Karnataka Crop Compensation Payment- ರೈತರಿಗೆ ಬೆಳೆ ಪರಿಹಾರ ಜಮಾ | ನಿಮ್ಮ ಖಾತೆಗೆ ಹಣ ಬಂದಿದೆಯೇ?

Spread the love

WhatsApp Group Join Now
Telegram Group Join Now

ರಾಜ್ಯ ಸರ್ಕಾರ ರೈತರ ಖಾತೆಗೆ ಬೆಳೆ ಪರಿಹಾರ ಹಣ ಸಂದಾಯ (Karnataka Crop Compensation Payment) ಮಾಡುತ್ತಿದೆ. ಈಗಾಗಲೇ ಅನೇಕ ರೈತರಿಗೆ ಹಣ ಜಮೆಯಾಗಿದ್ದು; ಮತ್ತಷ್ಟು ರೈತರಿಗೆ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ…

ಕಳೆದ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಅವುಡುಗಚ್ಚಿ ಸುರಿದ ಭಾರೀ ಮಳೆಯ ಪರಿಣಾಮವಾಗಿ ಸಾವಿರಾರು ರೈತರ ಬೆಳೆಗಳು ಹಾನಿಗೊಳಗಾಗಿದ್ದವು. ಹೀಗೆ ನಷ್ಟವಾದ ಬೆಳೆ ಪರಿಹಾರದ ಹಣ ಇದೀಗ DBT ಮೂಲಕ ರೈತರ ಖಾತೆಗೆ ಜಮಾ ಆಗುತ್ತಿದೆ.

ಈ ವಾರದಿಂದ ವಿಶೇಷವಾಗಿ ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ, ಗದಗ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ. ಕೆಲವರಿಗೆ ₹16,660 ರಿಂದ ₹31,000 ವರೆಗೆ ಹಣ ಜಮಾ ಆಗಿದೆ.

ಇದನ್ನೂ ಓದಿ: BPL Card Cancellation Check- ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆಯಾ? ಮೊಬೈಲ್’ನಲ್ಲೇ ಚೆಕ್ ಮಾಡಿ…

ಈ ಬಾರಿ ಎಷ್ಟು ಪರಿಹಾರ ಸಿಗುತ್ತಿದೆ?

ಅತಿಯಾದ ಮಳೆಯಿಂದ ನಷ್ಟವಾದ ಬೆಳೆಗಳಿಗೆ NDRF ಹಾಗೂ ರಾಜ್ಯ ಸರ್ಕಾರದ ನಿಯಮಾವಳಿಯ ಪ್ರಕಾರ ರೈತರಿಗೆ ಕೆಳಗಿನಂತೆ ಪರಿಹಾರ ನಿಗದಿ ಮಾಡಲಾಗಿದೆ:

  • ಮಳೆ ಆಶ್ರಿತ ಬೆಳೆಗಳಿಗೆ: ₹17,000
  • ನೀರಾವರಿ ಬೆಳೆಗಳಿಗೆ: ₹25,500
  • ತೋಟಗಾರಿಕೆ ಬೆಳೆಗಳಿಗೆ: ₹31,000

ಗರಿಷ್ಠ ಎರಡು ಹೆಕ್ಟೇರ್ ವರೆಗೂ ಮಾತ್ರ ಪರಿಹಾರ ಅನ್ವಯವಾಗುತ್ತಿದ್ದು; ಒಬ್ಬ ರೈತನು ಗರಿಷ್ಠ ₹62,000 ವರೆಗೂ ಬೆಳೆ ನಷ್ಟ ಪರಿಹಾರ ಪಡೆಯುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರ ರೈತರ ಖಾತೆಗೆ ಬೆಳೆ ಪರಿಹಾರ ಹಣ ಸಂದಾಯ ಮಾಡುತ್ತಿದೆ. ಈಗಾಗಲೇ ಅನೇಕ ರೈತರಿಗೆ ಹಣ ಜಮೆಯಾಗಿದ್ದು; ಈ ಕುರಿತ ಮಾಹಿತಿ ಇಲ್ಲಿದೆ...
Karnataka Crop Compensation Payment

ಇದನ್ನೂ ಓದಿ: Gruhalakshmi Payment- ನವೆಂಬರ್ 28ರೊಳಗೆ ಗೃಹಲಕ್ಷ್ಮಿ ಹಣ ಜಮಾ | ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ

