
ಇಂಟರ್‌ನೆಟ್ ಇಲ್ಲದೇ ಮೊಬೈಲ್’ನಲ್ಲಿ ಹಣ (Offline UPI Payment Method NPCI) ಕಳಿಸುವುದು ಹೇಗೆ? ಆಫ್‌ಲೈನ್‌ನಲ್ಲೂ ಯುಪಿಐ ಪೇಮೆಂಟ್ ಮಾಡುವ ವಿಧಾನ ಯಾವುದು? ಎನ್ನುವವರಿಗೆ ಇಲ್ಲಿದೆ ಸರಳ ಮಾರ್ಗ…
ಹೌದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Payments Corporation of India – NPCI) ಇಂಟರ್‌ನೆಟ್ ಇಲ್ಲದೆಯೇ ಯುಪಿಐ ಪೇಮೆಂಟ್ ಮಾಡುವ ವಿಧಾನವನ್ನು ಪರಿಚಯಿಸಿದೆ.
ಆಫ್‌ಲೈನ್ ಪೇಮೆಂಟ್ ಹೇಗೆ? Offline UPI Payment Method
ಸಾಮಾನ್ಯವಾಗಿ ಯುಪಿಐ ಮೂಲಕ ಪೇಮೆಂಟ್ ಅಂದಾಗ ಇಂಟರ್ನೆಟ್ ಬೇಕು ಎಂಬುವುದು ಎಲ್ಲರಿಗೂ ಗೊತ್ತಿದೆ. ಆದರೆ ಲಕ್ಷಾಂತರ ಜನ ಸೇರುವ ಸ್ಥಳಗಳಲ್ಲಿ ಇಂಟರ್ನೆಟ್ ಸಿಗದ ಸಂದರ್ಭಗಳಲ್ಲಿ ಯುಪಿಐ ಮೂಲಕ ಪೇಮೆಂಟ್ ಮಾಡುವುದು ಕಷ್ಟವಾಗುತ್ತದೆ.
ಕೆಲವು ಗ್ರಾಮೀಣ ಭಾಗಗಳಲ್ಲಿ ಇಂಟರ್ನೆಟ್ ಸಿಗ್ನಲ್ ಸರಿಯಾಗಿ ಸಿಗುವುದಿಲ್ಲ. ಹೀಗಿರುವಾಗ ಇಂಟರ್ನೆಟ್ ಅಥವಾ ಸ್ಮಾರ್ಟ್ ಫೋನ್‌ನ ಅಗತ್ಯವಿಲ್ಲದೇ, ಕೇವಲ ಮೊಬೈಲ್ ಸಿಗ್ನಲ್ ಬಳಸಿ ಪೇಮೆಂಟ್ ಮಾಡುವ ವೈಶಿಷ್ಟ್ಯವನ್ನು ಎನ್‌ಪಿಸಿಐ 2014ರಲ್ಲೇ ಪರಿಚಯಿಸಿದೆ.
ಇದನ್ನೂ ಓದಿ: Unauthorized BPL Ration Card- 12 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ಸರ್ಕಾರದ ಸಿದ್ಧತೆ | ನೀವು ಈ ಪಟ್ಟಿಯಲ್ಲಿದ್ದೀರಾ?
ಏನಿದು ಎನ್‌ಪಿಸಿಐ?
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್‌ನ ಒಂದು ಉಪಕ್ರಮವಾಗಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NCPI) ಎಂಬುವುದು ಭಾರತದಲ್ಲಿ ಚಿಲ್ಲರೆ ಪಾವತಿ ವ್ಯವಸ್ಥೆಗಳನ್ನು ನಿರ್ವಹಿಸುವ ಸಂಸ್ಥೆ.
ಪೇಮೆಂಟ್ ಮತ್ತು ಸೆಟ್ಲಮೆಂಟ್ ಸಿಸ್ಟಮ್ಸ್ ಆಕ್ಟ್ 2007ರ (Payment and Settlement Systems Act 2007) ನಿಬಂಧನೆಗಳ ಅಡಿಯಲ್ಲಿ ಇದನ್ನು ರಚಿಸಲಾಗಿದೆ. ಭಾರತದಲ್ಲಿ ಯುಪಿಐ, ಪೇಮೆಂಟ್ ವ್ಯವಸ್ಥೆ ಎಲ್ಲವನ್ನೂ ಈ ಸಂಸ್ಥೆಯೇ ನಿರ್ವಹಿಸುತ್ತದೆ. Bharat QR, BHIM Mobile App, Digital Rupee. Fastrag, Rupe ಇತ್ಯಾದಿಗಳನ್ನು ಎನ್‌ಪಿಸಿಐ ನಿರ್ವಹಿಸುತ್ತಿದೆ.

ಇದನ್ನೂ ಓದಿ: AAI Recruitment 2025- ಕೇಂದ್ರ ಸರ್ಕಾರದ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಅವಕಾಶ
ಆಫ್‌ಲೈನ್‌ನಲ್ಲಿ ಯುಪಿಐ ಪೇಮೆಂಟ್ ಮಾಡುವ ವಿಧಾನ
ನಿಮ್ಮ ಮೊಬೈಲ್‌ನಲ್ಲಿ ಈಗಾಗಲೇ ಭೀಮ್ ಆ್ಯಪ್ ಇದ್ದರೆ ಹಾಗೂ ನಿಮ್ಮ ಆಕೌಂಟ್‌ಗೆ ಲಿಂಕ್ ಆಗಿದ್ದರೆ ಈ ಕೆಳಗಿನ ವಿಧಾನದ ಮೂಲಕ ಪೇಮೆಂಟ್ ಮಾಡಬಹುದಾಗಿದೆ.
