How to Check Land Loan Details- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ

Spread the love

WhatsApp Group Join Now
Telegram Group Join Now

ರೈತರು ಜಮೀನು ಮೇಲೆ ಪಡೆದ ಸಾಲದ (How to Check Land Loan Details) ವಿವರ ನೋಡುವುದು ಹೇಗೆ? ಮತ್ತು ಸಾಲ ತೀರಿಸಿಯೂ ಪಹಣಿ ಅಥವಾ ಉತಾರದಲ್ಲಿ ಸಾಲದ ಮೊತ್ತ ಹಾಗೇ ದಾಖಲಾಗಿದ್ದರೆ ಅದನ್ನು ತೆಗೆಸಿ, ಋಣಮುಕ್ತ ಪಹಣಿ ಪಡೆಯುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ…

ಬಹುತೇಕ ರೈತರು ತಮ್ಮ ಜಮೀನು ಮೇಲೆ ಸಾಲ (Loan on Land) ಪಡೆಯುವುದು ಸರ್ವೇ ಸಾಮಾನ್ಯ. ಹೀಗೆ ಪಡೆದ ಸಾಲವನ್ನು ಬ್ಯಾಂಕ್ ನಿಯಮದಂತೆ ಮರುಪಾವತಿಸುವುದು ಕೂಡ ಕಡ್ಡಾಯ. ಕೆಲವೊಮ್ಮೆ ಜಮೀನು ಮೇಲೆ ಪಡೆದ ಸಾಧಾರಣ ಬೆಳೆಸಾಲಗಳು ಮನ್ನಾ (Loan Waiver) ಆಗುವುದುಂಟು.

ಹೀಗೆ ರೈತರು ಜಮೀನು ಮೇಲೆ ಪಡೆದ ಸಾಲ ಎಷ್ಟಿದೆ? ಸಾಲ ತೀರಿಸಿಯೂ ಕೂಡ ಪಹಣಿಯಲ್ಲಿ ಸಾಲದ ಬಾಬತ್ತು ಹಾಗೇ ಉಳಿದಿದ್ದರೆ ಅದನ್ನು ಸರಿಪಡಿಸುವುದು ಹೇಗೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ…

ರೈತರು ಪ್ರತೀ ವರ್ಷವೂ ಬೆಳೆ ಸಾಲವನ್ನು ಸ್ಥಳೀಯ ಸಹಕಾರಿ ಬ್ಯಾಂಕ್ (DCC Bank) ಮತ್ತು ರಾಷ್ಟ್ರಿಯ ಬ್ಯಾಂಕುಗಳ ಮೂಲಕ ಪಡೆದುಕೊಳ್ಳುತ್ತಾರೆ. ಯಾವ್ಯಾವ ಬ್ಯಾಂಕುಗಳಲ್ಲಿ ಸಾಲವನ್ನು ತೆಗೆದುಕೊಳ್ಳಲಾಗಿದೆ? ಎಷ್ಟು ಮೊತ್ತದ ಸಾಲವನ್ನು ಪಡೆಯಲಾಗಿದೆ ಎಂಬ ಮಾಹಿತಿಯನ್ನು ಪಹಣಿಯಲ್ಲಿ 11ನೇ ಕಾಲಮ್ಮಿನಲ್ಲಿ (RTC 11th Colum) ತೋರಿಸಲಾಗುತ್ತದೆ. ರೈತರು ತಮ್ಮ ಜಮೀನಿನ ಮೇಲೆ ಎಷ್ಟು ಸಾಲ ಪಡೆಯಲಾಗಿದೆ? ಎಂಬ ವಿವರವನ್ನು ಮೊಬೈಲ್’ನಲ್ಲೇ ತಿಳಿಯಬಹುದಾಗಿದೆ…

ಇದನ್ನೂ ಓದಿ: Karnataka Crop Compensation Payment- ರೈತರಿಗೆ ಬೆಳೆ ಪರಿಹಾರ ಜಮಾ | ನಿಮ್ಮ ಖಾತೆಗೆ ಹಣ ಬಂದಿದೆಯೇ?

