JobsNews

RRC Hubli Apprentice Recruitment 2025- SSLC, ITI ಪಾಸಾದವರಿಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ರೈಲ್ವೆಯಲ್ಲಿ ಉದ್ಯೋಗ | ನೈಋತ್ಯ ವಲಯ ರೈಲ್ವೆಯಲ್ಲಿ 904 ಹುದ್ದೆಗಳು

Spread the love

ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಗೆ ನೈಋತ್ಯ ರೈಲ್ವೆಯ ಹುಬ್ಬಳ್ಳಿ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿ 904 ಶಿಶಿಕ್ಷು (RRC Hubli Apprentice Recruitment 2025) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದ ಪ್ರಮುಖ ನಗರಗಳಾದ ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರು ನೈಋತ್ಯ ರೈಲ್ವೆ ವಿಭಾಗಗಳಲ್ಲಿ ಒಟ್ಟು 904 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆಯುಳ್ಳ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಅರ್ಹತೆ ಮತ್ತು ಶೈಕ್ಷಣಿಕ ಅರ್ಹತೆ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಟ 10ನೇ ತರಗತಿ (SSLC) ಪಾಸ್ ಆಗಿರಬೇಕು. ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್, ಪ್ಲಂಬರ್, ಕಾರ್ಪೆಂಟರ್, ಡೀಸೆಲ್ ಮೆಕ್ಯಾನಿಕ್ ಇತ್ಯಾದಿ ವಿವಿಧ ITI ಟ್ರೇಡ್‌ಗಳಲ್ಲಿ NCVT ಅಥವಾ SCVT ಮಾನ್ಯತೆ ಪಡೆದ ಐಟಿಐ ಪಾಸ್ ಆಗಿರಬೇಕು.

ಇನ್ನು ವಯೋಮಿತಿ ನೋಡುವುದಾದರೆ ಆಗಸ್ಟ್ 13, 2025ರ ಅನುಸಾರ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 24 ವರ್ಷ ವಯೋಮಿತಿಯಲ್ಲಿ ಇರಬೇಕು. ಮೀಸಲು ವರ್ಗಗಳಿಗೆ (SC/ST/OBC/PWD) ಸರ್ಕಾರದ ನಿಯಮಾನುಸಾರ ವಯೋಮಿತಿ ವಿನಾಯಿತಿ ಇದೆ.

BCM Free Hostel Admission 2025- ಮೆಟ್ರಿಕ್ ನಂತರದ ಬಿಸಿಎಂ ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಹುದ್ದೆಗಳ ವಿವರ

ರಾಜ್ಯದ ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡಿರುವ ನೈಋತ್ಯ ರೈಲ್ವೆ ವಲಯದಲ್ಲಿ ಕರ್ನಾಟಕದ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಳು ಅನ್ವಯವಾಗುತ್ತವೆ.

ಈ ಮೂರು ವಿಭಾಗಗಳ ಕಾರ್ಮಿಮಿಕ ಅಂಗ ಸಂಸ್ಥೆಗಳು ಮತ್ತು ಕಾರ್ಯಾಗಾರಗಳಲ್ಲಿ ಒಟ್ಟು 904 ಅಪ್ರೆಂಟಿಸ್ ಹುದ್ದೆಗಳಿವೆ. ಹೆಚ್ಚಿನ ಹುದ್ದೆಗಳು ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್ ಟ್ರೇಡ್‌ಗಳಲ್ಲಿ ಲಭ್ಯವಿವೆ.

SSLC ITI ಪಾಸಾದವರಿಗೆ ನೈಋತ್ಯ ರೈಲ್ವೆಯ ಹುಬ್ಬಳ್ಳಿ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿ 904 ಶಿಶಿಕ್ಷು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿ ಇಲ್ಲಿದೆ...
RRC Hubli Apprentice Recruitment 2025
ತರಬೇತಿ ಅವಧಿ ಮತ್ತು ವೇತನ

ಶಿಶಿಕ್ಷು ಅವಧಿಯು 1 ವರ್ಷವಾಗಿದ್ದು; ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ರೈಲ್ವೆ ಇಲಾಖೆಯ ನಿಯಮಾನುಸಾರ ಸ್ಟೈಪೆಂಡ್ ನೀಡಲಾಗುತ್ತದೆ.

ಈ ನಿಯಮಾನುಸಾರ ಯಾವುದೇ ವಸತಿ ಅಥವಾ ಆಹಾರ ಸೌಲಭ್ಯವನ್ನು ಇಲಾಖೆ ಒದಗಿಸುವುದಿಲ್ಲ. ಅಭ್ಯರ್ಥಿಗಳು ಸ್ವಂತ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

IBPS Bank Recruitment 2025 – ವಿವಿಧ 11 ಸರ್ಕಾರಿ ಬ್ಯಾಂಕುಗಳಲ್ಲಿ 6,215 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಸುವರ್ಣಾವಕಾಶ

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳನ್ನು ಕೇವಲ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. SSLC ಮತ್ತು ITI ಕೋರ್ಸಿನಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ರೋಸ್ಟರ್ ಸಹಿತ ಮೆರಿಟ್ ಲಿಸ್ಟ್ ತಯಾರಿಸಲಾಗುತ್ತದೆ.

ಐಟಿಐ ಕೋರ್ಸಿಗೆ National/State Council for Vocational Training (NCVT / SCVT) ರಿಂದ ಪಡೆದ ಪ್ರಮಾಣಪತ್ರಗಳು ಮಾತ್ರ ಮಾನ್ಯವಾಗುತ್ತವೆ.

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrchubli.inಗೆ ಹೋಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕವಾಗಿ ₹100 ನಿಗದಿಪಡಿಸಲಾಗಿದ್ದು; ಪ.ಜಾತಿ, ಪ.ಪಂಗಡ, ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಅನ್ವಯವಾಗುವುದಿಲ್ಲ.

ಕೇಂದ್ರ ಸರ್ಕಾರದಿಂದ ₹3.72 ಲಕ್ಷ ವರೆಗೆ ವಿಶೇಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ | 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಅವಕಾಶ

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಪ್ರಾರಂಭ: 14-07-2025
  • ಅರ್ಜಿ ಸಲ್ಲಿಕೆ ಕೊನೆ: 13-08-2025

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯುವುದು ಅನೇಕ ಯುವಕರ ಕನಸು. ಈ ನೇಮಕಾತಿ ಮೂಲಕ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ, ಕೇವಲ ವಿದ್ಯಾರ್ಹತೆ ಆಧಾರದ ಮೇಲೆ ಶಿಶಿಕ್ಷು ತರಬೇತಿಗೆ ಅವಕಾಶ ದೊರೆಯುತ್ತಿದೆ. ಆಸಕ್ತರು ತಕ್ಷಣವೇ ಅರ್ಜಿ ಸಲ್ಲಿಸಿ, ಸರ್ಕಾರಿ ಉದ್ಯೋಗದ ಪ್ರಾರಂಭಿಕ ಹೆಜ್ಜೆಯನ್ನು ಇಡಬಹುದು.

ಅಧಿಸೂಚನೆ: Download
ಅರ್ಜಿ ಲಿಂಕ್: Apply Now

Pradhan Mantri Awas Yojana- ಪ್ರಧಾನ ಮಂತ್ರಿ ಆವಾಸ್ ಯೋಜನೆ ₹2.50 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ | ಮನೆ ನಿರ್ಮಾಣಕ್ಕೆ ಸರ್ಕಾರದ ನೆರವು


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!