ರೈಲ್ವೆ ಇಲಾಖೆಯಿಂದ ಮತ್ತೊಂದು ನೇಮಕಾತಿ ಪ್ರಕ್ರಿಯೆ (Railway Recruitment 2025) ಆರಂಭವಾಗಿದೆ. ಪಿಯುಸಿ, ಪದವೀಧರರಿಂದ ಒಟ್ಟು 10,620 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ…
ರೈಲ್ವೆ ನೇಮಕಾತಿ ಮಂಡಳಿಯು (Railway Recruitment Board- RRB) ದೇಶದ ಎಲ್ಲ ನೇಮಕಾತಿ ಮಂಡಳಿಗಳಲ್ಲಿ 10,620 ಹುದ್ದೆಗಳಿಗಾಗಿ ಎರಡು ಕಿರು ಅಧಿಸೂಚನೆ ಹೊರಡಿಸಿದೆ. ಅಕ್ಟೋಬರ್ 21 ಹಾಗೂ 31ರಿಂದ ಈ ಸ್ಥಾನಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಬಹು ನಿರೀಕ್ಷಿತ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (Non-Technical Popular Categories- NTPC) ಅಧಿಸೂಚನೆ ವಿವರ ನೀಡಲಾಗಿದೆ. ಪಿಯುಸಿ ಹಾಗೂ ಪದವಿ ವಿದ್ಯಾರ್ಹತೆಯ ಒಟ್ಟು 8,570 ಹುದ್ದೆಗಳಿದ್ದರೆ, ಜೂನಿಯರ್ ಇಂಜಿನಿಯರ್‌ಗಳ 2,570 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ: E-Swathu- ದೀಪಾವಳಿ ನಂತರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ವಿತರಣೆ
ಪಿಯುಸಿ, ಪದವಿಧರರಿಗೆ ಎನ್‌ಟಿಪಿಸಿ ಹುದ್ದೆಗಳು
ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (ಎನ್‌ಟಿಪಿಸಿ) ಎಂದು ಕರೆಯಲಾಗುವ ಈ ಹುದ್ದೆಗಳಿಗೆ ಭಾರಿ ಬೇಡಿಕೆಯಿದೆ. ಸ್ಟೇಷನ್ ಮಾಸ್ಟರ್, ಸೂಪರ್‌ವೈಸರ್, ಗೂಡ್ಸ್ ಟ್ರೇನ್ ಮ್ಯಾನೇಜರ್, ಕಮರ್ಷಿಯಲ್ ಕಂ ಟಿಕೆಟ್ ಕಲೆಕ್ಟರ್, ಅಕೌಂಟ್ ಕ್ಲರ್ಕ್ ಕಂ ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಕಂ ಟೈಪಿಸ್ಟ್, ಟ್ರೇನ್ಸ್ ಕ್ಲರ್ಕ್ಗಳ ಸೇರಿ ಹಲವು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ 3,050 ಹುದ್ದೆಗಳು ಹಾಗೂ ಪದವಿ ಅಭ್ಯರ್ಥಿಗಳಿಗೆ 5,000 ಸೇರಿ ಒಟ್ಟು 8,050 ಹುದ್ದೆಗಳಿವೆ. ಹುದ್ದೆಗೆ ಅನುಗುಣವಾಗಿ 35,000 ರೂ., 25,300 ರೀ., 21,700 ರೂ., ಹಾಗೂ 18,000 ರೂ. ಆರಂಭಿಕ ವೇತನ ಇರಲಿದೆ. ಜತೆಗೆ ಇತರ ಭತ್ಯೆ ನೀಡಲಾಗುತ್ತದೆ.

ಅಭ್ಯರ್ಥಿಗಳು 18-33 ಹಾಗೂ 18 ರಿಂದ 36 ವಯೋಮಾನದವರಾಗಿರಬೇಕು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 21ರಿಂದ ಅವಕಾಶ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಯ ಕೊನೆಯ ದಿನಕ್ಕೆ ಅನ್ವಯಿಸುವಂತೆ ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು. ಅಂತಿಮ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
ಅರ್ಜಿಯಲ್ಲಿ ಸಲ್ಲಿಸಲಾಗಿರುವ ಮಾಹಿತಿ ಆಧಾರದಲ್ಲಿಯೇ ಅಭ್ಯರ್ಥಿಯ ಅರ್ಹತೆ ನಿರ್ಧಾರವಾಗಲಿದೆ. ಅಭ್ಯರ್ಥಿಯು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣಪತ್ರದಲ್ಲಿರುವಂತೆ ತನ್ನ ಹೆಸರು, ಪಾಲಕರ ಹೆಸರು ಹಾಗೂ ಜನ್ಮದಿನಾಂಕವನ್ನು ನಮೂದಿಸಬೇಕು.
ಇದನ್ನೂ ಓದಿ: Minimum Balance Rule Cancelled- ಇನ್ಮುಂದೆ ಈ ಬ್ಯಾಂಕ್ ಖಾತೆಗಳಲ್ಲಿ `ಕನಿಷ್ಠ ಬ್ಯಾಲೆನ್ಸ್’ ನಿಯಮ ರದ್ದು!
ಜೂನಿಯರ್ ಇಂಜಿನಿಯರ್‌ಗಳು
ತಾಂತ್ರಿಕ ವಿಭಾಗದಲ್ಲಿ ಜೂನಿಯರ್ ಇಂಜಿನಿಯರ್ ಸೇರಿ ಇತರ ಹುದ್ದೆಗಳಿಗೆ ಏಳನೇ ಹಂತದ ವೇತನಶ್ರೇಣಿ ನಿಗದಿ ಮಾಡಲಾಗಿದ್ದು, 35,400 ರೂ. ಆರಂಭಿಕ ವೇತನ ಇರಲಿದ್ದು, ಇತರ ಭತ್ಯೆಗಳು ಅನ್ವಯವಾಗಲಿವೆ.
ಈ ಹುದ್ದೆಗಳಿಗೆ 18-33ರ ನಡುವಿನ ವಯೋಮಿತಿ ನಿಗದಿ ಮಾಡಲಾಗಿದೆ. ಎಲ್ಲ ಆರ್‌ಆರ್‌ಬಿಗಳಲ್ಲಿಯೂ ಈ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತಿದೆ. ವಿವಿಧ ತಾಂತ್ರಿಕ ಶಿಕ್ಷಣಗಳಲ್ಲಿ ಬಿಇ, ಬಿ.ಟೆಕ್ ಸೇರಿ ಇತರ ಪದವಿ, ಡಿಪ್ಲೊಮಾ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಮುಖ್ಯವಾಗಿ ಸಿವಿಲ್, ಎಲೆಕ್ಟ್ರಿಕಲ್, ಮೆಕಾನಿಕಲ್, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಕೆಮಿಕಲ್, ಡಿಸೈನ್ ಮೊದಲಾದ ವಿಷಯಗಳಲ್ಲಿ ವ್ಯಾಸಂಗ ಮಾಡಿದವರು ಈ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಇದರೊಂದಿಗೆ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರದಲ್ಲಿ ಬಿಎಸ್‌ಸಿ ಪದವಿ ಪಡೆದವರು ಅಕ್ಟೋಬರ್ 31ರಿಂದ ಅರ್ಜಿ ಸಲ್ಲಿಸಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.