
ಕೇಂದ್ರ ಗುಪ್ತಚರ ಇಲಾಖೆಯ ಭದ್ರತಾ ಸಹಾಯಕರ ಹುದ್ದೆಗಳ ನೇಮಕಾತಿಗೆ (IB Recruitment 2025) ಎಸ್‌ಎಸ್‌ಎಲ್‌ಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಧೀನದ ಗುಪ್ತಚರ ಬ್ಯೂರೋ (Intelligence Bureau- IB) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗುಪ್ತಚರ ಬ್ಯೂರೋ ಭದ್ರತಾ ಸಹಾಯಕ ಹಾಗೂ ಕಾರ್ಯನಿರ್ವಾಹಕರ 4,987 ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಕನ್ನಡ ಬಲ್ಲವರಿಗೆ 204 ಹುದ್ದೆಗಳು
ದೇಶಾದ್ಯಂತ ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳಿಗೆ ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸ್ಥಳೀಯ ಭಾಷಾಜ್ಞಾನ ಕಡ್ಡಾಯವಾಗಿದೆ. ಕನ್ನಡ ಓದಲು ಬರೆಯಲು ಬಲ್ಲ ಅಭ್ಯರ್ಥಿಗಳಿಗೆ ಬೆಂಗಳೂರು ಕಚೇರಿಯಲ್ಲಿ 204 ಸ್ಥಾನಗಳಿವೆ. ಜುಲೈ 26ರಿಂದ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಗಸ್ಟ್ 17 ಕೊನೆಯ ದಿನವಾಗಿದೆ.
E-Swathu- ಇನ್ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೂ ಇ-ಸ್ವತ್ತು ವಿತರಣೆ | ಸರ್ಕಾರದ ಹೊಸ ಆದೇಶ
ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ
ಮೊದಲೇ ಹೇಳಿದಂತೆ ಗುಪ್ತಚರ ಇಲಾಖೆಯ ಸೆಕ್ಯುರಿಟಿ ಅಸಿಸ್ಟೆಂಟ್ ಹಾಗೂ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ ಆಯಾ ಕಚೇರಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಆಯಾ ರಾಜ್ಯ, ಕೇಂದ್ರಾಡಳಿತ ಪ್ರದೇಶದ ನಿವಾಸಿಯಾಗಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು ಇದೇ ಆಗಸ್ಟ್ 17ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ರಿಂದ 27 ವರ್ಷದವರಾಗಿರಬೇಕು. ಒಬಿಸಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಮಾಸಿಕ ವೇತನವೆಷ್ಟು?
ಈ ನೇಮಕ ನಡೆಯುತ್ತಿರುವ ಗುಪ್ತಚರ ಇಲಾಖೆಯ ಭದ್ರತಾ ಸಹಾಯಕರ ಹುದ್ದೆಗಳು ಗ್ರೂಪ್ ‘ಸಿ’ ಹುದ್ದೆಗಳಾಗಿದ್ದು, ಆಯ್ಕೆಯಾದವರಿಗೆ 7ನೇ ವೇತನ ಆಯೋಗದ ಅನ್ವಯ 21,700 ರಿಂದ 69,100 ರೂ.ಗಳ ವರೆಗೆ ಮಾಸಿಕ ವೇತನ ಶ್ರೇಣಿ ನಿಗದಿ ಮಾಡಲಾಗಿದೆ. ಇದರ ಜೊತೆಗೆ ಮನೆ ಬಾಡಿಗೆ ಇತರ ಭತ್ಯೆಗಳು ಇರಲಿವೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಮೂರು ಹಂತಗಳ ಪರೀಕ್ಷೆ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಅಪ್ಟಿಟ್ಯೂಡ್ ಪರೀಕ್ಷೆ ನಡೆಸಲಾಗುತ್ತದೆ. ಇಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು 2ನೇ ಹಂತದಲ್ಲಿ ಕನ್ನಡದಿಂದ ಇಂಗ್ಲಿಷ್ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ 500 ಪದಗಳ ಲೇಖನವನ್ನು ಅನುವಾದ ಮಾಡಬೇಕಿರುತ್ತದೆ.
ಕೊನೆಯ ಹಂತದಲ್ಲಿ ಸಂದರ್ಶನ ನಡೆಸಲಾಗುತ್ತದೆ. ಮೊದಲ ಹಂತದ ಪರೀಕ್ಷೆಯಲ್ಲಿ ಜನರಲ್ ಅವೇರ್‌ನೆಸ್, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್, ಲಾಜಿಕಲ್ ರೀಸನಿಂಗ್, ಇಂಗ್ಲಿಷ್ ಭಾಷೆ ಜನರಲ್ ಸ್ಟಡೀಸ್ ಸೇರಿ 100 ಅಂಕದ 100 ಪ್ರಶ್ನೆಗಳಿರುತ್ತವೆ.
ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಕೆ ವಿಧಾನ
ಆಸಕ್ತ ಅಭ್ಯರ್ಥಿಗಳು mha.gov.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆಗಸ್ಟ್ 17 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಸಾಮಾನ್ಯ, ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 500 ಹಾಗೂ ಪ.ಜಾತಿ/ಪ.ಪಂಗಡ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 50 ರೂ.ಗಳ ಅರ್ಜಿ ಶುಲ್ಕವಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭ ದಿನ: 26-07-2025
- ಅರ್ಜಿ ಸಲ್ಲಿಕೆ ಕೊನೆಯ ದಿನ: 17-08-2025
ಹೆಚ್ಚಿನ ಮಾಹಿತಿಗೆ ಲಿಂಕ್: mha.gov.in