ಕರ್ನಾಟಕ ವಿದ್ಯಾಧನ್ : ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ 75,000 ರೂಪಾಯಿ ಆರ್ಥಿಕ ನೆರವು | ಜೂನ್ 30ರೊಳಗೇ ಅರ್ಜಿ ಹಾಕಿ Karnataka Vidyadhan Scholarship

Spread the love

Karnataka Vidyadhan Scholarship : 2024-25ನೇ ಸಾಲಿನ ‘ಕರ್ನಾಟಕ ವಿದ್ಯಾಧನ್’ ವಿದ್ಯಾರ್ಥಿವೇತನ ಯೋಜನೆಯಡಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸದರಿ ವಿದ್ಯಾರ್ಥಿವೇತನ ಯೋಜನೆಯಡಿ 10,000 ರೂಪಾಯಿಯಿಂದ 75,000 ರೂಪಾಯಿ ವರೆಗೂ ಆರ್ಥಿಕ ನೆರವು ಸಿಗಲಿದೆ.

ಏನಿದು ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನ?
WhatsApp Group Join Now
Telegram Group Join Now

ಸರೋಜಿನಿ ದಾಮೋದರನ್ ಫೌಂಡೇಶನ್ (ಎಸ್‌ಡಿಎಫ್) ಹಾಗೂ ಶಿಬುಲಾಲ್ ಫ್ಯಾಮಿಲಿ ಫಿಲಾಂತ್ರೋಪಿಕ್ ಇನಿಶಿಯೇಟಿವ್ (ಎಸ್‌ಎಫ್‌ಪಿಐ) ಸಹಯೋಗದಲ್ಲಿ 11ನೇ ತರಗತಿ ಹಾಗೂ ಪದವಿ ಓದುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಲ್ಪಡುವ ವಿದ್ಯಾರ್ಥಿ ವೇತನವಾಗಿದೆ.

ಸದರಿ ವಿದ್ಯಾಧನ ವಿದ್ಯಾರ್ಥಿವೇತನ ಪಡೆಯಲು ಕೇರಳ, ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಒಡಿಶಾ, ನವದೆಹಲಿ, ಲಢಾಕ್, ಬಿಹಾರ, ಜಾರ್ಖಂಡ್, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.

ರೈತರ ಮನೆ ಬಾಗಿಲಲ್ಲೇ ಪಹಣಿ-ಆಧಾರ್ ಲಿಂಕ್ | ಗ್ರಾಮ ಆಡಳಿತಾಧಿಕಾರಿಗಳಿಗೆ ಟಾರ್ಗೆಟ್ Aadhaar RTC Linking

Karnataka Vidyadhan Scholarship
ವಿದ್ಯಾರ್ಥಿವೇತನದ ಮೊತ್ತವೆಷ್ಟು?

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿಯುಸಿ ಅಧ್ಯಯನದ ಅವಧಿಯಲ್ಲಿ ವರ್ಷಕ್ಕೆ 10,000 ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ. ಆ ಅವಧಿಯಲ್ಲಿ ಉತ್ತಮ ಫಲಿತಾಂಶ ಪಡೆದರೆ, ಪದವಿ ಕೋರ್ಸ್ ಮುಂದುವರಿಸಲು ಕೂಡ ಅವರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.

ಪದವಿ ಕೋರ್ಸ್ಗಳಿಗೆ ವಿದ್ಯಾರ್ಥಿವೇತನದ ಮೊತ್ತವು ರಾಜ್ಯ, ಕೋರ್ಸ್ ಹಾಗೂ ಅವಧಿ ಇತ್ಯಾದಿಗಳನ್ನು ಅವಲಂಬಿಸಿ ವರ್ಷಕ್ಕೆ 10,000 ರೂಪಾಯಿಯಿಂದ 75,000 ರೂಪಾಯಿ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಸೂರ್ಯ ಘರ್ ಯೋಜನೆಗೆ ಅಧಿಕೃತ ಚಾಲನೆ | ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ… PM Surya Ghar Muft Bijli Yojana 2024

ಯಾರೆಲ್ಲ ಅರ್ಜಿ ಹಾಕಬಹುದು?

2024ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಅಥವಾ ಎಲ್ಲಾ ವಿಷಯಗಳಲ್ಲಿ ಎ+ ಗ್ರೇಡ್ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುತ್ತದೆ. ವಿಶೇಷಚೇತನ ವಿದ್ಯಾರ್ಥಿಗಳು ಶೇ.75ರಷ್ಟು ಅಂಕ ಪಡೆದರೂ ಅಂಥವರಿಗೆ ಅವಕಾಶ ನೀಡಲಾಗುತ್ತದೆ.

ಅರ್ಹ ವಿದ್ಯಾರ್ಥಿಗಳು ನೇರವಾಗಿ ವಿದ್ಯಾಧನ್ ವೆಬ್‌ಸೈಟ್  https://www.vidyadhan.org/ ಅಥವಾ ಗೂಗಲ್ ಪ್ಲೇಸ್ಟೋರ್’ನಲ್ಲಿ ಲಭ್ಯವಿರುವ ಎಸ್‌ಡಿಎಫ್ ವಿದ್ಯಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಜೂನ್ 30, 2024 ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನವಾಗಿದ್ದು; ಹೆಚ್ಚಿನ ಮಾಹಿತಿಗೆ ವಿದ್ಯಾಧನ್ ಸಹಾಯವಾಣಿ 9663517131 ಸಂಪರ್ಕಿಸಬಹುದು.

ಪಿಯುಸಿ ಪಾಸಾದವರಿಗೆ ಕೃಷಿ ಇಲಾಖೆಯ ಸರ್ಕಾರಿ ಹುದ್ದೆಗಳು | ಟೈಪಿಸ್ಟ್, ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ಶೀಘ್ರ ನೇಮಕಾತಿ Karnataka Agriculture Dept Recruitment 2024


Spread the love
WhatsApp Group Join Now
Telegram Group Join Now
error: Content is protected !!