ಹಂತ 1: ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ *99# ಅನ್ನು ಡಯಲ್ ಮಾಡಿ. ಅಲ್ಲಿ ಮುಂದೆ ಓಕೆ ಮೇಲೆ ಕ್ಲಿಕ್ ಮಾಡಿದರೆ ಕೆಲ ಸೆಕೆಂಡುಗಳಲ್ಲೇ ಏಳು ಆಯ್ಕೆಗಳಿರುವ ಒಂದು ಮೆಸೇಜ್ ಬರುತ್ತದೆ.
ಹಂತ 2: ಸೆಂಡ್ ಮನಿ, ರಿಕ್ವೆಸ್ಟ್ ಮನಿ, ಚೆಕ್ ಬ್ಯಾಲೆನ್ಸ್, ಮೈ ಪ್ರೊಫೈಲ್, ಪೆಂಡಿಂಗ್ ರಿಕ್ವೆಸ್ಟ್, ಟ್ರಾನ್ಸಾಕ್ಷನ್ ಹಾಗೂ ಯುಪಿಐ ಪಿನ್ ಮುಂತಾದ. ಆಯ್ಕೆಗಳಿರುತ್ತವೆ.
ಹಂತ 3: ನಿಮಗೆ ಬೇಕಾದ ಆಯ್ಕೆಗಾಗಿ ಅವರು ನೀಡಿದ ಸಂಖ್ಯೆಯನ್ನು ಅಲ್ಲಿ ನಮೂದಿಸಿ. ಉದಾಹರಣೆಗೆ : ಸೆಂಡ್ ಮನಿ (ಹಣ ಕಳುಹಿಸಲು) ಸಂಖ್ಯೆ 1 ಅನ್ನು ಟೈಪ್ ಮಾಡಿ.
ಹಂತ 4: ಅಲ್ಲಿ ಎಲ್ಲಿಗೆ ಹಣ ಕಳುಹಿಸಬೇಕು ಎಂದು ಆಯ್ಕೆ ಮಾಡಿ. ಮೊಬೈಲ್ ಸಂಖ್ಯೆಗೆ, ಯುಪಿಐಗೆ ಅಥವಾ ಐಎಫ್‌ಎಸ್‌ಸಿ ಕೋಡ್ ಮೂಲಕ ಬ್ಯಾಂಕ್‌ಗೆ ನೇರವಾಗಿ ಹಣ ವರ್ಗಾವಣೆ ಆಗುತ್ತದೆ.
…ಹೀಗೆ ನಿಮ್ಮ ಆಯ್ಕೆಯನ್ನು ಬಳಸಿ, ನಿಮ್ಮ ಯುಪಿಐ ಪಿನ್ ಹಾಕಿ ಹಣವನ್ನು ಕಳುಹಿಸಬಹುದಾಗಿದೆ. ಒಂದು ವೇಳೆ ನಿಮ್ಮ ಬಳಿ ಭೀಮ್ ಅಪ್ಲಿಕೇಶನ್ ಇಲ್ಲದೇ ಇದ್ದರೆ, ನೀವು ಮೊದಲು ನಿಮ್ಮ ಅಕೌಂಟ್ ಮಾಹಿತಿಯನ್ನು ಹಾಕಿ ಲಿಂಕ್ ಮಾಡಿ. ಆಮೇಲೆ ಮೇಲಿನ ಪ್ರಕ್ರಿಯೆಯಲ್ಲಿ ಮುಂದುವರೆಯಬಹುದು.
ಹಂತ 1: ಮೊದಲಿಗೆ *99# ಅನ್ನು ಡಯಲ್ ಮಾಡಿ. ಅಲ್ಲಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ. ಭಾರತದ ಹದಿಮೂರು ಪ್ರಮುಖ ಭಾಷೆಗಳ ಆಯ್ಕೆ ಅಲ್ಲಿರುತ್ತದೆ.
ಹಂತ 2: ಆನಂತರ ನಿಮ್ಮ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಿ. ಉದಾಹರಣೆಗೆ: BARB, CNRB, SBIN ಇತ್ಯಾದಿ.
ಹಂತ 3: ಆಗ ನಿಮ್ಮ ಫೋನ್ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳನ್ನು ಅಲ್ಲಿ ತೋರಿಸಲಾಗುತ್ತದೆ. ನಿಮ್ಮ ಬ್ಯಾಂಕ್ ಖಾತೆಯ ಜೊತೆಗೆ ಕಾಣಿಸುವ ಸಂಖ್ಯೆ (1 ಅಥವಾ 2) ಅನ್ನು ಅಲ್ಲಿ ನಮೂದಿಸಿ,
ಹಂತ 4: ಕೊನೆಗೆ ನಿಮ್ಮ ಡೆಬಿಟ್ ಕಾರ್ಡ್ ಕೊನೆಯ 6 ಡಿಜಿಟ್ ಹಾಗೂ Expiry ದಿನಾಂಕವನ್ನು ಅಲ್ಲಿ ನಮೂದಿಸಿದರೆ ಆಯಿತು. ನೀವು ನೀಡುವ ಎಲ್ಲಾ ಮಾಹಿತಿ ಸರಿಯಾಗಿದ್ದರೆ ಪೇಮೆಂಟ್ ಎನೇಬಲ್ ಆಗುತ್ತದೆ. ಇದನ್ನು ಒಮ್ಮೆ ಮಾಡಿದರೆ ಸಾಕು. ನಂತರದಲ್ಲಿ ನೇರವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ.