Weed Mat Subsidy- ತೋಟಗಾರಿಕೆ ಇಲಾಖೆಯಿಂದ ವೀಡ್ ಮ್ಯಾಟ್ ಖರೀದಿಗೆ 1 ಲಕ್ಷ ರೂ. ಸಹಾಯಧನ | MIDH ಯೋಜನೆಯಡಿ ರೈತರಿಗೆ ಸುವರ್ಣಾವಕಾಶ

ವೀಡ್ ಮ್ಯಾಟ್ ಖರೀದಿಗೆ ತೋಟಗಾರಿಕೆ ಇಲಾಖೆಯಿಂದ ₹1 ಲಕ್ಷ ಸಹಾಯಧನ (Weed Mat Subsidy) ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಪ್ರಗತಿಪರ ರೈತರಿಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿದೆ. ಆ ಪ್ರಕಾರ 2025-26ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ಕೂಡಾ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅದರಡಿಯಲ್ಲಿ ರೈತರು ವೀಡ್ ಮ್ಯಾಟ್ (Weed Mat) ಖರೀದಿಗೆ ಭರ್ಜರಿ ಸಹಾಯಧನ ಪಡೆಯಬಹುದಾಗಿದೆ.
ಕರ್ನಾಟಕ ತೋಟಗಾರಿಕೆ ಇಲಾಖೆ 2025-26ನೇ ಸಾಲಿನ ಎಂಐಡಿಎಚ್ (MIDH – Mission for Integrated Development of Horticulture) ಯೋಜನೆಯಡಿಯಲ್ಲಿ ರೈತರಿಗೆ ತೋಟಗಳಲ್ಲಿ ಕಳೆ ನಿಯಂತ್ರಿಸಲು ಉಪಯೋಗಿಸುವ ವೀಡ್ ಮ್ಯಾಟ್ ಖರೀದಿಗೆ ಗರಿಷ್ಠ ₹1 ಲಕ್ಷ ಸಹಾಯಧನ ನೀಡಲಿದೆ.
ಏನಿದು ವೀಡ್ ಮ್ಯಾಟ್? ಇದರ ಪ್ರಯೋಜನವೇನು?
ವೀಡ್ ಮ್ಯಾಟ್ ಅಥವಾ ಕಳೆ ನಿಯಂತ್ರಣ ಮ್ಯಾಟ್‌ಗಳು ಕೃಷಿ ಕ್ಷೇತ್ರದಲ್ಲಿ ಕಳೆಗಳಿಂದ ಉಂಟಾಗುವ ನಷ್ಟವನ್ನು ತಡೆಗಟ್ಟಲು ಅತ್ಯುತ್ತಮ ಪರಿಹಾರವಾಗಿವೆ. ಇವುಗಳನ್ನು ಸಿಂಥೆಟಿಕ್ ಪಾಲಿಪ್ರೊಪಿಲೀನ್ ಅಥವಾ ಇತರ ನೈಸರ್ಗಿಕ ಫೈಬರ್‌ಗಳಿಂದ ತಯಾರಿಸಲಾಗುತ್ತದೆ.
ಗಾಳಿಯ ಹರಿವು ಮತ್ತು ನೀರಿನ ಹರಿವಿಗೆ ಅವಕಾಶ ನೀಡುವ ವಿನ್ಯಾಸ ಹೊಂದಿದ್ದು; ಕಳೆಗಳ ಬೆಳವಣಿಗೆಗೆ ಅಗತ್ಯವಿರುವ ಸೂರ್ಯನ ಬೆಳಕನ್ನು ತಡೆದು ಬೆಳೆಯ ಅಭಿವೃದ್ಧಿಗೆ ಸೂಕ್ತ ಪರಿಸರ ಒದಗಿಸುತ್ತದೆ. ಜೊತೆಗೆ ಮಣ್ಣಿನ ತೇವಾಂಶ ಉಳಿಸಿ ನೀರಿನ ಬಳಕೆಯನ್ನು ಕಡಿಮೆ ಮಾಡುವುದು, ಮಣ್ಣು ಕೊಚ್ಚಿಹೋಗುವುದನ್ನು ತಡೆಯುತ್ತದೆ.

ವೀಡ್ ಮ್ಯಾಟ್ ಖರೀದಿಗೆ ಸಹಾಯಧನ ಎಷ್ಟು?
ಮೊದಲೇ ಹೇಳಿದಂತೆ ಎಂಐಡಿಎಚ್ ಯೋಜನೆಯಡಿ ವೀಡ್ ಮ್ಯಾಟ್ ಖರೀದಿಗೆ ಪ್ರತಿ ಚದರ ಮೀಟರ್’ಗೆ ₹50/- ಸಹಾಯಧನ ನೀಡಲಾಗುತ್ತಿದ್ದು; ಗರಿಷ್ಠ ₹1,00,000/- ವರೆಗೆ ಸಹಾಯಧನ ಸಹಾಯಧನ ಪಡೆಯಲು ಅವಕಾಶವಿದೆ. ತೋಟಗಾರಿಕೆಯಲ್ಲಿ ತೊಡಗಿರುವ ಎಲ್ಲಾ ಅರ್ಹ ರೈತರು ಈ ಸಬ್ಸಿಡಿ ಪಡೆಯಬಹುದಾಗಿದೆ.
ಅರ್ಹತಾ ಮಾನದಂಡಗಳು (Eligibility Criteria)
ರೈತನ ಹೆಸರಿನಲ್ಲಿ ಜಮೀನು ಇರಬೇಕು. ಜಂಟಿ ಖಾತೆ ಇದ್ದರೆ ಇತರ ಖಾತೆದಾರರಿಂದ ಒಪ್ಪಿಗೆ ಪತ್ರ ಅಗತ್ಯವಾಗಿದೆ.
ತಾಯಿ/ತಂದೆಯ ಹೆಸರಿನಲ್ಲಿ ಜಮೀನು ಇದ್ದರೆ, ಅವರ ಮರಣ ಪತ್ರ, ಗ್ರಾಮ ಆಡಳಿತಾಧಿಕಾರಿಯ ದೃಢೀಕರಣ ಹಾಗೂ ಕುಟುಂಬ ಸದಸ್ಯರಿಂದ ಒಪ್ಪಿಗೆ ಪತ್ರ ಬೇಕು.
ಮಹಿಳಾ ರೈತರ ಹೆಸರಿನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
- ರೈತನ ಆಧಾರ್ ಕಾರ್ಡ್
- 2 ಪಾಸ್‌ಪೋರ್ಟ್ ಸೈಸ್ ಪೋಟೋಗಳು
- ತೋಟಗಾರಿಕೆ ಬೆಳೆ ದೃಢೀಕರಣ ಪತ್ರ
- ಜಮೀನಿನ RTC / ಪಹಣಿ ದಾಖಲೆ
- ರೈತನ ಬ್ಯಾಂಕ್ ಪಾಸ್‌ಬುಕ್ ಪ್ರತಿ
- ಸಂಪರ್ಕ ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಆಸಕ್ತ ರೈತರು ಮೇಲ್ಕಾಣಿಸಿದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ತಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗೆ ನೇರವಾಗಿ ಭೇಟಿಯಾಗಿ ಅರ್ಜಿ ಸಲ್ಲಿಸಬೇಕು. ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ನಂತರ ಸಬ್ಸಿಡಿ ಮಂಜೂರು ಮಾಡಲಾಗುತ್ತದೆ. ಖರೀದಿ ಮಾಡಿದ ವೀಡ್ ಮ್ಯಾಟ್‌ಗಳ ರಸೀದಿ ಮತ್ತು ಚಿತ್ರಗಳನ್ನು ಸಲ್ಲಿಸಬೇಕು.
ಈ ಯೋಜನೆಯ ಮೂಲಕ ನವೀನ ಕೃಷಿ ತಂತ್ರಜ್ಞಾನವನ್ನು ಉಪಯೋಗಿಸಿ ನಿಮ್ಮ ತೋಟವನ್ನು ಕಳೆ ಮುಕ್ತವಾಗಿ, ಶ್ರೇಷ್ಠ ಬೆಳೆಯೊಂದಿಗೆ ಮಾರ್ಗದರ್ಶನ ಮಾಡಿಕೊಳ್ಳಿ. ಸರ್ಕಾರದ ಸಹಾಯಧನವನ್ನು ಬಳಸಿಕೊಂಡು ಯಶಸ್ವಿ ಕೃಷಿಕರಾಗಿ.
ನಿಮ್ಮ ಹತ್ತಿರದ ತಾಲ್ಲೂಕು ತೋಟಗಾರಿಕೆ ಅಧಿಕಾರಿ ಅಥವಾ ಕರ್ನಾಟಕ ತೋಟಗಾರಿಕೆ ಇಲಾಖೆಯ ಅಧಿಕೃತ ಜಾಲತಾಣ horticulturedir.karnataka.gov.in ಭೇಟಿ ಮಾಡಿ…