ಕರ್ನಾಟಕದ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿ ಪ್ರಮುಖ 11 ಬ್ಯಾಂಕುಗಳಲ್ಲಿ ಕಸ್ಟಮರ್ ಗುಮಾಸ್ತ ಹುದ್ದೆಗಳಿಗೆ (IBPS Bank Jobs) ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದ ಪ್ರಮುಖ 11 ಬ್ಯಾಂಕುಗಳಲ್ಲಿ ಒಟ್ಟು 1,170 ಸೇರಿ ದೇಶಾದ್ಯಂತ ಒಟ್ಟು 10,277 ಕಸ್ಟಮರ್ ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಸಂಬAಧ ಬ್ಯಾಂಕಿAಗ್ ಸಿಬ್ಬಂದಿ ನೇಮಕಾತಿ ಆಯೋಗವು (IBPS) ಸಾಮಾನ್ಯ ನೇಮಕಾತಿ ಪ್ರಕ್ರಿಯೆಯ (CRP) ಅಧಿಸೂಚನೆ ಹೊರಡಿಸಿದೆ.
ಕೆನರಾ ಬ್ಯಾಂಕ್‌ನಲ್ಲಿ ಅತಿ ಹೆಚ್ಚು 675 ಹಾಗೂ ಬ್ಯಾಂಕ್ ಆಫ್ ಬರೋಡಾ 253 ಹುದ್ದೆಗಳಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಒಟ್ಟು 6,128 ರಾಜ್ಯದಲ್ಲಿ ಕೇವಲ 457 ಉದ್ಯೋಗಾವಕಾಶಗಳಿದ್ದವು. ಈ ವರ್ಷ ಭಾರಿ ಹೆಚ್ಚಳವಾಗಿದೆ.
ಕನ್ನಡ ಕಡ್ಡಾಯ
ರಾಜ್ಯದ ಹುದ್ದೆಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿದ್ದು, ಕನ್ನಡದಲ್ಲಿಯೇ ಪರೀಕ್ಷೆ ಬರೆಯಬಹುದು. ಇತರ ಭಾಷಾ ಜ್ಞಾನ ಹೊಂದಿದವರು ಆಯಾ ರಾಜ್ಯಗಳಿಗೂ ಅರ್ಜಿ ಸಲ್ಲಿಸಬಹುವಾಗಿದೆ. ಆದರೆ, ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರಲಿದೆ.
ರಾಜ್ಯದಲ್ಲಿ ಯಾವ ಬ್ಯಾಂಕ್? ಎಷ್ಟು ಹುದ್ದೆಗಳಿವೆ?
- ಕೆನರಾ ಬ್ಯಾಂಕ್: 675
- ಬ್ಯಾಂಕ್ ಆಫ್ ಬರೋಡಾ: 253
- ಬ್ಯಾಂಕ್ ಆಫ್ ಇಂಡಿಯಾ: 45
- ಬ್ಯಾಂಕ್ ಆಫ್ ಮಹಾರಾಷ್ಟç: 20
- ಸೆಂಟರಲ್ ಬ್ಯಾಂಕ್ ಆಫ್ ಇಂಡಿಯಾ: 47
- ಇಂಡಿಯನ್ ಓವರ್‌ಸೀಸ್ ಬ್ಯಾಂಕ್: 44
- ಪಂಜಾಬ್ ನ್ಯಾಷನಲ್ ಬ್ಯಾಂಕ್: 06
- ಪಂಜಾಬ್ ಮತ್ತು ಸಿಂಧ್ ಬ್ಯಾಂಕ್: 30
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 50
- ಒಟ್ಟು ಹುದ್ದೆಗಳು: 1,170
ಶೈಕ್ಷಣಿಕ ಅರ್ಹತೆ
ಪದವೀಧರರಾಗಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ. ಕಂಪ್ಯೂಟರ್ ನಿರ್ವಹಣೆಗೆ ಸಂಬAಧಿಸಿದAತೆ ಡಿಪ್ಲೊಮಾ, ಪ್ರಮಾಣಪತ್ರ ಪಡೆದಿರಬೇಕು. ಅಥವಾ ಪದವಿ, ಪಿಯು ಅಥವಾ ಪ್ರೌಢಸಾಲಾ ಮಟ್ಟದಲ್ಲಿ ಕಂಪ್ಯೂಟರ್ ವಿಷಯವನ್ನು ಓದಿರಬೇಕು.
