Crop Insurance Relief- 1449 ಕೋಟಿ ರೂ. ಬೆಳೆವಿಮೆ ಬಿಡುಗಡೆ | 23 ಲಕ್ಷ ರೈತರ ಖಾತೆಗೆ ಹಣ ಜಮಾ | ಜಿಲ್ಲಾವಾರು ಮಾಹಿತಿ ಇಲ್ಲಿದೆ…

ರಾಜ್ಯದ 23 ಲಕ್ಷ ರೈತರಿಗೆ ಒಟ್ಟು ₹1,449 ಕೋಟಿ ರೂ. ಬೆಳೆ ವಿಮೆ ಪರಿಹಾರ (Crop Insurance Relief) ಬಿಡುಗಡೆಯಾಗಿದೆ. ಯಾವ ಜಿಲ್ಲೆಗೆ ಎಷ್ಟೆಷ್ಟು ಪರಿಹಾರ ಸಿಕ್ಕಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ….
2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿಗೆ ಸಂಬಂಧಿಸಿದಂತೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ₹1,449 ಕೋಟಿ ರೂ. ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ.
ರಾಜ್ಯದ 23 ಲಕ್ಷಕ್ಕೂ ಅಧಿಕ ರೈತರು ಈ ಪರಿಹಾರದ ಲಾಭ ಪಡೆಯಲಿದ್ದು, ಇದರಲ್ಲಿ ಶೇ. 50ಕ್ಕಿಂತ ಹೆಚ್ಚು ಹಣ ಈಗಾಗಲೇ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಿದೆ. ಉಳಿದ ಹಣ ಶೀಘ್ರದಲ್ಲಿಯೇ ರೈತರ ಖಾತೆಗೆ ಜಮಾ ಆಗಲಿದೆ.
E-Swathu- ಇನ್ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೂ ಇ-ಸ್ವತ್ತು ವಿತರಣೆ | ಸರ್ಕಾರದ ಹೊಸ ಆದೇಶ
ಯಾವೆಲ್ಲ ಬೆಳೆಗಳಿಗೆ ವಿಮಾ ಪರಿಹಾರ
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ಮುಂಗಾರು ಬೆಳೆಗಳಾದ ತೊಗರಿ, ಭತ್ತ, ರಾಗಿ, ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಹೆಸರು, ನೆಲಗಡಲೆ, ಉದ್ದು, ಸೂರ್ಯಕಾಂತಿ ಮುಂತಾದ ಬೆಳೆಗಳಿಗೆ ಈ ಪರಿಹಾರ ಬಿಡುಗಡೆಯಾಗಿದೆ.
ಹಿಂದಿನ ವರ್ಷಗಳಲ್ಲಿ ಅಕಾಲಿಕ ಮಳೆಯಿಂದ ಉಂಟಾದ ಬೆಳೆ ಹಾನಿಗೆ ಸರಿಯಾದ ಪರಿಹಾರ ಸಿಗದೆ ರೈತರು ಕಂಗಾಲಾಗಿದ್ದರು. ಈ ಬಾರಿ ಸರ್ಕಾರ ತ್ವರಿತ ಕ್ರಮ ತೆಗೆದುಕೊಂಡು 2023ರ ಮಾರ್ಚ್’ನಲ್ಲಿಯೇ ವಿಮೆ ಹಣ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಇದೀಗ ರೈತರ ಖಾತೆಗೆ ನಗದು ಜಮೆ ಆಗುತ್ತಿದೆ.

ಅತೀ ಹೆಚ್ಚು ಬೆಳೆವಿಮೆ ಪಡೆದ ಜಿಲ್ಲೆಗಳು
ವಿಸೇಷವೆಂದರೆ ಈ ಬಾರಿ ಕಲಬುರಗಿ ಜಿಲ್ಲೆ ಅತೀ ಹೆಚ್ಚು ಅಂದರೆ, ಬರೋಬ್ಬರಿ ₹656 ಕೋಟಿ ರೂ. ವಿಮೆ ಪರಿಹಾರ ಪಡೆಯುವಲ್ಲಿ ಮುಂಚೂಣಿಯಲ್ಲಿದೆ. ಹಿಂದಿನ ವರ್ಷದ ₹189 ಕೋಟಿ ರೂ. ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿ ಮೂರು ಪಟ್ಟು ಹೆಚ್ಚಳವಾಗಿದೆ.
