ಗಣೇಶ ಚತುರ್ಥಿ ಹಬ್ಬಕ್ಕೆ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಬಿಡುಗಡೆ (Gruhalakshmi money released) ಮಾಡುವ ಬಗ್ಗೆ ಮಹಿಳಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
ಗೃಹಲಕ್ಷ್ಮೀ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಬಲ ನೀಡುವ ಉದ್ದೇಶದಿಂದ ಆರಂಭಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ₹2,000 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಶೀಘ್ರದಲ್ಲಿಯೇ ಮತ್ತೊಂದು ಕಂತಿನ ‘ಗೃಹಲಕ್ಷ್ಮೀ ಯೋಜನೆ’ಯ ಹಣ ಬಿಡುಗಡೆ ಮಡಲು ರಾಜ್ಯ ಸರ್ಕಾರ ಮುಂದಾಗಿದ್ದು; ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಖಚಿತ ಮಾಹಿತಿ ನೀಡಿದ್ದಾರೆ.
ಗಣೇಶ ಹಬ್ಬಕ್ಕೆ ಜುಲೈ ಕಂತು ಹಣ ಜಮಾ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಗಣೇಶ ಚತುರ್ಥಿ ಹಬ್ಬದ ವೇಳೆಗೆ ಜುಲೈ ತಿಂಗಳ ಗೃಹಲಕ್ಷ್ಮೀ ಕಂತು ಬಿಡುಗಡೆ ಮಾಡಲಾಗುವುದು. ಜೂನ್ ಮತ್ತು ಜುಲೈ ತಿಂಗಳ ಹಣ ಬಿಡುಗಡೆ ಪ್ರಕ್ರಿಯೆಯ ಕುರಿತು ವಿವರಿಸಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ಮೊದಲು ಜೂನ್ ತಿಂಗಳ ಹಣವನ್ನು ಬಿಡುಗಡೆ ಮಾಡಿದ್ದೇವೆ. ಬಹುತೇಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಅದು ಜಮಾ ಆಗಿದೆ. ಈಗ, ಗಣೇಶ ಚತುರ್ಥಿ ಹಬ್ಬಕ್ಕೆ ಜುಲೈ ತಿಂಗಳ ಹಣವನ್ನು ಉಡುಗೊರೆಯಾಗಿ ನೀಡುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

15 ದಿನಗಳಲ್ಲಿ ಹಣ ಬಿಡುಗಡೆ
ಹೆಬ್ಬಾಳ್ಕರ್ ಅವರ ಪ್ರಕಾರ, ಮುಂದಿನ 15 ದಿನಗಳಲ್ಲಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಮತ್ತು ಹಬ್ಬದ ಸಮಯಕ್ಕೆ ಮಹಿಳೆಯರು ಈ ಮೊತ್ತವನ್ನು ತಮ್ಮ ಖಾತೆಯಲ್ಲಿ ನೋಡಬಹುದಾಗಿದೆ.
ಗಣೇಶ ಚತುರ್ಥಿ ಕರ್ನಾಟಕದ ಮನೆಮನೆಗಳಲ್ಲಿ ಭಕ್ತಿ ಹಾಗೂ ಹರ್ಷೋದ್ಗಾರದಿಂದ ಆಚರಿಸುವ ಹಬ್ಬವಾಗಿದ್ದು; ಈ ಸಮಯದಲ್ಲಿ ಹಣ ಜಮಾ ಆಗುವುದರಿಂದ ಹಲವಾರು ಮಹಿಳೆಯರಿಗೆ ಹಬ್ಬದ ಸಿದ್ಧತೆಗಳಲ್ಲಿ ಆರ್ಥಿಕ ನೆಮ್ಮದಿ ಸಿಗಲಿದೆ.