2025-26ನೇ ಸಾಲಿನ ‘ಭೂ ಒಡೆತನ ಯೋಜನೆ’ಯಡಿ (Bhoo Odetana Yojana) ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಸಬ್ಸಿಡಿಯಲ್ಲಿ ಜಮೀನು ಖರೀದಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ಆರ್ಥಿಕ ಅಭಿವೃದ್ಧಿಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸಿದೆ.
ವಿವಿಧ ನಿಗಮಗಳ ಮೂಲಕ 2025-2026ನೇ ಸಾಲಿನ ‘ಭೂ ಒಡೆತನ ಯೋಜನೆ’ಯಡಿ (Land Ownership Scheme) ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಸಹಾಯಧನದಲ್ಲಿ ಜಮೀನು ಖರೀದಿಸಲು ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: Karnataka Rain Alert- ರಾಜ್ಯದ 15 ಜಿಲ್ಲೆಗಳಲ್ಲಿ ಬಿರುಸಿನ ಮಳೆ | ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ
ಎಷ್ಟು ಸಿಗಲಿದೆ ಸಹಾಯಧನ?
‘ಭೂ ಒಡೆತನ ಯೋಜನೆ’ಯಡಿ ಎಸ್‌ಸಿ/ ಎಸ್‌ಟಿ ಸಮುದಾಯಗಳ ಭೂರಹಿತ ಮಹಿಳಾ ಕೃಷಿ ಕಾರ್ಮಿಕ ಕುಟುಂಬದ ಮಹಿಳೆಯರಿಗೆ ಕೃಷಿ ಜಮೀನನ್ನು ನಿಗಮದಿಂದ ಖರೀದಿಸಿ ನೊಂದಣಿ ಮಾಡಿಸಿಕೊಡಲಾಗುತ್ತದೆ. ಘಟಕ ವೆಚ್ಚದ 25 ಲಕ್ಷ ಮತ್ತು 20 ಲಕ್ಷ ರೂಪಾಯಿಗಳಾಗಿದ್ದು; ಇದರಲ್ಲಿ ಶೇ.50% ಸಹಾಯಧನವನ್ನು ನಿಗಮಗಳ ಮೂಲಕ ಸರಕಾರ ನೀಡಲಾಗುತ್ತದೆ.
ಅಂದರೆ 25 ಲಕ್ಷ ರೂಪಾಯಿ ಘಟಕ ವೆಚ್ಚಕ್ಕೆ 12 ಲಕ್ಷ 50 ಸಾವಿರ ರೂಪಾಯಿ ಹಾಗೂ 20 ಲಕ್ಷದ ಘಟಕ ವೆಚ್ಚಕ್ಕೆ 10 ಲಕ್ಷ ರೂಪಾಯಿ ಹಣ ಉಚಿತವಾಗಿ ಸಿಗಲಿದೆ. ಉಳಿಕೆ ಹಣ ಸಾಲವಾಗಿದ್ದು; ಸದರಿ ಸಾಲವನ್ನು ವಾರ್ಷಿಕ 6ರ ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಮರು ಪಾವತಿಸಬೇಕು.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಎಸ್‌ಸಿ/ ಎಸ್ಟಿ ಸಮುದಾಯದ ಸಮಸ್ತ ಜಾತಿ, ಉಪಜಾತಿಯ ಮಹಿಳಾ ಭೂ ರಹಿತ ಕಾರ್ಮಿಕರು ಈ ಯೋಜನೆಯಡಿ ಸಬ್ಸಿಡಿಯಲ್ಲಿ ಜಮೀನು ಖರೀದಿಸಲು ಅರ್ಜಿ ಸಲ್ಲಿಸಬಹುದಾಗಿದೆ.
- ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
- ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
- ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
- ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮ
- ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
- ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
ಸದರಿ ‘ಭೂ ಒಡೆತನ ಯೋಜನೆ’ ಯೋಜನೆಯನ್ನು ಮೇಲ್ಕಾಣಿಸಿದ ನಿಗಮಗಳ ಮೂಲಕ ಅನುಷ್ಟಾನಗೊಳಿಸಲಾಗಿದ್ದು; ಈ ನಿಗಮಗಳ ವ್ಯಾಪ್ತಿಗೊಳಪಡುವ ಎಲ್ಲ ಭೂರಹಿರ ಮಹಿಳಾ ಕಾರ್ಮಿಕರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
- ಪರಿಶಿಷ್ಟ ಜಾತಿ/ಪಂಗಡದವರಾಗಿದ್ದು, ಜಾತಿ ಪ್ರಮಾಣಪತ್ರ ಹೊಂದಿರಬೇಕು.
- ಭೂ-ರಹಿತ ಮಹಿಳಾ ಕೃಷಿ ಕಾರ್ಮಿಕ ಪ್ರಮಾಣಪತ್ರ ಹೊಂದಿರಬೇಕು.
- ಆಧಾಯ ಪ್ರಮಾಣ ಪತ್ರ.
- ವಯೋಮಿತಿ ಕನಿಷ್ಠ 21 ಹಾಗೂ ಗರಿಷ್ಮ 50 ವರ್ಷ
- ಕುಟುಂಬದ ಪಡಿತರ ಚೀಟಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಆಧಾರ್ ಕಾರ್ಡ್ ಪ್ರತಿ
ಎಲ್ಲಿ ಅರ್ಜಿ ಸಲ್ಲಿಸಬೇಕು?
ಮೇಲ್ಕಾಣಿಸಿದ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ sevasindhu.karnataka.gov.in ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಜನ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: Solar Power At Home- ಮನೆಗೆ ಸೋಲಾರ್ ಕರೆಂಟ್ ಪಡೆಯಲು ಹೊಸ ಯೋಜನೆ ಜಾರಿ | ಇನ್ಮುಂದೆ ಚಾವಣಿಯಿಲ್ಲದ ಮನೆಗೂ ಸೌರ ವಿದ್ಯುತ್
ಅರ್ಜಿ ಸಲ್ಲಿಸುವ ದಿನಾಂಕ
ಸೆಪ್ಟೆಂಬರ್ 10, 2025 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಷ್ಟರೊಳಗೆ ಅರ್ಜಿ ಸಲ್ಲಿಸುವ ಮೂಲಕ 2025-26ನೇ ಸಾಲಿನ ‘ಭೂ ಒಡೆತನ ಯೋಜನೆ’ ಸೌಲಭ್ಯ ಪಡೆಯಬಹುದು. ಕೊನೆಯ ದಿನಾಂಕದ ವರೆಗೆ ಕಾಯದೇ ಆದಷ್ಟು ಬೇಗ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಕೆ
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್‌ಸೈಟ್ ಅಥವಾ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ / ಎಸ್.ಟಿ ಸಹಾಯವಾಣಿ 9482-300-400 ಸಂಪರ್ಕಿಸಬಹುದು. ಅರ್ಜಿ ಸಲ್ಲಿಕೆಗೆ ನಿಮ್ಮ ಹತ್ತಿರದ ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಸೇವಾ ಕೇಂದ್ರವನ್ನು ಸಂಪರ್ಕಿಸಿ.