ನಿಮ್ಮ ಸಾಲದ ಮಾಹಿತಿ ಹೀಗೆ ಚೆಕ್ ಮಾಡಿ

ರೈತರು ಯಾವುದೇ ಕಚೇರಿಗೆ ಭೇಟಿ ಮಾಡದೇ ತಮ್ಮ ಜಮೀನು ಮೇಲೆ ಪಡೆದ ಸಾಲದ ಮಾಹಿತಿಯನ್ನು ಕಂದಾಯ ಇಲಾಖೆಯ ‘ಭೂಮಿ’ ತಂತ್ರಾಂಶದ ಮೂಲಕ ತಿಳಿಯಬಹುದಾಗಿದೆ. ‘ಭೂಮಿ’ ತಂತ್ರಾಂಶದ ಡೈರೆಕ್ಟ್ ಲಿಂಕ್ ಅನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಭೂಮಿ ತಂತ್ರಾಂಶದ Bhoomi Online | Land Records | View ಪುಟ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮದ ಹೆಸರನ್ನು ಆಯ್ಕೆ ಮಾಡಿ ಸರ್ವೆ ನಂಬರ್ ಅನ್ನು ಹಾಕಿ Go ಬಟನ್ ಮೇಲೆ ಕ್ಲಿಕ್ ಮಾಡಿ ಸರ್‌ನಾಕ್ (surnoc), ಹಿಸ್ಸಾ ನಂಬರ್ (Hissa Number), ಅವಧಿ (Period) ಅನ್ನು ಆಯ್ಕೆ ಮಾಡಿಕೊಂಡು Fetch Details ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಆಗ ರೈತರ ಹೆಸರು, ಖಾತಾ ನಂಬರ್, ಎಷ್ಟು ಎಕರೆ ಜಮೀನು ಎಂಬ ಇತ್ಯಾದಿ ವಿವರಗಳು ಕಾಣಿಸುತ್ತದೆ. ಅಲ್ಲಿ ಕಾಣುವ View ಮೇಲೆ ಕ್ಲಿಕ್ ಮಾಡಿದರೆ ರೈತರ ಪಹಣಿ (RTC) ಪತ್ರಿಕೆ ತೆರೆದುಕೊಳ್ಳುತ್ತದೆ. ಪಹಣಿಯ 11ನೇ ಕಾಲಂನಲ್ಲಿ ಋಣಗಳು (ಸಾಲ) ಕಾಲಂ ಕೆಳಗೆ ಯಾವ ಯಾವ ಬ್ಯಾಂಕ್’ನಲ್ಲಿ ಎಷ್ಟು ಸಾಲ ಪಡೆಯಲಾಗಿದೆ ಎನ್ನುವ ಸಂಪೂರ್ಣ ಮಾಹಿತಿ ತೋರಿಸುತ್ತದೆ.

ಜಮೀನು ಮೇಲೆ ಪಡೆದ ಸಾಲದ ವಿವರ ನೋಡುವುದು ಹೇಗೆ? ಸಾಲ ತೀರಿಸಿಯೂ ಉತಾರದಲ್ಲಿ ಸಾಲದ ಮೊತ್ತ ಹಾಗೇ ದಾಖಲಾಗಿದ್ದರೆ ಅದನ್ನು ತೆಗೆಸಿ, ಋಣಮುಕ್ತ ಪಹಣಿ ಪಡೆಯುವುದು ಹೇಗೆ?
How to Check Land Loan Details

ಇದನ್ನೂ ಓದಿ: RDCC Bank Recruitment 2025- ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ, ಪದವೀಧರರಿಗೆ ಅವಕಾಶ