ವಯೋಮಿತಿ ವಿವರ
ಅರ್ಜಿ ಸಲಲಿಸಲು ಕನಿಷ್ಠ 20 ವರ್ಷ ಗರಿಷ್ಠ 28 ವಯೋಮಿತಿ ಹೊಂದಿರಬೇಕು. 02-07-1997 ಹಾಗೂ 01-07-2005ರ ನಡುವೆ ಜನಿಸಿರಬೇಕು. ಪರಿಶಿಷ್ಟರಿಗೆ ಐದು ವರ್ಷ, ಹಿಂದುಳಿದವರಿಗೆ ಮೂರು ಹಾಗೂ ಅಂಗವಿಕಲರಿಗೆ 10 ವರ್ಷಗಳ ವರೆಗೆ ವಯೋಮಿತಿ ವಿನಾಯಿತಿ ಇದೆ.
ವೇತನ ಶ್ರೇಣಿ ಎಷ್ಟು?
ಬ್ಯಾಂಕ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ 24,050 – 54,480 ರೂ. ಇರಲಿದೆ. ಅಭ್ಯರ್ಥಿಗಳು ಆಯಾ ಬ್ಯಾಂಕ್‌ನ ನಿಯಮಾನುಸಾರ ಇತರ ಭತ್ಯೆಗಳಿಗೆ ಅರ್ಹರಾಗಿರುತ್ತಾರೆ.

ಆನ್‌ಲೈನ್ ಪರೀಕ್ಷೆ ಹೇಗಿರಲಿದೆ?
ಪೂರ್ವಭಾವಿ ಪರೀಕ್ಷೆ; ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷಾ ವಿಷಯದ 30 ನ್ಯೂಮ್ ರಿಕ್ ಹಾಗೂ ರೀಸನಿಂಗ್ ಎಬಿಲಿಟಿಯ ತಲಾ 35 ಪ್ರಶ್ನೆಗಳು ಸೇರಿ ಒಟ್ಟು 100 ಪ್ರಶ್ನೆಗಳಿಗೆ 100 ಅಂಕವಿದ್ದು, 60 ನಿಮಿಷಗಳಲ್ಲಿ ಉತ್ತರಿಸಬೇಕು.
ಮುಖ್ಯ ಪರೀಕ್ಷೆ: ಸಾಮಾನ್ಯ ಹಾಗೂ ಆರ್ಥಿಕ ಜ್ಞಾನದ 40 ಪ್ರಶ್ನೆಗಳಿಗೆ 50 ಅಂಕ, ಸಾಮಾನ್ಯ ರೀಸನಿಂಗ್ ಎಬಿಲಿಟಿಯ 40 ಪ್ರಶ್ನೆಗಳಿಗೆ 60 ಅಂಕ, ಕ್ವಾಂಟಿಟೇಟಿವ್ ಅಪ್ಟಿಟ್ಯೂಟ್ 35 ಪ್ರಶ್ನೆಗಳಿಗೆ 50 ಅಂಕವಿರಲಿವೆ. ಒಟ್ಟು 155 ಪ್ರಶ್ನೆಗಳಿಗೆ 200 ಅಂಕಗಳಿದ್ದು, 120 ನಿಮಿಷ ನೀಡಲಾಗುತ್ತದೆ.
ತಪ್ಪು ಉತ್ತರಗಳಿಗೆ ಶೇ.0.25 ಅಂಕ ಕಳೆಯಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕವನ್ನಷ್ಟೇ ಮೆರಿಟ್‌ಗೆ ಪರಿಗಣಿಸಲಾಗುತ್ತದೆ. ಮುಖ್ಯ ಪರೀಕ್ಷೆಯ 200 ಅಂಕಗಳನ್ನು ನೂರಕ್ಕೆ ಇಳಿಸಿ ಮೆರಿಟ್ ಪಟ್ಟಿ ರಚಿಸಲಾಗುತ್ತದೆ. ಈ ಕಾರಣಕ್ಕಾಗಿ ಹೆಚ್ಚು ಅಂಕಗಳಿಸುವತ್ತ ಅಭ್ಯರ್ಥಿಗಳು ಗಮನ ನೀಡಬೇಕಾಗುತ್ತದೆ.
ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು
ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.