ಈ ಜಿಲ್ಲೆಯ ರೈತರಿಗೆ ಹಣ ಜಮಾ

ಕಳೆದ ನವೆಂಬರ್ 20 ಮತ್ತು 21ರಿಂದ ರಾಜ್ಯ ಹಲವು ಜಿಲ್ಲೆಯ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ವಿಶೇಷವಾಗಿ ಈ ಕೆಳಗಿನ ಜಿಲ್ಲೆಯ ರೈತರಿಗೆ DBT ಮೂಲಕ ಹಣ ಸಂದಾಯವಾಗುತ್ತಿದೆ:

  • ಯಾದಗಿರಿ
  • ಶಹಾಪುರ
  • ವಡೆಗೇರ
  • ಬೀದರ್
  • ಕಲಬುರಗಿ
  • ಗದಗ
  • ಬೆಳಗಾವಿ

ಇದನ್ನೂ ಓದಿ: PM KISAN 21st Installment- ಸಣ್ಣ ರೈತರ ಬ್ಯಾಂಕ್ ಖಾತೆಗೆ ₹2,000 ಹಣ ಜಮಾ | ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

ನಿಮಗೆ ಹಣ ಬಂದಿಲ್ಲೇ? ಈ 5 ವಿಷಯಗಳು ತಪ್ಪದೇ ಸರಿಪಡಿಸಿ

ಕೆಲವು ರೈತರಿಗೆ ತಾಂತ್ರಿಕ ದೋಷ, ದಾಖಲೆಗಳ ವ್ಯತ್ಯಾಸ, e-KYC, NPCI link ಸಮಸ್ಯೆಯಿಂದಾಗಿ ಹಣ ಸಂದಾಯವಾಗಿಲ್ಲ. ಇಂತಹ ರೈತರು ಈ ಕೆಳಗಿನ ವಿಷಯಗಳನ್ನು ಒಮ್ಮೆ ಚೆಕ್ ಮಾಡಿದರೆ ಪರಿಹಾರ ಹಣ ಖಚಿತವಾಗಿಯೂ ಸಿಗುತ್ತದೆ:

  1. FRUITS ಪೋರ್ಟಲ್‌ನಲ್ಲಿ FID ಸರಿಯಾಗಿ ಅಪ್ಡೇಟ್ ಮಾಡಿಸಿ
  2. ಆಧಾರ್-ಬ್ಯಾಂಕ್ link & Seeding ಚೆಕ್ ಮಾಡಿ
  3. FRUITS OTP e-KYC complete ಮಾಡಿರಬೇಕು
  4. NPCI mapping active ಆಗಿರಬೇಕು (ಬ್ಯಾಂಕ್‌ನಲ್ಲಿ ಪರಿಶೀಲಿಸಬಹುದು)
  5. ಹೆಸರು ಎಲ್ಲಾ ದಾಖಲೆಗಳಲ್ಲಿ ಒಂದೇ ರೀತಿಯಲ್ಲಿ ಇರಬೇಕು

ಈಗಾಗಲೇ ಸಾಕಷ್ಟು ರೈತರಿಗೆ ಹಣ ಸಿಗುತ್ತಿದೆ. ಯಾರಿಗೆ ಬಾಕಿಯಿದೆ ಎಂಬ ಮಾಹಿತಿ ಇನ್ನೂ Update ಆಗುತ್ತಿದೆ. ದಾಖಲೆಗಳು ಸರಿಯಾಗಿ ಇದ್ದರೆ ಇದೇ ನವೆಂಬರ್ ಅಂತ್ಯದಿಂದ ಡಿಸೆಂಬರ್ ಮೊದಲ ವಾರದೊಳಗೆ ಎಲ್ಲ ಅರ್ಹ ರೈತರ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಲಿದೆ.

ಬೆಳೆ ನಷ್ಟ ಪರಿಹಾರ ಹಣ ಜಮೆಯಾಗದೇ ಇರುವ ರೈತರು ಹೆಚ್ಚಿನ ಮಾಹಿತಿಗೆ ಸ್ಥಳೀಯ ಗ್ರಾಮ ಲೆಕ್ಕಿಗರು, ರೈತ ಸಂಪರ್ಕ ಕೇಂದ್ರ, ತಾಲ್ಲೂಕು ಕಚೇರಿ ಹಾಗೂ ಕೃಷಿ ಇಲಾಖೆ ಸಹಾಯವಾಣಿ: 1800-425-7474 ಸಂಪರ್ಕಿಸಬಹುದಾಗಿದೆ.

ಅಧಿಕೃತ ವೆಬ್‌ಸೈಟ್: parihara.karnataka.gov.in/Pariharahome/

Udhyogini Yojana 2025 – ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ಇಲ್ಲದ ಸಾಲ ಸೌಲಭ್ಯ | ಮಹಿಳಾ ನಿಗಮದಿಂದ ಅರ್ಜಿ ಆಹ್ವಾನ


Spread the love
error: Content is protected !!