ರಾಜ್ಯ ಸರ್ಕಾರವು ವಿವಿಧ ನಿಗಮಗಳ ಮೂಲಕ ಕಲ್ಯಾಣ ಯೋಜನೆಗಳಿಗೆ (Ganga Kalyan Swavalambi Sarathi) ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
2025-26ನೇ ಸಾಲಿನಲ್ಲಿ ಹಲವಾರು ಪ್ರಮುಖ ಯೋಜನೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಮೂಲಕ ತಳ ಸಮುದಾಯಗಳ ಜನರಿಗೆ ಸಹಾಯಧನ, ಸಾಲ ಸೌಲಭ್ಯ, ಉದ್ಯೋಗಾವಕಾಶ ಮತ್ತು ಸ್ವಾವಲಂಬನೆಯ ದಾರಿ ತೆರೆದಿಡಲಾಗಿದೆ.
ಭೂ ಒಡೆತನ ಯೋಜನೆ
ಭೂರಹಿತ ಮಹಿಳಾ ಕೃಷಿಕ ಕುಟುಂಬಗಳಿಗೆ ಕೃಷಿ ಜಮೀನು ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಘಟಕ ವೆಚ್ಚ ₹25 ಲಕ್ಷವಾಗಿದ್ದು; ಇದರಲ್ಲಿ ಶೇ.50ರಷ್ಟು ಸರ್ಕಾರದಿಂದ ಸಹಾಯಧನ ಸಿಗಲಿದೆ. ಉಳಿದ ಮೊತ್ತವನ್ನು 6% ಬಡ್ಡಿದರದಲ್ಲಿ ಸಾಲವಾಗಿ ನೀಡಲಾಗುತ್ತದೆ. ಸುಲಭ ಕಂತುಗಳಲ್ಲಿ ಈ ಸಾಲವನ್ನು ಮರುಪಾವತಿ ಮಾಡಬಹುದು.
Karnataka Heavy Rain Alert- ಇನ್ನು 5 ದಿನ ರಾಜ್ಯದಲ್ಲಿ ಜೋರು ಮಳೆ | ಈ ಜಿಲ್ಲೆಗಳಲ್ಲಿ ಮಳೆ ಆರ್ಭಟ
ಗಂಗಾ ಕಲ್ಯಾಣ ಯೋಜನೆ
ಈ ಯೋಜನೆಯ ಮೂಲಕ ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. 1.20 ರಿಂದ 5 ಎಕರೆ ಜಮೀನು ಹೊಂದಿರುವ ರೈತರಿಗೆ ಕೊಳವೆ ಬಾವಿ ಕೊರೆದು, ಪಂಪ್‌ಸೆಟ್ ಅಳವಡಿಸಿ, ವಿದ್ಯುದೀಕರಣ ಮಾಡಲಾಗುತ್ತದೆ. ಘಟಕ ವೆಚ್ಚ ₹4.75 ಲಕ್ಷ ಅಥವಾ ₹3.75 ಲಕ್ಷ ನೀಡಲಾಗುತ್ತದೆ. ಜೊತೆಗೆ ₹50,000 ಸಾಲ ಕೂಡ ನೀಡಲಾಗುತ್ತದೆ.

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್ ಸಹಯೋಗ)
ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿಯಲ್ಲಿ ಸ್ವಾವಲಂಬಿ ಸಾರಥಿ, ಫಾಸ್ಟ್ ಫುಡ್ ಟ್ರಕ್ ಟ್ರೈಲರ್/ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್, ಹೈನುಗಾರಿಕೆ ಹಾಗೂ ಇತರೆ ವ್ಯಾಪಾರ ಉದ್ದೇಶದ ಕಾರ್ಯಗಳಿಗೆ ಸಾಲ, ಸಬ್ಸಿಡಿ ಒದಗಿಸಲಾಗುತ್ತದೆ.
‘ಸ್ವಾವಲಂಬಿ ಸಾರಥಿ’ ಯೋಜನೆಯಡಿ ಸರಕು ವಾಹನ/ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಗೆ ಹಾಗೂ ಫಾಸ್ಟ್ ಫುಡ್ ಟ್ರಕ್ ಟ್ರೈಲರ್/ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ ಯೋಜನೆಯಡಿ ಗರಿಷ್ಠ ₹4 ಲಕ್ಷ ಸಹಾಯಧನ ನೀಡಲಾಗುತ್ತದೆ.
ಅದೇ ರೀತಿ ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ ಅಥವಾ ಹಸುಗಳಿಗೆ ಘಟಕ ವೆಚ್ಚದ ಶೇ.50ರಷ್ಟು ಅಥವಾ ಗರಿಷ್ಟ 1.25 ಲಕ್ಷಗಳ ಸಹಾಯಧನ ನೀಡಲಾಗುತ್ತದೆ. ಜೊತೆಗೆ ಇತರೆ ವ್ಯಾಪಾರ ಉದ್ದೇಶದ ಕಾರ್ಯಗಳಿಗೆ ಬ್ಯಾಂಕ್ ಮೂಲಕ ಮಂಜೂರಾದ ಸಾಲದ 70% ಅಥವಾ ಗರಿಷ್ಠ ₹2 ಲಕ್ಷ ಸಹಾಯಧನ ನೀಡಲಾಗುತ್ತದೆ.
ಸ್ವಯಂ ಉದ್ಯೋಗ ನೇರಸಾಲ ಯೋಜನೆ
ಹಣ್ಣು-ಹಂಪಲು, ಮಳಿಗೆ, ತಳ್ಳುಗಾಡಿ ಮೊದಲಾದ ಸಣ್ಣ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಘಟಕ ವೆಚ್ಚ ₹1 ಲಕ್ಷವಾಗಿದ್ದು ಇದರಲ್ಲಿ ₹50,000 ಸಹಾಯಧನ + ವಾರ್ಷಿಕ 4% ಬಡ್ಡಿದರದಲ್ಲಿ ₹50,000 ಸಾಲಕ್ಕೆ ನೆರವು ನೀಡಲಾಗುತ್ತದೆ.
ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ
ಮಹಿಳಾ ಸ್ವಸಹಾಯ ಸಂಘಗಳ ಉದ್ಯಮ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಯೋಜನೆಯ ಉದ್ದೇಶವಾಗಿದೆ. ಕನಿಷ್ಠ 10 ಸದಸ್ಯರ ನೋಂದಾಯಿತ ಮಹಿಳಾ ಸಂಘಕ್ಕೆ ₹2.50 ಲಕ್ಷ (₹1.50 ಲಕ್ಷ ಸಹಾಯಧನ + ₹1 ಲಕ್ಷ ಸಾಲ) ನೀಡಲಾಗುತ್ತದೆ. ಸಾಲಕ್ಕೆ 4% ವಾರ್ಷಿಕ ಸಾಲದ ಬಡ್ಡಿದರವನ್ನು ವಿಧಿಸಲಾಗುತ್ತದೆ.
Bhoo Odetana Yojana- ಜಮೀನು ಖರೀದಿಗೆ 25 ಲಕ್ಷ ರೂ. ಸಹಾಯಧನ | ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ
ಅರ್ಜಿಯನ್ನು ಆಹ್ವಾನಿಸುತ್ತಿರುವ ನಿಗಮಗಳು
ಈ ಯೋಜನೆಗಳನ್ನು ಕೆಳಗಿನ ನಿಗಮಗಳ ಮೂಲಕ ಜಾರಿಗೊಳಿಸಲಾಗುತ್ತದೆ:
- ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
- ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
- ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
- ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
- ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಅರ್ಜಿ ಸಲ್ಲಿಕೆ ಹೇಗೆ?
ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು; ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 10-09-2025
- ಸಂಪರ್ಕಕ್ಕೆ ಸಹಾಯವಾಣಿ: 94823 00400
Dairy Farming Subsidy- ಹಸು-ಎಮ್ಮೆ ಖರೀದಿಗೆ ₹1.25 ಲಕ್ಷ ಸಹಾಯಧನ | ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