LIC Recruitment- LICಯ 841 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ

Spread the love

ಕೇಂದ್ರ ಸರ್ಕಾರದ ಅಧೀನದ ಪ್ರತಿಷ್ಠಿತ ಎಲ್‌ಐಸಿಯಲ್ಲಿ ಖಾಲಿ ಇರುವ 841 ಹುದ್ದೆಗಳ ಭರ್ತಿಗೆ (LIC Recruitment) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಭಾರತ ಸರಕಾರದ ಜೀವ ವಿಮಾ ನಿಗಮವು (Life Insurance Corporation of India- LIC) ಬರೋಬ್ಬರಿ 841 ಹುದ್ದೆಗಳ ನೇಮಕಾತಿಗೆ ಆಗಸ್ಟ್ 16ರಂದು ಅಧಿಸೂಚನೆ ಪ್ರಕಟಿಸಿದೆ. ಇದು ಪದವೀಧರರಿಗೆ ಅಪೂರ್ವ ಅವಕಾಶವಾಗಿದ್ದು; ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 8ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
  • ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸ್ಪೆಷಲಿಸ್ಟ್): 410
  • ಅಸಿಸ್ಟೆಂಟ್ ಎಂಜಿನಿಯರ್: 81
  • ಅಸಿಸ್ಟೆಂಟ್ ಅಡ್ಡಿನಿಸ್ಟ್ರೇಟಿವ್ ಆಫೀಸರ್ ಜನರಲಿಸ್ಟ್: 350
  • ಒಟ್ಟು ಹುದ್ದೆಗಳು: 841

E-Swathu 11B- ಸೆಪ್ಟೆಂಬರ್’ನಿಂದ ಗ್ರಾಮ ಪಂಚಾಯತಿ ಎಲ್ಲಾ ಆಸ್ತಿಗಳಿಗೂ ಇ-ಸ್ವತ್ತ್ತು ವಿತರಣೆ | ಸರ್ಕಾರದ ಮಹತ್ವದ ಮಾಹಿತಿ

ವಯೋಮಿತಿ ಮತ್ತು ವಿದ್ಯಾರ್ಹತೆ

ಅಸಿಸ್ಟೆಂಟ್ ಎಂಜಿನಿಯರ್: ಎಲೆಕ್ಟ್ರಿಕಲ್ ಮತ್ತು ಸಿವಿಲ್ ವಿಭಾಗದಲ್ಲಿ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ 21ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಬಂಧಿಸಿದ ವಿಭಾಗಗಳಲ್ಲಿ ಬಿಇ/ಬಿಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ.

ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್: ಸ್ಪೆಷಲಿಸ್ಟ್ ವಿಭಾಗದಲ್ಲಿ ಸಿಎ, ಆ್ಯಕ್ಚುವರಿಯಲ್, ಇನ್ಸೂರೆನ್ಸ್ ಸ್ಪೆಷಲಿಸ್ಟ್, ಕಂಪನಿ ಸೆಕ್ರೆಟರಿ ಮತ್ತು ಲೀಗಲ್ ವಿಭಾಗಕ್ಕೆ ನೇಮಕಾತಿ ನಡೆಸಲಾಗುತ್ತದೆ. ಆಯಾ ಹುದ್ದೆಗಳಿಗೆ ಅನುಸಾರ ಪದವಿ ಜೊತೆಗೆ ಸಿಎ/ಐಸಿಡಬ್ಲ್ಯುಐ ಅಥವಾ ಕಾನೂನು ಪದವಿ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಲು ಅರ್ಹರು. 21ರಿಂದ 32 ವರ್ಷದೊಳಗಿನವರು ಪ್ರಯತ್ನಿಸಬಹುದು.

ಅಸಿಸ್ಟೆಂಟ್ ಅಡ್ಡಿನಿಸ್ಟ್ರೇಟಿವ್ ಆಫೀಸರ್ ಜನರಲಿಸ್ಟ್: ಈ ವಿಭಾಗದಲ್ಲಿ 21ರಿಂದ 30 ವರ್ಷದೊಳಗಿನ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕವೆಷ್ಟು?

ಎಸ್‌ಸಿ/ಎಸ್‌ಟಿ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 85 ರೂ. ಶುಲ್ಕ ಮತ್ತು ಉಳಿದ ಅಭ್ಯರ್ಥಿಗಳಿಗೆ 700 ರೂ. ಶುಲ್ಕ ನಿಗದಿಪಡಿಸಲಾಗಿದೆ. ಇದರ ಹೊರತಾಗಿ ಹಣ ವರ್ಗಾವಣೆ ಶುಲ್ಕ, ಜಿಎಸ್‌ಟಿ ಕೂಡ ಪಾವತಿಸಬೇಕಾಗುತ್ತದೆ.

Indian Navy Tradesman Recruitment 2025- ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ನೌಕಾಪಡೆಯಲ್ಲಿ 1,266 ಹುದ್ದೆಗಳ ನೇಮಕಾತಿ

ಆಯ್ಕೆ ವಿಧಾನ ಹೇಗಿರುತ್ತದೆ?

ಈ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ರೀಸನಿಂಗ್ ಎಬಿಲಿಟಿ, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್, ಜನರಲ್ ಅವೇರ್ನೆಸ್, ಇಂಗ್ಲಿಷ್ ಜ್ಞಾನ, ಪ್ರೊಫೆಶನಲ್ ನಾಲೆಜ್ ಮತ್ತು ವಿವಿಧ ಕೌಶಲಗಳಿಗೆ ಸಂಬಂಧಿ ಸಿದಂತೆ ಪ್ರಶ್ನೆಗಳನ್ನು ನೀಡಲಾಗುತ್ತದೆ.

