ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ₹12,000 ಧನಸಹಾಯ (Toilet Subsidy Karnataka) ನೀಡಲಾಗುತ್ತದೆ. ಈ ಸೌಲಭ್ಯ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಅನೇಕ ಕುಟುಂಬಗಳು ಶೌಚಾಲಯದ ಸೌಲಭ್ಯವಿಲ್ಲದೆ ದಿನನಿತ್ಯ ತೊಂದರೆ ಅನುಭವಿಸುತ್ತಿವೆ. ವಿಶೇಷವಾಗಿ ಹಳ್ಳಿಗಳಲ್ಲಿ ಮಹಿಳೆಗಳು, ಮಕ್ಕಳು ಹಾಗೂ ವೃದ್ಧರು ಬಯಲು ಬಹಿರ್ದೆಸೆಗೆ ಹೋಗುವ ಅನಿವಾರ್ಯತೆಯಿಂದ ಹಲವು ರೀತಿಯ ಅಪಾಯಗಳನ್ನು ಎದುರಿಸುತ್ತಿದ್ದಾರೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ‘ಸ್ವಚ್ಛ ಭಾರತ್ ಮಿಷನ್’ (Swachh Bharat Mission) ಜಾರಿಗೊಳಿಸಲಾಗಿದೆ. ಈ ಯೋಜನೆಯಿಂದ ಲಕ್ಷಾಂತರ ಮನೆಗಳು ಈಗಾಗಲೇ ಶೌಚಾಲಯ ನಿರ್ಮಿಸಿಕೊಂಡಿವೆ.
ಸದರಿ ಸ್ವಚ್ಛ ಭಾರತ್ ಮಿಷನ್ – ಗ್ರಾಮೀಣ ಯೋಜನೆಯ 2ನೇ ಹಂತದ ಕಾರ್ಯಕ್ರಮ ಜಾರಿಯಲ್ಲಿದ್ದು; ಅರ್ಹ ಕುಟುಂಬಗಳಿಗೆ ವೈಯಕ್ತಿಕ ಗೃಹ ಶೌಚಾಲಯ (IHHLs) ನಿರ್ಮಾಣ ಮಾಡಿಕೊಳ್ಳಲು ₹12,000 ಆರ್ಥಿಕ ನೆರವು ನೀಡಲಾಗುತ್ತಿದೆ.
ಇದನ್ನೂ ಓದಿ: How to Check Land Loan Details- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ
ಏನಿದು ಸ್ವಚ್ಛ ಭಾರತ್ ಮಿಷನ್?
2014ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಮಿಷನ್ ಅನುಷ್ಠಾನಗೊಳಿಸಲಾಗಿದೆ. ಗ್ರಾಮೀಣ ಭಾರತವನ್ನು ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತ (Open Defecation Free – ODF) ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
2020-21ರಿಂದ 2025-26ರ ವರೆಗೆ ಸದರಿ ಯೋಜನೆಯ ಹಂತ-2 (SBM Phase-II) ಕಾರ್ಯಕ್ರಮದ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಉತ್ತೇಜನ ನೀಡಲಾಗುತ್ತಿದೆ. ಜೊತೆಗೆ ಗ್ರಾಮಗಳಲ್ಲಿ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆಯ ಬಗ್ಗೆ ಜಾಗೃತಿಗೂ ಅನುದಾನ ಒದಗಿಸಲಾಗುತ್ತಿದೆ.

ಶೌಚಾಲಯ ನಿರ್ಮಾಣಕ್ಕೆ ₹12,000 ಸಹಾಯಧನ
ಸ್ವಚ್ಛ ಭಾರತ್ ಮಿಷನ್ ಹಂತ-2ರ ಅಡಿಯಲ್ಲಿ ಸರ್ಕಾರ ವೈಯಕ್ತಿಯ ಶೌಚಾಲಯ ನಿರ್ಮಾಣಕ್ಕೆ ಧನಸಹಾಯ ಒದಗಿಸುತ್ತಿದೆ. ಈ ಆರ್ಥಿಕ ನೆರವನ್ನು ತಲಾ ₹6,000 ದಂತೆ ಎರಡು ಕಂತುಗಳಲ್ಲಿ ಒಟ್ಟು ₹12,000 ಬಿಡುಗಡೆ ಮಾಡಲಾಗುತ್ತದೆ.