ಪಹಣಿ ಪತ್ರಿಕೆಯಲ್ಲಿ ಸಾಲ ಹಾಗೇ ಇದ್ದರೆ

ಸಾಲ ಮನ್ನಾ ಆಗಿಯೋ ಅಥವಾ ಸಾಲ ಮರುಪಾವತಿಸಿದ್ದರೂ ಕೆಲವೊಮ್ಮೆ ರೈತರ ಪಹಣಿಯಲ್ಲಿ ನಮೂದಾದ ಸಾಲದ ವಿವರ ಹಾಗೆಯೇ ಉಳಿದಿರುತ್ತದೆ. ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ. ಅಂತಹ ಪಹಣಿಯನ್ನು ನೀಡಿ ಸರಕಾರದ ಇತರ ಸಾಲ ಯೋಜನೆಯ ಲಾಭ ಪಡೆಯುವುದಾಗಲಿ, ಅಥವಾ ಬೇರೆ ರೀತಿಯ ಖಾಸಗಿ ಸಾಲ ಪಡೆಯುವುದಾಗಲಿ ಅಸಾಧ್ಯ. ಅಂತಹ ಜಮೀನು ಮಾರಾಟ ಮಾಡುವುದೂ ಕೂಡ ಕಷ್ಟಕರವಾಗುತ್ತದೆ.

ಜಮೀನು ಮೇಲೆ ಪಡೆದ ಸಾಲವನ್ನು ಮರುಪಾವತಿ ಮಾಡಿಯೂ ಕೂಡ ಪಹಣಿಯ ಕಾಲಂ ನಂಬರ್ 11ರಲ್ಲಿ ಸಾಲ ಋಣ ದಾಖಲಾಗಿರುವುದರಿಂದ ಅಂತಹ ಪಹಣಿಯನ್ನು ನೀಡಿ ಇತರ ಪ್ರಯೋಜನ ಪಡೆಯಲಾಗದು. ಹಾಗಾದರೆ ಪಹಣಿಯಲ್ಲಿ ದಾಖಲಾದ ಋಣವನ್ನು ತೆಗೆದು ಹಾಕುವುದು ಹೇಗೆ? ಅಂದರೆ ಸಾಲ ಪಡೆದ ವಿವರವಿಲ್ಲದ ಋಣಮುಕ್ತ ಪಹಣಿ ಪಡೆಯುವುದು ಹೇಗೆ? ಎಂಬ ಪ್ರಶ್ನೆ ಮೂಡುವುದು ಸಹಜ.

ಇದನ್ನೂ ಓದಿ: Gruhalakshmi Payment- ನವೆಂಬರ್ 28ರೊಳಗೆ ಗೃಹಲಕ್ಷ್ಮಿ ಹಣ ಜಮಾ | ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ

ಋಣಮುಕ್ತ ಪಹಣಿ ಪಡೆಯಲು ಹೀಗೆ ಮಾಡಿ…

ಇದಕ್ಕೆ ಮಾಡಬೇಕಾದದು ಇಷ್ಟೇ; ರೈತರು ತಾವು ಪಡೆದ ಸಾಲವನ್ನು ಬ್ಯಾಂಕ್‌ಗೆ ಮರುಪಾವತಿಸಿದ್ದರೆ ಅದರ ರಸೀದಿಯನ್ನು ಪಡೆದಿರಬೇಕು. ಒಂದುವೇಳೆ ರಸೀದಿ ಪಡೆದಿರದಿದ್ದರೆ ಸಾಲ ಪಡೆದ ಬ್ಯಾಂಕ್‌ಗೆ ತೆರಳಿ ಬ್ಯಾಂಕ್ ಮ್ಯಾನೇಜರ್ ಬಳಿಯಲ್ಲಿ ತಮ್ಮ ಜಮೀನು ಮೇಲೆ ಯಾವುದೇ ರೀತಿಯ ಸಾಲವಿರುವುದಿಲ್ಲ ಅಥವಾ ತಾವು ಪಡೆದ ಸಾಲವನ್ನು ಸಂಪೂರ್ಣ ಮರುಪಾವತಿ ಮಾಡಿರುತ್ತೇವೆ, ಇಲ್ಲವೇ ತಮ್ಮ ಸಾಲ ಮನ್ನಾ ಆಗಿದ್ದು; ಯಾವ ಸಾಲವೂ ಬಾಕಿ ಉಳಿದಿರುವುದಿಲ್ಲ ಎಂಬರ್ಥದ ಪ್ರಮಾಣ ಪತ್ರ (NOC) ಪಡೆಯಬೇಕು.

