ಎಸ್‌ಎಸ್‌ಎಲ್‌ಸಿ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ (Vidyasiri) ಯೋಜನೆಯಡಿ 15,000 ರೂ. ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ಸರ್ಕಾರವು ‘ವಿದ್ಯಾಸಿರಿ’ ಯೋಜನೆ ಆಯೋಜಿಸಿದ್ದು; 2025-26ನೇ ಸಾಲಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ 15,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. ವಸತಿ, ಆಹಾರ, ಶುಲ್ಕ ಮರುಪಾವತಿ ಮತ್ತು ಇತರ ಅಗತ್ಯಗಳಿಗಾಗಿ ಈ ನೆರವು ನೀಡಲಾಗುತ್ತದೆ.
ಯಾರೆಲ್ಲ ಅರ್ಹರು?
- ವಿದ್ಯಾರ್ಥಿಗಳು ಹಿಂದುಳಿದ ವರ್ಗ, ಪ್ರವರ್ಗ-1ರ ಅಲೆಮಾರಿ/ ಅರೆಅಲೆಮಾರಿ ಸಮುದಾಯಗಳಿಗೆ ಸೇರಿರಬೇಕು.
- PUC, ITI, Diploma, Degree, PG ಇತ್ಯಾದಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ವಾರ್ಷಿಕ ಆದಾಯ ಹಿಂದುಳಿದ ವರ್ಗದವರಿಗೆ ₹2.00 ಲಕ್ಷ, ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ವಾರ್ಷಿಕ ಆದಾಯ ₹2.50 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಸರ್ಕಾರಿ ವಿದ್ಯಾರ್ಥಿ ನಿಲಯ ಅಥವಾ ಖಾಸಗಿ ಪಿಜಿ, ಹಾಸ್ಟೆಲ್‌ನಲ್ಲಿ ವಾಸವಾಗಿರಬೇಕು.
- ಹಿಂದಿನ ಶೈಕ್ಷಣಿಕ ವರ್ಷವನ್ನು ಯಾವುದೇ ಹಿನ್ನಡೆಯಿಲ್ಲದೆ ಉತ್ತೀರ್ಣರಾಗಿರಬೇಕು.
ವಿದ್ಯಾರ್ಥಿವೇತನದ ವಿವರ
ಪ್ರತಿ ತಿಂಗಳಿಗೆ ₹1,500 ಸಹಾಯಧನದಂತೆ ಒಟ್ಟು 10 ತಿಂಗಳಿಗೆ ₹15,000 ವಿದ್ಯಾರ್ಥಿವೇತನ ಒದಗಿಸಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಯಾವೆಲ್ಲ ಸೌಲಭ್ಯಗಳು ಸಿಗಲಿವೆ?
ರಾಜ್ಯ ಸರ್ಕಾರದ ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತದೆ:
- ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
- ಶುಲ್ಕ ಮರುಪಾವತಿ ಯೋಜನೆ
- ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ
- ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿವೇತನ
ಅರ್ಜಿ ಸಲ್ಲಿಕೆ ಹೇಗೆ?
ರಾಜ್ಯ ಸರ್ಕಾರದ ssp.postmatric.karnataka.gov.in ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ತಮ್ಮ SATS ID ಅಥವಾ USN/Registration Number ಬಳಸಿ ಲಾಗಿನ್ ಆಗಬೇಕು.
ಹೊಸ ಬಳಕೆದಾರರಾದರೆ ಮೊದಲಿಗೆ New Student Registration ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು
- ಜಾತಿ ಮತ್ತು ಆದಾಯ ಪ್ರಮಾಣಪತ್ರ (ಆರ್‌ಡಿ ಸಂಖ್ಯೆ ಸೇರಿದಂತೆ)
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪೋಷಕರ ಆಧಾರ್ ಕಾರ್ಡ್
- ಹಿಂದಿನ ವರ್ಷದ ಅಂಕಪಟ್ಟಿ
- ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ವಿವರ
- ವಿಳಾಸ ದೃಢೀಕರಣ ಪತ್ರ
- ವೈದ್ಯಕೀಯ ಪ್ರಮಾಣಪತ್ರ (ಅನ್ವಯಿಸಿದರೆ)
- ಪಿಯುಸಿ ವಿದ್ಯಾರ್ಥಿಗಳಿಗೆ SATS ಐಡಿ
- ಇತರೆ ಕೋರ್ಸ್ ವಿದ್ಯಾರ್ಥಿಗಳಿಗೆ ಯುಎಸ್‌ಎನ್/ರಿಜಿಸ್ಟ್ರೇಶನ್ ಸಂಖ್ಯೆ
ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಶಿಕ್ಷಣದಲ್ಲಿ ಮುಂದುವರಿಯಲು ಉನ್ನತ ಬೆಂಬಲವಾಗಿದೆ. ಎಲ್ಲ ಅರ್ಹ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬೇಕು ಎಂಬುದು ಸರ್ಕಾರದ ಉದ್ದೇಶ. ಆದ್ದರಿಂದ ಈ ವಿಶೇಷ ಸೌಲಭ್ಯವನ್ನು ತಪ್ಪಿಸಿಕೊಳ್ಳದೆ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ…
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 30, 2025
- ಅರ್ಜಿ ಲಿಂಕ್: Apply Now