ಆ ಹುದ್ದೆ, ವಿಷಯಕ್ಕೆ ಅನುಗುಣವಾಗಿ ಪ್ರಶ್ನೆಗಳು ಬೇರೆ ಬೇರೆಯಾಗುತ್ತದೆ. ತಪ್ಪು ಉತ್ತರಗಳಿಗೆ 1/4 ಅಂಕಗಳನ್ನೂ ಕಳೆಯಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ನಂತರ ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಕೇಂದ್ರ ಸರ್ಕಾರದ ಅಧೀನದ ಪ್ರತಿಷ್ಠಿತ ಎಲ್‌ಐಸಿಯಲ್ಲಿ ಖಾಲಿ ಇರುವ 841 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
LIC Recruitment

 

ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು

ರಾಜ್ಯದಲ್ಲಿ ಪೂರ್ವಭಾವಿ ಪರೀಕ್ಷೆಗೆ ಬೆಂಗಳೂರು, ಬೆಳಗಾವಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ಹುಬ್ಬಳ್ಳಿ ಧಾರವಾಡಗಳಲ್ಲಿ ಕೇಂದ್ರಗಳಿರಲಿವೆ. ಮುಖ್ಯ ಪರೀಕ್ಷೆಗೆ ರಾಜ್ಯದಲ್ಲಿ ಮೂರು ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಬೆಂಗಳೂರು, ಬೆಳಗಾವಿ ಹಾಗೂ ಶಿವಮೊಗ್ಗದಲ್ಲಿ ಪರೀಕ್ಷೆ ಬರೆಯಬಹುದು.

ವಿಶೇಷ ಸೂಚನೆಗಳು
  • ಈ ಹುದ್ದೆಗಳಿಗೆ ಆರಂಭದಲ್ಲಿ ಒಂದು ವರ್ಷದ ಅವಧಿಯ ಪ್ರೊಬೆಷನರಿ ಅವಧಿ ಇರುತ್ತದೆ. ಇದು ಎರಡು ವರ್ಷಗಳ ತನಕವೂ ವಿಸ್ತರಣೆಯಾಗಬಹುದು.
  • ನೇಮಕಗೊಂಡವರು 4 ವರ್ಷಗಳ ಅವಧಿಗೆ 50 ಲಕ್ಷ ಬಾಂಡ್ ಬರೆದು ಕೊಡಬೇಕಾಗುತ್ತದೆ.
  • ಅರ್ಜಿ ಸಲ್ಲಿಸುವ ಎಸ್‌ಸಿ/ಎಸ್‌ಟಿ/ಒಬಿಸಿ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಅಗತ್ಯವಿದ್ದರೆ ಅರ್ಜಿ ಸಲ್ಲಿಸುವಾಗಲೇ ಇದಕ್ಕೆ ಸಂಬಂಧಿಸಿದ ವಿವರಗಳನ್ನು ಅರ್ಜಿಯಲ್ಲಿ ತುಂಬಬೇಕು.
  • ಎಲ್‌ಐಸಿಯ ವಿಭಾಗೀಯ ಕಚೇರಿಗಳಲ್ಲಿ ಪರೀಕ್ಷಾ ಸಿದ್ಧತೆಗೆ ತರಬೇತಿ ನೀಡಲಾಗುತ್ತದೆ.
  • ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಉಡುಪಿ, ಶಿವಮೊಗ್ಗ, ಬೆಳಗಾವಿ ಹಾಗೂ ರಾಯಚೂರಿನಲ್ಲಿ ಎಲ್‌ಐಸಿ ವಿಭಾಗೀಯ ಕಚೇರಿಗಳಿವೆ.

SBI Junior Associates Recruitment 2025- ಎಸ್‌ಬಿಐ ಬ್ಯಾಂಕ್ 6,589 ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಸರ್ಕಾರಿ ಅವಕಾಶ | ಕನ್ನಡದಲ್ಲೂ ಪರೀಕ್ಷೆಗೆ ಅವಕಾಶ

ಮಾಸಿಕ ವೇತನವೆಷ್ಟು?

ಈ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ 88,635 ರೂ. ರಿಂದ 1,69,025 ರೂ. ವರೆಗೂ ವೇತನ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರಿ ವಿವಿಧ ಸವಲತ್ತುಗಳು ಅನ್ವಯವಾಗುತ್ತವೆ.

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಕೊನೆ ದಿನ ದಿನಾಂಕ: ಸೆಪ್ಟೆಂಬರ್ 8, 2025
  • ಪೂರ್ವಭಾವಿ ಪರೀಕ್ಷೆ: ಅಕ್ಟೋಬರ್ 3, 2025
  • ಮುಖ್ಯ ಪರೀಕ್ಷೆ ದಿನಾಂಕ: ನವೆಂಬರ್ 8, 2025

AAO ಜನರಲಿಸ್ಟ್ ಅಧಿಸೂಚನೆ: Download
AAO ತಜ್ಞ ಮತ್ತು AE ಅಧಿಸೂಚನೆ: Download
ಹೆಚ್ಚಿನ ವಿವರಗಳಿಗೆ: licindia.in

Free Solar Electricity- ಮನೆಗೆ ಉಚಿತ ಸೋಲಾರ್ ಕರೆಂಟ್ | ಮನೆಗೆ 20 ವರ್ಷ ಉಚಿತ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ..


Spread the love
WhatsApp Group Join Now
Telegram Group Join Now
error: Content is protected !!