ನಂತರ ಪಡೆದ ಸಾಲವನ್ನು ಬ್ಯಾಂಕ್‌ಗೆ ಮರುಪಾವತಿಸಿರುವ ಬಗ್ಗೆ ಸರಳವಾದ ಅರ್ಜಿಯನ್ನು ಬರೆದು, ಅದರ ಜೊತೆಗೆ ಬ್ಯಾಂಕ್ ಮ್ಯಾನೇಜರ್‌ರಿಂದ ಪಡೆದ ಎನ್‌ಒಸಿ, ಚಾಲ್ತಿ ವರ್ಷದ ಪಹಣಿ, ರೈತರ ಆಧಾರ್ ಕಾರ್ಡ್ ಪ್ರತಿ ಲಗತಿಸಿ ನಿಮ್ಮ ತಾಲ್ಲೂಕಿನ ಭೂಮಿ ಕೇಂದ್ರದಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಪ್ರತಿಯಾಗಿ ರಸೀದಿ ಪಡೆಯಬೇಕು. ಇಷ್ಟು ಮಾಡಿದ 30 ದಿನಗಳ ನಂತರ ನಿಮ್ಮ ಪಹಣಿಯಲ್ಲಿ ನಮೂದಾಗಿರುವ ಋಣ (ಸಾಲ) ಹೋಗಿ, ಋಣಮುಕ್ತ ಪಹಣಿ ಲಭ್ಯವಾಗುತ್ತದೆ.

WhatsApp Group Join Now
Telegram Group Join Now

ಇದನ್ನೂ ಓದಿ: BPL Card Cancellation Check- ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆಯಾ? ಮೊಬೈಲ್’ನಲ್ಲೇ ಚೆಕ್ ಮಾಡಿ…

ಋಣಮುಕ್ತ ಪಹಣಿ ನೋಡುವುದು ಹೇಗೆ?

ಅರ್ಜಿ ಸಲ್ಲಿಸಿ 30 ದಿನಗಳ ನಂತರ ರೈತರು ಋಣ (ಸಾಲ) ಮುಕ್ತ ಪಹಣಿ ಪಡೆಯಲು ಅಥವಾ ನೋಡಲು ಪುನಃ ಕಚೇರಿಗಳಿಗೆ ಅಲೆಯಬೇಕಿಲ್ಲ. ಮನೆಯಲ್ಲಿ ಕುಳಿತು ಯಾರ ಸಹಾಯವೂ ಇಲ್ಲದೇ ತಮ್ಮದೇ ಮೊಬೈಲ್‌ನಲ್ಲಿ ಭೂಮಿ ತಂತ್ರಾಂಶದ ಮೂಲಕ ಖಚಿತಪಡಿಸಿಕೊಳ್ಳಬಹುದು.

ಆಗಲೂ ಪಹಣಿಯ 11ನೇ ಕಾಲಂನಲ್ಲಿ ಋಣಗಳು ಕಾಲಂ ಕೆಳಗಡೆ ಮೊದಲು ತೋರಿಸುತ್ತಿದ್ದ ಸಾಲ (ಋಣ) ಮಾಹಿತಿ ಹಾಗೆಯೇ ಇದ್ದರೇ, ನಿಮ್ಮ ಅರ್ಜಿ ಊರ್ಜಿತವಾಗಿಲ್ಲ ಎಂದರ್ಥ. ಈ ಬಗ್ಗೆ ನಿಮ್ಮ ತಾಲ್ಲೂಕಿನ ಭೂಮಿ ಕೇಂದ್ರದಲ್ಲಿ ವಿಚಾರಿಸಬಹುದು. ಅಥವಾ ಪಹಣಿಯ 11ನೇ ಕಾಲಂನ ವಿವರಗಳು ಬದಲಾಗಿದ್ದರೆ ನಿಮ್ಮ ಪಹಣಿ ಋಣ(ಸಾಲ)ಮುಕ್ತವಾಗಿದೆ ಎಂದು ತಿಳಿಯಬೇಕು.

‘ಭೂಮಿ’ ತಂತ್ರಾಂಶದ ಡೈರೆಕ್ಟ್ ಲಿಂಕ್ : landrecords.karnataka.gov.in

Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ


Spread the love
error: Content is protected !!