Govt employees new rules : ಸರಕಾರಿ ನೌಕರರ ಆಟಾಟೋಪಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಖಡಕ್ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ ಕೇಂದ್ರ ಸರಕಾರಿ ನೌಕರರು ಕಚೇರಿಗೆ ಲೇಟಾಗಿ ಬಂದರೆ, ಬೇಕಾಬಿಟ್ಟಿ ರಜೆ ಹಾಕಿದರೆ, ಬಯೋಮೆಟ್ರಿಕ್‌ನಲ್ಲಿ ಹಾಜರಾತಿ ಹಾಕದೇ ಕಳ್ಳಾಟ ಆಡಿದರೆ ಕಠಿಣ ಶಿಕ್ಷೆ, ದಂಡ ಎದುರಿಸಬೇಕಾಗುತ್ತದೆ.
ಹೌದು, ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನಿನ್ನೆ (ಜೂನ್ 23) ಸರಕಾರಿ ನೌಕರರಿಗೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದು; ಎಲ್ಲ ನೌಕರರಿಗೂ ಖಡಕ್ ಸೂಚನೆ ಹೊರಡಿಸಿದೆ. ನಿಯಮ ಮೀರಿದರೆ ಏನೆಲ್ಲ ದಂಡ-ಶಿಕ್ಷೆ ಎದುರಿಸಬೇಕು ಎಂಬ ಎಚ್ಚರಿಕೆಯನ್ನೂ ರವಾನಿಸಿದೆ.
ರೈತರ 2 ಲಕ್ಷ ರೂಪಾಯಿ ಸಾಲಮನ್ನಾ | ₹31 ಸಾವಿರ ಕೋಟಿ ಅನುದಾನ Farmers Loan Waiver
ಹೊಸ ನಿಯಮಗಳೇನು?
- ಕಚೇರಿ ಲೇಟಾಗಿ ಬರುವಂತಿಲ್ಲ
- ಬಯೋಮೆಟ್ರಿಕ್‌ನಲ್ಲಿ ಹಾಜರಾತಿ ಕಡ್ಡಾಯ
- ಬೇಕಾಬಿಟ್ಟಿ ರಜೆ ಹಾಕುವಂತಿಲ್ಲ
ಕಚೇರಿ ಲೇಟಾಗಿ ಬರುವಂತಿಲ್ಲ
ಸಾಮಾನ್ಯವಾಗಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಬೆಳಿಗ್ಗೆ 9ರಿಂದ ಸಂಜೆ 5.30ರ ವರೆಗೆ ಕಾರ್ಯನಿರ್ವಹಿಸುತ್ತವೆ. ಬಹಳಷ್ಟು ನೌಕರರು ತಡವಾಗಿ ಕಚೇರಿಗೆ ಬಂದು, ಬಹು ಬೇಗನೇ ಮನೆಗೆ ಹೋಗುತ್ತಾರೆಂಬ ಆರೋಪಗಳಿವೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರವು ನೌಕರರಿಗೆ ಈ ಸಂಬ೦ಧ ಕಟ್ಟುನಿಟ್ಟಾದ ಸೂಚನೆ ರವಾನಿಸಿದೆ.
ಪದೇ ಪದೆ ಕಚೇರಿಗೆ ವಿಳಂಬವಾಗಿ ಬರುವ ಕೇಂದ್ರ ಸರ್ಕಾರಿ ನೌಕರರು ಇನ್ಮುಂದೆ ಬೆಳಿಗ್ಗೆ 9.15ರ ನಂತರ ಕಚೇರಿಗೆ ಬರುವಂತಿಲ್ಲ. ಹಾಗೊಂದು ವೇಳೆ ಅನಿವಾರ್ಯ ಕಾರಣಕ್ಕೆ ಅಪರೂಪಕ್ಕೆ ನಿಗದಿತ ಅವಧಿಗಿಂತ ತಡವಾಗಿ ಬಂದರೆ 15 ನಿಮಿಷಗಳ ವಿನಾಯಿತಿ ಇದೆ. 15 ನಿಮಿಷಕ್ಕಿಂತ ಹೆಚ್ಚು ತಡವಾಗಿ ಬಂದರೆ ಅವರ ಕ್ಯಾಷುವಲ್ ಲೀವ್’ನಲ್ಲಿ (Casual leave- CL) ಅರ್ಧ ದಿನದ ರಜೆಯನ್ನು ಕಡಿತ ಮಾಡಲಾಗುತ್ತದೆ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೇಳಿದೆ.
ಬೇಕಾಬಿಟ್ಟಿ ರಜೆಯಿಲ್ಲ, ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ
ಇನ್ನು ನೌಕರರು ಬಯೋಮೆಟ್ರಿಕ್‌ನಲ್ಲಿ ಹಾಜರಾತಿ (Attendance in Biometric) ದಾಖಲಿಸಿಯೇ ಕಚೇರಿ ಕಾರ್ಯ ಆರಂಭಿಸಬೇಕು ಎಂಬ ನಿಯಮವಿದೆ. ಆದರೆ ಕೊರೋನಾ ದುರಂತದ ನಂತರ ಸಾಕಷ್ಟು ನೌಕರರು ಬಯೋಮೆಟ್ರಿಕ್‌ನಲ್ಲಿ ಹಾಜರಾತಿಯನ್ನೇ ದಾಖಲಿಸುತ್ತಿಲ್ಲ. ಇಂತಹ ನೌಕರರಿಗೆ ಸರಕಾರ ಕಠಿಣ ಸೂಚನೆ ನೀಡಲಾಗಿದ್ದು, ಬಯೋಮೆಟ್ರಿಕ್‌ನಲ್ಲಿ ಎಲ್ಲಾ ಹಂತದ ನೌಕರರು ಹಾಗೂ ಅಧಿಕಾರಿಗಳು ಹಾಜರಿ ದಾಖಲಿಸುವುದನ್ನು ಕಡ್ಡಾಯಗೊಳಿಸಿದೆ.
ಅದೇ ರೀತಿ ಬೇಕಾಬಿಟ್ಟಿಯಾಗಿ ರಜೆ ಹಾಕುವ ನೌಕರರಿಗೂ ಸರ್ಕಾರ ಖಡಕ್ ಎಚ್ಚರಿಕೆ ರವಾನಿಸಿದ್ದು; ರಜೆ ಬೇಕಾದರೆ ಸಂಬ೦ಧಪಟ್ಟವರಿಗೆ ಮೊದಲೇ ತಿಳಿಸಿ ಅನುಮತಿ ಪಡೆದುಕೊಂಡಿರಬೇಕು. ಹೇಳದೇ ಕೇಳದೇ ರಜೆ ಮಾಡಿ ಆನಂತರ ರಜೆಗೆ ಅಪ್ಲೆöÊ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಈ ಹೊಸ ನಿಯಮಗಳು ಜೂನ್ 24ರ ಸೋಮವಾರದಿಂದಲೇ ಜಾರಿಗೆ ಬರಲಿವೆ ಎಂದು ಹೇಳಿದೆ.
8,000+ ಕೇಂದ್ರ ಸರಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ Central Government Jobs
3 thoughts on “ಸರಕಾರಿ ನೌಕರರಿಗೆ ಜೂನ್ 24ರಿಂದ ಹೊಸ ರೂಲ್ಸ್ | ಕೇಂದ್ರ ಸರಕಾರದ ಖಡಕ್ ಎಚ್ಚರಿಕೆ Govt employees new rules”