DBT ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಶೌಚಾಲಯ ನಿರ್ಮಾಣ ಪೂರ್ಣಗೊಂಡ ನಂತರ ಜಿಯೋ-ಟ್ಯಾಗಿಂಗ್, ಸ್ಥಳ ಪರಿಶೀಲನೆ ಮುಗಿದ ಬಳಿಕ ನಿಗದಿತ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ.
ಯಾರೆಲ್ಲ ಅರ್ಹರು? (Eligibility Criteria)
ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಸರ್ಕಾರ ಕೆಲವು ಅರ್ಹತಾ ಮಾನದಂಡಗಳನ್ನು ರೂಪಿಸಿದೆ. ಈ ಪೈಕಿ ಪ್ರಮುಖವಾಗಿ ಮನೆಯಲ್ಲಿ ಈಗಾಗಲೇ ಶೌಚಾಲಯ ಇರಬಾರದು. ಬಿಪಿಎಲ್ / ಬಡ ಕುಟುಂಬಗಳಿಗೆ, ಮಹಿಳಾ ಮುಖ್ಯಸ್ಥರ ಮನೆ, ವೃದ್ಧರು, ಅಂಗವಿಕಲರು ಇರುವ ಮನೆಗಳಿಗೆ ವಿಶೇಷ ಅವಕಾಶ ನೀಡಲಾಗುತ್ತದೆ.
ಯೋಜನೆಯ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಕಡ್ಡಾಯವಾಗಿ ಇರಬೇಕು. ಎಪಿಎಲ್ ಕುಟುಂಬಗಳಾಗಿದ್ದರೂ ಕೂಡ ಎಸ್‌ಸಿ, ಎಸ್‌ಟಿ, ಸಣ್ಣ ರೈತರು, ಭೂ ರಹಿತ ಕಾರ್ಮಿಕರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಇದನ್ನೂ ಓದಿ: BPL Card Cancellation Check- ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆಯಾ? ಮೊಬೈಲ್’ನಲ್ಲೇ ಚೆಕ್ ಮಾಡಿ…
ಅರ್ಜಿ ಪ್ರಕ್ರಿಯೆ ಹೇಗೆ?
ವೈಯಕ್ತಿಕ ಶೌಚಾಲಯ ಸಹಾಯಧನ ಪಡೆಯಲು ಆಫ್‌ಲೈನ್ ಹಾಗೂ ಆನ್‌ಲೈನ್ ಎರಡೂ ಹಂತಗಳಲ್ಲೂ ಅರ್ಜಿ ಸಲ್ಲಿಸಲು ಅವಕಶವಿದೆ. ಆಫ್‌ಲೈನ್ ವಿಧಾನದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಯ ಪಿಡಿಓ ಭೇಟಿಯಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಇನ್ನು ಆನ್‌ಲೈನ್ ಮೂಲಕವಾದರೆ ಸ್ವಚ್ಛ ಭಾರತ್ ಮಿಷನ್-ಗ್ರಾಮೀಣ ಪೋರ್ಟಲ್ sbm.gov.in ಮೂಲಕ ನೋಂದಣಿ ಮಾಡಿಕೊಂಡು. ಲಾಗಿನ್ ಮಾಡಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಬೇಕಾಗುವ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್
- ಮನೆ ವಿವರ / ರೇಷನ್ ಕಾರ್ಡ್
- ಶೌಚಾಲಯ ನಿರ್ಮಾಣದ ಫೋಟೋಗಳು
- ಭಾವಚಿತ್ರ
ಶೌಚಾಲಯ ನಿರ್ಮಾಣ ಕೇವಲ ಒಂದು ಸೌಲಭ್ಯವಲ್ಲ; ಇದು ಕುಟುಂಬದ ಆರೋಗ್ಯಕ್ಕೆ, ಪ್ರತಿಷ್ಠೆಗೆ ಮತ್ತು ಭದ್ರತೆಗೆ ಅಗತ್ಯ. ಇನ್ನೂ ಶೌಚಾಲಯ ಹೊಂದಿಲ್ಲದಿದ್ದರೆ ಕೂಡಲೇ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ…
ಅಧಿಕೃತ ವೆಬ್‌ಸೈಟ್: swachhbharatmission.ddws.gov.in

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.