ಪರೀಕ್ಷಾ ಪೂರ್ವ ತರಬೇತಿ
ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಪರಿಶಿಷ್ಟರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮಾಜಿ ಸೈನಿಕರು ಹಾಗೂ ಅಂಗವಿಕಲರು ತರಬೇತಿ ಪಡೆಯಲು ಅರ್ಹರು.
ಸಿಬಿಲ್ ಸ್ಕೋರ್ ಅಗತ್ಯ
ಉತ್ತಮ ಕ್ರೆಡಿಟ್ ಹಿಸ್ಟರಿ ಹೊಂದಿರುವುದು ಕಡ್ಡಾಯ. ಸಿಬಿಲ್ ಸ್ಟೋರ್‌ನಲ್ಲಿ ವ್ಯತ್ಯಾಸವಾಗಿದ್ದಲ್ಲಿ, ಆಯಾ ಸಾಲಗಾರರಿಂದ ಮರುಪಾವತಿ ಕುರಿತಾದ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಇಲ್ಲದಿದ್ದಲ್ಲಿ ನೇಮಕಾತಿಯನ್ನು ಅಸಿಂಧುಗೊಳಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ibps.in ನಲ್ಲಿ ಒಂದು ಬಾರಿಯ ನೋಂದಣಿಯನ್ನು ಮಾಡಿಸಿರಬೇಕು. ಭಾವಚಿತ್ರ, ಸಹಿ, ಎಡಗೈ ಹೆಬ್ಬರಳ ಗುರುತು, ಸ್ವಯಂ ಧೃಡೀಕರಣದ ಲಿಖಿತ ಪತ್ರ, ಅಂಕಪಟ್ಟಿಗಳ ಸ್ಕ್ಯಾನ್ಡ್ ಪ್ರತಿಯನ್ನು ಅಪ್ ಲೋಡ್ ಮಾಡಬೇಕು.
ಯಾವ ರಾಜ್ಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಆಯ್ಕೆಯನ್ನು ಬದಲಾಯಿಸಲು ಅವಕಾಶವಿರುವುದಿಲ್ಲ. ದಾಖಲಾತಿಗಳ ಅಪ್‌ಲೋಡ್’ಗೆ ಡಿಜಿ ಲಾಕರ್ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಅರ್ಜಿ ಶುಲ್ಕದ ವಿವರ
ಎಸ್‌ಸಿ/ಎಸ್‌ಟಿ, ಅಂಗವಿಕಲರು, ಮಾಜಿ ಸೈನಿಕರಿಗೆ 175 ರೂ., ಉಳಿದವರಿಗೆ 850 ರೂ. ಅರ್ಜಿ ಶುಲ್ಕ ಇರಲಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಆಗಸ್ಟ್ 21, 2025
- ಅರ್ಜಿ ತಿದ್ದುಪಡಿ ಅವಧಿ: ನಂತರ ಪ್ರಕಟ
- ಪರೀಕ್ಷಾ ಪೂರ್ವ ತರಬೇತಿ: 2025ರ ಸೆಪ್ಟೆಂಬರ್
- ಪ್ರವೇಶಪತ್ರ ಬಿಡುಗಡೆ: 2025ರ ಸೆಪ್ಟೆಂಬರ್
- ಆನ್‌ಲೈನ್ ಪೂರ್ವಭಾವಿ ಪರೀಕ್ಷೆ: 2025ರ ನವೆಂಬರ್
- ಪೂರ್ವಭಾವಿ ಪರೀಕ್ಷೆ ಫಲಿತಾಂಶ: 2025ರ ನವೆಂಬರ್
- ಮುಖ್ಯ ಪರೀಕ್ಷೆಗೆ ಪ್ರವೇಶಪತ್ರ: 2025ರ ನವೆಂಬರ್
- ಆನ್‌ಲೈನ್ ಮುಖ್ಯ ಪರೀಕ್ಷೆ: 2025ರ ನವೆಂಬರ್
- ಪ್ರಾತಿನಿಧಿಕ ನೇಮಕಾತಿ ಪಟ್ಟಿ: 2026ರ ಮಾರ್ಚ್
ಅಧಿಸೂಚನೆ ಲಿಂಕ್: Download
ಅರ್ಜಿ ಸಲ್ಲಿಕೆ ಲಿಂಕ್ ಹಾಗೂ ಮಾಹಿತಿಗೆ: Click Here
Solar Free Electricity- ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ…