎಂಬಿಎ ಪದವಿ ಪಡೆದಿರಬೇಕು.
  • ಕಾರ್ಮಿಕ ಕಲ್ಯಾಣಾಧಿಕಾರಿ ಹುದ್ದೆಗೆ ಇಂಡಸ್ಟ್ರಿಯಲ್ ರಿಲೇಷನ್/ಪರ್ಸೊನೆಲ್ ಮ್ಯಾನೇಜ್‌ಮೆಂಟ್/ ಲೇಬರ್ ವೆಲ್ಫೇರ್ ವಿಷಯಗಳಲ್ಲಿ ಎಂಎಸ್‌ಡಬ್ಲು ಪಡೆದವರು ಅರ್ಜಿ ಸಲ್ಲಿಸಬಹುದು.
  • ಕಾನೂನು ಅಧಿಕಾರಿ ಹುದ್ದೆಗೆ ಎಲ್‌ಎಲ್‌ಬಿ ಪಡೆದು ಎರಡು ವರ್ಷ ವಕೀಲ ವೃತ್ತಿ ನಡೆಸಿದವರು ಅರ್ಹರು.
  • ಸಹಾಯಕ ತಾಂತ್ರಿಕ ಶಿಲ್ಪಿ ಹುದ್ದೆಗೆ ಆಟೋಮೊಬೈಲ್/ ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರು ಅರ್ಹರಾಗಿದ್ದಾರೆ.
  • ಸಹಾಯಕ ಸಂಚಾರ ವ್ಯವಸ್ಥಾಪಕ ಹುದ್ದೆಗೆ ಎಂಬಿಎ/ಎಂಎಸ್‌ಡಬ್ಲ್ಯು/ ಬಿಇ/ಬಿ.ಟೆಕ್/ ಪದವಿ ಪಡೆದವರು ಅರ್ಹರಾಗಿದ್ದು, ಭಾರಿ ವಾಹನ ಚಾಲನಾ ಪರವಾನಗಿ ಪಡೆದಿರಬೇಕು. ಜತೆಗೆ ನಿಗದಿತ ದೇಹದಾರ್ಡ್ಯತೆಯನ್ನು ಹೊಂದಿರಬೇಕು.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವಿವಿಧ ಅಧಿಕಾರಿ ಹುದ್ದೆಗಳ ಭರ್ತಿ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು; ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
NWKRTC Officer Recruitment 2025

ಇದನ್ನೂ ಓದಿ: LKG UKG Teacher Recruitment 2025- ಸರ್ಕಾರಿ ಶಾಲೆ ಎಲ್‌ಜಿ-ಯುಕೆಜಿಗೆ ಶಿಕ್ಷಕರು, ಆಯಾಗಳ ನೇಮಕಾತಿ | ಸರ್ಕಾರದ ಅಧಿಕೃತ ಸೂಚನೆ

ವಯೋಮಿತಿ ವಿವರ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದವರಾಗಿರಬೇಕು. ಸಾಮಾನ್ಯ ವರ್ಗದವರಿಗೆ 38 ವರ್ಷ, ಹಿಂದುಳಿದ ವರ್ಗದವರಿಗೆ 41 ಹಾಗೂ ಪರಿಶಿಷ್ಟರಿಗೆ 43 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

ವೇತನಶ್ರೇಣಿ ಎಷ್ಟು?

ಮೇಲ್ಕಾಣಿಸಿದ ಎಲ್ಲ ಹುದ್ದೆಗಳಿಗೂ 42,600 ರಿಂದ 75,010 ರೂ. ವರೆಗೆ ಮಾಸಿಕ ವೇತನಶ್ರೇಣಿ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಸರ್ಕಾರ ಸವಲತ್ತುಗಳೆಲ್ಲವೂ ಅನ್ವಯವಾಗಲಿದೆ.

ಇದನ್ನೂ ಓದಿ: New Voter ID Mobile Application Guide- ಮೊಬೈಲ್‌ನಲ್ಲಿಯೇ ಹೊಸ ಮತದಾರರ ಚೀಟಿಗೆ ಅರ್ಜಿ ಹಾಕಿ | ಆನ್‌ಲೈನ್ ಮೂಲಕ ಮತದಾರರ ಪಟ್ಟಿಗೆ ಸೇರುವ ಸರಳ ವಿಧಾನ ಇಲ್ಲಿದೆ…

ಪರೀಕ್ಷಾರ್ಥ ಅವಧಿ

ಹುದ್ದೆಗೆ ಆಯ್ಕೆಯಾದವರಿಗೆ ಒಂದು ವರ್ಷದ ತರಬೇತಿ ಒಳಗೊಂಡAತೆ ಎರಡು ವರ್ಷಗಳ ಕಾಲ ಕಾಯಂ ಪೂರ್ವ ಪರೀಕ್ಷಾರ್ಥ ಸೇವೆಗೆ ನಿಯೋಜಿಸಲಾಗುತ್ತದೆ.

ಈ ಅವಧಿ ಪೂರ್ಣಗೊಳ್ಳುವ ಮುನ್ನ ಗಣಕಯಂತ್ರದ ಜ್ಞಾನದ ಬಗ್ಗೆ ಕಿಯೋನಿಕ್ಸ್ ಅಥವಾ ಇತರ ಸಂಸ್ಥೆಗಳ ಮೂಲಕ ಕಂಪ್ಯೂಟರ್ ಪರಿಣತಿ ಪಡೆದಿರುವ ಪ್ರಮಾಣಪತ್ರವನ್ನು ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ.

ಅರ್ಜಿ ಶುಲ್ಕದ ವಿವರ
  • ಸಾಮಾನ್ಯ, ಇತರ ಪ್ರವರ್ಗಗಳಿಗೆ: 750 ರೂ.
  • ಪರಿಶಿಷ್ಟರು, ಪ್ರವರ್ಗ-1, ಮಾಜಿ ಸೈನಿಕರು: 500 ರೂ.
  • ಅಂಗವಿಕಲರಿಗೆ: 250 ರೂ.
ಪರೀಕ್ಷೆ ವಿಧಾನ

ಆಯ್ಕೆ ಪ್ರಕ್ರಿಯೆಗಾಗಿ ಒಎಂಆರ್ ಮಾದರಿಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಸಾಮಾನ್ಯ ಹಾಗೂ ನಿರ್ದಿಷ್ಟ ಪತ್ರಿಕೆಯನ್ನು ತಲಾ 300 ಅಂಕಗಳಿಗೆ ನಡೆಸಲಾಗುತ್ತದೆ. ಎರಡು ತಾಸು ಕಾಲಾವಕಾಶ ಇರಲಿದೆ.

  • ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 10-12-2025
  • ಅಧಿಸೂಚನೆ ಲಿಂಕ್: Download

ಇದನ್ನೂ ಓದಿ: BWSSB Recruitment 2025- ಪದವಿ, ಪಿಯುಸಿ ಅಭ್ಯರ್ಥಿಗಳಿಂದ ಬೆಂಗಳೂರು ಜಲಮಂಡಳಿ 224 ಹುದ್ದೆಗಳಿಗೆ ಅರ್ಜಿ ಆಹ್ವಾನ


Spread the love
error: Content is protected !!