ಇದರೊಂದಿಗೆ ಗದಗ ₹242 ಕೋಟಿ, ಹಾವೇರಿ ₹95 ಕೋಟಿ, ವಿಜಯಪುರ ₹97 ಕೋಟಿ ಹಾಗೂ ವಿಜಯನಗರ ₹70 ಕೋಟಿ ಕೋಟಿ ರೂ. ಬೆಳೆವಿಮೆ ಪರಿಹಾರ ಸಿಕ್ಕಿದೆ. ಹಾವೇರಿ ಮತ್ತು ಗದಗ ಜಿಲ್ಲೆಗಳು ಕಳೆದ 15 ವರ್ಷಗಳಿಂದ ನೂರು ಕೋಟಿ ರೂ. ಗಳಿಗೂ ಹೆಚ್ಚು ವಿಮೆ ಪರಿಹಾರ ಪಡೆಯುತ್ತಲೇ ಬಂದಿವೆ.
ಯಾವ ಜಿಲ್ಲೆಗೆ ಎಷ್ಟೆಷ್ಟು ಬೆಳೆವಿಮೆ ಸಿಕ್ಕಿದೆ?
2024-25ನೇ ಸಾಲಿನ ಮುಂಗಾರು ಬೆಳೆಗಳಿಗೆ ವಿಮಾ ಪರಿಹಾರ ಪಡೆದ ಪ್ರಮುಖ ಜಿಲ್ಲೆಗಳ ವಿವರ ಈ ಕೆಳಗಿನಂತಿದೆ:
- ಕಲಬುರಗಿ: ₹656 ಕೋಟಿ
- ಗದಗ: ₹242 ಕೋಟಿ
- ಹಾವೇರಿ: ₹95 ಕೋಟಿ
- ವಿಜಯಪುರ: ₹97 ಕೋಟಿ
- ವಿಜಯನಗರ: ₹70 ಕೋಟಿ
- ಚಿತ್ರದುರ್ಗ: ₹33 ಕೋಟಿ
- ದಾವಣಗೆರೆ: ₹44 ಕೋಟಿ
- ಯಾದಗಿರಿ: ₹18 ಕೋಟಿ
- ಧಾರವಾಡ: ₹23 ಕೋಟಿ
- ಕೊಪ್ಪಳ: ₹34 ಕೋಟಿ
- ಬೆಳಗಾವಿ: ₹24 ಕೋಟಿ
- ಶಿವಮೊಗ್ಗ: ₹13 ಕೋಟಿ
- ಮಂಡ್ಯ: ₹3 ಕೋಟಿ
- ಬಾಗಲಕೋಟೆ: ₹14 ಕೋಟಿ
- ಬೀದರ್: ₹13 ಕೋಟಿ
- ಚಾಮರಾಜನಗರ: ₹2 ಕೋಟಿ
- ಬಳ್ಳಾರಿ: ₹32 ಲಕ್ಷ
- ಉಡುಪಿ: ₹3 ಲಕ್ಷ
- ದಕ್ಷಿಣ ಕನ್ನಡ: ₹2.40 ಲಕ್ಷ
- ಬೆಂಗಳೂರು ನಗರ: ₹4 ಲಕ್ಷ
- ಒಟ್ಟು ಪರಿಹಾರ ಮೊತ್ತ: ₹1,449 ಕೋಟಿ ರೂಪಾಯಿ
ಪ್ರತಿ ವರ್ಷ ನಷ್ಟ ಅನುಭವಿಸುತ್ತಿರುವ ಸಾವಿರಾರು ರೈತರಿಗೆ ಈ ರೀತಿ ಬೆಳೆ ವಿಮೆ ಪರಿಹಾರ ಯೋಜನೆಗಳು ಭದ್ರತೆಯ ಭಾವ ಮೂಡಿಸುತ್ತಿವೆ. ಸರ್ಕಾರವು ಈ ಯೋಜನೆಯನ್ನು ಇನ್ನಷ್ಟು ಸ್ಪಷ್ಟವಾಗಿ, ನಿಖರವಾಗಿ ಆಯೋಜಿಸಿ ಹೆಚ್ಚು ರೈತರನ್ನು ಕವರೇಜ್ ಮಾಡುವ ಅಗತ್ಯವಿದೆ.
Pauti Khate Campaign- ಈ ರೈತರಿಗೆ ಪಿಎಂ ಕಿಸಾನ್ ಸೇರಿ ಸರ್ಕಾರದ ಎಲ್ಲಾ ಸೌಲಭ್ಯಗಳು ಬಂದ್ | ಕಂದಾಯ ಸಚಿವರ ಎಚ್ಚರಿಕೆ